ಅಲ್ಲ ಮಾರಾಯ್ರೆ ನಮ್ಮ ಮನೆ, ನಮ್ಮ ಊಟ. ಹೆಂಗಾದ್ರೂ ಮಾಡ್ತೇವೆ ನಿಮಗೇನು ಅನ್ನುವ ಪಾಲಿಸಿ ಇಲ್ಲಿ ನಡೆಯೋದಿಲ್ಲ. ಪ್ರತಿಯೊಂದು ನಿಯಮದಂತೆ ಆಗ್ಬೇಕು. ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೆ ಸುಖಾಸುಮ್ಮನೆ ದಂಡ ಕೊಡ್ಬೇಕು.
ಪ್ರಪಂಚದಾದ್ಯಂತ ಅನೇಕ ಪದ್ಧತಿಗಳು ಜಾರಿಯಲ್ಲಿವೆ. ಪ್ರತಿ ದೇಶ, ಪ್ರಾಂತ್ಯ ತನ್ನದೇ ಕಾನೂನನ್ನು ಪಾಲಿಸುತ್ತದೆ. ಆದ್ರೆ ಕೆಲವೊಂದು ಪದ್ಧತಿ, ಕಾನೂನು ಚಿತ್ರವಿಚಿತ್ರವಾಗಿರುತ್ತವೆ. ಹೀಗೂ ಇದ್ಯಾ ಎನ್ನುವ ಪ್ರಶ್ನೆ ಹುಟ್ಟಿಸುತ್ತದೆ. ಆಹಾರದಿಂದ ಹಿಡಿದು ವಾಸ್ತವ್ಯದವರೆಗೆ ಅನೇಕ ವಿಷ್ಯಕ್ಕೆ ಚೀನಾ ಸುದ್ದಿಯಲ್ಲಿರುತ್ತದೆ. ಅಲ್ಲಿನ ಜನರು ಕಲ್ಪನೆಗೆ ಮೀರಿದ ಆಹಾರ ಸೇವನೆ ಮಾಡ್ತಾರೆ. ಅದೇನೇ ಇರಲಿ ಈಗ ಚೀನಾದ ಶಿಸ್ತುಬದ್ಧ ನಿಯಮವೊಂದು ಚರ್ಚೆಯಲ್ಲಿದೆ.
ನಮ್ಮ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರ (Environment) ಸ್ವಚ್ಛವಾಗಿರುವುದು ಬಹಳ ಮುಖ್ಯ. ಪ್ರತಿ ದಿನ ಸ್ನಾನ ಮಾಡ್ಬೇಕು, ಕೈ ತೊಳೆದು ಆಹಾರ (Food) ಸೇವನೆ ಮಾಡಬೇಕು, ಮನೆಯನ್ನು ಕ್ಲೀನ್ ಆಗಿಟ್ಟುಕೊಳ್ಳಬೇಕು, ಆಹಾರ ತಯಾರಿಸುವ ಜಾಗ ಸ್ವಚ್ಛವಾಗಿರಬೇಕು. ಇದೆಲ್ಲ ಒಳ್ಳೆಯದು ನಿಜ. ಆದ್ರೆ ಅದೇ ಅತಿಯಾದ್ರೆ ಕಷ್ಟ. ನಮ್ಮ ದೇಶದಲ್ಲೂ ಸ್ವಚ್ಛತೆ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮ ನಡೆಯುತ್ತಿರುತ್ತದೆಯಾದ್ರೂ ಕೊಳಕು ಪ್ರದೇಶಗಳು ಸಾಕಷ್ಟು ಕಾಣಸಿಗ್ತವೆ. ಈ ಜಾಗ ನೋಡಿ ಜನ ಮೂಗು ಮುಚ್ಚಿಕೊಳ್ತಾರೆಯೇ ವಿನಃ ಯಾವುದೇ ಆಡಳಿತ ಸಂಸ್ಥೆ ದಂಡ ವಿಧಿಸೋದಿಲ್ಲ. ಆದ್ರೆ ಚೀನಾ (China) ದ ಈ ಪ್ರಾಂತ್ಯದಲ್ಲಿ ಹಾಗಲ್ಲ. ಸ್ವಚ್ಛತೆ ಬಗ್ಗೆ ನೀವು ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ ದಂಡ ವಿಧಿಸಬೇಕು. ಇಲ್ಲಿ ವಿಧಿಸುವ ದಂಡ ಬಹಳ ಅಚ್ಚರಿ ಹುಟ್ಟಿಸುತ್ತದೆ. ಜೇಡರ ಬಲೆ ಕಂಡ್ರೂ ಜನರು ದಂಡ ಪಾವತಿಸಬೇಕು. ಆ ಊರು ಯಾವುದು ಗೊತ್ತಾ?.
ಮೊಬೈಲ್ ಯುಗದಲ್ಲಿ ತಲೆ ಎತ್ತಿದೆ ಈ ಪುಸ್ತಕದ ಹಳ್ಳಿ. ಚೆಂದದ ಕಾನ್ಸೆಪ್ಟ್‌ಗೊಂದು ಬೈ ಹೇಳಿ!
