
ಬಿಗ್ ಬಾಸ್ 19 ಶೋನಲ್ಲಿ ತಾನ್ಯಾ ಮಿತ್ತಲ್ ಅವರು ಐಷಾರಾಮಿ ಜೀವನ ಹಾಗಿದೆ, ಹೀಗಿದೆ ಎಂದು ಹೇಳಿ ಭಾರೀ ಟ್ರೋಲ್ ಆದರು. ಇತ್ತೀಚೆಗೆ ತಮ್ಮ ವೃತ್ತಿಜೀವನ ಹೇಗಿದೆ? ಮನೆ ಹೇಗಿದೆ? ಫ್ಯಾಕ್ಟರಿ ಹೇಗಿದೆ ಎಂಬ ವಿಡಿಯೋ ಸಂದರ್ಶನ ನೀಡಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಇದಕ್ಕೂ ಮುನ್ನ ತಾನೊಬ್ಬ ಆಧ್ಯಾತ್ಮಿಕ ಗುರು, ಉದ್ಯಮಿ ಎಂಬಂತೆ ಅವರನ್ನು ಬಿಂಬಿಸಿಕೊಂಡಿದ್ದರು.
ಬಿಗ್ ಬಾಸ್ ಮನೆಯಲ್ಲಿ ತಾನ್ಯಾ ಅವರು ನನ್ನ ಲೈಫ್ ಹಾಗಿದೆ, ಹೀಗಿದೆ, ತಾಜ್‌ಗೆ ಹೋಗಿ ಅಲ್ಲಿ ಕಾಫಿ ಕುಡಿಯುತ್ತೇನೆ, ಇಂಗ್ಲೆಂಡ್‌ನಿಂದ ಬಿಸ್ಕತ್ ತರಿಸಿಕೊಳ್ತೀನಿ, ಒಂದು ಕಾಫಿಗೋಸ್ಕರ ಅಲ್ಲಿಗೆ ಹೋಗ್ತೀನಿ, ಬಿಗ್ ಬಾಸ್ ಮನೆಗೆ 800 ಸೀರೆ ತಂದಿದ್ದೇನೆ, ನಾನು ಐಶ್ವರ್ಯಾ ರೈಗಿಂತ ಸುಂದರಿ ಎಂದೆಲ್ಲ ಮಾತನಾಡಿದ್ದರು. ಇದನ್ನು ಕೇಳಿ ಅಲ್ಲಿದ್ದವರೇ ಅವರನ್ನು ಟ್ರೋಲ್ ಮಾಡಿದ್ದರು.
ಈಗ ಗ್ವಾಲಿಯರ್‌ನಲ್ಲಿರುವ ತಮ್ಮ ಕಾಂಡೋಮ್ ಉತ್ಪಾದನಾ ಘಟಕದ ಪ್ರವಾಸ ಮಾಡಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತಾನ್ಯಾ ಮಿತ್ತಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ತಾನ್ಯಾ ಅವರಿಗೆ ಗ್ವಾಲಿಯರ್‌ನಲ್ಲಿ ದೊಡ್ಡ ಮನೆ ಇದೆ, ಅವರು ಬಿಗ್ ಬಾಸ್ ಮನೆಯಿಂದ ಬಂದಕೂಡಲೇ ಅವರಿಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ದು, ಮನೆಯ ಮುಂದಿರುವ ಕಾರ್‌ಗಳ ಕಲೆಕ್ಷನ್ ಕೂಡ ವೈರಲ್ ಆಗಿತ್ತು.
ನಾನು ಸಿಕ್ಕಾಪಟ್ಟೆ ಫ್ಯಾಕ್ಟರಿಗಳ ಒಡತಿ ಎಂದು ತಾನ್ಯಾ ಹೇಳಿದ್ದರು. ಇದನ್ನು ಅನೇಕರು ನಂಬಿರಲಿಲ್ಲ. ಇದನ್ನು ಸಾಬೀತುಪಡಿಸಲು ಅವರು ಮೊದಲು ತಮ್ಮ ಐಷಾರಾಮಿ ಮನೆಯ ವಿಡಿಯೋ ಹಂಚಿಕೊಂಡಿದ್ದರು. ಈಗ ತಮ್ಮ ಕಾಂ*ಡೋಮ್ ಫ್ಯಾಕ್ಟರಿ ಹೇಗಿದೆ ಎಂದು ತೋರಿಸಿದ್ದಾರೆ.
