ಹೊಸ ಸಾಹಸಕ್ಕಿಳಿದ Bigg Boss Kannada 10 ವಿಜೇತ ಕಾರ್ತಿಕ್‌ ಮಹೇಶ್‌; ಏನದು?

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 10ʼ ವಿಜೇತ ಕಾರ್ತಿಕ್‌ ಮಹೇಶ್‌ ಅವರು ಹೊಸ ಸಾಹಸಕ್ಕೆ ಇಳಿದಿದ್ದಾರೆ. ಏನದು? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 
 

bigg boss kannada 10 winner karthik mahesh start new business golify

‘ಬಿಗ್‌ ಬಾಸ್‌ ಕನ್ನಡ’ ಶೋನಲ್ಲಿ ಭಾಗವಹಿಸಿದ ಅನೇಕ ಸ್ಪರ್ಧಿಗಳು ಸದ್ಯ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ, ಸಿನಿಮಾ ಮಾಡುತ್ತಿದ್ದಾರೆ, ಇನ್ನೂ ಕೆಲವರು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಶೈನ್‌ ಶೆಟ್ಟಿ, ಚೈತ್ರಾ ವಾಸುದೇವನ್‌, ವಾಸುಕಿ ವೈಭವ್‌, ಚಂದನ್‌ ಶೆಟ್ಟಿ ಅವರು ಈ ಹೆಸರನ್ನು ಸದ್ವಿನಿಯೋಗ ಮಾಡಿಕೊಂಡಿದ್ದಾರೆ. ಈಗ ʼಬಿಗ್‌ ಬಾಸ್‌ ಕನ್ನಡ 10ʼ ವಿಜೇತ ಕಾರ್ತಿಕ್‌ ಮಹೇಶ್‌ ಅವರು Golify ಎನ್ನುತ್ತಿದ್ದಾರೆ. ಇದಕ್ಕೂ ಕಾರಣ ಇದೆ. ಹಾಗಂದರೆ ಏನು ಎಂದು ನಿಮಗೂ ಪ್ರಶ್ನೆ ಕಾಡುತ್ತಿರಬಹುದು. 

ಏನು ಉದ್ಯಮ?
ಹೌದು, ಕಾರ್ತಿಕ್‌ ಮಹೇಶ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ Golify ವಿಷಯವನ್ನು ಶೇರ್‌ ಮಾಡಿದ್ದಾರೆ. ಸದ್ಯ ʼರಾಮರಸʼ ಎನ್ನುವ ಸಿನಿಮಾ ಮಾಡುತ್ತಿರುವ ಅವರು ʼGolifyʼ ಎನ್ನುವ ಉದ್ಯಮ ಆರಂಭಿಸಿದ್ದಾರೆ. ಇದು ಗೋಲಿ ಸೋಡ ಕುರಿತಾದ ಒಂದು ಉದ್ಯಮ. ಕಾರ್ತಿಕ್‌ ಮಹೇಶ್‌ ಅವರ ಈ ಹೊಸ ಸಾಹಸಕ್ಕೆ ನಮ್ರತಾ ಗೌಡ ಅವರು ಶುಭ ಹಾರೈಸಿದ್ದಾರೆ. ಈ ಉದ್ಯಮದ ಬಗ್ಗೆ ಕಾರ್ತಿಕ್‌ ಅವರು ಮುಂದಿನ ದಿನಗಳಲ್ಲಿ ಮಾಹಿತಿ ನೀಡಬಹುದು. 

Latest Videos

ಶೀಘ್ರದಲ್ಲೇ ಹಸೆಮಣೆ ಏರುವರೇ ಕಾರ್ತಿಕ್ -ನಮ್ರತಾ! ಬಿಗ್ ಬಾಸ್ ವಿನ್ನರ್ ಹೇಳಿದ್ದೇನು?

ನಿರೂಪಕ ಕೂಡ ಆದರು..! 
ʼಬಿಗ್‌ ಬಾಸ್ʼ‌ ಶೋನಲ್ಲಿ ಗೆದ್ದ ಹಣದಿಂದ ಏನು ಮಾಡ್ತೀರಾ ಅಂತ ಕಾರ್ತಿಕ್‌ ಮಹೇಶ್‌ ಅವರ ಬಳಿ ಪ್ರಶ್ನೆ ಮಾಡಿದಾಗ “ಮನೆ ತಗೊಳ್ಳಬೇಕು, ಆದರೆ ಬಿಗ್‌ ಬಾಸ್‌ ಶೋನಿಂದ ಸಿಕ್ಕ ಹಣದಿಂದ ಮನೆ ತಗೊಳೋಕೆ ಆಗೋದಿಲ್ಲ, ಇನ್ನೂ ಒಂದಿಷ್ಟು ದುಡಿಮೆ ಬೇಕಾಗುತ್ತದೆ” ಎಂದು ಅವರು ಹೇಳಿದ್ದರು. 

ಸಿನಿಮಾಗಳಿಗೆ ತಯಾರಿ….!
ಕಾರ್ತಿಕ್‌ ಭಾಗವಹಿಸಿದ್ದ ಸೀಸನ್‌ ಮುಗಿದು, ಇನ್ನೊಂದು ಸೀಸನ್‌ ಕೂಡ ಇತ್ತೀಚೆಗೆ ಮುಕ್ತಾಯವಾಗಿದೆ. ಈಗ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ, ಇದಕ್ಕೆ ತಯಾರಿ ಕೂಡ ಮಾಡಿಕೊಳ್ತಿದ್ದಾರೆ. ಅಂದಹಾಗೆ ಸ್ಟಾರ್‌ ಸುವರ್ಣ ವಾಹಿನಿಯ ಶೋವೊಂದರಲ್ಲಿ ಕಾರ್ತಿಕ್‌ ಅವರು ನಿರೂಪಕ ಆಗಿಯೂ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕಾರ್ತಿಕ್‌ ಫುಲ್‌ ಆಕ್ಟಿವ್‌ ಆಗಿದ್ದಾರೆ.

