
ನವದೆಹಲಿ: ವಿಶ್ವದ ಜನರು ಪ್ರವಾಸಕ್ಕೆ ತೆರಳಬೇಕಾದ್ರೆ ಮೊದಲು ಆಯ್ಕೆ ಮಾಡಿಕೊಳ್ಳುವ ದೇಶ ಅಂದ್ರೆ ಭಾರತ. ಇಲ್ಲಿ ನಿಮಗೆ ಸಾಹಸ, ವನ್ಯಜೀವಿ, ಪರಿಸರ, ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಎಲ್ಲಾ ಸ್ಥಳಗಳು ಇಲ್ಲಿ ನಿಮಗೆ ಸಿಗುತ್ತವೆ. ಭಾರತದಲ್ಲಿ ಅತ್ಯಧಿಕ ಬಿಸಿಲು ಹೊಂದಿರುವ ಪ್ರದೇಶಗಳೂ ಇವೆ. ಹಿಮಪಾತ ಆಗುವ ಸ್ಥಳಗಳಿವೆ. ಆಧ್ಯಾತ್ಮಿಕದತ್ತ ಹೆಚ್ಚು ಒಲವು ಹೊಂದಿರುವ ಜನರು ಮೊದಲು ಆಯ್ಕೆ ಮಾಡಿಕೊಳ್ಳುವ ದೇಶ ಭಾರತವಾಗಿದೆ. ಭಾರತದ ಸಾಂಸ್ಕೃತಿಕ ಇತಿಹಾಸ ಸಾವಿರಾರು ವರ್ಷಗಳ ಹಿನ್ನೆಲೆಯನ್ನು ಹೊಂದಿದೆ. ಇನ್ನು ವಿಶೇಷ ಅಂದ್ರೆ ಭಾರತದಲ್ಲಿ ಎಲ್ಲಾ ಧರ್ಮದ ಜನರು ನಿಮಗೆ ಸಿಗುತ್ತಾರೆ. ಹಾಗಾಗಿಯೇ ಭಾರತವನ್ನು ಶ್ರೀಮಂತ ರಾಷ್ಟ್ರ ಎಂದು ಕರೆಯಲಾಗುತ್ತದೆ. ಹಲವು ಕಾರಣಗಳಿಗಾಗಿ ಭಾರತಕ್ಕೆ ವಿದೇಶಿಗರು ಭೇಟಿ ನೀಡುತ್ತಿರುತ್ತಾರೆ.
ನಿಮಗೆ ಗೊತ್ತಾ? ಭಾರತದಲ್ಲಿರುವ ಈ ಪುಟ್ಟ ಗ್ರಾಮಕ್ಕೆ ವಿದೇಶಿ ಮಹಿಳೆಯರು ಗರ್ಭಿಣಿಯಾಗಲು ಬರುತ್ತಾರೆ. ಹಾಗಾದ್ರೆ ಈ ಗ್ರಾಮ ಇರೋದಾದ್ರೂ ಎಲ್ಲಿ? ಇಲ್ಲಿನ ಹಿನ್ನೆಲೆ ಏನು ಎಂಬುದರ ಮಾಹಿತಿ ಇಲ್ಲಿದೆ.
ಜಮ್ಮು ಕಾಶ್ಮೀರದ ಲಡಾಕ್‌ನಲ್ಲಿ ಈ ಪುಟ್ಟ ಗ್ರಾಮವಿದೆ. ಕಾರ್ಗಿಲ ಪ್ರದೇಶದಿಂದ 70 ಕಿಲೋ ಮೀಟರ್ ದೂರದಲ್ಲಿ ಆರ್ಯನ್ ವ್ಯಾಲಿ ಎಂದ ಹೆಸರಿನ ಗ್ರಾಮಕ್ಕೆ ವಿದೇಶಿ ಮಹಿಳೆಯರು ಗರ್ಭಿಣಿಯಾಗಲು ಬರುತ್ತಾರೆ. ಇಲ್ಲಿಯ ಪುರುಷರ ಜೊತೆ ಕೆಲ ಸಮಯ ಇರೋ ಮಹಿಳೆಯರು ಗರ್ಭಿಣಿಯಾಗುತ್ತಲೇ ತಮ್ಮ ದೇಶಕ್ಕೆ ಹೊರಡುತ್ತಾರೆ. ಇದೀಗ ಇದು ಒಂದು ರೀತಿಯ ವ್ಯವಹಾರವಾಗಿದೆ. ಯುರೋಪ್ ಭಾಗದ ಮಹಿಳೆಯರೇ ಹೆಚ್ಚು ಆರ್ಯನ್ ವ್ಯಾಲಿಗೆ ಬರುತ್ತಾರೆ.
ಇದರ ಹಿಂದಿನ ಕಾರಣ ಏನು?
