Poorest Country : ಬುರುಂಡಿ ವಿಶ್ವದಲ್ಲಿಯೇ ಬಡ ರಾಷ್ಟ್ರವಾಗಲು ಕಾರಣವೇನು?

By Suvarna News  |  First Published Jun 2, 2023, 12:54 PM IST

ವಿಶ್ವದಲ್ಲಿ ಕೆಲ ದೇಶಗಳು ಅತ್ಯಂತ ಹೀನ ಸ್ಥಿತಿಯಲ್ಲಿವೆ. ಇಂಟರ್ನೆಟ್, ಟಿವಿ ಇರಲಿ ಕರೆಂಟ್ ಕಾಣದ ಊರುಗಳಿವೆ. ಎರಡು ಹೊತ್ತು ಊಟ ಸಿಗದ ಜನರಿದ್ದಾರೆ. ಅಂಥ ದೇಶದಲ್ಲಿ ಬುರುಂಡಿ ಅಗ್ರ ಸ್ಥಾನದಲ್ಲಿದೆ. 


ಪ್ರಪಂಚದ ಅನೇಕ ದೇಶಗಳು ಅಭಿವೃದ್ಧಿ ದಾರಿಯಲ್ಲಿ ಸಾಗ್ತಿವೆ. ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರಗಳ ಸಾಲಿಗೆ ಸೇರುತ್ತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿವೆ. ವಿಶ್ವದ ಅತ್ಯಂತ ಹಿಂದುಳಿದ ದೇಶಗಳ ಪಟ್ಟಿ ಬಂದಾಗ ಪಟ್ಟಿಯಲ್ಲಿ ಮೊದಲು ಬರೋದು ಬುರುಂಡಿ. ಇಲ್ಲಿನ ಜನರಿಗೆ ಜೀವನ ನಡೆಸಲು ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಸಿಗೋದೇ ಕಷ್ಟ. ನಾವಿಂದು ಬುರುಂಡಿ ಇಷ್ಟೊಂದು ಹಿಂದಿರಲು ಕಾರಣವೇನು ಎಂಬುದನ್ನು ನಿಮಗೆ ಹೇಳ್ತೇವೆ.

ಬುರುಂಡಿ ಅತ್ಯಂತ ಬಡ ದೇಶವಾಗಲು ಕಾರಣವೇನು? : ಪೂರ್ವ ಆಫ್ರಿಕಾದ ಗ್ರೇಟ್ ಲೇಕ್ಸ್ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ದೇಶ ಬುರುಂಡಿ (Burundi). ಇದರ ದಕ್ಷಿಣ ಮತ್ತು ಪೂರ್ವಕ್ಕೆ ಟಾಂಜಾನಿಯಾ ಮತ್ತು ಪಶ್ಚಿಮಕ್ಕೆ ಕಾಂಗೋ ಹಾಗೂ ಉತ್ತರಕ್ಕೆ ರುವಾಂಡಾ ಗಡಿಯನ್ನು ಹೊಂದಿದೆ. ಈ ದೇಶವನ್ನು ಹಿಂದೆ ಇಂಗ್ಲೆಂಡರು ಮತ್ತು ಅಮೆರಿಕನ್ನರು ಆಳಿದ್ದರು. ಕೊನೆಯಲ್ಲಿ ಈ ದೇಶ (Country) ಸ್ವಾತಂತ್ರ್ಯವಾಯ್ತು. ಸ್ವಾತಂತ್ರ್ಯಪಡೆದ ಸಮಯದಲ್ಲಿ ಈ ದೇಶದ ಸ್ಥಿತಿ ಹೀಗಿರಲಿಲ್ಲ. ಆದ್ರೆ 1996ರಲ್ಲಿ ಈ ದೇಶದ ಸಂಪೂರ್ಣ ಚಿತ್ರಣವೇ ಬದಲಾಯ್ತು. ದೇಶದಲ್ಲಿ ನಡೆದ ಒಳಯುದ್ಧವೇ ದೇಶದ ಈ ದುಸ್ಥಿತಿಗೆ ಕಾರಣ. 1996 ರಿಂದ 2005 ರವರೆಗೆ ಇಲ್ಲಿನ ತುಟ್ಸಿ, ತ್ವಾ ಮತ್ತು ಹುಟು ಬುಡಕಟ್ಟುಗಳ ನಡುವೆ ದೊಡ್ಡ ಜನಾಂಗೀಯ ಸಂಘರ್ಷ ನಡೆಯುತ್ತಿತ್ತು. ಅದರಲ್ಲಿ ಲಕ್ಷಾಂತರ ಜನರು ಸತ್ತರು. ಅಂದಿನಿಂದ ಈ ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತಲೇ ಇದೆ. ಈಗ್ಲೂ ಈ ದೇಶ ಚೇತರಿಕೆ ಕಂಡಿಲ್ಲ. 