ನಮ್ರತಾ ಜೊತೆ ರೈನ್ ಡಾನ್ಸ್ ಮಾಡಿ ಚಳಿ ಆಗ್ತಿದೆ ಎಂದ ಕಾರ್ತಿಕ್!

ಎಲ್ಲ ಸಿನಿಮಾಕ್ಕೆ ಓಕೆ ಹೇಳಲ್ಲ..!
ʼಬಿಗ್‌ ಬಾಸ್ʼ‌ ಶೋನಿಂದ ಹೊರಗಡೆ ಬಂದ್ಮೇಲೆ ಕಾರ್ತಿಕ್‌ ಅವರಿಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬಂದಿವೆ. ಆದರೆ ಅವರು ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಕಾರಣಕ್ಕೆ ಇಪ್ಪತ್ತಕ್ಕೂ ಅಧಿಕ ಸಿನಿಮಾಗಳನ್ನು ರಿಜೆಕ್ಟ್‌ ಮಾಡಿದ್ದೆ ಎಂದು ಆಗಲೇ ಅವರು ಹೇಳಿದ್ದರು. ಈಗ ಈ ಸಂಖ್ಯೆ ಜಾಸ್ತಿಯೂ ಆಗಿರಬಹುದು. 

ʼಬಿಗ್‌ ಬಾಸ್ʼ‌ ಸ್ಪರ್ಧಿಗಳ ಜೊತೆ ನಂಟು..! 
ಇತರ ಸಹಸ್ಪರ್ಧಿಗಳಾದ ವಿನಯ್‌ ಗೌಡ, ನಮ್ರತಾ ಗೌಡ, ತನಿಷಾ ಕುಪ್ಪಂಡ, ನೀತು ವನಜಾಕ್ಷಿ, ಸಿರಿಜಾ, ವರ್ತೂರು ಸಂತೋಷ್‌ ಮುಂತಾದವರ ಜೊತೆ ಕಾರ್ತಿಕ್‌ ಮಹೇಶ್‌ ಉತ್ತಮ ಸ್ನೇಹ ಸಂಬಂಧ ಕಾಯ್ದುಕೊಂಡಿದ್ದಾರೆ. ತನಿಷಾ, ನಮ್ರತಾ ಗೌಡ, ವರ್ತೂರು ಸಂತೋಷ್‌ ಮನೆಯ ಕಾರ್ಯಕ್ರಮಗಳಲ್ಲಿ ಕಾರ್ತಿಕ್‌ ಭಾಗಿಯಾಗಿದ್ದರು. ಇನ್ನು ಕಾರ್ತಿಕ್‌ ತಂಗಿ ಮಗನ ನಾಮಕರಣದಲ್ಲಿ ಕೂಡ ಈ ಬಿಗ್‌ ಬಾಸ್‌ ಸ್ಪರ್ಧಿಗಳು ಭಾಗಿಯಾಗಿದ್ದರು. 

Bigg Boss Season 11 : ದೊಡ್ಮನೆಯ ಹೊಸ ಸ್ಪರ್ಧಿಗಳಿಗೆ ಹಳೆ ಕಂಟೆಸ್ಟಂಟ್’ಗಳ ಹೋಲಿಕೆ... ನಿಮಗೂ ಹೀಗೆ ಅನಿಸ್ತಿದ್ಯಾ?

ಕಿಚ್ಚ ಸುದೀಪ್‌ ಮಾರ್ಗದರ್ಶನ
“ನನಗೆ ಏನೇ ಸಂದೇಹ ಬಂದರೂ, ಸಲಹೆ ಬೇಕಿದ್ದರೂ ಕೂಡ ಕಿಚ್ಚ ಸುದೀಪ್‌ ಅವರಿಗೆ ಮೆಸೇಜ್‌ ಮಾಡಿ ಕೇಳ್ತೀನಿ, ಅವರು ಸಲಹೆ ಕೊಡ್ತಾರೆ. ನಿಜಕ್ಕೂ ಇದು ನನಗೆ ಒಂಥರ ಶಕ್ತಿ ಇದ್ದಂತೆ” ಎಂದು ಕಾರ್ತಿಕ್‌ ಮಹೇಶ್‌ ಅವರು ಹೇಳಿದ್ದರು. ಇನ್ನು ಕಾರ್ತಿಕ್‌ ಅವರ ʼರಾಮರಸʼ ಸಿನಿಮಾ‌ ಹೀರೋ ಟೀಸರ್‌ ಲಾಂಚ್‌ಗೆ ಕಿಚ್ಚ ಸುದೀಪ್‌ ಆಗಮಿಸಿ ಶುಭ ಹಾರೈಸಿದ್ದರು. ಮುಂದಿನ ದಿನಗಳಲ್ಲಿ ಕಾರ್ತಿಕ್‌ ಯಾವ ರೀತಿ ತೆರೆ ಮೇಲೆ ಕಾಣಸ್ತಾರೆ ಎನ್ನುವ ಕುತೂಹಲ ಇದೆ. 
 

 

vuukle one pixel image
click me!
vuukle one pixel image vuukle one pixel image