ಮಳೆಗಾಲದ ಪ್ರವಾಸದ ಮಜಾನೇ ಬೇರೆ, ಆದರೆ ಇವನ್ನೆಲ್ಲ ಮರೀಬೇಡಿ!

By Suvarna News  |  First Published Jul 19, 2022, 4:34 PM IST

ಪ್ರವಾಸ ಬಹುತೇಕ ಎಲ್ಲರಿಗೂ ಇಷ್ಟ. ಕೆಲವರು ಮಳೆಗಾಲದಲ್ಲಿ ಟ್ರಿಪ್ ಹೋಗೋಕೆ ಮುಂದಾಗ್ತಾರೆ. ಆದ್ರೆ ಯಾವುದೇ ಪ್ಲಾನ್ ಇಲ್ಲದೆ ಮಳೆಗಾಲದಲ್ಲಿ ಟ್ರಿಪ್ ಹೋದ್ರೆ ಅದು ಪ್ಲಾಪ್ ಆಗುತ್ತೆ. ಹಾಗಾಗಿ ಮನೆಯಿಂದ ಹೊರ ಬೀಳುವ ಮುನ್ನ ಕೆಲ ವಿಷ್ಯ ನೆನಪಿಟ್ಟುಕೊಳ್ಬೇಕು. 


ಮಳೆಗಾಲ ಅನೇಕರಿಗೆ ಪ್ರಿಯವಾದ ಋತು. ಮಳೆಗಾಲ ಇಷ್ಟಪಡುವ ಜನರು, ಮಾನ್ಸೂನ್‌ನಲ್ಲಿ ಪ್ರವಾಸ ಮಾಡಲು ಆಸಕ್ತಿ ಹೊಂದಿರುತ್ತಾರೆ. ಮಳೆಗಾಲದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ. ಈ ಋತುವಿನಲ್ಲಿ ಸುಡುವ ಬಿಸಿಲಿರುವುದಿಲ್ಲ. ತಂಪಾದ ವಾತಾವಣ ಹಾಗೂ ಹಚ್ಚ ಹಸಿರಿನ ಪರಿಸರ ಎಲ್ಲರನ್ನು ಸೆಳೆಯುತ್ತದೆ. ಇದೇ ಕಾರಣಕ್ಕೆ ಜನರು ಹೆಚ್ಚಾಗಿ ಮಳೆಗಾಲದಲ್ಲಿ ಪ್ರಯಾಣಿಸಲು ಪ್ಲಾನ್ ಮಾಡ್ತಾರೆ. ಮಳೆಗಾಲದಲ್ಲಿ ಪ್ರಾಕೃತಿಕ ಸೌಂದರ್ಯ ಹೆಚ್ಚುವ ಜಾಗಕ್ಕೆ ಹೋಗಲು ಜನ ಬಯಸುತ್ತಾರೆ. ಪ್ರವಾಸಕ್ಕೆ ಪ್ಲಾನ್ ಮಾಡಿರ್ತೇವೆ. ಆದ್ರೆ ಮಳೆಗಾಲದಲ್ಲಿ ಮನೆಯಿಂದ ಹೊರಬರಲು ಹಲವು ಸಮಸ್ಯೆಗಳಿವೆ. ಮಳೆಗಾಲದಲ್ಲಿ ತಿರುಗಾಡಲು ನೀವು ಸರಿಯಾದ ಮಾನ್ಸೂನ್ ತಾಣವನ್ನು ಆರಿಸಿಕೊಳ್ಳಬೇಕು. ಜೊತೆಗೆ ಪ್ರಯಾಣದ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನೀವು ಮಳೆಗಾಲದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದರೆ ಕೆಲವು ತಪ್ಪುಗಳು ಮಾಡಬಾರದು. ನಿಮ್ಮ ತಪ್ಪುಗಳು ನಿಮ್ಮ ಪ್ರವಾಸದ ಮಜವನ್ನು ಹಾಳು ಮಾಡುತ್ತದೆ. ಹಾಗೆಯೇ ಪ್ರವಾಸ ಕಷ್ಟವಾಗುತ್ತದೆ. ಮಳೆಗಾಲದಲ್ಲಿ ಪ್ರಯಾಣ ಬೆಳೆಸುವಾಗ ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬುದನ್ನು ನಾವಿಂದು ಹೇಳ್ತೇವೆ. 

