ಕೂದಲಿಗೆ ಗೋ ಮೂತ್ರ, ಹಲ್ಲಿಗೆ ಸಗಣಿ ಬಳಸೋ ಇವರ ಕೈಯಲ್ಲಿ ಸದಾ ಮಷಿನ್ ಗನ್ ಇರುತ್ತೆ!

By Suvarna News  |  First Published Mar 28, 2024, 2:34 PM IST

ನಮ್ಮ ದೇಶದಲ್ಲಿ ಒಂದ್ಕಡೆ ಗೋ ರಕ್ಷಣೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಹಸುಗಳ ಹತ್ಯೆಯಾಗ್ತಿದೆ. ಆದ್ರೆ ಹಸುವನ್ನು ಮನುಷ್ಯನ ಪ್ರಾಣಕ್ಕಿಂತ ಹೆಚ್ಚು ಅಮೂಲ್ಯವೆಂದು ನಂಬುವ ಜನರಿದ್ದಾರೆ. ಅವರಿಗೆ ಹಸುವೇ ಸರ್ವಸ್ವ. ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
 


ಭಾರತೀಯರಿಗೆ ಹಸು ದೇವರ ಸಮಾನ. ಹಸುವನ್ನು ಪೂಜಿಸುವ ನಾವು, ಅದನ್ನು ಪ್ರೀತಿಯಿಂದ ಕುಟುಂಬದ ಒಬ್ಬ ಸದಸ್ಯನಂತೆ ನೋಡಿಕೊಳ್ತೇವೆ. ಗೋ ಮೂತ್ರ, ಸಗಣಿ, ಗೊಬ್ಬರ, ಹಾಲು ಹೀಗೆ ಗೋವು ನೀಡುವ ಪ್ರತಿಯೊಂದು ಉತ್ಪನ್ನವನ್ನೂ ನಾವು ಬಳಸುತ್ತೇವೆ. ಭಾರತೀಯರು ಮಾತ್ರ ಗೋ ಪ್ರೇಮಿಗಳು, ಭಾರತೀಯರಿಗೆ ಹಸುವಿನ ಮೇಲಿರುವ ಪ್ರೀತಿ ಮತ್ತ್ಯಾರಿಗೂ ಇಲ್ಲ ಎಂದು ನಾವು ಭಾವಿಸಿದ್ದರೆ ಅದು ಸುಳ್ಳು. ನಮ್ಮಂತೆ ಹಸುವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವ, ಅದ್ರ ಉತ್ಪನ್ನಗಳನ್ನು ಅತಿ ಹೆಚ್ಚು ಬಳಸುವ ಜನಾಂಗವಿದೆ. ಭಾರತದ ಸಂಸ್ಕೃತಿ ಹೋಲುವ ವಿಶೇಷ ಬುಡಕಟ್ಟಿನ ಜನಾಂಗವೊಂದರ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ.

ಹಸು (Cow) ವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಜನರು ಆಫ್ರಿಕಾದ ದಕ್ಷಿಣ ಸುಡಾನ್‌ (Sudan) ನಲ್ಲಿ ವಾಸವಾಗಿದ್ದಾರೆ. ಅವರು ಮುಂಡಾರಿ (Mundari) ಬುಡಕಟ್ಟು ಜನಾಂಗದವರು. ಇಲ್ಲಿ ಗೋವನ್ನು ಕೇವಲ ಪ್ರಾಣಿಯಾಗಿ ನೋಡೋದಿಲ್ಲ. ಅದನ್ನು ಪ್ರತಿಷ್ಠೆಯಾಗಿ ಪರಿಗಣಿಸುತ್ತಾರೆ. ಜಾನುವಾರುಗಳನ್ನು ಸರ್ವಸ್ವವೆಂದು ನಂಬುತ್ತಾರೆ. ಅವರ ಇಡೀ ಜೀವನ ಜಾನುವಾರುವನ್ನು ಅವಲಂಭಿಸಿದೆ. ಅವರ ಆದಾಯದ ಮೂಲ ಜಾನುವಾರು. ಹಾಗಾಗಿಯೇ ಅವರು ಅದನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಾರೆ. ಮಷಿನ್ ಗನ್ (Machine Gun) ಹಿಡಿದು ಜಾನುವಾರುಗಳನ್ನು ಕಾವಲು ಕಾಯುತ್ತಾರೆ. ತಮ್ಮ ಕೈಲಾದ ಎಲ್ಲ ಸೌಲಭ್ಯವನ್ನು ಜಾನುವಾರುಗಳಿಗೆ ಒದಗಿಸುವ ಕೆಲಸವನ್ನು ಮುಂಡಾರಿ ಜನಾಂಗದ ಜನ ಮಾಡ್ತಾರೆ. 

Tap to resize

Latest Videos

ಪಾರ್ಟ್ನರ್ ಜೊತೆ ಹೋಟೆಲ್ ಹೋದಾಗ ಈ ಸೇಫ್ಟಿ ಚೆಕ್ ಮಾಡೋದು ಮರೀಬೇಡಿ!

