ಕನ್ನಡ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಅವರ ಮಗಳು ಸೌಂದರ್ಯ ಅವರು ಅಪ್ಪ-ಅಮ್ಮನಿಗೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ. ಇದು ಹತ್ತು ವರ್ಷಗಳ ತಪಸ್ಸು ಎನ್ನಬಹುದು.
ನಿರ್ಮಾಪಕರಾಗಿದ್ದ ಸೌಂದರ್ಯ ಜಗದೀಶ್ ಅವರ ಕನಸನ್ನು ಮಗಳು ನನಸಾಗಿಸಿದ್ದಾಳೆ. ಹೌದು, ಸತತ ಹತ್ತು ವರ್ಷಗಳ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಸೌಂದರ್ಯ ಅವರು ಈಗ ಡಾಕ್ಟರ್ ಆಗಿದ್ದಾರೆ. ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸೌಂದರ್ಯ ಜಗದೀಶ್ ಸೋಶಿಯಲ್ ಮೀಡಿಯಾ ಪೋಸ್ಟ್ ಹೀಗಿದೆ..!
ಡಾ ಸೌಂದರ್ಯ ಜಗದೀಶ್, ಎಂಡಿ ಡರ್ಮಟಾಲಜಿ
ಕಳೆದ ಹತ್ತು ವರ್ಷಗಳ ಕಾಲ 4.5 ವರ್ಷ ಎಂಬಿಬಿಎಸ್, 1 ವರ್ಷ ಇಂಟೆನ್ಶಿಪ್, 1 ವರ್ಷ ನೀಟ್ ತಯಾರಿ, 3 ವರ್ಷ ಎಂಡಿ ಹಾಗೂ ಕಳೆದ ವರ್ಷ ಅತ್ಯಂತ ಕಠಿಣವಾದ ವರ್ಷವಾಗಿತ್ತು.
ಪ್ರತಿಯೊಂದು ಕ್ಷಣ ಕೂಡ ಶ್ರಮಪಟ್ಟಿದ್ದೇನೆ. ನಾನು ಸಿಕ್ಕಾಪಟ್ಟೆ ಅಳಬೇಕು, ಕೂಗಾಡಬೇಕು, ನಿನಗಾಗಿ ಹುಡುಕಾಡುವ ಕ್ಷಣಗಳು ಬಂದಿದ್ದವು. ಆದರೆ ಆ ಸಮಯದಲ್ಲಿ ನೀನು ಸ್ವರ್ಗದಿಂದ ನನಗೆ ಚಿಯರ್ ಮಾಡುತ್ತಿರುತ್ತೀಯಾ ಅಂತ ನೆನಪಿಸಿಕೊಳ್ಳುತ್ತಿದ್ದೆ. ಇವೆಲ್ಲವೂ ಈ ದಿನಕ್ಕೋಸ್ಕರ ಆಗಿತ್ತು ಅಪ್ಪಾ…!
ನನಗೆ ಈ ಗೆಲುವು ಸಾಧಿಸಲು ಶಕ್ತಿ ಕೊಟ್ಟ ದೇವರಿಗೆ ಧನ್ಯವಾದಗಳು.
ಪವಿತ್ರಾಗೌಡಗಿಂತ 14 ವರ್ಷ ದೊಡ್ಡವನಾದ ದರ್ಶನ್ ಜೊತೆ 10 ವರ್ಷ ಸಂಸಾರ?
ನನ್ನ ತಾಯಿಗೆ ಇದು ಅರ್ಪಣೆ. ನನ್ನ ಶಕ್ತಿಯಾಗಿ ನೀನು ನಿಂತಿದ್ದೆ, ತುಂಬ ಬೆಂಬಲ ಕೊಟ್ಟೆ. ನಾನು ಇಂದು ಇಲ್ಲಿ ಇದ್ದೇನೆ ಎಂದರೆ ಅದಕ್ಕೆ ನೀನೇ ಕಾರಣ. ನೀನು ನನ್ನನ್ನು ತುಂಬ ನಂಬಿದ್ದೆ. ನೀನು ನನ್ನ ಪರವಾಗಿ ನಿಂತೆ, ಚಪ್ಪಾಳೆ ಹೊಡೆದೆ, ಪ್ರತಿಯೊಂದು ಮೈಲಿಗಲ್ಲನ್ನು ಸಂಭ್ರಮಿಸಿದೆ. ನನ್ನ ಪರೀಕ್ಷೆಯ ಕೊನೆಯ ದಿನ ನಿನ್ನ ಕಣ್ಣಲ್ಲಿ ನೀರು ನೋಡಿದ್ದೇನೆ. ಎಲ್ಲರ ಪ್ರೀತಿ, ತ್ಯಾಗ, ಪ್ರಾರ್ಥನೆ ಎಲ್ಲವೂ ನನ್ನನ್ನು ಇಲ್ಲಿ ತಂದು ನಿಲ್ಲಿಸಿದೆ ಅಂತ ನನಗೆ ಗೊತ್ತಿದೆ.
