ಡಿವೋರ್ಸ್ ಪಡೆದಿರುವ ಗೆಳೆಯ ಚಂದನ್ ಬಗ್ಗೆ ಮಾತನಾಡಿದ ಆಂಕರ್ ಅನುಪಮಾ ಗೌಡ. ಇಲ್ಲಿ ಯಾರು ತಪ್ಪ ಏನಾಗಿದೆ ಎಂದು ನಾನು ಪ್ರಶ್ನಿಸಿಲ್ಲ ಎಂದ ನಟಿ.
ಬಿಗ್ ಬಾಸ್ ಸ್ಪರ್ಧಿ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಲವ್ ಸ್ಟೋರಿ, ಪ್ರಪೋಸಲ್ ದಿನ ಹಾಗೂ ಮದುವೆ ದಿನ ಎಷ್ಟು ದೊಡ್ಡ ಸುದ್ದಿ ಮಾಡಿತ್ತೋ ಡಿವೋರ್ಸ್ ದಿನವೂ ಅಷ್ಟೇ ಸುದ್ದಿ ಮಾಡಿದೆ. ವಯಸ್ಸು, ಬಣ್ಣ ಮತ್ತು ಹಣ ಯಾವುದಕ್ಕೂ ಲೆಕ್ಕ ಮಾಡದೆ ಮದುವೆಯಾಗಿರುವ ಈ ಜೋಡಿನೇ ಪ್ರೇರಣೆ ಎನ್ನುತ್ತಿದ್ದವರು ಈಗ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ. ಏಕೆಂದರೆ ಸಂಸಾರದಲ್ಲಿ ಬರುವ ಸಣ್ಣ ಪುಟ್ಟ ಮನಸ್ಥಾಪವನ್ನು ಸರಿ ಮಾಡಿಕೊಳ್ಳದೆ ದೊಡ್ಡದು ಮಾಡಿಕೊಂಡಿದ್ದರು. ಇವರಿಬ್ಬರ ಡಿವೋರ್ಸ್ ಇಡೀ ರಾಜ್ಯಕ್ಕೆ ಶಾಕಿಂಗ್. ಆದರೆ ಚಂದನ್ ಗೆಳತಿ ಅನುಪಮಾ ಗೌಡ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿರ್ಧಾರ ತಪ್ಪು ಸರಿ ಅನ್ನೋದು ತಪ್ಪಾಗುತ್ತದೆ. ಅದು ಅವರಿಬ್ಬರ ವೈಯಕ್ತಿಕ ನಿರ್ಧಾರ. ಇವತ್ತು ದೂರ ಆಗಿರೋದು ಕೂಡ ಒಂದು ಕಾರಣಕ್ಕೆ ಅನಿಸುತ್ತದೆ. ಅವರು ಯಾವ ಕಾರಣಕ್ಕ ದೂರ ಆಗಿದ್ದಾರೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ನನಗೆ ನಿವೇದಿತಾ ಗೌಡ ಜೊತೆ ಅಷ್ಟು ಕನೆಕ್ಷನ್ ಇರಲಿಲ್ಲ ಅವರ ಬಗ್ಗೆ ಕಾಮೆಂಟ್ ಮಾಡುವುದು ತಪ್ಪಾಗುತ್ತದೆ. ಅವರ ಸಂಬಮಧದ ಬಗ್ಗೆ ನಾನು ಕಾಮೆಂಟ್ ಮಾಡುವುದು ನನ್ನ ಕೆಲಸವೇ ಅಲ್ಲ. ಚಂದನ್ ಮತ್ತು ನಾನು ತುಂಬಾ ಚೆನ್ನಾಗಿದ್ದೀವಿ ಬಿಗ್ ಬಾಸ್ ಮನೆಯಿಂದ ಬಂದ ಮೇಲೂ. ತುಂಬಾ ಚೆನ್ನಾಗಿ ಡಿಫರೆಂಟ್ ಬಾಂಡಿತ್ತು ಇತ್ತು. ಹೊರಗಡೆ ಬಂದ ಮೇಲು ನನಗೆ ಅವನು ವಿಶ್ ಮಾಡಿದ್ದಾನೆ ನಾನು ಅವನಿಗೆ ವಿಶ್ ಮಾಡಿದ್ದೀನಿ. ಈ ತರ ಆದಾಗಲೂ ನಾನು ಗಟ್ಟಿಯಾಗಿರು ಅಂತ ಹೇಳಿದ್ದು ಬಿಟ್ರೆ ನಾನು ಯಾಕೆ ಎನು ಅಂತ ಕೇಳಿಲ್ಲ. ಅದು ಅವಶ್ಯಕತೆ ಇಲ್ಲ. ಒಬ್ಬ ಸ್ನೇಹಿತನಾಗಿ ಅವನು ಚೆನ್ನಾಗಿರಬೇಕು ಅಷ್ಟೇ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಅನುಪಮಾ ಗೌಡ ಮಾತನಾಡಿದ್ದಾರೆ.
ಒಂಟಿಯಾಗಿ ಬಾಲಿಗೆ ಹೊರಟ ಅನುಪಮಾ; ಫೋಟೋ ತೆಗೆದಿದ್ದು ಯಾರು ಅಂತಿದ್ದಾರೆ ಫ್ಯಾನ್ಸ್
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೊತೆ ಅನುಪಮಾ ಗೌಡ ಕೂಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ. ಇವರಿಬ್ಬರು ಫ್ರೆಂಡ್ಸ್ ಆಗಿದ್ದು ಲವ್ ಮಾಡು ಮದುವೆ ಆಗಿರುವುದನ್ನು ಕಣ್ಣೆದುರು ನೋಡಿದ್ದಾರೆ. ಹೀಗಾಗಿ ಅನುಪಮಾ ಗೌಡ ನೀಡಿರುವ ಹೇಳಿಕೆ ವೈರಲ್ ಆಗಿದೆ. ಆದರೆ ಡಿವೋರ್ಸ್ ಪಡೆದು ಆ ಜೋಡಿನೇ ಸಖತ್ ಕೂಡ ಆಗಿದೆ ಎನ್ನಬಹುದು. ಹೊಸ ಹೊಸ ಹಾಡುಗಳನ್ನು ಕ್ರಿಯೇಟ್ ಮಾಡುವ ಬ್ಯುಸಿಯಲ್ಲಿ ಚಂದನ್ ಇದ್ದಾರೆ, ಟ್ರಾವಲ್ ರೀತಿ ಹಾಟ್ ಲುಕ್ ಫ್ಯಾಷನ್‌ನಲ್ಲಿ ನಿವೇದಿತಾ ಗೌಡ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿವೇದಿತಾ ಮತ್ತು ಚಂದನ್ ಶೆಟ್ಟಿ ಡಿವೋರ್ಸ್ ದೊಡ್ಡ ಚರ್ಚೆ ಹುಟ್ಟುಹಾಕಿತ್ತು ಹೀಗಾಗಿ ಪ್ರೆಸ್‌ಮೀಟ್ ಮೂಲಕ ಸ್ಪಷ್ಟನೆ ಕೂಡ ನೀಡಿದ್ದರು. ಆದರೂ ಅವರಿಬ್ಬರ ಬಗ್ಗೆ ಮಂದಿ ಮಾತನಾಡುತ್ತಿದ್ದಾರೆ ಅಂದ್ರೆ ಎಷ್ಟು ಕ್ರೇಜ್ ಇರಬೇಕು ಹೇಳಿ?
ದೊಗಳೆ ಶರ್ಟ್ ಮೇಲೆ ಲಂಗಾ ಹಾಕಿಕೊಂಡ ಅನುಪಮಾ ಗೌಡ; ರೆಡಿಯಾಗುತ್ತಿರುವ ಫೋಟೋ ಲೀಕ್