ನೀವು ಗ್ರೀಕ್ ಶಿಲ್ಪಗಳನ್ನು ನೋಡಿರಬಹುದು. ಅದರಲ್ಲೂ ಅಲ್ಲಿನ ಪುರುಷ ಮೂರ್ತಿಗಳು ತುಂಬ ಸುಂದರ. ಆದರೆ ಅವುಗಳಲ್ಲಿ ಇರುವ ಶಿಶ್ನದ ಗಾತ್ರ ತುಂಬಾ ಚಿಕ್ಕದು. ಹೀಗೇಕೆ?
ಗ್ರೀಕ್ ಶಿಲ್ಪಗಳನ್ನು (greek sculptures) ನೋಡಿದ್ದೀರಲ್ಲಾ? ಇವುಗಳಲ್ಲಿ ಹೆಣ್ಣು ಮೂರ್ತಿಗಳು (female) ತುಂಬಾ ಸುಂದರಿಯರು. ದಂತ ಮೈಬಣ್ಣದಿಂದ ಕಂಗೊಳಿಸುತ್ತಿರುತ್ತಾರೆ. ಗಂಡಸರ (male) ಮೂರ್ತಿಗಳು ಕೂಡ ಹಾಗೇ, ತುಂಬಾ ಹ್ಯಾಂಡ್‌ಸಮ್ ಆಗಿರುತ್ತವೆ. ಎದ್ದು ಕಾಣುವ ತೋಳಿನ ಮಾಂಸಖಂಡಗಳು, ಬಿಗಿಯಾದ ತೊಡೆಗಳು, ಮೀನಖಂಡಗಳು, ಈ ಮೂರ್ತಿಗಳನ್ನು ಮತ್ತಷ್ಟು ಪುಷ್ಟಗೊಳಿಸಿರುತ್ತವೆ. ಇಲ್ಲಿನ ಹೆಣ್ಣು ಮತ್ತು ಗಂಡು ಮೂರ್ತಿ ಹೆಚ್ಚಾಗಿ ನಗ್ನವಾಗಿರುತ್ತವೆ. ಆದರೆ ಸರ್ವೇಸಾಮಾನ್ಯವಾಗಿ ಒಂದು ಸಂಗತಿಯನ್ನು ನೀವು ಗಮನಿಸಬಹುದು. ಅದೇನೆಂದರೆ, ಇಲ್ಲಿನ ಪುರುಷ ಮೂರ್ತಿಗಳ ಮದನಾಯುಧ ಮಾತ್ರ ತುಂಬಾ ಸಣ್ಣದು. ಹಾಗೇಕೆ?
ಆಧುನಿಕ ಕಾಲದಲ್ಲಿ ತುಂಬಾ ಮಂದಿ ಗಂಡಸರು ಲೈಂಗಿಕ ತಜ್ಞರಲ್ಲಿ ಗೋಳು ತೋಡಿಕೊಳ್ಳುವುದುಂಟು- ನನ್ನ ಶಿಶ್ನ (penise) ತುಂಬಾ ಸಣ್ಣದು. ಆದ್ದರಿಂದ ನನ್ನ ಪತ್ನಿಗೆ ಲೈಂಗಿಕ ಕ್ರಿಯೆಯಲ್ಲಿ ಪೂರ್ತಿ ಸಂತೋಷ ನೀಡಲು ಸಾಧ್ಯವಾಗುತ್ತದೆಯೇ ಇಲ್ಲವೇ- ಎಂಬುದೇ ಇವರ ಅಸಂತೋಷಕ್ಕೆ ಬಹುವಾಗಿ ಕಾರಣವಾಗುತ್ತವೆ. ಅಂದರೆ ನಮ್ಮ ಕಾಲಕ್ಕಾಗುವಾಗ, ದೊಡ್ಡ ಶಿಶ್ನವೇ ನಿಜವಾದ ಗಂಡಸುತನದ ಪ್ರತೀಕ, ಅದೇ ತುಂಬಾ ಸುಂದರ ಎಂಬುದು ರೂಢಿಯಾಗಿಬಿಟ್ಟಂತಿದೆ. ಆದರೆ ಗ್ರೀಕ್ ಕಾಲದಲ್ಲಿ ಇದ್ದುದು ಇದಕ್ಕೆ ನೇರ ವಿರುದ್ಧ.
ಗ್ರೀಕ್ ಕಾಲ ಸುಮಾರು ಕ್ರಿಸ್ತಪೂರ್ವ 400ರದ್ದು. ಆಗಿನ ಕಾಲದಲ್ಲಿ ಶಿಶ್ನ ದೊಡ್ಡದಾಗಿರಬೇಕು ಎಂಬ ಕಲ್ಪನೆಯೇ ಇರಲಿಲ್ಲ. ದೊಡ್ಡ ಶಿಶ್ನಗಳು ಸೌಂದರ್ಯದ ಪ್ರತೀಕ ಎಂಬ ಕಲ್ಪನೆಯೂ ಇರಲಿಲ್ಲ. ಸಣ್ಣ ಶಿಶ್ನಗಳೇ ಆಕರ್ಷಣೆಯ ಕೇಂದ್ರವಾಗಿದ್ದವು. ಗ್ರೀಕ್ ನಾಟಕಕಾರರು ತಮ್ಮ ನಾಟಕಗಳಲ್ಲಿ ಆದರ್ಶ ಪುರುಷನ ವರ್ಣನೆ ಮಾಡುವಾಗ, ಆತನ ಖಂಡತುಂಡ ತೋಳು ತೊಡೆ ಸ್ನಾಯುಗಳ ಜತೆಗೆ ಸಣ್ಣ ಶಿಶ್ನವನ್ನೂ ಉಲ್ಲೇಖಿಸುತ್ತಾರೆ! ಅಂದರೆ, ಆಗ ಸಣ್ಣದೇ ಸುಂದರ ಎಂಬ ಕಲ್ಪನೆಯೇ ಇತ್ತೆಂದು ಹೇಳಬೇಕು.