ತಮ್ಮ ಜಾನುವಾರುಗಳಿಗೆ ಸುತ್ತಮುತ್ತಲಿನವರು ಕೆಟ್ಟದ್ದು ಮಾಡಿದ್ರೆ ಎನ್ನುವ ಭಯ ಅವರಿಗಿರುತ್ತದೆ. ಹಾಗಾಗಿಯೇ ಜಾನುವಾರು ಮಲಗಿದಾಗ ರಾತ್ರಿ ಮಷಿನ್ ಗನ್ ಹಿಡಿದು ಅದನ್ನು ಕಾವಲು ಕಾಯುತ್ತಾರೆ.  ಹಸುಗಳಿಂದ ತಮ್ಮ ಜೀವನವನ್ನು ಬೇರ್ಪಡಿಸಲು ಇವರಿಗೆ ಸಾಧ್ಯವಿಲ್ಲ. ಜೀವನದ ಅತ್ಯಮೂಲ್ಯ ಭಾಗ ಜಾನುವಾರು ಅಂದ್ರೆ ತಪ್ಪಾಗೋದಿಲ್ಲ. ಜಾನುವಾರುಗಳು ಆರೋಗ್ಯವಾಗಿರಲೆಂದು ಬಯಸುವ ಅವರು ಅದಕ್ಕೆ ಸಾಕಷ್ಟು ಆಹಾರ ನೀಡ್ತಾರೆ. ಇಲ್ಲಿನ ಕೆಲ ಹಸುಗಳ ಎತ್ತರ ಎಂಟು ಅಡಿಗಿಂತ ಹೆಚ್ಚಿರುತ್ತದೆ. 

ಇಲ್ಲಿನ ಎತ್ತರದ ಹಾಗೂ ಭಾರವಾದ ಹಸುಗಳಿಗೆ ಹೆಚ್ಚಿನ ಬೆಲೆ ಇದೆ. ಈ ಹಸುಗಳ ಸರಾಸರಿ ಬೆಲೆ 500 ಡಾಲರ್ ಅಂದರೆ ಸುಮಾರು 42 ಸಾವಿರ ರೂಪಾಯಿ ಇದೆ. ಜಾನುವಾರುಗಳನ್ನು ಅವರು ಹತ್ಯೆ ಮಾಡೋದಿಲ್ಲ. ತಮ್ಮ ಮಕ್ಕಳ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಜಾನುವಾರುಗಳನ್ನು ನೀಡ್ತಾರೆ. ವಧುವಿನ ಬೆಲೆ ವರದಕ್ಷಿಣೆ ನೀಡುವ ಜಾನುವಾರುಗಳಿಂದ ನಿರ್ಧಾರವಾಗುತ್ತದೆ ಎಂದ್ರೆ ತಪ್ಪಾಗೋದಿಲ್ಲ.

ಹಸುಗಳ ಉತ್ಪನ್ನ ಬಳಕೆ : ಮುಂಡಾರಿ ಜನಾಂಗದವರು ಹಸುಗಳಿಂದ ಆದಾಯ ಮಾತ್ರ ಪಡೆಯೋದಿಲ್ಲ. ಅವರು ತಮ್ಮ ನಿತ್ಯದ ಜೀವನದಲ್ಲಿ ಅದ್ರ ಉತ್ಪನ್ನವನ್ನು ಬಳಸಿಕೊಳ್ತಾರೆ. ಗೋಮೂತ್ರವು ತಮ್ಮನ್ನು ಕೊಳೆಯಿಂದ ದೂರವಿಡುತ್ತದೆ ಎಂದು ಅವರು ನಂಬುತ್ತಾರೆ. ಅವರು ಗೋಮೂತ್ರದಿಂದ ತಲೆ ಸ್ನಾನ ಮಾಡ್ತಾರೆ. ಗೋ ಮೂತ್ರದಲ್ಲಿರುವ ಯೂರಿಕ್ ತಲೆ ಕೂದಲಿಗೆ ಉತ್ತಮ ಬಣ್ಣ ನೀಡುತ್ತದೆ ಎಂದು ಅವರು ನಂಬಿದ್ದಾರೆ. ಬರೀ ಗೋಮೂತ್ರ ಮಾತ್ರವಲ್ಲ ಸಗಣಿಯನ್ನು ಕೂಡ ಅವರು ನಿತ್ಯ ಬಳಸ್ತಾರೆ. ಸಗಣಿಯಿಂದ ಹಲ್ಲುಜ್ಜುತ್ತಾರೆ. ಸಗಣಿಯನ್ನು ಪುಡಿ ಮಾಡಿ ಅದನ್ನು ಸಂಗ್ರಹಿಸಿಟ್ಟುಕೊಳ್ತಾರೆ. ಸಗಣಿ ಹಾಗೂ ಗೋಮೂತ್ರವನ್ನು ಅವರು ಆಂಟಿಬಯೋಟಿಕ್ ರೂಪದಲ್ಲಿ ಹಾಗೂ ಸೊಳ್ಳೆ ಓಡಿಸಲು ಬಳಸ್ತಾರೆ. 

ಈ ಬೇಸಿಗೆಗೆ ನೀವು ವೀಸಾ ಇಲ್ಲದೆ ಭೇಟಿ ನೀಡಬಹುದಾದ ಅತ್ಯುತ್ತಮ ದೇಶಗಳಿವು

ಇಲ್ಲಿನ ಜನರು ಜಾನುವಾರುಗಳ ಜೊತೆಯೇ ಮಲಗ್ತಾರೆ. ಜಾನುವಾರು ಜೊತೆಯಲ್ಲಿಲ್ಲ ಅಂದ್ರೆ ಅದು ಸಾವಿಗೆ ಸಮಾನ ಎಂದು ಅವರು ಭಾವಿಸ್ತಾರೆ. ಈ ಬುಡಕಟ್ಟಿನ ಜನರು ಹಸುಗಳನ್ನು ಕೊಲ್ಲುವುದು ದೊಡ್ಡ ಪಾಪವೆಂದು ಪರಿಗಣಿಸುತ್ತಾರೆ. ಈ ಕಾರಣಕ್ಕಾಗಿ ಈ ಸಮುದಾಯದಲ್ಲಿ ಹಸುಗಳನ್ನು ಕೊಲ್ಲುವುದು ಅಪರೂಪ.

click me!