ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್; ಇತ್ತ ಮುಂಡಗೋಡ-ಪಣಜಿ ಬಸ್ ಸೇವೆ ಆರಂಭ

Published : Apr 18, 2026, 05:34 PM IST
KSRTC Pallakki AC Bus

ಸಾರಾಂಶ

KSRTC Pallakki AC Bus Mangaluru To Mantralaya ಭಕ್ತರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು-ಮಂತ್ರಾಲಯ ಮಾರ್ಗದ ನಡುವೆ ನೂತನ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಕಾರ್ಯಾಚರಣೆ ಆರಂಭವಾಗಿದೆ.

ಮಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು - ಮಂತ್ರಾಲಯ ಮಾರ್ಗದ ನಡುವೆ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಮೇಲ್ದರ್ಜೆಗೇರಿಸಿ ನೂತನ ಪಲ್ಲಕ್ಕಿ ನಾನ್ ಎ.ಸಿ. ಸ್ಲೀಪರ್ ಸಾರಿಗೆಗೆ ಶುಕ್ರವಾರ ಮಂಗಳೂರು ಕೆ.ಎಸ್‌.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

ಶಾಸಕ ವೇದವ್ಯಾಸ ಕಾಮತ್ ನೂತನ ಸಾರಿಗೆ ಬಸ್‌ಗೆ ಚಾಲನೆ ನೀಡಿದರು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಸಂಚಾರ ನಿಯಂತ್ರಣಾಧಿಕಾರಿ ಕಮಲ್ ಕುಮಾರ್ ಮತ್ತಿತರರು ಇದ್ದರು.

ಮುಂಡಗೋಡ-ಪಣಜಿ ಬಸ್‌

ಮುಂಡಗೋಡ ಘಟಕದಿಂದ ಗೋವಾ ರಾಜಧಾನಿ ಪಣಜಿಗೆ ನೂತನ ಬಸ್ ಸೇವೆ ಆರಂಭಿಸಲಾಗಿದೆ. ಮುಂಡಗೋಡ-ಪಣಜಿ ಬಸ್‌ಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ ಚಾಲನೆ ನೀಡಿದರು. ಈ ಸಂದರ್ಭ ಗ್ಯಾರಂಟಿ ಯೋಜನೆಯ ಸದಸ್ಯ ಧರ್ಮರಾಜ ನಡಿಗೇರ, ಡಿಪೋ ಮ್ಯಾನೇಜರ್ ಕುರ್ತಕೋಟಿ, ಚಾಲಕರು, ನಿರ್ವಾಹಕರು, ಸಾರ್ವಜನಿಕರು ಉಪಸ್ಥಿತರಿದ್ದರು.

ಈ ನೂತನ ಬಸ್ ಬೆಳಗ್ಗೆ 8.15ಕ್ಕೆ ಮುಂಡಗೋಡನಿಂದ ಹೊರಟು ಬಂಕಾಪುರ, ಹಾನಗಲ್, ಶಿರಸಿ, ಅಂಕೋಲಾ, ಕಾರವಾರ ಮಾರ್ಗವಾಗಿ ಪಣಜಿ ತಲುಪಲಿದೆ.

ಇದನ್ನೂ ಓದಿ: NWKRTC: ಹುಬ್ಬಳ್ಳಿ-ಗದಗ ನಡುವೆ ತಡೆ ರಹಿತ ರಾಜಹಂಸ ಬಸ್ ಸಂಚಾರ; ವೇಳಾ ಪಟ್ಟಿ ಹೀಗಿದೆ

ಇದನ್ನೂ ಓದಿ: ಹಾವೇರಿ ಪ್ರಯಾಣಿಕರಿಗೆ ಸಿಹಿಸುದ್ದಿ: ಬೆಂಗಳೂರು, ಪಣಜಿ, ಹುಬ್ಬಳಿಗೆ ಹೊಸ ಬಸ್ ಸಂಚಾರ ಆರಂ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಸಿಲಿಗೆ ಇಬ್ಬರು ಭಕ್ತರ ಸಾವು ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಅಂಜನಾದ್ರಿ ಬೆಟ್ಟಕ್ಕೆ ಪ್ರವೇಶಕ್ಕಿಲ್ಲ ಅವಕಾಶ!
ಮೈಸೂರಿನಿಂದ ಕೇವಲ 180 ನಿಮಿಷಗಳ ದೂರ.. ಇದೇ ನೋಡಿ ನಮ್ಮ ಕರ್ನಾಟಕದ ಸ್ಕಾಟ್ಲೆಂಡ್