ಮಾನ್ಸೂನ್ (Monsoon ) ಪ್ರವಾಸಕ್ಕೆ ಸಲಹೆಗಳು:   
ಸರಿಯಾದ ಬಟ್ಟೆ (Clothes ) ಆಯ್ಕೆ :
ಮಳೆಗಾಲದಲ್ಲಿ ಪ್ರವಾಸಕ್ಕೆ ಹೊರಟಿದ್ದರೆ ಬಟ್ಟೆಯನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡ್ಬೇಕು. ಬಹುಬೇಗ ಒಣಗುವ ಬಟ್ಟೆಯನ್ನು ತುಂಬಬೇಕು. ಹಾಗೆ ಒಂದೆರಡು ಜೊತೆ ಬಟ್ಟೆಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡು ಹೋಗುವುದು ಒಳ್ಳೆಯದು. ಮಳೆಗಾಲದಲ್ಲಿ ಬಟ್ಟೆ ಒಣಗುವುದಿಲ್ಲ. ಎರಡೇ ಎರಡು ಬಟ್ಟೆಯಲ್ಲಿ ಪ್ರವಾಸ ಮುಗಿಸ್ತೇನೆ ಎನ್ನಲು ಸಾಧ್ಯವಿಲ್ಲ. ಹಾಗೆಯೇ ಮಳೆಯಲ್ಲಿ ನೆನೆದಾಗ ಮುಜುಗರಕ್ಕೀಡಾಗುವ ಬಟ್ಟೆ ಧರಿಸಬಾರದು. ಬಟ್ಟೆ ಜೊತೆ ರೇನ್ ಕೋಟ್ ಇಟ್ಟುಕೊಳ್ಳುವುದು ಉತ್ತಮ.  ಹಾಗೆಯೇ ಛತ್ರಿ (Umbrella) ಯೊಂದು ಬ್ಯಾಗ್ ನಲ್ಲಿರಲಿ.

Tap to resize

Latest Videos

ವಾಟರ್ ಪ್ರೂಫ್ ಬ್ಯಾಗ್ (Water Proof Bag) : ಮಳೆಗಾಲದಲ್ಲಿ ನಾವು ಪ್ರಯಾಣ ಬೆಳೆಸುತ್ತಿದ್ದರೆ ಬ್ಯಾಗ್ ಬಗ್ಗೆಯೂ ಗಮನ ಹರಿಸಬೇಕು. ಬ್ಯಾಗ್ ಮೂಲಕ ನೀರು ಒಳಗೆ ಸೇರಿದ್ರೆ ಬಟ್ಟೆ ಒದ್ದೆಯಾಗುತ್ತದೆ. ಬ್ಯಾಗ್ ನಲ್ಲಿದ್ದ ಎಲ್ಲ ವಸ್ತುಗಳು ಹಾಳಾಗುತ್ತವೆ. ಹಾಗಾಗಿ ಮಳೆಗಾಲದಲ್ಲಿ ತಪ್ಪದೆ ವಾಟರ್ ಪ್ರೂಫ್ ಬ್ಯಾಗ್ ತೆಗೆದುಕೊಂಡು ಹೋಗ್ಬೇಕು.    

