ಪ್ರೀತಿಗೆ ಬಡತನವಿಲ್ಲ... ಮುಂಬೈ ಲೋಕಲ್ ರೈಲೊಳಗಿನ ಸುಂದರ ದೃಶ್ಯ ವೈರಲ್‌

Published : Jul 25, 2022, 10:46 AM ISTUpdated : Jul 25, 2022, 10:49 AM IST
ಪ್ರೀತಿಗೆ ಬಡತನವಿಲ್ಲ... ಮುಂಬೈ ಲೋಕಲ್ ರೈಲೊಳಗಿನ ಸುಂದರ ದೃಶ್ಯ ವೈರಲ್‌

ಸಾರಾಂಶ

ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಗೆ ತಿನ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರನ್ನು ಭಾವುಕರನ್ನಾಗಿಸಿದೆ. 

ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಗೆ ತಿನ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರನ್ನು ಭಾವುಕರನ್ನಾಗಿಸಿದೆ. ತಂದೆ ಹಾಗೂ ಮಗಳ ನಡುವಿನ ಸಂಬಂಧ ತುಂಬಾ ಅಮೋಘವಾದುದು. ಅದು ಬಡತನವೇ ಇರಲಿ ಸಿರಿತನವೇ ಇರಲಿ ಪ್ರೀತಿಗೆ ಯಾವುದೇ ಕೊರತೆ ಇರುವುದಿಲ್ಲ. ಹಾಗೆಯೇ ಇಲ್ಲಿ ತಂದೆ ಮಗಳು ರೈಲೊಂದರ ಜನರಲ್ ಬೋಗಿಯಲ್ಲಿ ಸಾಗುತ್ತಿದ್ದಾರೆ. ಪುಟ್ಟ ಮಗಳು ತಂದೆಗೆ ಹಣ್ಣನ್ನು ತಿನ್ನಿಸುತ್ತಿದ್ದಾಳೆ. ಜೊತೆಗೆ ಇಬ್ಬರು ಸಂವಹನ ನಡೆಸುತ್ತಿದ್ದಾರೆ. ಮುಂಬೈಯ ಲೋಕಲ್ ರೈಲೊಂದರಲ್ಲಿ ಸೆರೆಯಾದ ವಿಡಿಯೋ ಇದಾಗಿದೆ. ಮುಂಬೈಗೆ ಪ್ರತಿದಿನ ಸಾವಿರಾರು ಜನ ದೇಶದ ವಿವಿಧೆಡೆಯಿಂದ ವಲಸೆ ಬಂದು ಬದುಕು ಕಟ್ಟಿಕೊಳ್ಳಲು ನೋಡುತ್ತಾರೆ. ಹಾಗೆಯೇ ವಲಸೆ ಬಂದತಹ ಕುಟುಂಬದಂತೆ ಇವರು ತೋರುತ್ತಿದ್ದಾರೆ. 

ಸಾಮಾನ್ಯವಾಗಿ ಮಗಳೆಂದರೆ ಅಪ್ಪನಿಗೆ ಒಂದು ಹಿಡಿ ಹೆಚ್ಚೆ ಪ್ರೀತಿ ಮಗಳಿಗೂ ಅಷ್ಟೇ ಅಪ್ಪನ ಮೇಲೆ ಎಲ್ಲಿಲ್ಲದ ಮಮಕಾರ ಬಹುತೇಕ ಅಪ್ಪಂದಿರು ತಮ್ಮ ಅಮ್ಮನನ್ನು ಮಗಳಲ್ಲಿ ಕಾಣುತ್ತಾರೆ. ಹಾಗೆಯೇ ಬಹುತೇಕ ಹೆಣ್ಣು ಮಕ್ಕಳ ಮೊದಲ ಹೀರೋ ಅಪ್ಪ. ತನ್ನೆಲ್ಲಾ ಕಷ್ಟಗಳನ್ನು ಮನಸ್ಸಲ್ಲೇ ಬಚ್ಚಿಟ್ಟು ಮಕ್ಕಳಿಗೆ ಸುಖವನ್ನಷ್ಟೇ ನೀಡಲು ಬಯಸುವ ಅಪ್ಪನ ತ್ಯಾಗ ಕೆಲವೊಮ್ಮೆ ಯಾರಿಗೂ ಕಾಣಿಸುವುದೇ ಇಲ್ಲ. ಅಮ್ಮನೇನೋ ಅತ್ತು ಕರೆದು ತನ್ನ ಮನಸ್ಸಿನ ನೋವನ್ನು ಹಂಚಿಕೊಳ್ಳುತ್ತಾಳೆ. ಆದರೆ ಅಪ್ಪ ಹಾಗಲ್ಲ. ಕಷ್ಟಗಳನ್ನು ಆತ ಎಂದಿಗೂ ಎಲ್ಲರಿಗೂ ಹಂಚಲು ಇಷ್ಟಪಡಲಾರ ಆತ ಮನಸ್ಸೊಳಗೆ ಎಲ್ಲವನ್ನು ಇರಿಸಿಕೊಂಡು ಖುಷಿಯನ್ನಷ್ಟೇ ತನ್ನ ಕುಟುಂಬಕ್ಕೆ ನೀಡಲು ಬಯಸುತ್ತಾನೆ. ಹೀಗಾಗಿಯೇ ಕಷ್ಟ ಹಂಚಿಕೊಳ್ಳದ ಅಪ್ಪನ ಮೌನವನ್ನು ಬಹುತೇಕರು ಅರ್ಥ ಮಾಡಿಕೊಳ್ಳಲಾಗದೇ ಸೋಲುತ್ತಾರೆ.

