ಮನೆಯಲ್ಲಿ ಬಾರ್‌ ಕೌಂಟರ್‌; ಕೊನೆಗೂ ಬೆಂಗಳೂರಿನಲ್ಲಿರುವ ಡೂಪ್ಲೆಕ್ಸ್ ಮನೆ ಹೇಗಿದೆ ಎಂದು ತೋರಿಸಿದ ಅನುಪಮಾ ಗೌಡ!

Published : Jul 17, 2023, 04:23 PM ISTUpdated : Jul 17, 2023, 04:24 PM IST
 ಮನೆಯಲ್ಲಿ ಬಾರ್‌ ಕೌಂಟರ್‌;  ಕೊನೆಗೂ ಬೆಂಗಳೂರಿನಲ್ಲಿರುವ ಡೂಪ್ಲೆಕ್ಸ್ ಮನೆ ಹೇಗಿದೆ ಎಂದು ತೋರಿಸಿದ ಅನುಪಮಾ ಗೌಡ!

ಸಾರಾಂಶ

ಎರಡು ಭಾಗಗಳಲ್ಲಿ ಸಂಪೂರ್ಣ ಮನೆ ವಿಡಿಯೋ ತೋರಿಸಿದ ಅನುಪಮಾ ಗೌಡ. ಐದು ನಾಯಿಗಳಿದ್ದರೂ ಮನೆ ಎಷ್ಟು ನೀಟ್ ಆಗಿದೆ ನೋಡಿ...  

ಕನ್ನಡ ಕಿರುತೆರೆ ಮಾತಿನಮಲ್ಲಿ, ಬೋಲ್ಡ್‌ ನಟಿ ಅನುಪಮಾ ಗೌಡ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹೊಸ ವಿಡಿಯೋ ಮಾಡಿದ್ದಾರೆ. ಕೆಲವು ವರ್ಷಗಳ ಕಾಲ ಒಂಟಿಯಾಗಿ ಅಪಾರ್ಟ್‌ಮೆಂಟ್‌ನಲ್ಲಿದ್ದ ಅನುಪಮಾ ಗೌಡ ಈಗ ತಾಯಿ ಜೊತೆ ರಾಜರಾಜೇಶ್ವರಿ ನಗರದಲ್ಲಿರುವ ಡೋಪ್ಲೆಕ್ಸ್‌ ಮನೆಗೆ ಶಿಫ್ಟ್‌ ಆಗಿದ್ದಾರೆ. ಮನೆ ತುಂಬಾ ವುಡ್‌ ವರ್ಕ್ ಹಾಗೂ ಸಣ್ಣ ಪುಟ್ಟ ಗಿಡಗಳನ್ನು ಇಟ್ಟಿದ್ದಾರೆ. ಯಾವುದೇ ವಿಡಿಯೋ ಅಪ್ಲೋಡ್ ಮಾಡಿದೂ ಮನೆ ತೋರಿಸಿ ಮನೆ ತೋರಿಸಿ ಎಂದು ನೆಟ್ಟಿಗರು ಡಿಮ್ಯಾಂಡ್ ಮಾಡುತ್ತಿದ್ದ ಕಾರಣ ಎರಡು ಭಾಗಗಳಲ್ಲಿ ವಿಡಿಯೋ ತೋರಿಸಿದ್ದಾರೆ. 

ಹೌದು! ಅನುಪಮಾ ಇರುವ ಡೋಪ್ಲೆಕ್ಸ್‌ ಮನೆಯಲ್ಲಿ ಮೂರು ಬೆಡ್‌ ರೂಮ್‌ಗಳಿದೆ. ಮೂಗುತ್ತಿ ಸುಂದರಿ ಮತ್ತು ತಾಯಿ  ಸೇರಿ ಕೊಂಡು ಮನೆಯಲ್ಲಿ  ಐದು ನಾಯಿಗಳನ್ನು ಸಾಕಿದ್ದಾರೆ. ಮನೆ ಪ್ರವೇಶವಾಗುತ್ತಿದ್ದ ದೊಡ್ಡ ಟಿವಿ ಮತ್ತು ಸೋಫಾ ಕಾಣಿಸುತ್ತದೆ. ಸೋಫಾ ಮೇಲೆ ನಾಯಿಗಳು ಕುಳಿತುಕೊಂಡರೆ ಹಾಳಾಗಬಹುದು ಎಂದು ಬಟ್ಟೆ ಹಾಕಿದ್ದಾರೆ. ಮೆಟ್ಟಿಲು ಕೆಳಗೆ ವಾಷಿಂಗ್ ಮಷೀನ್‌ ಇದೆ ಹಾಗೂ ಸಿಕ್ಕಿರುವ ಅವಾರ್ಡ್‌ಗಳನ್ನು ಇಟ್ಟಿದ್ದಾರೆ. ಹಾಲ್‌ನಲ್ಲಿರುವ ಬಾಲ್ಕಾನಿಯಲ್ಲೂ ಗಿಡಗಳನ್ನು ಇಟ್ಟಿದ್ದಾರೆ. 