ದಂಡಕ್ಕೆ ಪ್ರಸಿದ್ಧಿ ಪಡೆದಿದೆ ಈ ಊರು : ಚೀನಾದ ನೈಋತ್ಯ ರಾಜ್ಯವಾದ ಸಿಚುವಾನ್ ಪ್ರಾಂತ್ಯದ ಪಜ್ ಕೌಂಟಿ ದಂಡಕ್ಕೆ ಪ್ರಸಿದ್ಧಿಯಾಗಿದೆ. ಇಲ್ಲಿ ವಾಸಿಸುವ ಜನರ ಮೇಲೆ ಅಲ್ಲಿನ ಸ್ಥಳೀಯ ಆಡಳಿತ ಅನೇಕ ರೀತಿಯ ದಂಡ ವಿಧಿಸುತ್ತದೆ. ಇದಕ್ಕೆ ಸರ್ಕಾರ Fine Standards for the New Countryside for Human Settlement Environment ಎಂದು ಹೆಸರಿಟ್ಟಿದೆ. ಜನರಿಗೆ ಸ್ವಚ್ಛತೆ ಮತ್ತು ಶಿಸ್ತು ಕಲಿಸುವುದು ಇದರ ಉದ್ದೇಶವಾಗಿದೆ.
ಈ ಎಲ್ಲ ಕೆಲಸಕ್ಕೆ ಬೀಳುತ್ತೆ ದಂಡ :
• ಭಾರತದ ಅನೇಕ ಮನೆಗಳ ಮುಂದೆ ಕಸ ಬಿದ್ದಿರುತ್ತದೆ. ಆದ್ರೆ ಪಜ್ ಕೌಂಟಿಯಲ್ಲಿ ಮನೆ ಮುಂದೆ ಕಸ ಬಿದ್ರೆ ಮುಗಿತು. ಜನರು ಮನೆ ಮುಂದೆ ಕಸ ಹಾಕಿದ್ರೆ ದಂಡ ವಿಧಿಸಬೇಕು. ಅವರು ಮನೆ ಮುಂದೆ ಎಷ್ಟು ಕೊಳಕು ಮಾಡಿದ್ದಾರೆ ಎಂಬುದರ ಅನುಗುಣವಾಗಿ 116 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ದಂಡ ವಿಧಿಸಲಾಗುತ್ತದೆ.
• ನೀವು ಊಟ ಮಾಡುವ ವಿಧಾನವನ್ನು ಕೂಡ ಸ್ಥಳೀಯ ಆಡಳಿತ ಗಮನಿಸುತ್ತದೆ. ನೀವು ಶಿಸ್ತಿನಿಂದ ಊಟ ಮಾಡ್ಬೇಕು. ಸರಿಯಾದ ಭಂಗಿಯಲ್ಲಿ ಊಟಕ್ಕೆ ಕುಳಿತುಕೊಳ್ಳದೆ, ಕುಣಿದಾಡುತ್ತಿದ್ದರೆ ದಂಡ ತೆರಬೇಕಾಗುತ್ತದೆ. ಇದಕ್ಕೆ ಅಲ್ಲಿನ ಸರ್ಕಾರ 20 ಯುವಾನ್ ಅಂದರೆ 233 ರೂಪಾಯಿ ದಂಡ ವಿಧಿಸುತ್ತದೆ.
• ಬರೀ ಇಷ್ಟೇ ಅಲ್ಲ ನಿಮ್ಮ ಬೆಡ್ ಸರಿಯಾಗಿದೆಯೇ ಎಂಬುದನ್ನು ಕೂಡ ಸರ್ಕಾರ ಪರಿಶೀಲಿಸುತ್ತದೆ. ಮನೆಯಲ್ಲಿರುವ ಕೊಳಕು ಪಾತ್ರೆಗಳನ್ನು ಸಿಂಕ್ ಗೆ ಹಾಕಿ ಎಲ್ಲೆಂದರಲ್ಲಿ ಓಡಾಡುವಂತಿಲ್ಲ. ಮನೆಯಲ್ಲಿರುವ ಎಲ್ಲ ಪಾತ್ರೆಗಳನ್ನು ನೀವು ಸ್ವಚ್ಛವಾಗಿಟ್ಟುಕೊಳ್ಳಬೇಕು. ಒಂದ್ವೇಳೆ ಬೆಡ್ ಸರಿಯಾಗಿಟ್ಟುಕೊಂಡಿಲ್ಲ, ಅಡುಗೆ ಮನೆಯಲ್ಲಿರುವ ಪಾತ್ರೆ ಕೊಳಕಾಗಿದೆ ಎಂಬ ಸಂಗತಿ ಆಡಳಿತಕ್ಕೆ ತಿಳಿದ್ರೆ ನಿಮಗೆ ದಂಡ ವಿಧಿಸುತ್ತದೆ. ನೀವು 10 ಯುವಾನ್ ಅಂದರೆ 116 ರೂ ದಂಡವನ್ನು ಪಾವತಿಸಬೇಕಾಗುತ್ತದೆ.
• ಒಂದ್ಕಡೆ ತೆಗೆದ್ರೆ ಇನ್ನೊಂದು ಕಡೆ ಕಾಣಿಸಿಕೊಳ್ಳುವ ಜೇಡದಿಂದ ಮುಕ್ತಿ ಪಡೆಯೋದು ಬಹಳ ಕಷ್ಟ. ಹೋಗ್ಲಿ ಬಿಡು ಅಂತಾ ನೀವು ಜೇಡರ ಬಲೆಯನ್ನು ಹಾಗೆ ಇಟ್ಟರೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರಂಟಿ. ಜೇಡರ ಬಲೆ ಮನೆಯಲ್ಲಿ ಕಂಡ್ರೆ 5 ಯುವಾನ್ ಅಂದರೆ 58 ರೂಪಾಯಿ ದಂಡ ಪಾವತಿಸಬೇಕು.
ಇದು ಜಗತ್ತಿನ Healthiest Place, 100 ವರ್ಷ ದಾಟಿದವರು ನೂರಾರು ಮಂದಿ ಇದ್ದಾರಿಲ್ಲಿ!