 

ಯುದ್ಧ ವಿಮಾನವನ್ನು ಒಟ್ಟಿಗೆ ಹಾರಿಸಿ ಇತಿಹಾಸ ಬರೆದ ಅಪ್ಪ ಮಗಳು

ಆದಾಗ್ಯೂ ಇಲ್ಲಿ ಈ ಅಪ್ಪ ಮಗಳ ಮುದ್ದಾದ ಸಂವಾದವನ್ನು ಇನ್ಸ್ಟಾಗ್ರಾಮ್‌ನಲ್ಲಿ ಸಾಕ್ಷಿ ಮಲ್ಹೋತ್ರಾ ಎಂಬುವವರು ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಈ ವಿಡಿಯೋವನ್ನು 50  ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಇದೇ ಸುಂದರವಾದ ಜೀವನ ಜನರು ಹಾಗೂ ವಸ್ತುಗಳ ಮೇಲೆ ಕಡಿಮೆ ನಿರೀಕ್ಷೆ ಹೆಚ್ಚು ತೃಪ್ತಿ ಇದ್ದಾಗ ಈ ಖುಷಿ ಸಿಗಲು ಸಾಧ್ಯ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇವರ ಪ್ರೀತಿಯಲ್ಲಿ ಯಾವುದೇ ಶೋ ಆಪ್ ಇಲ್ಲ ಇದೊಂದು ಯಾವುದೇ ಕಂಡೀಷನ್‌ಗಳಿಲ್ಲದ ಪ್ರೀತಿ. ನೀವು ಇಂತಹ ಸೀನ್‌ಗಳನ್ನು ಮುಂಬೈನ ಬೀಚ್‌ಗಳಲ್ಲಿ ನೋಡಬಹುದು ಎಂದು ಕಾಮೆಂಟ್ ಮಾಡಿದ್ದಾರೆ. 

ಅಪ್ಪ ಮಗಳ ನಡುವಿನ ಪ್ರೀತಿಯ ಕುರಿತು ಹಲವು ಸಿನಿಮಾಗಳು ತೆರೆಗೆ ಬಂದಿವೆ. ಕನ್ನಡದಲ್ಲಿ ಪ್ರಕಾಶ್‌ ರೈ ಹಾಗೂ ಅಮೂಲ್ಯ ಅಭಿನಯದ ಕನಸು ಸಿನಿಮಾ ಮಗಳ ಮೇಲಿನ ಪ್ರೀತಿಯಿಂದ ತೊಳಲಾಡುವ ಅಪ್ಪನನ್ನು ತೋರಿಸುತ್ತಿದೆ. ಒಟ್ಟಿನಲ್ಲಿ ಅಪ್ಪ ಮಗಳ ಪ್ರೀತಿ ಪದಗಳಲ್ಲಿ ವರ್ಣಿಸಲಾಗದು

ಅಪ್ಪ ಮಗಳ ಯರ್ರಾಬಿರ್ರಿ ಕುಣಿತಕ್ಕೆ ಚಿಂದಿ ಆಯ್ತು ಡಾನ್ಸ್‌ ಫ್ಲೋರ್

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್