Largest Cruise Ship: ವಿಶ್ವದ ಅತಿ ದೊಡ್ಡ ಹಡಗು ಮೊದಲ ಪಯಣಕ್ಕೆ ಸಜ್ಜಾಗಿದೆ, ಅಬ್ಬಬ್ಬಾ, ಇದರಲ್ಲಿ ಏನುಂಟು ಏನಿಲ್ಲ?!

Suvarna News   | Asianet News
Published : Mar 02, 2022, 05:33 PM IST
Largest Cruise Ship: ವಿಶ್ವದ ಅತಿ ದೊಡ್ಡ ಹಡಗು ಮೊದಲ ಪಯಣಕ್ಕೆ ಸಜ್ಜಾಗಿದೆ, ಅಬ್ಬಬ್ಬಾ, ಇದರಲ್ಲಿ ಏನುಂಟು ಏನಿಲ್ಲ?!

ಸಾರಾಂಶ

ವಿಶ್ವದ ಅತಿ ದೊಡ್ಡ ಐಷಾರಾಮಿ ಹಡಗು 'ವಂಡರ್ ಆಫ್ ದಿ ಸೀಸ್’. 5ರಿಂದ 7 ರಾತ್ರಿಗಳ ಪ್ರವಾಸದ ಹಲವು ಆಫರ್ ಗಳನ್ನು ನೀಡಿದೆ. ಐಷಾರಾಮಿ ಹಡಗು ವಿಶ್ವದ ಯಾವುದೇ ಅದ್ದೂರಿ ಹೋಟೆಲ್ ನ ವೈಭವವನ್ನೂ ಮೀರಿಸುವಂತಿದೆ.  

ವಿಶ್ವದ ಅತಿದೊಡ್ಡ (Biggest) ಐಷಾರಾಮಿ ಹಡಗು (Cruise Ship) ಅಂತೂ ಪರ್ಯಟನೆಗೆ (Travel) ಸಿದ್ಧವಾಗಿದೆ. ರಾಯಲ್ ಕೆರಿಬಿಯನ್ (Royal Carribean)  ಇಂಟರ್ ನ್ಯಾಷನಲ್ ಸಂಸ್ಥೆಯ “ವಂಡರ್ ಆಫ್ ದಿ ಸೀಸ್ (Wonder of The Sea’s) ಎರಡೇ ದಿನಗಳಲ್ಲಿ ಪ್ರಯಾಣಕ್ಕೆ ಹೊರಟು ನಿಂತಿದೆ. ಕಳೆದ ಮೂರು ವರ್ಷಗಳಿಂದ ಸಿದ್ಧವಾಗಿ ನಿಂತಿದ್ದರೂ “ವಂಡರ್ ಆಫ್ ದಿ ಸೀಸ್’ ಗೆ ಮುಹೂರ್ತ ಕೂಡಿರಲಿಲ್ಲ. ಅಂತಿಮವಾಗಿ, ಈಗ ಮಾರ್ಚ್ 4ರಂದು ಪ್ರಥಮ ಪ್ರಯಾಣಕ್ಕೆ ಸಜ್ಜಾಗಿದೆ. 

2018ರಲ್ಲಿಯೇ ರಾಯಲ್ ಕೆರಿಬಿಯನ್ ಸಂಸ್ಥೆಯ ಬೃಹತ್ ಐಷಾರಾಮಿ ಹಡಗು ನಿರ್ಮಾಣಗೊಂಡಿದೆ. ಫ್ರಾನ್ಸ್ (France) ದೇಶದ ಸೇಂಟ್ ನಝಾರೆಯಲ್ಲಿರುವ ಚಾಂಟಿಯರ್ಸ್ ಡಿ ಅಟ್ಲಾಂಟಿಕ್ ಶಿಪ್ ಯಾರ್ಡ್ ನಲ್ಲಿ ನಿರ್ಮಾಣವಾಗಿರುವ ಈ ಹಡಗಿಗೆ ವಿಶ್ವದಲ್ಲೇ ಅತ್ಯಂತ ಬೃಹತ್ತಾದ ಹಾಗೂ ಐಷಾರಾಮಿ ಹಡಗೆನ್ನುವ ಗರಿ.
ಫ್ಲೋರಿಡಾದಿಂದ ಪ್ರಥಮ ಪಯಣ ಆರಂಭಿಸಲಿರುವ ಇದು 18 ಡೆಕ್ (Deck) ಗಳನ್ನು ಹೊಂದಿದ್ದು ಮಜಬೂತಾಗಿದೆ. ಬರೋಬ್ಬರಿ 6988 ಪ್ರಯಾಣಿಕರನ್ನು (Travellers) ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. 2300 ಸಿಬ್ಬಂದಿಗಳು ಹಡಗಿನಲ್ಲಿದ್ದಾರೆ. 