ವಿಶ್ವದ ನಂ.1 ಶ್ರೀಮಂತ ಪಟ್ಟ ಮರಳಿ ಎಲಾನ್ ಮಸ್ಕ್ ತೆಕ್ಕೆಗೆ; 19ನೇ ಸ್ಥಾನಕ್ಕೆ ಕುಸಿದ ಅದಾನಿ

Tap to resize

Latest Videos

ಬುರುಂಡಿಯಲ್ಲಿ ಸುಮಾರು 12 ಮಿಲಿಯನ್ ಅಂದರೆ ಸುಮಾರು ಒಂದು ಕೋಟಿ 20 ಲಕ್ಷ ನಾಗರಿಕರು ವಾಸಿಸುತ್ತಿದ್ದಾರೆ. ಅವರಲ್ಲಿ 90 ಪ್ರತಿಶತದಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಬುರುಂಡಿಯ ಹೆಚ್ಚಿನ ಬಡವರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಜುಲೈ ಒಂದು, 2022ಕ್ಕೆ ದೇಶ 60ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿದೆ. ಆದ್ರೆ ಪ್ರಗತಿ ಮಾತ್ರ ಮರೀಚಿಕೆಯಾಗಿದೆ. ಮೊದಲೇ ಹೇಳಿದಂತೆ ದಂಗೆಗಳು, ಹತ್ಯಾಕಾಂಡಗಳು ಮತ್ತು ರಾಜಕೀಯ ಹತ್ಯೆಯಿಂದಾಗಿ ದೇಶದಲ್ಲಿ ಪ್ರಗತಿ ಮರೀಚಿಕೆಯಾಗಿದೆ.   2015ರಲ್ಲಿ ಸರ್ವಾಧಿಕಾರಿ ಆಡಳಿತ ಜಾರಿಗೆ ಬಂದಿದ್ದು, ಯುಎನ್, ದೇಶದಲ್ಲಿ ನಿಧಾನ ಪ್ರಗತಿಯಾಗ್ತಿದೆ ಎಂಬುದನ್ನು ಹೇಳಿದ್ರೂ ರಾಜಕೀಯ ಹಿಂಸಾಚಾರ ಇನ್ನೂ ನಿಂತಿಲ್ಲ.

ಸಂಪನ್ಮೂಲ ಬಡವಾಗಿರುವ ಈ ದೇಶದಲ್ಲಿ ಯಾವುದೇ ಕೈಗಾರಿಕೀಕರಣವಿಲ್ಲ. ಇಲ್ಲಿನ ಜನರು ತಮ್ಮದೇ ಆದ ಆಹಾರವನ್ನು ಉತ್ಪಾದಿಸಲು ಅಸಮರ್ಥರಾಗಿದ್ದಾರೆ. ಹೆಚ್ಚಾಗಿ ಅಂತರರಾಷ್ಟ್ರೀಯ ಮಾನವೀಯ ನೆರವಿನ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿಗೆ ಬಂದು ನೆಲೆ ನಿಲ್ಲುವ ನಿರಾಶ್ರಿತರ ಸಂಖ್ಯೆ ಹೆಚ್ಚಿದ್ದು, ಅವರು ಬುರುಂಡಿ ದೇಶಕ್ಕೆ ಮತ್ತಷ್ಟು ಹೊರೆಯಾಗಿದ್ದಾರೆ. ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಇಲ್ಲಿ ಹಸಿವಿನ ಬಳುತ್ತಿದ್ದಾರೆ. 

The Death Road: ಈ ರಸ್ತೆಯಲ್ಲಿ ಹೋದವರು ಯಾರೂ ವಾಪಾಸ್ ಬರೋಲ್ಲ!

ಕೇವಲ 32 ಪ್ರತಿಶತ ಬುರುಂಡಿಯನ್ ಮಕ್ಕಳು ತಮ್ಮ ಕೆಳ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದರೂ, ಲಿಂಗ ಸಮಾನತೆಯು ವಿಶ್ವದಲ್ಲೇ ಅತ್ಯಂತ ಕೆಳಮಟ್ಟದಲ್ಲಿದೆ.    ಇಷ್ಟೇ ಅಲ್ಲ ಸಮೀಕ್ಷೆಯಲ್ಲಿ ಇದು ವಿಶ್ವದ ಅತ್ಯಂತ ದುಃಖದ ದೇಶ ಎಂಬ ಹಣೆಪಟ್ಟಿಯನ್ನೂ ಕಟ್ಟಿಕೊಂಡಿದೆ. ರಾಷ್ಟ್ರದ ಸಂತೋಷವನ್ನು ತಲಾವಾರು ಜಿಡಿಪಿ (GDP), ಸಾಮಾಜಿಕ ಬೆಂಬಲ, ಉತ್ತಮ ಆರೋಗ್ಯ, ಜೀವಿತಾವಧಿ, ಜೀವನ ನಿರ್ಧಾರ, ಸರ್ಕಾರ ಮತ್ತು ವ್ಯವಹಾರದಲ್ಲಿನ ಭ್ರಷ್ಟಾಚಾರದ ಸೇರಿದಂತೆ ಅನೇಕ ವಿಷ್ಯಗಳನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ.  ಸಾವಿನ ಪ್ರಮಾಣವೂ ತುಂಬಾ ಹೆಚ್ಚು : ಬುರುಂಡಿಯಲ್ಲಿ ಶಿಶು ಮರಣ ಪ್ರಮಾಣವೂ ಹೆಚ್ಚಿದೆ. 1,000 ಜನನಗಳಲ್ಲಿ 87.8 ಶಿಶುಗಳ ಸಾವಾಗ್ತಿದೆ. ಆಹಾರದ ಕೊರತೆ ಶಿಶು ಸಾವಿಗೆ ಪ್ರಮುಖ ಕಾರಣವಾಗಿದೆ.
 

click me!