ದೇಶಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಜಲಾಶಯಗಳು ನದಿ ತೊರೆಗಳು ಉಕ್ಕಿ ಹರಿಯುತ್ತಿವೆ.
ಮಹಾರಾಷ್ಟ್ರ: ದೇಶಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಜಲಾಶಯಗಳು ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಒಂದೆಡೆ ಮಳೆ ರೌದ್ರನರ್ತನ ತೋರಿ ಹಲವರ ಸಾವಿಗೆ ಕಾರಣವಾಗಿದ್ದರೆ ಮತ್ತೊಂದೆಡೆ ಜಲಾಶಯ ಜಲಪಾತಗಳು ಮೈದುಂಬಿ ಹರಿಯುತ್ತಿರುವುದರಿಂದ ಪ್ರಕೃತಿ ಸೌಂದರ್ಯ ಮೈದುಂಬಿದೆ. ರಾಜ್ಯ ಹಾಗೂ ದೇಶದ ಹಲವು ಜಲಾಶಯಗಳ ನಯನ ಮನೋಹರ ದೃಶ್ಯಗಳು ಪ್ರವಾಸಿಗರ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣ ಸೇರಿವೆ.
ಹಾಗೆಯೇ ಈಗ ಮಹಾರಾಷ್ಟ್ರದ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ನಾನೆಘಾಟ್ ಫಾಲ್ಸ್‌ನ ನಯನ ಮನೋಹರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿ ನೀರು ಕೆಳಗೆ ಬೀಳುವ ಬದಲು ನಿಯಮಕ್ಕೆ ವಿರುದ್ಧವಾಗಿ ಮೇಲ್ಮುಖವಾಗಿ ಹರಿಯುತ್ತಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ಜಲರಾಶಿಯ ಸೌಂದರ್ಯಕ್ಕೆ ಮರು ಹೋಗಿದ್ದಾರೆ.
Newton's first law of motion, an object remains in the same state of motion unless acted upon by a force
Huge winds act on this waters natural propensity to follow gravity
The magnitude of the two forces are equal, and their directions are opposite, pic.twitter.com/2C1ZarHc4m
Jog Falls: ಜೋಗ ಜಲಪಾತದಲ್ಲಿ ನಡೆಯಿತು ವಿಸ್ಮಯ: ಗುರುತ್ವಾಕರ್ಷಣೆಯ ವಿರುದ್ಧ ಚಲಿಸಿದ ನೀರು
ವಿಚಿತ್ರವೆಂದರೆ, ಇಲ್ಲಿ ಸಾಮಾನ್ಯ ಜಲಪಾತಕ್ಕಿಂತ ಭಿನ್ನವಾಗಿ ನೀರಿನ ಹರಿವು ಮೇಲಕ್ಕೆ ಹೋಗುವುದನ್ನು ಕಾಣಬಹುದು. ಗಾಳಿಯ ವೇಗದ ಮೇಲ್ಮುಖ ಬಲದ ಪ್ರಮಾಣವು ಗುರುತ್ವಾಕರ್ಷಣೆಯ ಬಲಕ್ಕೆ ಸಮಾನವಾಗಿದ್ದಾಗ ಈ ರೀತಿ ಆಗುವುದು ಎಂದು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ಅದೇ ರೀತಿ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ ನಾನೇಘಾಟ್‌ನಲ್ಲಿ ನೀರು ಈ ರೀತಿ ಮೇಲ್ಮುಖವಾಗಿ ಚಲಿಸುತ್ತಿದೆ ಎಂದು ನಂದಾ ವಿವರಿಸಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಮೂಕ ವಿಸ್ಮಿತರಾಗಿದ್ದು, ಆ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಲೇಬೇಕು ಎಂದು ಆಸೆ ವ್ಯಕ್ತಪಡಿಸಿದ್ದಾರೆ. ಇದೊಂದು ಪ್ರಕೃತಿ ವಿಸ್ಮಯವೇ ಸರಿ ಎಂದು ಹಲವರು ಬರೆದುಕೊಂಡಿದ್ದಾರೆ.