“ವಿಶ್ವಾದ್ಯಂತ ಇರುವ ಹಡಗುಯಾನ ಪ್ರಿಯರಿಗೆ “ವಂಡರ್ ಆಫ್ ದಿ ಸೀಸ್’ ಆಹ್ವಾನ ನೀಡುತ್ತಿದೆ. ಆರು ವರ್ಷಗಳ ನಿರಂತರ ಪರಿಶ್ರಮದಿಂದಾಗಿ ಇದು ವಿಶ್ವದರ್ಜೆಯ ಹೋಟೆಲ್ ಗುಣಮಟ್ಟ ಹೊಂದಿದೆ’ ಎಂಬುದಾಗಿ ರಾಯಲ್ ಕೆರಿಬಿಯನ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮಾರ್ಕ್ ಟಾಮಿಸ್ (Mark Tamis) ಇತ್ತೀಚೆಗೆ ಪ್ರಕಟಿಸಿರುವುದು ಜಗತ್ತಿನೆಲ್ಲೆಡೆ ಇರುವ ಸಮುದ್ರಯಾನ ಪ್ರಿಯರ ಮೊಗದಲ್ಲಿ ನಗು ಮೂಡಿಸಿರುವುದು ಸುಳ್ಳಲ್ಲ. 

ಬೆರಗಿನ ಹಡಗು
ಬೆರಗುಗೊಳಿಸುವ ಆಟದ (Play) ಪ್ರದೇಶ, ಬಾರ್ (Bar) ಮತ್ತು ರೆಸ್ಟೋರೆಂಟ್ ಗಳು, ಹಡಗುಗಳಲ್ಲಿರುವ ಎಲ್ಲ ಸ್ಲೈಡ್ (Slide)ಗಳಿಗಿಂತ ಅತಿ ಎತ್ತರವಾಗಿರುವ ಸ್ಲೈಡ್, ಫ್ಲೋರೈಡರ್ ಸರ್ಫ್ ಸಿಮ್ಯುಲೇಟರ್, ಆಕ್ವಾ ಥಿಯೇಟರ್, ರಾಕ್ ಕ್ಲೈಂಬಿಗ್ (Rock Climbing) ವಾಲ್ಸ್ ಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲ, ಒಂದು ಪಾರ್ಕ್ (Park) ಕೂಡ ಇದ್ದು, 20 ಸಾವಿರ ನೈಜವಾದ ಸಸ್ಯಗಳು ಇಲ್ಲಿವೆ. ಪಾರ್ಕ್ ನಲ್ಲೇ ಒಂದು ಕೆಫೆ ಕೂಡ ಇದೆ. 

ತಲೆನೋವೆಂದು ಮಾತ್ರೆ ತಿನ್ನೋದೇ 'ದೊಡ್ಡ ತಲೆನೋವು' ಆಗಬಹುದು!