ತಾನ್ಯಾ ಅವರು ಫ್ಯಾಕ್ಟರಿಯಲ್ಲಿರುವ ಬೃಹತ್ ಯಂತ್ರೋಪಕರಣಗಳನ್ನು ತೋರಿಸಿದ್ದಾರೆ. ಇದನ್ನೆಲ್ಲ ಬೇರೆ ದೇಶಗಳಿಂದ ತರಿಸಿಕೊಂಡಿದ್ದೇವೆ ಎಂದು ಹೇಳಿದ್ದಲ್ಲದೆ, ಅಲ್ಲಿರುವ ಉದ್ಯೋಗಿಗಳು ಇವರೇ ನಮ್ಮ ಬಾಸ್ ಎಂದು ಹೇಳಿದ್ದಾರೆ.
"ಸಮಾಜದಲ್ಲಿ ಕಾಂ*ಡೋಮ್ ಎನ್ನೋದು ಇಂದಿಗೂ ಕೂಡ ಮುಜುಗರ ನೀಡುವ ವಿಷಯ. ಹೀಗಾಗಿ ಅನೇಕರು ಈ ಬಗ್ಗೆ ಮಾತನಾಡೋದಿಕ್ಕೆ ಹಿಂಜರಿಯುತ್ತಾರೆ. ಇದೊಂದು ಜವಾಬ್ದಾರಿಯುತ ಉದ್ಯಮವಾಗಿದೆ" ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದಾಗ, ಸ್ಪರ್ಧಿಗಳು ಮಾನಸಿಕವಾಗಿ ನನ್ನನ್ನು ಹಿಂಸಿಸುತ್ತಿದ್ದರು. ಸಲ್ಮಾನ್ ಖಾನ್ ಕೂಡ ವೀಕೆಂಡ್ ಎಪಿಸೋಡ್‌ನಲ್ಲಿ ನನ್ನ ಕಾಲೆಳೆದರು, ಕಾಮಿಡಿ ಮಾಡಿದರು. ಇಡೀ ಶೋ ಉದ್ದಕ್ಕೂ ನನ್ನನ್ನು ಲೇವಡಿ ಮಾಡಿದರು ಎಂದು ಹೇಳಿದ್ದಾರೆ. ಆದರೆ ನಿರೂಪಕ ಎಂದು ಹೇಳಿದ್ದಾರೆಯೇ ವಿನಃ, ಸಲ್ಮಾನ್ ಖಾನ್ ಹೆಸರನ್ನು ತಗೊಂಡಿರಲಿಲ್ಲ.
ನಾನು ಏನು? ನನ್ನ ಮನೆ ಹೇಗಿದೆ? ನನ್ನ ಮನೆಯ ಸ್ಥಿತಿ ಹೇಗಿದೆ ಎಂದು ಸಾಬೀತುಪಡಿಸುವ ಅವಶ್ಯಕತೆಯಿಲ್ಲ. ನನ್ನನ್ನು ಕುರುಡಾಗಿ ನಂಬಿದ ಅಭಿಮಾನಿಗಳಿಗಾಗಿ ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದರು. ಕಾಂಡೋಮ್ ಫ್ಯಾಕ್ಟರಿ ಜೊತೆಗೆ ತಾನ್ಯಾ ಮಿತ್ತಲ್ ಅವರು ಫಾರ್ಮಾಸ್ಯುಟಿಕಲ್, ಸೋಲಾರ್ ಎನರ್ಜಿ, ಸಾವಯವ ಕೃಷಿ ಫಾರ್ಮ್‌ಹೌಸ್, ಸೀರೆ ಫ್ಯಾಕ್ಟರಿ ಹೊಂದಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.