
ಏನ್ ಗುರು ಈ ಕಾವ್ಯಾ ಹೀಂಗ್ ಉಲ್ಟಾ ಹೊಡೆದ್ಲು! ಮೊದಲ ದಿನ ಹಾಗಂದ್ಲು, ಈಗ ಹೀಗಂತಿದ್ದಾಳೆ- ಗಿಲ್ಲಿ ಫ್ಯಾನ್ಸ್ ಬೇಸರ
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣ ಗಣನೆ ಆರಂಭವಾಗುತ್ತಿದ್ದಂತೆಯೇ, ಅದೇ ಇನ್ನೊಂದೆಡೆ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿ ಕೂಡ ಸಕತ್ ಫೇಮಸ್ ಆಗ್ತಿದೆ. ಇವರದ್ದು ಅತಿರೇಕದ ಪ್ರೀತಿ ಅಲ್ಲದಿದ್ದರೂ, ಗಿಲ್ಲಿ ನಟ ಕಾವು ಕಾವು ಎಂದು ರೇಗಿಸುತ್ತಲೇ ಕಾವ್ಯಾ ಶೈವ ಹಿಂದೆ ಬಿದ್ದಿದ್ದರು. ಗಿಲ್ಲಿ ನಟನ ಹೆಸರಿನಿಂದಲೇ ಕಾವ್ಯಾ ಇಲ್ಲಿಯವರೆಗೂ ಬಂದದ್ದು ಎನ್ನುವ ಮಾತು ಕೂಡ ಇದೆ. ಅದೇನೇ ಇದ್ದರೂ ಈ ಜೋಡಿಯ ವಿಚಾರ ಮಾತ್ರ ಮೊದಲಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಆಹಾರ ಆಗುತ್ತಲೇ ಬಂದಿದೆ. ಇವರಿಬ್ಬರ ಜೋಡಿಯ ಮದುವೆಯ ಕೃತಕ ಬುದ್ಧಿಮತ್ತೆ (AI) ಫೋಟೋ ಮಾಡಿ ಕೂಡ ಹಾಕಲಾಗಿತ್ತು.
ಮೊನ್ನೆ ಕಾವ್ಯಾ ಶೈವ ಅವರು, ನನ್ನ ಮದುವೆಗೆ ಏನಾದ್ರೂ ಸಮಸ್ಯೆಯಾದ್ರೆ ಅದಕ್ಕೆ ಗಿಲ್ಲಿನಟನೇ ಕಾರಣ ಎಂದು ಹೇಳಿದ್ದರು. ಇದು ಗಿಲ್ಲಿ ನಟನ ಅಭಿಮಾನಿಗಳಿಗೆ ಬೇಸರವನ್ನೂ ತರಿಸಿತ್ತು. ಇದರ ಬೆನ್ನಲ್ಲೇ ಇದೀಗ ಬಿಗ್ಬಾಸ್ನ ಮೊದಲ ದಿನದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅದೇನೆಂದರೆ, ಇದರಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜಂಟಿಯಾಗಿ ಒಳಗೆ ಹೋಗಿದ್ದರು. ಆ ಸಮಯದಲ್ಲಿ, ತಮಾಷೆ ಮಾಡಿದ್ದ ಗಿಲ್ಲಿ, ಏನೇ ಆದರೂ ನಾವಿಬ್ಬರೂ ಬಿಟ್ಟು ಕೊಡಬಾರದು. ಇಬ್ಬರೂ ಕೊನೆಯವರೆಗೆ ಇರಬೇಕು ಎಂದಿದ್ದರು.
ಅದೇ ಸಮಯದಲ್ಲಿ ಅಷ್ಟೇ ತಮಾಷೆಯಾಗಿ ನುಡಿದಿದ್ದ ಕಿಚ್ಚ ಸುದೀಪ್ ಅವರು, ಕೊನೆಯ ಉಸಿರು ಇರುವವರೆಗೂ ಒಟ್ಟಿಗೇ ಇರ್ತೀರಾ, ಹಾಗಿದ್ದರೆ ಗಟ್ಟಿ ಮೇಳ, ಗಟ್ಟಿ ಮೇಳ ಎಂದು ತಮಾಷೆ ಮಾಡಿದ್ದರು. ಆಗ ಗಿಲ್ಲಿ ಇಲ್ಲ ಸರ್ ಏನೇ ಆದರೂ ಒಟ್ಟಿಗೇ ಇರುತ್ತೇವೆ ಎಂದು ತಮಾಷೆ ಮಾಡಿದ್ದರು. ಆಗ ಕಾವ್ಯಾ ನೋಡೋಣ. ಇದೇ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಕೊನೆಯವರೆಗೂ ಎಂದಿದ್ದರು.
ಇದನ್ನೇ ಈಗ ಗಿಲ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಏನ್ ಗುರೂ ಕಾವ್ಯಾ ಉಲ್ಟಾ ಹೊಡೆದುಬಿಟ್ಟಳಲ್ಲ. ಒಳಗೆ ಹೋಗುವಾಗ ಒಟ್ಟಿಗೇ ಇರೋಣ ಎಂದೋರು, ಈಗ ನನ್ನ ಮದ್ವೆಯಾಗದಿದ್ರೆ ಇವರೇ ಕಾರಣ ಎನ್ನುತ್ತಿದ್ದಾರಲ್ಲ. ಹೀಗೆ ಉಲ್ಟಾ ಹೊಡೆಯೋದು ಸರಿನಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಇನ್ನೊಂದು ದಿನವಷ್ಟೇ ಬಿಗ್‌ಬಾಸ್ ಜೋಡಿಯ ಬಗ್ಗೆ ಮಾತನಾಡಲು ಅಭಿಮಾನಿಗಳಿ ಛಾನ್ಸ್ ಇದೆ. ಕೊನೆಗೆ ಬಿಗ್‌ಬಾಸ್ ವಿನ್ನರ್ ಬಗ್ಗೆ ಒಂದಿಷ್ಟು ದಿನ ಮಾತು ಬಂದರೆ, ಮುಂದಿನ ಸೀಸನ್ ಬರುವವರೆಗೆ ಎಲ್ಲರ ಹೆಸರೂ ಮರೆಯಲ್ಲಿ ಹೋಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.