Mahira Sharma: ನಾನು ಯಾರದೇ ಜೊತೆಗೂ ಡೇಟಿಂಗ್ ಮಾಡ್ತಿಲ್ಲ.. ಕಟ್ಟುಕತೆ ಹಬ್ಬಿಸಬೇಡಿ!

'ನನ್ನ ಮಗಳು ಮಹಿರಾ ಬಗ್ಗೆ ಹಬ್ಬಿರುವ ಲವ್, ಡೇಟಿಂಗ್ ವದಂತಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸೆಲೆಬ್ರಿಟಿ ಆಗಿರುವುದರಿಂದ ಯಾರೊಂದಿಗಾದರೂ ಹೆಸರು ತಳುಕು ಹಾಕಬಹುದು ಎಂದುಕೊಂಡಿದ್ದರೆ ಅದು ತಪ್ಪು.. ಇದು ಸುಳ್ಳು ಸುದ್ದಿ, ಇವೆಲ್ಲ..

Mahira Sharma shuts down dating rumours with cricketer Mohammed Siraj

ಕಿರುತೆರೆ ನಟಿ ಮಹೀರಾ ಶರ್ಮಾ (Mahira Sharma) ಕ್ರಿಕೆಟಿಗ ಮೊಹಮ್ಮದ್ ಸಿರಾಜ್ (Mohammed Siraj) ಅವರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ಕುರಿತು ಸ್ವತಃ ಮಹೀರಾ ಅವರೇ ಸ್ಪಷ್ಟನೆ ನೀಡಿದ್ದು, ಈ ವದಂತಿಗಳಿಗೆ ತೀಲಾಂಜಲಿ ಇಟ್ಟಿದ್ದಾರೆ. 'ನಾನು ಯಾರನ್ನೂ ಪ್ರೀತಿಸುತ್ತಿಲ್ಲ, ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ' ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ಛಾಯಾಗ್ರಾಹಕರು ಈ ಬಗ್ಗೆ ಪ್ರಶ್ನಿಸಿದಾಗ ಮಹೀರಾ ಉತ್ತರಿಸಲು ನಿರಾಕರಿಸಿದ್ದರು. ಇದರಿಂದ ವದಂತಿಗಳು ಮತ್ತಷ್ಟು ಬಲಗೊಂಡಿದ್ದವು. ಕೆಲ ಮಾಧ್ಯಮಗಳು ಇವರಿಬ್ಬರೂ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎಂದು ವರದಿ ಮಾಡಿದ್ದವು. ಸಿರಾಜ್ ಅವರು ಮಹೀರಾ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿದ್ದರಿಂದ ಅನುಮಾನಗಳು ಹುಟ್ಟಿಕೊಂಡಿದ್ದವು.

Latest Videos

ಸಲ್ಮಾನ್ ಖಾನ್ Sikandar Trailer ಲಾಂಚ್: ಟೀಮ್ ಮಾಡಿರೋ ಹೊಸ ಪ್ಲಾನ್ ಸಕ್ಸಸ್, ಹವಾ ಶುರು..

ಆದರೆ, ಮಹೀರಾ ತಾಯಿ ಈ ವದಂತಿಗಳನ್ನು ನಿರಾಕರಿಸಿದ್ದಾರೆ. 'ನನ್ನ ಮಗಳು ಮಹಿರಾ ಬಗ್ಗೆ ಹಬ್ಬಿರುವ ಲವ್, ಡೇಟಿಂಗ್ ವದಂತಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸೆಲೆಬ್ರಿಟಿ ಆಗಿರುವುದರಿಂದ ಯಾರೊಂದಿಗಾದರೂ ಹೆಸರು ತಳುಕು ಹಾಕಬಹುದು ಎಂದುಕೊಂಡಿದ್ದರೆ ಅದು ತಪ್ಪು.. ಇದು ಸುಳ್ಳು ಸುದ್ದಿ, ಇವೆಲ್ಲವನ್ನೂ ನಂಬಬೇಡಿ ' ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಆಕೆ ನನ್ನ ಮಗಳು, ನನಗೆ ಗೊತ್ತಿಲ್ಲದೇ ಅವಳ ಬಾಳಿನಲ್ಲಿ ಏನೂ ಹೊಸದು ಆಗೋದಿಲ್ಲ, ಒಮ್ಮೆ ಆಗೋದಾದ್ರೆ ನನಗೆ ಅವಳೇ ಮೊದಲು ಹೇಳೀಬಿಟ್ಟು ಬಳಿಕ ಅದನ್ನು ಮಾಡುತ್ತಾಳೆ, ಗಮನದಲ್ಲಿರಲಿ..' ಎಂದಿದ್ದಾರೆ. 

ಹಿಂದಿಯ 'ಬಿಗ್ ಬಾಸ್ 13' ಕಾರ್ಯಕ್ರಮದಲ್ಲಿ ಮಹೀರಾ ಖ್ಯಾತಿ ಗಳಿಸಿದರು. ಈ ಹಿಂದೆ ಪರಸ್ ಛಾಬ್ರಾ ಎಂಬ ನಟನೊಂದಿಗೆ ಪ್ರೀತಿಯಲ್ಲಿದ್ದರು. 2023ರಲ್ಲಿ ಇವರಿಬ್ಬರೂ ಬೇರೆಯಾದರು. ಸದ್ಯಕ್ಕೆ ತಾನು ಯಾರೊಂದಿಗೂ ಪ್ರೀತಿಯಲ್ಲಿಲ್ಲ ಎಂದು ಮಹೀರಾ ಖಚಿತಪಡಿಸಿದ್ದಾರೆ. ಪ್ರೇಕ್ಷಕರು ಇಂತಹ ಆಧಾರ ರಹಿತ ವದಂತಿಗಳನ್ನು ನಂಬಬಾರದೆಂದು ಅವರು ಮನವಿ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಾಕಿರುವ ಪೋಸ್ಟ್ ಭಾರೀ ಗಮನ ಸೆಳೆಯುತ್ತಿದೆ. 

ಮೊಣಕಾಲು ಮುರಿದರೂ Veer Savarkar ಪಾತ್ರಕ್ಕೆ ಜೀವ ತುಂಬಿದ ರಣದೀಪ್ ಹೂಡಾ, ಗ್ರೇಟ್!

ಈ ಹಿಂದೆ ಕಿರುತೆರೆ ನಟಿ ಮಹಿರಾ ಶರ್ಮಾ ಅವರು ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. 

vuukle one pixel image
click me!