ವಿಶ್ವದ ಅತಿ ಉದ್ದದ ನದಿ ಪ್ರಯಾಣ ಮಾಡಲು ಭಾರತದ ಹಡಗು ಸಜ್ಜು

By Suvarna News  |  First Published Jun 24, 2022, 3:56 PM IST

ನದಿಯಲ್ಲಿ ಸುದೀರ್ಘ ಪ್ರಯಾಣ ಅದೆಷ್ಟು ಚೆನ್ನಾಗಿರುತ್ತೆ ಅಲ್ವಾ ? ನೀವು ಸಾಮಾನ್ಯವಾಗಿ ನದಿಯಲ್ಲಿ ಎಷ್ಟು ಗಂಟೆಗಳ ಕಾಲ ಪ್ರಯಾಣಿಸಿದ್ದೀರಿ. ಹೆಚ್ಚೆಂದರೆ ಐದು ಗಂಟೆಗಳಿರಬಹುದು ಅಷ್ಟೇ ಅಲ್ವಾ ? ಆದ್ರೆ ಈ ಹಡಗು (Cruise)  51 ದಿನಗಳ ದೀರ್ಘ ಪಯಣವನ್ನು ಅಯೋಜಿಸಿದೆ. ಇದು ವಿಶ್ವದಲ್ಲಿಯೇ ಅತಿ ಉದ್ದದ ನದಿ (River) ಪ್ರಯಾಣ ಆಗಿರಲಿದೆ. 


ಭಾರತದ ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್ ಡಿಸೆಂಬರ್ 2022ರಲ್ಲಿ ಅತಿ ಉದ್ದದ ನದಿ ಪ್ರಯಾಣ (River travel) ವನ್ನು ಪ್ರಾರಂಭಿಸಲು ಯೋಜನೆ ರೂಪಿಸಿದೆ.  51 ದಿನಗಳ ಈ ಪ್ರಯಾಣ, ಜಗತ್ತಿನಲ್ಲೇ ಅತೀ ಉದ್ದದ ಸಮುದ್ರಯಾನವೆಂದು ಕರೆಸಿಕೊಳ್ಳಲಿದೆ. ಗಂಗಾ (Ganga) ಮತ್ತು ಬ್ರಹ್ಮಪುತ್ರ ನದಿ (Brahmaputra river)ಯನ್ನು ಹಾದು ಹೋಗಲಿರುವ ಈ ಯಾನವನ್ನು ಅಂತರ್‌ ಗಂಗಾ ವಿಲಾಸ್ ಶಿಪ್ ಎಂದು ಕರೆಯಲಾಗುತ್ತಿದೆ. ಇದು ಸುಮಾರು 51 ದಿನಗಳ ಪ್ರಯಾಣವಾಗಿದ್ದು, ಪವಿತ್ರವಾದ ಗಂಗಾನದಿಯ ಮೂಲಕ ಅಂತರ ಗಂಗಾ ವಿಲಾಸ್‌ ಹಡಗು ಹಾದುಹೋಗುತ್ತದೆ.

ಕಾಶಿಯಿಂದ ಪ್ರಯಾಣ ಆರಂಭ, ಅಸ್ಸಾಂನ ದಿಬ್ರುಗಢದಲ್ಲಿ ಮುಕ್ತಾಯ
ಹಡಗು ಉತ್ತರ ಪ್ರದೇಶದ ಕಾಶಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಅಸ್ಸಾಂನ ದಿಬ್ರುಗಢದಲ್ಲಿ ಮುಕ್ತಾಯಗೊಳ್ಳಲಿದೆ. ಕಂಪನಿಯ ಹೇಳಿಕೆಯ ಪ್ರಕಾರ, ಹಡಗು 5 ರಾಜ್ಯಗಳು, 27 ಸಣ್ಣ ನದಿಗಳು ಮತ್ತು 2 ದೇಶಗಳ ಮೂಲಕ ಪ್ರಯಾಣಿಸಲಿದೆ. ಈ ಪ್ರಯಾಣವು ಪ್ರವಾಸಿಗರಿಗೆ ದಕ್ಷಿಣ ಏಷ್ಯಾದ ಸಂಸ್ಕೃತಿಯನ್ನು ಅನ್ವೇಷಿಸಲು ಅಸಾಧಾರಣ ಅವಕಾಶವನ್ನು ನೀಡುವುದಲ್ಲದೆ, ಸ್ವಲ್ಪ ಸಮಯವನ್ನು ವಿರಾಮದಲ್ಲಿ ಕಳೆಯಲು ಅವಕಾಶವನ್ನು ನೀಡುತ್ತದೆ. ಈ ಸಮುದ್ರಯಾನವು ಪ್ರಕೃತಿ ಪ್ರೇಮಿಗಳು, ಇತಿಹಾಸ ಪ್ರಿಯರು ಮತ್ತು ಸಾಂಸ್ಕೃತಿಕ ಉತ್ಸಾಹಿಗಳಿಗೆ ಅವಕಾಶಗಳನ್ನು ನೀಡುತ್ತದೆ, ಆದರೆ ನಿರ್ದಿಷ್ಟ ವಿಭಾಗಗಳಲ್ಲಿ ಮಾತ್ರ ಪ್ರಯಾಣಿಸಲು ಬಯಸುವ ಜನರಿಗೆ ಹಾಪ್-ಆನ್ ಮತ್ತು ಹಾಪ್-ಆಫ್ ಆಯ್ಕೆಗಳು ಸಹ ಇರುತ್ತವೆ.

