
'ಭಾಗ್ಯಲಕ್ಷ್ಮಿ' ಧಾರಾವಾಹಿ ಎಂದು ಹೇಳಿದ ತಕ್ಷಣ ಕನ್ನಡದ ಧಾರಾವಾಹಿ ನೆನಪಾಗುತ್ತದೆ. ಆದರೆ ಇದು ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಹೀರೋ ಘಟನೆ. ಹಿಂದಿ ಕಿರುತೆರೆ ನಟ ಆಕಾಶ್ ಚೌಧರಿ ಕಾರು ಅಪಘಾತಕ್ಕೆ ಈಡಾಗಿದೆ. ಮುಂಬೈನಲ್ಲಿರುವ ನಟ ಆಕಾಶ್ ಚೌಧರಿ ತಮ್ಮ ಬೆನ್ಜ್ ಕಾರಿನಲ್ಲಿ ಮಹಾರಾಷ್ಟ್ರದ ಲೊನಾವಾಲಾಗೆ ತೆರಳುತ್ತಿದ್ದರು. ಈ ಸಮಯದಲ್ಲಿ ಹಿಂದಿನಿಂದ ಬಂದ ಟ್ರಕ್ ಒಂದು ಆಕಾಶ್ ಚೌಧರಿ ಇದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಷಾತ್ ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ. ಹಿಂದಿನಿಂದ ಲಾಡಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಹಾನಿಯಾಗಿದೆ.
ಆಕಾಶ್ ಅಪಘಾತದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆಕಾಶ್‌ಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಪ್ರಣಾಪಾಯದಿಂದ ಪಾರಾಗಿದ್ದಾರೆ. ಕಾರು ಅಪಘಾತಕ್ಕೀಡಾಗಿದ್ದರ ಬಗ್ಗೆ ಫೋಟೊಗಳನ್ನು ಹಂಚಿಕೊಂಡಿರುವ ಆಕಾಶ್ ಚೌಧರಿ ಟ್ರಕ್ ಚಾಲಕನ ಬೇಜವಾಬ್ದಾರಿತನದಿಂದ ಈ ಅಪಘಾತ ಸಂಭವಿಸಿದೆ ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ಆಂಗ್ಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಟ ಆಕಾಶ್ 'ನಾನು ಭಯ ಮತ್ತು ಕೃತಜ್ಞತೆಯ ನಡುವೆ ಹರಿದಿದ್ದೇನೆ. ಟ್ರಕ್ ನಮಗೆ ಢಿಕ್ಕಿಯಾದಾಗ, ಏನಾಯಿತು ಎಂದು ನನಗೆ ತಿಳಿದಿರಲಿಲ್ಲ. ನಾವು ಹೊರಬಂದೆವು, ಆದರೆ ಆ ಘಟನೆ ನನ್ನನ್ನು ಭಯ ಬೀಳಿಸಿತು. ನನಗೆ ನಿದ್ದೆಯಿಲ್ಲದಂತೆ ಮಾಡಿತು. ನಾನು ರಜೆಯಲ್ಲಿದ್ದರೂ ರಾತ್ರಿ ನಿದ್ದೆ ಬರಲಿಲ್ಲ, ರಾತ್ರಿಯಿಡೀ, ರಸ್ತೆಯಲ್ಲಿ ಏನಾಗಬಹುದು ಎಂಬ ಆಲೋಚನೆಗಳು ನನ್ನನ್ನು ಕಾಡುತ್ತಿದ್ದವು. ಜೀವನವು ಎಷ್ಟು ಅನಿರೀಕ್ಷಿತವಾಗಿದೆ ಎಂದು ಅದು ನನಗೆ ನೆನಪಿಸಿತು. ನಮ್ಮನ್ನು ಸುರಕ್ಷಿತವಾಗಿರಿಸಲು ನಾನು ದೇವರಿಗೆ ಆಳವಾಗಿ ಕೃತಜ್ಞನಾಗಿದ್ದೇನೆ' ಎಂದು ಹೇಳಿದ್ದಾರೆ.
ಶಾಲಾ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಐವರ ಸಾವು!
ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ವೈಭವಿ ಉಪಾಧ್ಯಾಯ ಮತ್ತು ದೇವರಾಜ್ ಪಟೇಲ್ ಅವರ ಬಗ್ಗೆ ಮಾತನಾಡಿದ ಆಕಾಶ್, 'ರಸ್ತೆ ಅಪಘಾತದಿಂದ ಕಲಾವಿದರಾದ ವೈಭವಿ ಉಪಾಧ್ಯಾಯ ಮತ್ತು ದೇವರಾಜ್ ಪಟೇಲ್ ಹಠಾತ್ ನಿಧನದ ಬಳಿಕ ನಾನು ವಾಹನ ಚಲಾಯಿಸಲು ತುಂಬಾ ಹೆದರುತ್ತಿದ್ದೆ. ಈ ಟ್ರಕ್ ಚಾಲಕರು ಚಾಲನೆ ಮಾಡುವಾಗ ಅತ್ಯಂತ ನಿಷ್ಠುರವಾಗಿರುತ್ತಾರೆ. ಪೊಲೀಸರು ಬಹಳ ಪ್ರಾಂಪ್ಟ್ ಮಾಡಿದರು, ಅವರು ಬಂದು ಚಾಲಕನನ್ನು ಬಂಧಿಸಿದರು. ಆದರೆ ಅವನು ಬಡವನಾಗಿರುವ ಕಾರಣ ನಾನು ನನ್ನ ದೂರನ್ನು ಹಿಂದಕ್ಕೆ ತೆಗೆದುಕೊಂಡೆ' ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.