ಟೋಕಿಯೋ ಮತ್ತು ಬೆಂಗಳೂರು ನಡುವಿನ ವಿಮಾನ ಸಂಚಾರವನ್ನು ಹೆಚ್ಚಿಸಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಜಪಾನ್ ಏರ್‌ಲೈನ್ಸ್ ನಿರ್ಧರಿಸಿವೆ. ವಾರಕ್ಕೆ ಐದು ದಿನ ವಿಮಾನಗಳು ಸಂಚರಿಸಲಿವೆ.
ದೇವನಹಳ್ಳಿ (ಆ.28): ಟೋಕಿಯೋ ಮತ್ತು ಬೆಂಗಳೂರು ಮಾರ್ಗದಲ್ಲಿ ಇನ್ನಷ್ಟು ವಿಮಾನಗಳನ್ನು ಹೆಚ್ಚಿಸುವುದಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಹಾಗೂ ಜಪಾನ್ ಏರ್‌ಲೈನ್ಸ್ (Japan Airlines) ಘೋಷಿಸಿದೆ. ಜಪಾನ್ ರಾಜಧಾನಿ ಟೋಕಿಯೋದಿಂದ ಬೆಂಗಳೂರಿಗೆ ವಾರದಲ್ಲಿ ಮೂರು ದಿನ ಪ್ರಯಾಣಿಸುತ್ತಿರುವ ಜಪಾನ್ ಏರ್‌ಲೈನ್ಸ್ ವಿಮಾನವು ಅಕ್ಟೋಬರ್ ಕೊನೆಯ ವಾರದಿಂದ 5 ದಿನ ಸಂಚರಿಸಲಿದೆ.
ದೇಶದ ಅತ್ಯಂತ ಕಠಿಣ ಜೈಲಿಗೆ ದರ್ಶನ್ ಶಿಫ್ಟ್, ಬಳ್ಳಾರಿ ಜೈಲಿನ ಇತಿಹಾಸ ತಿಳಿಯಲೇಬೇಕು!
undefined
ಟೋಕಿಯೋ, ಬೆಂಗಳೂರು ನಡುವೆ ಪ್ರಸ್ತುತ ವಾರಕ್ಕೆ ಮೂರು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದ್ದು ಪ್ರಯಾಣಿಕರ ಒತ್ತಡದಿಂದ ಅಕ್ಟೋಬರ್ ಕೊನೆಯ ವಾರದಿಂದ ಐದು ವಿಮಾನಗಳು ಹಾರಾಟ ನಡೆಸಲಿವೆ. 2022ರಲ್ಲಿ 23,532 ಹಾಗೂ 2023ರಲ್ಲಿ 62,959 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಬಿಐಎಎಲ್ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ತಿಳಿಸಿದ್ದಾರೆ.
ಬೆಂಗಳೂರು ರೈಲ್ವೆ ಸ್ಟೇಷನ್‌ಗೆ ಬರುವ ವಾಹನ ಸವಾರರಿಗೆ ಬ್ಯಾಡ್ ನ್ಯೂಸ್, ಪಾರ್ಕಿಂಗ್ ಶುಲ್ಕ ಕಡ್ಡಾಯ!
ಜಪಾನ್ ಏರ್‌ಲೈನ್ಸ್‌ರವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಾಗಿರುವುದು ಸಂತಸದ ವಿಷಯವಾಗಿದೆ. ಈ ಮೂಲಕ ದಕ್ಷಿಣ ಹಾಗೂ ಮಧ್ಯಭಾರತದ ಪ್ರಮುಖ ಅಂತಾರಾಷ್ಟ್ರೀಯ ಗೇಟ್ ವೇ ಆಗಿರುವ ಇಲ್ಲಿನ ವಿಮಾನ ನಿಲ್ದಾಣದ ಹಿರಿಮೆ ಇನ್ನಷ್ಟು ಹೆಚ್ಚಿದಂತಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.