
Amruthadhaare serial new episode: ಅಮೃತಧಾರೆ ಸೀರಿಯಲ್ ಎರಡನೇ ಹಂತದಿಂದ ಆರಂಭವಾಗಿದ್ದು, ಪ್ರತಿ ಸಂಚಿಕೆಯೂ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಐದು ವರ್ಷದ ಬಳಿಕ ನಂತರ ಅಂತ ತೋರಿಸಿ ಆರಂಭವಾದ ಅಮೃತಧಾರೆ ಸೀರಿಯಲ್ ಇದೀಗ ವೀಕ್ಷಕರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಧಾರಾವಾಹಿಯ ಕಥೆಯನ್ನು ಎಳೆಯದೇ ಸಿನಿಮಾ ರೀತಿಯಲ್ಲಿಯೇ ತೋರಿಸಲಾಗುತ್ತಿದೆ. ಗೌತಮ್ ಜೀವಕ್ಕೆ ಅಪಾಯ ಅಂತ ತಿಳಿದಿರುವ ಭೂಮಿಕಾ ಗಂಡ ಮತ್ತು ತವರಿನಿಂದ ದೂರವಾಗಿದ್ದಾರೆ. ಕಳೆದ 5 ವರ್ಷಗಳಿಂದ ಭೂಮಿಕಾ ಜೊತೆಯಲ್ಲಿದ್ರೂ ಮಲ್ಲಿ ಸುಮ್ಮನಿದ್ದಳು. ಇದೀಗ ಭೂಮಿಕಾ ಮತ್ತು ಗೌತಮ್ ಇಬ್ಬರನ್ನು ಒಂದು ಮಾಡಲು ಮಲ್ಲಿ ಮುಂದಾಗಿದ್ದು, ಇದಕ್ಕೆ ಕಾವೇರಿಯ ಬೆಂಬಲ ಸಿಕ್ಕಿದೆ.
ಭೂಮಿಕಾ ಗೆಳತಿ ಕಾವೇರಿ ಸಹಾಯ ಪಡೆದುಕೊಂಡು ಮಲ್ಲಿ ಇಬ್ಬರ ನಡುವೆ ಪ್ರೀತಿ ಶುರುವಾಗುವಂತೆ ಪ್ರಯತ್ನಿಸಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಬಂದಿರುವ ಭೂಮಿಕಾ, ಬಾಡಿಗೆ ಮನೆ ಮಾಡಿಕೊಂಡಿದ್ದು, ಅಪ್ಪು ಮತ್ತು ಮಲ್ಲಿ ಜೊತೆ ವಾಸವಾಗಿದ್ದಾರೆ. ಕಾವೇರಿ ವಾಸವಾಗಿರುವ ವಠಾರದಲ್ಲಿ ಗೌತಮ್ ಇರೋದು ಮಲ್ಲಿಗೆ ಗೊತ್ತಾಗಿದೆ. ಇದರಿಂದ ವಠಾರಕ್ಕೆ ಶಿಫ್ಟ್ ಆಗಲು ಮಲ್ಲಿ ಯೋಚಿಸಿದ್ದು, ಮನೆಯೊಂದನ್ನು ಕಾಯ್ದಿರಿಸುವಂತೆ ಕಾವೇರಿ ಬಳಿ ಹೇಳಿಕೊಂಡಿದ್ದಾರೆ. ಹೊಸ ಮನೆಗೆ ಬಂದು ಮೂರು ದಿನ ಮಾತ್ರವಾಗಿದ್ದು, ಹೇಗೆ ಅಲ್ಲಿಂದ ಬರಲು ಮಲ್ಲಿ ಕೋಳಿ ಜಗಳ ಮಾಡಿಕೊಂಡಿದ್ದಾರೆ.