ಅಣ್ಣನಂತೆ ಕಾಳಜಿ ಮಾಡಿದ ಸ್ನೇಹಿತ್‌ಗೆ ಧನ್ಯವಾದಗಳು
ಗೌತಮ್, ಅತ್ತೆ-ಮಾವನ ಸಹಕಾರಕ್ಕೆ ಧನ್ಯವಾದಗಳು
ನನ್ನ ಪ್ರೊಫೆಸರ್‌ಗೆ ಧನ್ಯವಾದಗಳು
ಈ ಹಿಂದೆ ತಂದೆಯ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಸೌಂದರ್ಯ ಅವರು, “ಪ್ರೀತಿಯ ತಂದೆ, ನೀನು ನನ್ನ ಹೀರೋ, ನಮ್ಮ ಜೀವನ ಗೌರವ ಪ್ರೀತಿಯಿಂದ ತುಂಬಿರುವಂತೆ ಮಾಡಿದ್ದೀಯಾ. ರಾಣಿ ಥರ ನನ್ನನ್ನು ನೋಡಿಕೊಂಡೆ, ಜಗತ್ತನ್ನು ತೋರಿಸಿದೆ, ಜೀವನ ಒಂದು ಸಂಭ್ರಮದ ಹಾಗೆ ಆಗಿತ್ತು. ನಮ್ಮ ಕುಟುಂಬವನ್ನು ಎಲ್ಲರೂ ಹೊಗಳುತ್ತಿದ್ದರು. ನಾವು ನಾಲ್ಕು ಜನರನ್ನು ಸಪರೇಟ್ ಮಾಡಲು ಆಗೋದಿಲ್ಲ. ನಮ್ಮನ್ನು ಇಂಥ ಶಾಕ್‌ಗೆ ನೀನು ತಳ್ಳಬಾರದಿತ್ತು. ನನಗೆ ನಿನ್ನನ್ನು ಉಳಿಸಿಕೊಳ್ಳುವ ಒಂದು ಚಾನ್ಸ್ ಸಿಕ್ಕರೂ ಕೂಡ ನಾನು ಮಿತಿ ಮೀರಿ ಪ್ರಯತ್ನಪಡುತ್ತಿದ್ದೆ. ನೀನು ನನಗೆ ಎಷ್ಟು ಮುಖ್ಯ ಅಂತ ನಾನು ನಿತ್ಯವೂ ನಿನಗೆ ಹಗ್ ಮಾಡಿ ಹೇಳುತ್ತಿದ್ದೆ. ನೀನಿಲ್ಲದೆ ನಮ್ಮ ಬದುಕು ಅಪೂರ್ಣ. ನಾನು ಎಂದಿಗೂ ನಿನ್ನನ್ನು ಹೊಗಳುತ್ತೇನೆ. ಜೀವನದ ಪ್ರತಿ ಹಂತದಲ್ಲಿ ನಾನು ನಿನ್ನನ್ನು ನೆನಪಿಸಿಕೊಳ್ಳುತ್ತಿದ್ದೇನೆ, ಬಾಗಿಲು ಬಳಿ ಬಂದು ನೀನು ಮಗಳೇ ಎನ್ನೋದನ್ನು ಹೇಳಿದ್ದನ್ನು ನಾನು ಕೇಳಲು ಕಾಯುತ್ತಿರುವೆ. ಐ ಲವ್ ಯು ಅಪ್ಪಾ…!
ಸೌಂದರ್ಯ ಜಗದೀಶ್‌ರಿಂದ ₹1.75 ಕೋಟಿ ಪಡೆದಿದ್ದ ಪವಿತ್ರಾ, ಬಯಲಾಗುತ್ತಾ ನಿರ್ಮಾಪಕನ ಸಾವು ಪ್ರಕರಣ?
ಸೌಂದರ್ಯ ಜಗದೀಶ್ ಅವರು ನಿರ್ಮಾಪಕರಾಗಿ, ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. 2024 ಏಪ್ರಿಲ್ 14ರಂದು ಅವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ. ʼಅಪ್ಪು ಪಪ್ಪುʼ, ʼಸ್ನೇಹಿತರುʼ, ʼರಾಮ್‌ಲೀಲಾʼ, ʼಮಸ್ತ್ ಮಜಾ ಮಾಡಿʼ ಮುಂತಾದ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಸೌಂದರ್ಯ ಜಗದೀಶ್ ಅವರ ಸಾವಿನ ಪ್ರಕರಣ ಇನ್ನೂ ನಡೆಯುತ್ತಿದೆ. ಇನ್ನು ಇವರ ಪುತ್ರ ಸ್ನೇಹಿತ್ ಕೂಡ ಬಾಲನಟನಾಗಿ ಅಭಿನಯಿಸಿದ್ದರು. ಮಗಳ ಮದುವೆ ಮಾಡಿ ಒಂದು ವರ್ಷ ಆಗುತ್ತಿದ್ದಂತೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.