ಅಸಾನಿ ಎಫೆಕ್ಟ್, ಊಟಿಯಂತಾದ ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮ
ಕೆಲ ದಿನಗಳ ಹಿಂದಷ್ಟೇ ನಮ್ಮ ರಾಜ್ಯದ ವಿಶ್ವ ವಿಖ್ಯಾತ ಜಲಪಾತ ಶಿವಮೊಗ್ಗದ ಸಾಗರದಲ್ಲಿರುವ ಜೋಗ ಜಲಪಾತದಲ್ಲಿಯೂ ಇಂತಹದೇ ವಿಸ್ಮಯ ಕಂಡು ಬಂದಿತ್ತು. ನೀರು ಕೆಳಗೆ ಬೀಳುವ ಬದಲಾಗಿ ಗಾಳಿಯ ರಭಸಕ್ಕೆ ಸಿಲುಕಿ ಮೇಲಕ್ಕೆ ಹರಿದಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಜೋಗ ಜಲಪಾತ ಸುಮಾರು 830 ಅಡಿಗಳಷ್ಟು ಉದ್ದವಿದೆ. ಭಾರತದಲ್ಲಿ ಅತೀ ಉದ್ದದ ಜಲಾಶಯಗಳಲ್ಲಿ ಜೋಗ ಜಲಪಾತ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. ಇಷ್ಟು ಮೇಲಿನಿಂದ ಧುಮ್ಮಿಕ್ಕುವ ನೀರನ್ನು ನೋಡುವುದೇ ಒಂದು ಅದೃಷ್ಟ. ಸಾಮಾನ್ಯವಾಗಿ ಲಿಂಗನಮಕ್ಕಿ ಜಲಾಶಯ ತುಂಬಿದ ನಂತರ ಜೋಗ ಜಲಪಾತಕ್ಕೆ ನೀರು ಬಿಡಲಾಗುತ್ತದೆ. ಒಮ್ಮೊಮ್ಮೆ ಪ್ರವಾಸಿಗರಿಗಾಗಿ ಲಿಂಗನಮಕ್ಕಿಯ ಜಲಾಶಯ ತುಂಬದಿದ್ದರೂ ಬಿಡುತ್ತಾರೆ.
ಸದ್ಯ ಜೋಗ ಜಲಪಾತ ತುಂಬಿದ್ದು, ಈ ರೀತಿ ನೀರು ಮೇಲ್ಮುಖವಾಗಿ ಚಲಿಸುವ ಸಂದರ್ಭದಲ್ಲಿ ಜಲಪಾತ ತುಂಬಿ ಹರಿಯುತ್ತಿರಲಿಲ್ಲ. ಕಡಿಮೆ ನೀರಿರುವ ಕಾರಣ ಜಲಪಾತದ ಕೆಳಗಿನಿಂದ ಒತ್ತಡ ಹೆಚ್ಚಾದಾಗ ಮತ್ತು ಅದಕ್ಕೆ ಭಾರೀ ಗಾಳಿಯೂ ಜತೆಯಾದಾಗ ಜಲಪಾತದ ನೀರು ಮೇಲಕ್ಕೆ ಚಿಮ್ಮುತ್ತದೆ. ಈ ರೀತಿಯ ಘಟನೆ ಆಗಿರುವುದು ಇದೇ ಮೊದಲಲ್ಲ ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರೊಬ್ಬರು. ಗಾಳಿಯ ರಭಸಕ್ಕೆ ನೀರು ಮೇಲ್ಮುಖವಾಗಿ ಸಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದರ್ಥದಲ್ಲಿ ನ್ಯೂಟನ್ ಲಾ ಆಫ್ ಮೋಷನ್ ವಿರುದ್ಧವಾಗಿ ಈ ಘಟನೆ ನಡೆದಿದೆ. ಗುರುತ್ವಾಕರ್ಷಣಾ ಶಕ್ತಿಯ ವಿರುದ್ಧ ಹೋಗಲು ಕಾರಣವಾಗಿರುವುದು ಗಾಳಿ ಮತ್ತು ಜಲಪಾತದ ಕೆಳಗಿರುವ ಒತ್ತಡ ಎಂದು ತಿಳಿದು ಬಂದಿದೆ.
ಇದೇ ರೀತಿ ಭಾರತದ ಭೌಗೋಳಿಕತೆಯು ವೈವಿಧ್ಯಮಯವಾಗಿದ್ದು, ದೇಶದ ಪ್ರತಿಯೊಂದು ಮೂಲೆಯು ವಿಭಿನ್ನ ಎನಿಸುವ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಭವ್ಯವಾದ ಹಿಮಾಲಯವಾಗಲಿ ಅಥವಾ ಪ್ರಾಚೀನ ನೀಲಿ ಹಿಂದೂ ಮಹಾಸಾಗರವಾಗಲಿ, ರಮಣೀಯ ಸೌಂದರ್ಯವನ್ನು ಹೊಂದಿರುವ ಸ್ಥಳಗಳು ಇಲ್ಲಿ ಹೇರಳವಾಗಿವೆ.