ಡಿವೋರ್ಸ್‌ ನಂತರ ಮನೆ ಇಲ್ಲದೆ ಆಡಿ 6 ಕಾರಿನಲ್ಲಿ ಮಲಗಿದ್ದ ಕಿರುತೆರೆ ನಟಿ; ಅಟೋ ಡ್ರೈವರ್‌ಗಳ 20 ರೂ. ಊಟ ತಿಂದೆ ಎಂದು ಕಣ್ಣೀರು

By Vaishnavi Chandrashekar  |  First Published Aug 3, 2024, 4:19 PM IST

ಡಿವೋರ್ಸ್‌ ಪಡೆದ ನಂತರ ಜೀವನ ಬೀದಿಗೆ ಬಂತು ಎಂದು ಭಾವುಕರಾದ ಕಿರುತೆರೆ ನಟಿ. ಆಡಿ 6 ಕಾರಲ್ಲಿ ಮಲಗೋದು ಸುಮ್ಮನೆನಾ ಎಂದ ನೆಟ್ಟಿಗರು.....


ಹಿಂದಿ ಕಿರುತೆರೆ ಜನಪ್ರಿಯ ನಟಿ ರಶ್ಮಿ ದೇಸಾಯಿ ಬಿಗ್ ಬಾಸ್ ಹಿಂದಿ ಸೀಸನ್‌ 13ರಲ್ಲಿ ಭಾಗವಹಿಸಿದ್ದರು. ಟ್ರೋಫಿ ಹಿಡಿಯಲು ಆಗದೇ ಇದ್ದರೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಯಿಂದ ಹೊರ ಬಂದರು. ಕಿರುತೆರೆಯ ಸೂಪರ್ ಹಿಟ್ ನಟಿಯಾಗಿದ್ದರೂ ಕೂಡ ರಶ್ಮಿ ದೇಸಾಯಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಎಡವಟ್ಟುಗಳನ್ನು ನೋಡಿದ್ದಾರೆ. ಡಿವೋರ್ಸ್‌ ಮತ್ತು ಬಾಯ್‌ಫ್ರೆಂಡ್‌ ಜೊತೆ ಬ್ರೇಕಪ್‌, ಎರಡರ ಬಗ್ಗೆ ತಮ್ಮ ಮನಸ್ಸಿನ ನೋವನ್ನು ಹಂಚಿಕೊಂಡಿದ್ದಾರೆ.

ನಂದೀಶ್ ಸಿಂಗ್ ಸಂಧು ಎಂಬುವವರನ್ನು ರಶ್ಮಿ ದೇಸಾಯಿ ಮದುವೆಯಾಗಿದ್ದರು. ಮದುವೆ ಸಮಯದಲ್ಲಿ ಕಿರುತೆರೆ ನಟಿಯಾಗಿದ್ದರು. ಮದುವೆ ನಂತರ ಕೊಂಚ ಫೇಮ್ ಕಡಿಮೆ ಆಗಿತ್ತು. ಮೂರು ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿಬಿಟ್ಟರು. ಅದಾದ ಮೇಲೆ ಬಾಯ್‌ಫ್ರೆಂಡ್‌ ಉದ್ಯಮಿ ಅರ್ಹಾನ್ ಖಾನ್‌ ಜೊತೆಗಿದ್ದರು...ಅದು ಕೂಡ ವರ್ಕೌಟ್ ಆಗುತ್ತಿಲ್ಲ ಎಂದು ಬ್ರೇಕಪ್ ಮಾಡಿಕೊಂಡರು. ಈ ಡಿವೋರ್ಸ್‌ ನಂತರ ಜೀವನ ಹೇಗಿತ್ತು ಎಂದು ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡು ಭಾವುಕರಾಗಿದ್ದಾರೆ.

Tap to resize

Latest Videos

ನಮ್ಮಪ್ಪಗೆ ಮೆಸೇಜ್‌ ಬಗ್ಗೆ ಹೇಳಿದ್ರೂ ಇದೇ ತರ ಮಾಡುತ್ತಿದ್ದರು; ದರ್ಶನ್ ಪರ ನಿಂತ ಕಿರುತೆರೆ ನಟಿ ಪ್ರಗತಿ

ಡಿವೋರ್ಸ್‌ ಪಡೆದ ನಂತರ ನಾಲ್ಕು ದಿನ ನಾನು ರಸ್ತೆ ಬದಿಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿತ್ತು. ನನ್ನ ಬಳಿ ಇದ್ದ ಆಡಿ 6 ಕಾರಿನಲ್ಲಿ ಮಲಗುವ ಪರಿಸ್ಥಿತಿ ಎದುರಾಗಿತ್ತು ಅಲ್ಲದೆ ಊಟ ಹಣವಿಲ್ಲದ ಕಾರಣ ರಸ್ತೆಯಲ್ಲಿ ಸಿಗುವ 20 ರೂಪಾಯಿ ಊಟವನ್ನು ತಿನ್ನುತ್ತಿದ್ದೆ. ಆಟೋ ಡ್ರೈವರ್‌ಗಳು ತಿನ್ನುತ್ತಿದ್ದ ಜಾಗದಲ್ಲಿ ತಿನ್ನುತ್ತಿದ್ದೆ ಎಂದು ಬೇಸರವಿದೆ. ನನ್ನ ಬಟ್ಟೆಗಳಿಗೆ ಜಾಗವಿಲ್ಲದ ಕಾರಣ ನನ್ನ ಮ್ಯಾನೇಜರ್‌ ಮನೆಯಲ್ಲಿ ಇಟ್ಟಿದೆ. ವಿಚ್ಛೇದನದ ಸಮಯದಲ್ಲಿ 3 ರಿಂದ 3.5 ಕೋಟಿ ರೂಪಾಯಿ ಸಾಲವಿತ್ತು ಅದನ್ನು ತೀರಿಸಲು ಸಹಾಯ ಮಾಡಿದ್ದು ದಿಲ್ ಸೇ ದಿಲ್ ತಕ್ ಎನ್ನುವ ಧಾರಾವಾಹಿ. ಅಲ್ಲಿಂದ ನನ್ನ ಜರ್ನಿ ಅದ್ಭುತವಾಗಿ ಇತ್ತು. ಬಿಗ್ ಬಾಸ್‌ವರೆಗೂ ಬಂದು ನಿಂತಿದೆ ಎಂದು ರಶ್ಮಿ ದೇಸಾಯಿ ಮಾತನಾಡಿದ್ದಾರೆ.

ವಯನಾಡಿಗೆ 10 ಲಕ್ಷ ರೂ. ನೀಡಿದ ರಶ್ಮಿಕಾ ; ತಾಯ್ನಾಡಿಗೆ ಕರಗದ ಮನಸ್ಸು ಬೇರೆ ನಾಡಿಗೆ ಮರುಗುತ್ತಿದೆ ಎಂದ ನೆಟ್ಟಿಗರು

click me!