ಮಳೆಗಾಲದಲ್ಲಿ ಸೇಫ್ ಆಗಿರಲು ಡ್ರೈವ್ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ

ಬ್ಯಾಗ್ ನಲ್ಲಿರಲಿ ಒಂದಿಷ್ಟು ಆಹಾರ : ಮಳೆಗಾಲದಲ್ಲಿ ಬಿಸಿಲು ನಂಬೋದು ಕಷ್ಟ. ಏಕಾಏಕಿ ಮಳೆ ಶುರುವಾಗ್ಬಹುದು. ಅನೇಕ ಬಾರಿ ಪ್ರವಾಹದಲ್ಲಿ ಸಿಕ್ಕಿಬೀಳುವ ಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆ ಹಾಳಾಗಿ, ದಿನಗಟ್ಟಲೆ ಕಾರ್ ನಲ್ಲಿರುವ ಸಂದರ್ಭ ಬರಬಹುದು. ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾಗ್ ನಲ್ಲಿ ಒಂದಿಷ್ಟು ಆಹಾರವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಹಸಿವಾದಾಗ, ಅಗತ್ಯವೆನಿಸಿದಾಗ ಆಹಾರ ಸೇವನೆ ಮಾಡ್ಬಹುದು. ಹಾಗೆ ನೀರಿನ ಬಾಟಲ್ ಕೂಡ ಅಗತ್ಯ ಎಂಬುದನ್ನು ಮರೆಯಬೇಡಿ. 

ಫಸ್ಟ್ ಏಡ್ ಕಿಟ್ : ಮಳೆಗಾಲದಲ್ಲಿ ಹಲವು ರೋಗಗಳು ಬರುವ ಸಾಧ್ಯತೆ ಹೆಚ್ಚುತ್ತದೆ. ಶೀತ, ನೆಗಡಿ ಮತ್ತು ಕೆಮ್ಮಿನ ಜೊತೆಗೆ ವೈರಸ್ ಜ್ವರ ಇತ್ಯಾದಿ ಕಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಯಾಣದ ಸಮಯದಲ್ಲಿ ನಿಮ್ಮೊಂದಿಗೆ ಅಗತ್ಯ ಔಷಧಿಗಳನ್ನು ಇಟ್ಟುಕೊಳ್ಳಿ. ಒಂದೇ ದಿನದ ಪ್ರವಾಸವಾಗಿದ್ದರೂ ಕೂಡ ಈ ಔಷಧಿಗಳು ನಿಮ್ಮ ಬ್ಯಾಗ್ ನಲ್ಲಿರಲಿ.  

ದೆವ್ವ – ಭೂತ ಇರೋ ಜಾಗಕ್ಕೆ ಹೋಗುವ ಮೊದಲು ಇದನ್ನೋದಿ!

ಸರಿಯಾದ ಸ್ಥಳದ ಆಯ್ಕೆ : ಕುಟುಂಬದ ಜೊತೆ ಅಥವಾ ಸ್ನೇಹಿತರೊಂದಿಗೆ ಮಾನ್ಸೂನ್ ಟ್ರಿಪ್‌ಗೆ ಪ್ಲಾನ್ ಮಾಡಿದ್ದರೆ ಮೊದಲು ಹೋಗುವ ಸ್ಥಳದ ಬಗ್ಗೆ ಮಾಹಿತಿ ಪಡೆಯಿರಿ. ಅಲ್ಲಿ ಮಳೆಗಾಲದಲ್ಲಿ ಸುತ್ತಾಡಲು ಅವಕಾಶವಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಹಾಗೆಯೇ ಮನೆ ಬಿಡುವ ಮೊದಲೇ ರೂಮ್ ಬುಕ್ ಮಾಡಿ. ಮಳೆಗಾಲದಲ್ಲಿ ಗುಡ್ಡಗಾಡು ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ಮಳೆಗಾಲದಲ್ಲಿ ರಸ್ತೆ ಕುಸಿತ, ಗುಡ್ಡ ಕುಸಿತವಾಗುವ ಸಾಧ್ಯತೆ ಹೆಚ್ಚಿರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಡಿ.  
 

click me!