ವಿಮಾನದಲ್ಲಿ ತಿನ್ನಲು ಬರ್ಗರ್‌ ಪಾರ್ಸೆಲ್‌ ತಂದಿದ್ದ ವ್ಯಕ್ತಿಗೆ 2 ಲಕ್ಷ ದಂಡ

By Suvarna News  |  First Published Aug 2, 2022, 4:42 PM IST

ಈ ಸುದ್ದಿ ಬರ್ಗರ್ ಪ್ರಿಯರನ್ನು ಕಂಗೆಡಿಸುವುದು ಮಾತ್ರ ಸತ್ಯ. ಬರ್ಗರ್‌ ಪಾರ್ಸೆಲ್‌ ಕಟ್ಟಿಸಿಕೊಂಡು ವಿಮಾನವೇರಿದ ವ್ಯಕ್ತಿಯೊಬ್ಬ ಎರಡು ಲಕ್ಷ ದಂಡ ಕಟ್ಟಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.


ಈ ಸುದ್ದಿ ಬರ್ಗರ್ ಪ್ರಿಯರನ್ನು ಕಂಗೆಡಿಸುವುದು ಮಾತ್ರ ಸತ್ಯ. ಬರ್ಗರ್‌ ಪಾರ್ಸೆಲ್‌ ಕಟ್ಟಿಸಿಕೊಂಡು ವಿಮಾನವೇರಿದ ವ್ಯಕ್ತಿಯೊಬ್ಬ ಎರಡು ಲಕ್ಷ ದಂಡ ಕಟ್ಟಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ತೀವ್ರವಾಗಿ ಹಸಿದಿದ್ದಾಗ ಅಡುಗೆ ಮಾಡಲು ಸಮಯವಿಲ್ಲದಾಗ ಈಗ ಬಹುತೇಕರು ಆಹಾರ ಹೊಟೇಲ್‌ಗಳಿಂದ ಪಾರ್ಸೆಲ್ ಮಾಡಿಸಿಕೊಳ್ಳುತ್ತಾರೆ. ಪ್ರಯಾಣದ ಸಮಯದಲ್ಲಂತೂ ಆರಾಮವಾಗಿ ಮನೆಯಲ್ಲಿ ಕುಳಿತು ಸಮಯವಿರುವುದಿಲ್ಲ. ಪ್ರಯಾಣಿಸುವಾಗ ಬಸ್‌ನಲ್ಲಿ ಅಥವಾ ರೈಲಿನಲ್ಲಿ ಕುಳಿತುಕೊಂಡು ತಿನ್ನಬಹುದು ಎಂದು ಪಾರ್ಸೆಲ್‌ ಕಟ್ಟಿಸಿಕೊಂಡು ಬರುತ್ತಾರೆ. ಅದರೆ ಆಸ್ಟೇಲಿಯಾದಲ್ಲಿ ಹೀಗೆ ಪಾರ್ಸೆಲ್‌ ಕಟ್ಟಿಸಿಕೊಂಡು ವಿಮಾನದಲ್ಲಿ ತೆರಳಿದ ಪ್ರಯಾಣಿಕ ಎರಡು ಲಕ್ಷ ದಂಡ ಕಟ್ಟುವಂತಾಗಿದೆ. 

