ಮೈಸೂರಿನಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದ ಶಂಕರ್ ಅಶ್ವತ್ಥ್. ಪ್ರಾಮಾಣಿಕವಾಗಿ ಕೆಲಸ ಮಾಡಿದ ರಮೇಶಾ ಹುಡುಗನನ್ನು ನೆನಪಿಸಿಕೊಂಡ ನಟ...
ಕನ್ನಡ ಚಿತ್ರರಂಗದ ಹೆಸರಾಂತ ನಟ ಶಂಕರ್ ಅಶ್ವತ್ಥ್ ಫೇಸ್‌ಬುಕ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ದಿನಕ್ಕೊಂದು ವಿಡಿಯೋ ಅಪ್ಲೋಡ್ ಮಾಡುವ ನಟ ತಮ್ಮ ಜೀವನದಲ್ಲಿ ನಡೆದಿರುವ ಅದೆಷ್ಟೋ ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಈ ಘಟನೆಯಿಂದ ಕೆಲವರಿಗೆ ಸಹಾಯ ಅಗಬೇಕು ಹಾಗೂ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬೇಕು ಅನ್ನೋ ಕಾರಣ ವಿಡಿಯೋ ಮಾಡುತ್ತಾರೆ.
'ನಾವು ಬೇರೆ ಅವರಿಂದ ಜ್ಞಾನ ಪಡೆದಾಗ ಅಥವ ಸಹಾಯ ಪಡೆದಾಗ ಅದನ್ನು ಎಷ್ಟು ನೆನಿಯುತ್ತೀವಿ ಭಗವಂತ ನಮ್ಮನ್ನು ಅಷ್ಟು ಮೆಚ್ಚಿಕೊಳ್ಳುತ್ತಾನೆ ಹೀಗಾಗಿ ಹಳೆ ಘಟನೆವೊಂದು ನನ್ನ ನೆನಪಿಗೆ ಬಂತು' ಎಂದು ಶಂಕರ್ ಅಶ್ವತ್ಥ್ ವಿಡಿಯೋ ಆರಂಭಿಸಿದ್ದಾರೆ.
ನನ್ನ ತಂದೆ ತಲೆ ಸುತ್ತಿ ಬಿದ್ದರೂ ನನ್ನ ಸಹಾಯ ಕೇಳಲಿಲ್ಲ: ನಟ ಶಂಕರ್ ಅಶ್ವತ್ಥ್
'ನನಗೆ ಒಳ್ಳೆ ವಿಚಾರವೊಂದು ನೆನದು ಬಂತು 44 ವರ್ಷಗಳ ಕೆಳಗೆ ನಾನು ಮೈಸೂರಿನ ಸಿದ್ಧಾರ್ಥ್ ಲೇಔಟ್‌ನಲ್ಲಿ ಮೆಡಿಕಲ್ ಸ್ಟೋರ್ ಆರಂಭಿಸಿದೆ ಅಲ್ಲಿ ರಮೇಶಾ ಅನ್ನೋ ಹುಡುಗನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದೆ ಆತನಿಗೆ ಬಡತನ ಇತ್ತು ವಿದ್ಯಾಭ್ಯಾಸಕ್ಕೆ ಕಷ್ಟವಿತ್ತು. ನಾನು ಕೊಡುವ ಸಂಬಳಕ್ಕೆ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದ ಸುಮಾರು ಎರಡು ವರ್ಷಗಳ ಕಾಲ ವ್ಯಾಪ್ಯಾರ ನಡೆಸಿದೆ. ಸ್ವಲ್ಪ ತಿಂಗಳುಗಳ ನಂತರ ವ್ಯಾಪಾರ ಕಷ್ಟ ಆಗುತ್ತಿದ್ದ ಕಾರಣ ಸರಸ್ವತಿಪುರಂ ಕಡೆ ಅಂಗಡಿ ಶಿಫ್ಟ್ ಮಾಡಿದೆ ಆಗ ಆ ರಮೇಶಾ ಅನ್ನೋ ಹುಡುಗ ಸರ್ ನನಗೆ ಅಷ್ಟು ದೂರ ಬರುವುದಕ್ಕೆ ಆಗಲ್ಲ ಕಾಲೇಜ್‌ಗೆ ಕಷ್ಟವಾಗುತ್ತದೆ ಬೇರೆ ಯಾರನ್ನಾದರೂ ನೋಡಿಕೊಳ್ಳಿ ಎಂದು ಹೇಳಿದ. ಹಾಗೆ ಬೇರೆ ಹುಡುಗನನ್ನು ನೋಡಿಕೊಂಡೆ ವ್ಯಾಪಾರ ತುಂಬಾ ಚೆನ್ನಾಗಿ ನಡೆಯುತ್ತಿತ್ತು ನಾನು ಟಾಪ್‌ನಲ್ಲಿದೆ. ಅಂತಹ ಸಮಯದಲ್ಲಿ ಸುಮಾರ ಹುಡುಗ ಬಂದು ಹೋದರು ಬಂದವರೆಲ್ಲಾ ಕದಿಯುವುದು ನಾಮ ಹಾಕುವುದು ತುಂಬಾ ಮೋಸ ಮಾಡುತ್ತಿದ್ದರು' ಎಂದು ಶಂಕರ್ ಮಾತನಾಡಿದ್ದಾರೆ.
ಆಧಾರ್ ನಂಬರ್ ಕೊಡಬೇಡಿ, ಮನೆಯೊಳಗೆ ಬಿಟ್ಟುಕೊಳ್ಳಬೇಡಿ; ನಟ ಶಂಕರ್ ಅಶ್ವಥ್ ಎಚ್ಚರಿಕೆ ವಿಡಿಯೋ ವೈರಲ್!
'ಇಷ್ಟೆಲ್ಲ ಆದರೂ ರಮೇಶಾ ತರ ಹುಡುಗ ಸಿಗುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿ ಮಾತನಾಡಿದಾಗ ನನಗೋಸ್ಕರ ಬೆಳಗ್ಗೆ ಕಾಲೇಜ್ ಬಿಟ್ಟು ಸಂಜೆ ಸೇರಿಕೊಂಡ. ದುರದೃಷ್ಟ ಎರಡು ವರ್ಷಗಳ ನಂತರ ಮತ್ತೆ ವ್ಯಾಪಾರ ಕಷ್ಟ ಆಯಿತ್ತು ಎಷ್ಟರ ಮಟ್ಟಕ್ಕೆ ಅಂದ್ರೆ ಒಂದು ದಿನ ಸಾಗಿಸುವುದು ಕೂಡ ಕಷ್ಟ ಆಗಿತ್ತು. ಆ ಸಮಯದಲ್ಲಿ ರಮೇಶಾ ನನ್ನ ತಾಯಿ ಬಳಿ ಬಂತು ಅಂಗಡಿ ಕಷ್ಟದಲ್ಲಿ ನಡೆಯುತ್ತಿದೆ ಹೀಗಾಗಿ ನನಗೆ ಪೂರ್ತಿ ಸಂಬಳ ಬೇಡ ಅರ್ಧ ಸಂಬಳ ಕೊಡಿ ಎಂದು ಹೇಳಿದ. ಇಂತಹ ಒಳ್ಳೆ ಹುಡುಗನನ್ನು ಆಗಾಗ ನೆನಪಿಸಿಕೊಳ್ಳುವುದು ನನ್ನ ಧರ್ಮ ನನ್ನ ಕರ್ತವ್ಯ ಅದಿಕ್ಕೆ ಈ ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ...ರಮೇಶಾ ನೀನು ಎಲ್ಲೇ ಇದ್ದರೂ ಚೆನ್ನಾಗಿರಪ್ಪ' ಎಂದು ಶಂಕರ್ ಹೇಳಿದ್ದಾರೆ.