
ಬೆಂಗಳೂರು(ಜೂ.30): ರೈಲ್ವೇ ಇಲಾಖೆಯ RAC(ರಿಸರ್ವೇಶನ್ ಅಗೇನಸ್ಟ್ ಕ್ಯಾನ್ಸಲೇಶನ್) ಮತ್ತು ವೇಟಿಂಗ್ ಲಿಸ್ಟ್ ಪದ್ದತಿ ಕುರಿತು ರೈಲು ಪ್ರಯಾಣಿಕರು ತಿಳಿದುಕೊಳ್ಳಬೇಕಿರುವುದು ಅವಶ್ಯ.
ನಿರ್ದಿಷ್ಟ ರೈಲೊಂದರ ಎಲ್ಲ ಸೀಟುಗಳು ಬುಕ್ ಆದ ಬಳಿಕ ಇಲಾಖೆ RAC ಲಿಸ್ಟ್ ಬಿಡುಗಡೆ ಮಾಡುತ್ತದೆ. ಅದಾದ ಬಳಿಕ ವೇಟಿಂಗ್ ಲಿಸ್ಟ್’ನ್ನು ಬಿಡುಗಡೆ ಮಾಡುತ್ತದೆ.
ಯಾರಾದರೂ ಪ್ರಯಾಣಿಕರು ತಮ್ಮ ರಿಸರ್ವೇಶನ್ ರದ್ದುಗೊಳಿಸಿದರೆ, ಅದೇ ರೈಲಿನಲ್ಲಿ ಪ್ರಯಾಣಿಸಲು ಬಯಸಿರುವ ಬೇರೋಬ್ಬ ಪ್ರಯಾಣಿಕರಿಗೆ ಆ ಸೀಟನ್ನು ರಿಸರ್ವ್ ಮಾಡುವ ಪದ್ದತಿ ಇದೆ.
ಸೀಟು ರಿಸರ್ವ್ ಮಾಡಿರುವ ಪ್ರಯಾಣಿಕನಿಗೆ ವೇಟಿಂಗ್ ಲಿಸ್ಟ್ ಎಂದು ತೋರಿಸಿದರೆ, ಆತನಿಗೆ ಇನ್ನೂ ಸೀಟು ಕನ್ಫರ್ಮ್ ಆಗಿಲ್ಲ ಎಂದು ಅರ್ಥ.
ಒಂದು ವೇಳೆ ಸೀಟು ರಿಸರ್ವ್ ಮಾಡಿರುವ ಪ್ರಯಾಣಿಕನಿಗೆ ಆನ್’ಲೈನ್’ನಲ್ಲಿ RAC ಎಂದು ತೋರಿಸಿದರೆ ಆತನ ಸೀಟು ಮತ್ತೋರ್ವ ಪ್ರಯಾಣಿಕನೊಂದಿಗೆ ಶೇರ್ ಆಗಿದೆ ಎಂದು ಅರ್ಥ.
ಆದರೆ ಒಂದು ವೇಳೆ ರಿಸರ್ವೇಶನ್ ಕನ್ಫರ್ಮ್ ಇರುವ ಪ್ರಯಾಣಿಕ ತನ್ನ ಟಿಕೆಟ್ ರದ್ದುಗೊಳಿಸಿದರೆ, ಆ ಸೀಟನ್ನು RAC ಇರುವ ಪ್ರಯಾಣಿಕರಿಗೆ ಆದ್ಯತೆ ಮೇರೆಗೆ ನೀಡಲಾಗುತ್ತದೆ.
ಇದಾದ ಬಳಿಕ ನಿರ್ದಿಷ್ಟ ರೈಲಿನ ಪ್ರಯಾಣಿಕರ ಸಂಪೂರ್ಣ ಲಿಸ್ಟ್ ತಯಾರಿಸಿ ಅದನ್ನು ರೈಲಿನ ಬೋಗಿಗೆ ಅಂಟಿಸಲಾಗುತ್ತದೆ. ಇದಾದ ಬಳಿಕ ಟಿಕೆ್ ಬುಕ್ ಮಾಡುವ ಪ್ರಯಾಣಿಕರ ಹೆಸರನ್ನು ಲಿಸ್ಟ್’ನಿಂದ ಕೈ ಬಿಡಲಾಗುತ್ತದೆ.
ಆದರೆ ಇದೆಲ್ಲದರ ಅರಿವಿದ್ದರೂ ಪ್ರಯಾಣಿಕರು ತಾವು ಬುಕ್ ಮಾಡಿದ ರೈಲು ಹತ್ತಲು ಫ್ಲ್ಯಾಟ್ ಫಾರಂಗೆ ಧಾವಿಸಿ ಹೋಗುತ್ತಾರೆ. ಕೊನೇ ಕ್ಷಣದಲ್ಲಿ ಯಾರು ತಮ್ಮ ಪ್ರಯಾಣ ರದ್ದು ಮಾಡಿದ್ದಾರೋ, ಎಷ್ಟು ಸೀಟು ಖಾಲಿ ಇದೆಯೋ, ಗೊತ್ತಾಗುವುದಿಲ್ಲ. ಅದರ ಲೆಕ್ಕವೆಲ್ಲಾ TC ಬಳಿ ಇರುತ್ತದೆ. ಅವನೇ ಆಗ ನಮ್ಮನ್ನು ಊರು ತಲುಪಿಸುವ ನಾವಿಕನಂತೆ ಕಾಣುತ್ತಾನೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.