ಕೆಲವು ವಸ್ತುಗಳು ಕೆಲವು ಸಂಪ್ರದಾಯಗಳು ದೇಶದಿಂದ ದೇಶಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಕೆಲವು ವಸ್ತುಗಳನ್ನು ಸಾಗಿಸುವಂತಿಲ್ಲ. ಅವು ತಿನ್ನುವ ವಸ್ತುಗಳಾದರೂ ಸರಿ. ಸಾಮಾನ್ಯವಾಗಿ ಬಹುತೇಕ ಜನರು ಈ ಗಂಭೀರವಾದ ಸೂಚನೆಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಬೇರೆ ದೇಶಕ್ಕೆ ಹೋಗಿ ಕಷ್ಟಕ್ಕೆ ಸಿಲುಕಿದ ನಂತರವಷ್ಟೇ ಅವರಿಗೆ ಕಷ್ಟದ ಅರಿವಾಗುತ್ತದೆ. ಹಾಗೆಯೇ ವ್ಯಕ್ತಿಯೊಬ್ಬ ಬಾಲಿಯಿಂದ ಆಸ್ಟ್ರೇಲಿಯಾಗೆ ವಿಮಾನವೇರಿದ್ದ, ವಿಮಾನವೇರುವ ವೇಳೆ ವಿಮಾನದಲ್ಲಿ ತಿನ್ನಲು ಈತ ಜೊತೆಯಲ್ಲಿ ಮ್ಯಾಕಡೊನಾಲ್ಡ್‌ನಲ್ಲಿ ಬರ್ಗರ್ ಪಾರ್ಸೆಲ್ ಕಟ್ಟಿಸಿಕೊಂಡಿದ್ದ.

Latest Videos

undefined

ಮನುಷ್ಯನ ಮಾಂಸದ ಸ್ಮೆಲ್ ಇರೋ ಬರ್ಗರ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ !

ಆದರೆ ಈತ ಆಸ್ಟ್ರೇಲಿಯಾದಲ್ಲಿ ವಿಮಾನ ಇಳಿಯುತ್ತಿದ್ದಂತೆ ಅಲ್ಲಿ ವಿಮಾನ ನಿಲ್ದಾಣದ ಭದ್ರತಾ ತಪಾಸಣಾ ಶ್ವಾನ ಇವನ ಬ್ಯಾಗ್‌ನ್ನು ಒಂದೇ ಸಮನೆ ಮೂಸಲು ಶುರು ಮಾಡಿದೆ. ಕೂಡಲೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬ್ಯಾಗ್ ಚೆಕಪ್ ಮಾಡಿದ್ದು, ವ್ಯಕ್ತಿ ಸಂಕಷ್ಟಕ್ಕೀಡಾಗಿದ್ದಾರೆ. ವ್ಯಕ್ತಿಯ ಬ್ಯಾಗ್‌ನಲ್ಲಿ ಮೊಟ್ಟೆಗಳು, ದನದ ಮಾಂಸ, ಮುಫಿನ್ಸ್ ಹ್ಯಾಮ್ ಕ್ರೊಸಿಸಂಟ್ ಎಂಬ ತಿನ್ನಿಸು ಸಿಕ್ಕಿದೆ. ಇದನ್ನು ವಶಕ್ಕೆ ಪಡೆದ ಏರ್‌ಪೋರ್ಟ್‌ ಕಸ್ಟಮ್ಸ್ ಸಿಬ್ಬಂದಿ ಆತನಿಗೆ ತಪ್ಪು ಮಾಹಿತಿ ನೀಡಿದ್ದಾನೆ ಎಂದು ಆರೋಪಿಸಿ ಎರಡು ಲಕ್ಷ ದಂಡ ವಿಧಿಸಿದ್ದಾರೆ. 

ಈ ಘಟನೆಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾದ ಕೃಷಿ ಸಚಿವ ಮುರ್ರೆ ವಾಟ್, ಅತ್ಯಂತ ದುಬಾರಿ ಮ್ಯಾಕ್ ಡೊನಾಲ್ಡ್ ಆಹಾರ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ನಿಯಮ ಪಾಲಿಸದವರ ಪರವಾಗಿ ಯಾವುದೇ ಅನುಕಂಪ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಯಾಣಿಕರು ಪ್ರಯಾಣಿಸುವ ಮೊದಲು ಬೇರೆ ದೇಶಗಳ ನಿಯಮವನ್ನು ಮೊದಲೇ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಮಗುವಿನ ಕೈಯಲ್ಲಿತ್ತು ಅಮ್ಮನ ಮೊಬೈಲ್, ಮನೆಗೆ ಡೆಲಿವರಿ ಆಯ್ತು ರಾಶಿ ರಾಶಿ ಬರ್ಗರ್ !

click me!