ಅಶ್ಲೀಲ ಚಿತ್ರ ವೀಕ್ಷಿಸುವ ಮೊಬೈಲ್ ಬಳಕೆದಾರರೇ ಎಚ್ಚರ, ಮೈಮೆರೆತರೆ ಅಪಾಯ ಕಟ್ಟಿಟ್ಟ ಬುತ್ತಿ!
ಇದಕ್ಕೆ ಪೂರಕವಾದ ಇನ್ನೊಂದು ಚಿತ್ರಣವನ್ನೂ ನಾವು ಕಾಣಬಹುದು. ಗ್ರೀಕರು ಆರಾಧಿಸುವ ಅವರ ಎಲ್ಲಾ ಗಂಡು ದೇವತೆಗಳ ಶಿಶ್ನವೂ ಸಣ್ಣದು. ಆದರೆ ಅವರ ಪುರಾಣದ ರಾಕ್ಷಸರು, ದುಷ್ಟರು ಕಪ್ಪು ಮೈಬಣ್ಣದವರು ಹಾಗೂ ದಷ್ಟಪುಷ್ಟರು ಹಾಗೂ ಇವರ ಶಿಶ್ನಗಳು ದೊಡ್ಡವು. ಕೆಲವೊಮ್ಮೆ ಅವು ವಿಕೃತ ಆಕಾರದಲ್ಲಿಯೂ, ಚೂಪಾಗಿಯೂ ಚಿತ್ರಿತವಾಗಿವೆ. ಆ ಕಾಲದ ಕಲಾವಿದರು ಚಿತ್ರಿಸಿದ ಚಿತ್ರಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಅಂದರೆ ದೊಡ್ಡ ಶಿಶ್ನಗಳು ಬರ್ಬರ ಎಂದೂ, ಸಣ್ಣವು ಅತ್ಯುನ್ನತ- ಕ್ಲಾಸ್ ಎಂದೂ ಪರಿಗಣಿತವಾಗಿದ್ದವು.
ಸಣ್ಣ ಮರ್ಮಾಂಗಗಳನ್ನು ಹೊಂದಿದವನು ಜಿತೇಂದ್ರಿಯ ಅಥವಾ ಆಸೆಗಳನ್ನು ಗೆದ್ದವನು ಎಂದೂ ಪರಿಗಣನೆಗೆ ಒಳಗಾಗುತ್ತಿದ್ದ. ಅವನನ್ನು ಮಹಿಳೆಯರು ನಂಬಬಹುದಾಗಿತ್ತು. ಆದರೆ ದೊಡ್ಡ ಶಿಶ್ನಗಳನ್ನು ಹೊಂದಿದವರು ಕ್ರೂರಿಗಳು, ಜೋಕರ್‌ಗಳು, ಬಫೂನ್‌ಗಳು ಮತ್ತು ಸ್ವಾರ್ಥಿಗಳು (Selfish) ಆಗಿರುತ್ತಿದ್ದರು. ತಮ್ಮ ಮೇಲೆ ದಾಳಿ ಮಾಡುವ ವೈರಿಗಳನ್ನೂ (Enemy) ಗ್ರೀಕರು ಹಾಗೇ ಚಿತ್ರಿಸುತ್ತಿದ್ದರು. ಹೀಗಾಗಿ ಇವರ ಪುರಾಣಗಳು ದೊಡ್ಡ ಶಿಶ್ನ ಹೊಂದಿರುವ ದುಷ್ಟರಿಂದಲೂ, ಸಣ್ಣ ಶಿಶ್ನ ಹೊಂದಿರುವ ಶಿಷ್ಟರಿಂದಲೂ ತುಂಬಿಹೋಗಿವೆ.
ಇದು ನಮ್ಮ ಇಂದಿನ ನಂಬಿಕೆಗಳಿಗೆ ತದ್ವಿರುದ್ಧವಾಗಿವೆ ಅಲ್ಲವೇ? ಆದರೆ, ವಿಜ್ಞಾನ ಹೇಳುವಂತೆ, ದೊಡ್ಡ ಶಿಶ್ನ ಹೊಂದಿದವರು ಸ್ತ್ರೀಗೆ ಹೆಚ್ಚಿನ ಸುಖ ನೀಡುತ್ತಾರೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಮತ್ತು ಸ್ತ್ರೀಯ ಲೈಂಗಿಕ ಸುಖಾನುಭವ ಆಗುವುದು ಯೋನಿಯ ಮೇಲಿನ ಮೂರನೇ ಒಂದು ಭಾಗದಲ್ಲಿ ಎಂಬುದು ರುಜುವಾತಾಗಿದೆ. ಇದೂ ಕೂಡ ಗ್ರೀಕರಿಗೆ ಗೊತ್ತಿದ್ದಿರಲೂ ಬಹುದು.
Crazy ಎಂದೆನಿಸಿದರೂ ಸಂಗಾತಿ ಈ ಗುಣ ಯಾರಿಗೆ ಇಷ್ಟವಾಗೋಲ್ಲ ಹೇಳಿ?