ನೀರು ಬರುತ್ತಿಲ್ಲ ಎಂಬ ನೆಪವೊಡ್ಡಿ ಓನರ್ ಜೊತೆ ಜಗಳ ಮಾಡಿಕೊಂಡು ಭೂಮಿಕಾ ಜೊತೆ ವಠಾರಕ್ಕೆ ಮಲ್ಲಿ ಶಿಫ್ಟ್ ಆಗಿದ್ದಾರೆ. ಇದೇ ವಠಾರದಲ್ಲಿ ಗೌತಮ್ ವಾಸವಾಗಿರೊ ವಿಷಯ ಭೂಮಿಕಾಗೆ ತಿಳಿದಿಲ್ಲ. ತಮ್ಮ ವಠಾರಕ್ಕೆ ಬಂದಿರುವ ಹೊಸ ಅತಿಥಿಗೆ ಟೀ ಕೊಡಲು ಗೌತಮ್ ಹೋಗಿ ಭೂಮಿಕಾರನ್ನು ನೋಡಿದ್ದಾರೆ. ಇದೆಲ್ಲದರ ಹಿಂದೆ ಮಲ್ಲಿ ಮತ್ತು ಕಾವೇರಿಯ ಪ್ಲಾನ್ ಇರೋದು ಭೂಮಿಕಾ ಮತ್ತು ಗೌತಮ್‌ಗೆ ಗೊತ್ತಿಲ್ಲ.
ಇದನ್ನೂ ಓದಿ: ಮಲ್ಲಿ ಕೋಳಿ ಜಗಳದಿಂದ ರೋಚಕ ತಿರುವು; ಅಮೃತಧಾರೆ ಈ ಟ್ವಿಸ್ಟ್ ನೋಡಿದ್ರೆ ಹಾರ್ಟ್ ಅಟ್ಯಾಕ್ ಫಿಕ್ಸ್!
ಈಗಾಗಲೇ ಪೋಷಕರು ಬಿಟ್ಟು ಹೋಗಿರುವ ಬಾಲಕಿಯನ್ನು ಗೌತಮ್ ಕರೆದುಕೊಂಡು ಬಂದಿದ್ದಾರೆ. ಅನಾಥೆಯಾಗಿದ್ದ ಬಾಲಕಿಯನ್ನು ಗೌತಮ್ ದತ್ತು ಪಡೆದುಕೊಂಡು ಮಗಳಂತೆ ಸಾಕುತ್ತಿದ್ದಾರೆ. ಗೌತಮ್ ಮನೆಯಲ್ಲಿರುವ ಬಾಲಕಿಯನ್ನು ನೋಡಿ ಭೂಮಿಕಾ ತಪ್ಪು ಅರ್ಥೈಸಿಕೊಂಡರೆ ಹೇಗೆ ಎಂದು ವೀಕ್ಷಕರಲ್ಲಿ ಆತಂಕ ಶುರುವಾಗಿದೆ. ಮಲ್ಲಿಯ ಕೃಪೆಯಿಂದ ಭೂಮಿಕಾ ತಂದೆ-ತಾಯಿ ಮೊಮ್ಮಗನನ್ನು ಅಪ್ಪಿ ಮುದ್ದಾಡಿದ್ದಾರೆ. ಪೋಷಕರೊಂದಿಗೆ ಮಗ ಆಟವಾಡುತ್ತಿರೋದನ್ನು ನೋಡಿ ಭೂಮಿಕಾ ಕಣ್ತುಂಬಿಕೊಂಡಿದ್ದಾರೆ.
ಇದನ್ನೂ ಓದಿ: Amruthadhaare Serial: ಸಾಮಾನ್ಯದವಳಲ್ಲ ಮಲ್ಲಿ; ಲೈಫ್‌ನಲ್ಲಿ ಬೇರೆ ಉದ್ದೇಶ ಇಟ್ಕೊಂಡಿರೋ ಚಾಲಾಕಿ! ಈಗ ಬಾಯ್ ಬಿಟ್ಳು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.