ಟಾಯ್ಲೆಟ್ ಹುಡುಕಲು ಮೊಬೈಲ್ ಆ್ಯಪ್‌: ಟೂರಿಸಂ ಐಡಿಯಾ ಟಾಪ್!

By Web Desk  |  First Published Jul 2, 2019, 4:12 PM IST

ಪಬ್ಲಿಕ್ ಟಾಯ್ಲೆಟ್ಸ್ ಹುಡುಕಲು ಪಡಬೇಕಿಲ್ಲ ಚಿಂತೆ| ಪ್ರವಾಸೋದ್ಯಮ ಇಲಾಖೆಯಿಂದ ಇ-ಟಾಯ್ಲೆಟ್ಸ್ ಮಾಹಿತಿಯುಳ್ಳ ಆ್ಯಪ್‌| ಕೇರಳ ಪ್ರವಾಸೋದ್ಯಮ ಇಲಾಖೆಯಿಂದ ವಿನೂತನ ಹೆಜ್ಜೆ| ಹತ್ತಿರದ ಇ-ಟಾಯ್ಲೆಟ್ಸ್ ಗಳ ಕುರಿತು ಸಂಪೂರ್ಣ ಮಾಹಿತಿ| ರಾಜ್ಯದ ಒಟ್ಟು 750 ಶೌಚಾಲಯಗಳ ಕುರಿತು ಸ್ಪಷ್ಟ ಮಾಹಿತಿ|


ತಿರುವನಂತಪುರಂ(ಜು.02): ಸಾರ್ವಜನಿಕ ಶೌಚಾಲಯ ಹುಡುಕುವುದು ಅದೆಷ್ಟು ಕಷ್ಟ ಎಂದು ಆ ಸಂಕಷ್ಟ ಎದುರಿಸಿದವರಿಗೇ ಗೊತ್ತು. ಬೇಕೆಂದಾಗ ಸಿಗದ ಈ ಸಾರ್ವಜನಿಕ ಶೌಚಾಲಯಗಳಿಗೆ ಕೆಲವೊಮ್ಮೆ ನಾವು ನೀವೆಲ್ಲಾ ಹಿಡಿ ಶಾಪ ಹಾಕುವುದುಂಟು.

ಆದರೆ ಪಕ್ಕದ ಕೇರಳದಲ್ಲಿ ಮಾತ್ರ ಪಬ್ಲಿಕ್ ಟಾಯ್ಲೇಟ್ಸ್ ಹುಡುಕುವುದು ಕಷ್ಟವಲ್ಲ. ಕಾರಣ ಸಾರ್ವಜನಿಕ ಶೌಚಾಲಯಗಳ ಕುರಿತು ಮಾಹಿತಿ ನೀಡುವ ಆ್ಯಪ್‌'ವೊಂದನ್ನು ಕೇರಳ ಅಭಿವೃದ್ಧಪಡಿಸಿದೆ.

Tap to resize

Latest Videos

ರಾಜ್ಯದಲ್ಲೆಡೆ ಇರುವ ಸಾರ್ವಜನಿಕ ಇ-ಟಾಯ್ಲೆಟ್ಸ್ ಕುರಿತು ಈ ಆ್ಯಪ್‌ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ ನಿಮ್ಮ ಹತ್ತಿರ ಇರುವ ಇ-ಟಾಯ್ಲೆಟ್ ಕುರಿತು ಈ ಆ್ಯಪ್‌ ಮಾಹಿತಿ ನೀಡುತ್ತದೆ. ಜೊತೆಗೆ ಆ ನಿರ್ದಿಷ್ಟ ಶೌಚಾಲಯ ಭಾರತೀಯ ಶೈಲಿಯದ್ದೋ ಅಥವಾ ಪೌರಾತ್ಯ ಶೈಲಿಯಲ್ಲದ್ದೋ ಎಂಬುದರ ಕುರಿತೂ ಈ ಆ್ಯಪ್‌ ಮಾಹಿತಿ ನೀಡುತ್ತದೆ.

ಒಟ್ಟು 750 ಸಾರ್ವಜನಿಕ ಶೌಚಾಲಯಗಳ ಕುರಿತು ಈ ಆ್ಯಪ್‌ ಮಾಹಿತಿ ಹೊಂದಿದ್ದು, ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಇದು ತುಂಬ ಅನುಕೂಲವಾಗಲಿದೆ ಎಂದು ಇಲಾಖೆ ತಿಳಿಸಿದೆ.

click me!