Tap to resize

Latest Videos

ವಿಂಡೋ ಪಕ್ಕಾ ಹೋಗಲು ಸೀಟ್ ಮೇಲೆ ಹತ್ತೋದಾ ಈ ನಾರಿ? ಥೋ ಇದೆಂಥಾ ವರ್ತನೆ?

ಪ್ರಯಾಣಕ್ಕೆ ಗ್ರ್ಯಾಂಡ್ ಕ್ರೂಸ್ ಎಂಬ ಹೆಸರು
ಪ್ರಯಾಣವನ್ನು ಗ್ರ್ಯಾಂಡ್ ಕ್ರೂಸ್ ಎಂದು ಕರೆಯಲಾಗುವುದು ಮತ್ತು ಪ್ರತಿದಿನ ಆನ್-ಸೈಟ್ ಮತ್ತು ಆಫ್-ಸೈಟ್ ಅನುಭವಗಳನ್ನು ಒದಗಿಸುತ್ತದೆ. ಪ್ರವಾಸವು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಇತರ ಸ್ಥಳಗಳಲ್ಲಿ ನೆಲೆಗೊಂಡಿರುವ ಹಲವಾರು ವಿಶ್ವ ಪರಂಪರೆಯ ತಾಣಗಳನ್ನು ಒಳಗೊಂಡಿರುತ್ತದೆ. ಕ್ರೂಸ್ ಬಾಂಗ್ಲಾದೇಶವನ್ನು ಸಹ ಪ್ರವೇಶಿಸುತ್ತದೆ ಮತ್ತು ಯುನೆಸ್ಕೋ-ಮಾನ್ಯತೆ ಪಡೆದ ಸುಂದರಬನ್ಸ್ ಮೂಲಕ ಹಾದುಹೋಗುತ್ತದೆ.

ಈ ಹಡಗು ಬಾಂಗ್ಲಾದೇಶವನ್ನು ಕೂಡ ಪ್ರವೇಶಿಸಲಿದೆ. ಭಾರತಕ್ಕೆ ಹಿಂದಿರುಗುವ ಮೊದಲು ಪ್ರವಾಸಿ ಅತಿಥಿಗಳಿಗೆ ಬಾಂಗ್ಲಾದೇಶದ ಬ್ಯಾರಿಸಾಲ್, ಬಾಗರ್ಹತ್ ಮತ್ತು ಢಾಕಾ ಸೇರಿದಂತೆ ಇನ್ನು ಹಲವಾರು ಪ್ರವಾಸಿ ಆಕರ್ಷಣೆಗಳಿರುವ ತಾಣಗಳಿಗೆ ಕರೆದೊಯ್ಯತ್ತದೆ.

ಭಾರತದ ಈ ಸುಂದರ ದ್ವೀಪ ನೋಡಿದ್ರೆ, ಮತ್ತೆ ಮಾಲ್ಡೀವ್ಸ್ ಕಡೆ ತಿರುಗೀ ನೋಡಲ್ಲ ಬಿಡಿ

ಪ್ರಯಾಣದ ಬಗ್ಗೆ ಹೆಚ್ಚಿನದನ್ನು ಬಹಿರಂಗಪಡಿಸಿದ ಕಂಪನಿಯ ಅಧ್ಯಕ್ಷ ರಾಜ್ ಸಿಂಗ್ ಅವರು ಎಲ್ಲಾ ವಿಷಯಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿರುವುದಾಗಿ ತಿಳಿಸಿದರು. ಎರಡು  ದೇಶದ ಮೂಲಕ ಪ್ರಯಾಣ ಮಾಡುವ ಕಾರಣ, ಭಾರತ ಮತ್ತು ಬಾಂಗ್ಲಾದೇಶ ಸರ್ಕಾರಗಳ ಬೆಂಬಲ ಅಗತ್ಯವೆಂದು ಕಂಪನಿಯ ಅಧ್ಯಕ್ಷ ರಾಜ್ ಸಿಂಗ್ ಹೇಳಿದರು. ಒಟ್ಟಾರೆ ಇದೊಂದು ತಡೆ ರಹಿತ ಪ್ರಯಾಣವಾಗಿದ್ದು, ಸರ್ಕಾರದ ನೆರವು, ಬೆಂಬಲ, ಸಹಕಾರದೊಂದಿಗೆ ದೀರ್ಘವಾದ ಪ್ರಯಾಣವನ್ನು ಆರಂಭಿಸಲಿದೆ.

click me!