ಗೆಳೆಯನ ಹುಟ್ಟುಹಬ್ಬಕ್ಕೆ ಕೈಯಾರೆ ಕೇಕ್ ಮಾಡಿ ಮನೆ ಅಲಂಕರಿಸಿದ ಅನುಪಮಾ ಗೌಡ; ಮದ್ವೆ ಸೂಚನೆ ಎಂದ ನೆಟ್ಟಿಗರು

ಮನೆಯಲ್ಲಿ ಒಂದು ನಾಯಿ ಸ್ಕೈ ಸೋಫಾವನ್ನು ಕಡಿಯುತ್ತಿದ್ದ ಕಾರಣ ಡಿಫರೆಂಟ್ ಆಗಿ ಜೋಡಿಸಿಕೊಂಡಿದ್ದಾರೆ. ಐಕಿಯಾದಿಂದ ತಂದಿರುವ ಲೈಟ್‌ ಮತ್ತು ಕೂಲರ್ ಬಳಸುತ್ತಾರೆ. ಮನೆಯ ಕೆಳ ಭಾಗದಲ್ಲಿ ಐದು ನಾಯಿಗಳಿರುತ್ತದೆ ಮೆಟ್ಟಿರು ಏನು ಮೂರು ರೂಮ್‌ಗಳಿಗೆ ಎಂಟ್ರಿ ಕೊಡಲು ಒಂದು ನಾಯಿಗೆ ಮಾತ್ರ ಅವಕಾಶವಿದೆ ಹೀಗಾಗಿ ಮೆಟ್ಟಿಲ ಮೇಲೆ ಮರದ ಪೀಸ್‌ ಇಟ್ಟು ಕಡೆದಿದ್ದಾರೆ. 

ಮೂರು ರೂಮ್‌ಗಳಲ್ಲಿ ಒಂದು ರೂಮ್‌ನಲ್ಲಿ ಅನುಪಮಾ ಗೌಡ ವಾಸಿಸುತ್ತಿದ್ದಾರೆ, ಒಂದು ರೂಮ್‌ನಲ್ಲಿ ಅವರ ತಾಯಿ ಬಳಸುತ್ತಾರೆ ಮತ್ತೊಂದು ರೂಮ್‌ನಲ್ಲಿ ತಮ್ಮ ಪ್ರಮೋಷನ್ ವಿಡಿಯೋ, ಎಡಿಟಿಂಗ್ ಕೆಲಸಗಳನ್ನು ಮಾಡುವುದಕ್ಕೆ ಬಳಸುತ್ತಾರೆ. ಮೆಟ್ಟಿರು ಏರುತ್ತಿದ್ದಂತೆ ತಂದೆ ಜೊತೆ ಕ್ಲಿಕ್ ಮಾಡಿಕೊಂಡ ಸೆಲ್ಫಿಯನ್ನು ದೊಡ್ಡ ಫ್ರಮ್ ಮಾಡಿಸಿದ್ದಾರೆ. ದೇವರು ಮನೆ ಕೂಡ ಪಕ್ಕಾ ಮಿಡಲ್ ಕ್ಲಾಸ್ ರೀತಿ ಇದೆ ಎಂದು ಹೇಳಿಕೊಂಡಿದ್ದಾರೆ. ಅಡುಗೆ ಮನೆ ದೊಡ್ಡದಾಗಿದ್ದರೂ ನನಗೆ ಚಿಕ್ಕದಾಗಿ ಕಾಣಿಸುತ್ತದೆ ಎಂದು ಅನುಪಮಾ ಹೇಳಿದ್ದಾರೆ. 

ದಿವ್ಯಾ ಉರುಡುಗ ಪ್ಯಾಂಟ್‌ ಮೇಲೆ ಸೂಪ್ ಚೆಲ್ಲಿದ ರಾಕೇಶ್; ಬಿಬಿ ಗ್ಯಾಂಗ್ ಫೋಟೋ

ಅನುಪಮಾ ಅವರು ತಮ್ಮ ನಟನಾ ಕೌಶಲ್ಯದ ಹೊರತಾಗಿ, ಕನ್ನಡ ಟೆಲಿವಿಶನ್ ನಲ್ಲಿ ನಿರೂಪಕರಾಗಿಯೂ ಯಶಸ್ವಿಯಾಗಿದ್ದಾರೆ. ರಿಯಾಲಿಟಿ ಶೋ ಜೊತೆಗೆ ನಟನೆಯಲ್ಲೂ ಸಹ ಇವರು ಸೈ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಅನುಪಮಾ ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದರು ಅಷ್ಟರಲ್ಲಿ ಮತ್ತೊಮ್ಮೆ ಬಿಗ್ ಬಾಸ ಮನೆ ಪ್ರವೇಶಿಸುವ ಅವಕಾಶ ಪಡೆದುಕೊಂಡು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದರು. ಸದ್ಯಕ್ಕೆ ಪ್ರವಾಸ ಮಾಡಿಕೊಂಡು ಯುಟ್ಯೂಬ್ ವಿಡಿಯೋಗಳನ್ನು ಮಾಡುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!