ಲಡಾಕ್‌ನ ಆರ್ಯ ವ್ಯಾಲಿ ಎಂಬಲ್ಲಿ ಬ್ರೋಕಾಪ್ ಬುಡಕಟ್ಟು ಸಮುದಾಯದ ಜನರು ವಾಸಿಸುತ್ತಿದ್ದಾರೆ. ದಿ ಗ್ರೇಟ್ ಅಲೆಕ್ಸಾಂಡರ್ ರಾಜ ಭಾರತದಿಂದ ಹಿಂದಿರುಗಿ ಹೋಗುವಾಗ ಒಂದು ಸೇನಾ ತುಕಡಿ ಇಲ್ಲಿಯೇ ಉಳಿಯುತ್ತದೆ. ಇವರನ್ನು ಅಲೆಕ್ಸಾಂಡರ್ ವಂಶಸ್ಥರು ಮತ್ತು ಮೂಲ ಆರ್ಯನ್ನರು ಎಂದು ಹೇಳಲಾಗುತ್ತದೆ. ಹಾಗಾಗಿ ಯುರೋಪ್‌ಗೂ ಮತ್ತು ಆರ್ಯನ್ ವ್ಯಾಲಿಗೂ ನಿಕಟ ಸಂಪರ್ಕವಿದೆ.
ತಾಜ್‌ಮಹಲ್ ಮುಂದೆ ರೀಲ್ಸ್ ಮಾಡಿ, ಭಾರತಕ್ಕೆ ಬರಬೇಡಿ ಅಂತ ಹೇಳಿದ್ಯಾಕೆ ವಿದೇಶಿ ಮಹಿಳೆ?
ವಿದೇಶಿ ಮಹಿಳೆಯರು ತಮಗೆ ಹುಟ್ಟುವ ಮಗು ಅಲೆಕ್ಸಾಂಡರ್ ಸೇನೆಯಲ್ಲಿದ್ದ ಬಲಿಷ್ಠ ಸೈನಿಕರಂತೆ ಆಗಬೇಕು. ಸೈನಿಕರ ಹಾಗೆಯೇ ಸದೃಢ ಮೈಕಟ್ಟು, ನೀಲಿ ಕಣ್ಣುಗಳನ್ನು ಹೊಂದಬೇಕೆಂದು ಬಯಸುತ್ತಾರೆ. ಈ ಕಾರಣಕ್ಕಾಗಿ ವಿದೇಶದಿಂದ ಆರ್ಯನ್ ವ್ಯಾಲಿಗೆ ಬರುತ್ತಾರೆ. ಕೆಲ ವರ್ಷಗಳಿಂದ ಆರ್ಯನ್ ವ್ಯಾಲಿ ಪ್ರದೇಶದ ಬಗ್ಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಇದರಿಂದಲೂ ಇಲ್ಲಿಗೆ ಭೇಟಿ ನೀಡುವ ವಿದೇಶಿ ಮಹಿಳೆಯರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ.
ಇಲ್ಲಿಗೆ ಬರುವ ವಿದೇಶಿ ಮಹಿಳೆಯರು ತಮ್ಮೊಂದಿಗೆ ದೈಹಿಕ ಸಂಪರ್ಕ ಹೊಂದಲು ಪುರುಷರಿಗೆ ಭಾರೀ ಮೊತ್ತದ ಹಣ ನೀಡುತ್ತಾರೆ. ತಾವು ಗರ್ಭಿಣಿ ಎಂದು ಖಚಿತವಾಗುವರೆಗೂ ಇಲ್ಲಿಯೇ ಉಳಿದುಕೊಳ್ಳುತ್ತಾರೆ. ಗರ್ಭಿಣಿಯಾಗಿರೋದು ಧೃಢವಾಗುತ್ತಿದ್ದಂತೆ ಇಲ್ಲಿಂದ ಹೊರಡುತ್ತಾರೆ.
ಬ್ರೋಕಾಪ್ ಬುಡಕಟ್ಟು ಸಮುದಾದಯದ ಜನರು ತಮ್ಮನ್ನು ಆರ್ಯರ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಇಲ್ಲಿಯ ಜನರ ಎತ್ತರ, ದೈಹಿಕ ರಚನೆ, ಕೆಲವು ಕಥೆಗಳು ಮತ್ತು ಜಾನಪದ ಕಥೆಗಳ ಆಧಾರದ ಮೇಲೆ ಅವರು ಶುದ್ಧ ಆರ್ಯರು ಎಂದು ಹೇಳಿಕೊಳ್ಳುತ್ತಾರೆ. ಪ್ರೆಗ್ನೆನ್ಸಿ ಟೂರಿಸಂ ಎಂಬುದು ಕೇವಲ ಕಾಲ್ಪನಿಕ ಕಥೆ ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.