ಎಂತೆಂತಹ ಸ್ಥಳಗಳು ಇಲ್ಲಿವೆ ಎಂದರೆ ಅಚ್ಚರಿಯಾಗಬಹುದು. ಸನ್ ಡೆಕ್, ನೀರಿನ ಕೊಳ, ಬಾರ್ ಸೇರಿದಂತೆ ಅತ್ಯಾಧುನಿಕ ಎಲ್ಲ ಸೌಲಭ್ಯ ಹೊಂದಿರುವ  ಪ್ರದೇಶಕ್ಕೆ ಸ್ಯೂಟ್ ಕ್ಲಾಸ್ ನೇಬರ್ ಹುಡ್ ಎಂದು ಕರೆಯಲಾಗುತ್ತದೆ. ಇಂತಹ 8 ಸ್ಥಳಗಳನ್ನು ಈ ಹಡಗು ಒಳಗೊಂಡಿದೆ.  ಬೃಹತ್ತಾದ ಥಿಯೇಟರ್ ಕೂಡ ಇದ್ದು ಇಲ್ಲಿ ಮನರಂಜನೆ ಕಾರ್ಯಕ್ರಮಗಳು ಇರುತ್ತವೆ.
20ಕ್ಕೂ ಅಧಿಕ ಊಟದ ಹಾಲ್ ಗಳು, 11 ಬಾರ್ ಗಳು ಪ್ರಯಾಣಿಕರಿಗೆ ಲಭ್ಯ. ಹಡಗಿನ ಒಟ್ಟಾರೆ ಸಾಮರ್ಥ್ಯ 2.36 ಲಕ್ಷ ಟನ್. 64 ಮೀಟರ್ ಅಗಲ ಹೊಂದಿದ್ದು 362 ಮೀಟರ್ ಉದ್ದವಿದೆ. 

Women's Day 2022: ಮಹಿಳಾ ದಿನಾಚರಣೆ ಹಿಂದಿನ ಬಲವಾದ ಕಾರಣ ನಿಮಗ್ಗೊತ್ತಾ?

ಗ್ರ್ಯಾಂಡ್ (Grand) ಪರ್ಯಟನೆ
ಫ್ಲೋರಿಡಾದ (Florida) ಫೋರ್ಟ್ ಲಾಡೆರ್ಡಾಲ್ ನಿಂದ ಹೊರಡುವ ಹಡಗು ಬಾರ್ಸಿಲೋನಾ, ಸ್ಪೇನ್, ರೋಮ್ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರವಾಸ ಗೈಯ್ಯಲಿದೆ. ಬರುವ ಮೇ ತಿಂಗಳಲ್ಲಿ ಯುರೋಪ್ ಪ್ರವಾಸ ಏರ್ಪಡಿಸಿದೆ. 7 ರಾತ್ರಿಗಳ ಪಶ್ಚಿಮ ಮೆಡಿಟರೇನಿಯನ್ ಪ್ರದೇಶಗಳಿಗೆ ಬಾರ್ಸಿಲೋನಾ, ರೋಮ್ ಸೇರಿದಂತೆ ಪರ್ಯಟನೆ ಮಾಡಲಿದೆ. ಮುಂದಿನ ವರ್ಷದ ಯುರೋಪ್ ಪ್ರವಾಸಕ್ಕೆ ಸೆಪ್ಟೆಂಬರ್ 2022ರಲ್ಲಿ ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ಆರಂಭವಾಗಲಿದೆ. 

2021ರಲ್ಲೇ “ವಂಡರ್ ಆಫ್ ದಿ ಸೀಸ್’ ಪ್ರಯಾಣ ಆರಂಭಿಸಬೇಕಿತ್ತು. ಆದರೆ, ಕೊರೋನಾ ಸಾಂಕ್ರಾಮಿಕದ ಕಾರಣದಿಂದ ಪ್ರಯಾಣ ವಿಳಂಬವಾಗಿದೆ. ಕಳೆದ ವರ್ಷ ಇಡೀ ಜಗತ್ತೇ ಕೊರೋನಾ ಸಂಕಷ್ಟದಲ್ಲಿ ಸಿಲುಕಿದ್ದಾಗ ಈ ಬೃಹತ್ ಐಷಾರಾಮಿ ಹಡಗು ವಾಯುವ್ಯ ಅಟ್ಲಾಂಟಿಕ್ (Atlantic) ಮಹಾಸಾಗರದಲ್ಲಿ ತಣ್ಣಗೆ ನಿಂತಿತ್ತು. ಇದೀಗ, ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!
ನೀಮ್‌ ಕರೋಲಿ ಬಾಬಾ ಆಶ್ರಮದಲ್ಲಿ ನಾನು ಕಂಡದ್ದೇನು!