Flight Journey: ವಿಮಾನದಲ್ಲಿ ದೌರ್ಜನ್ಯವಾದರೆ ಫೈಟ್ ಮಾಡೋದು ಹೇಗೆ?

By Suvarna News  |  First Published Jan 5, 2023, 3:25 PM IST

ವಿಮಾನ ಪ್ರಯಾಣ ಹೆಚ್ಚು ಆರಾಮದಾಯಕ ಹಾಗೂ ಸಮಯ ಉಳಿಸುವಂತಹದ್ದು. ಈಗಿನ ದಿನಗಳಲ್ಲಿ ಇಲ್ಲೂ ದೌರ್ಜನ್ಯ ಏರಿಕೆಯಾಗ್ತಿದೆ. ಪ್ರಯಾಣಿಕರ ಮೇಲೆ, ಗಗನ ಸಖಿಯರ ಮೇಲೆ ಸಹ ಪ್ರಯಾಣಿಕರು ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಆ ಸಮಯದಲ್ಲಿ ಮೌನವಾಗಿರುವ ಬದಲು ಕೆಲ ಕ್ರಮಕೈಗೊಳ್ಳುವುದು ಒಳ್ಳೆಯದು. 
 


ವಿಮಾನಗಳಲ್ಲಿ ಹಲ್ಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಲೈಂಗಿಕ ಮತ್ತು ಲೈಂಗಿಕವಲ್ಲದ ಅಪರಾಧ ಪ್ರಕರಣಗಳು ವಿಮಾನದಲ್ಲಿ ಈಗ ಏರಿಕೆಯಾಗ್ತಿದೆ. ನವೆಂಬರ್ ನಲ್ಲಿ ವೃದ್ಧೆ ಮೇಲೆ ಪಾನಮತ್ತ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ವಿಷ್ಯ ಈಗ ಚರ್ಚೆಯಲ್ಲಿದೆ. ಇದೊಂದೇ ಅಲ್ಲ, ಗಗನಸಖಿಯರ ಮೇಲೆ ನಡೆಯುವ ದೌರ್ಜನ್ಯಗಳು ಕೂಡ ಆಗಾಗ ವರದಿಯಾಗ್ತಿರುತ್ತದೆ.  ನಮ್ಮ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ನಾವೇ ಧ್ವನಿ ಎತ್ತಬೇಕೇ ವಿನಃ ಬೇರೆಯವರು ಬರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ವಿಮಾನದಲ್ಲಿ ಮಾತ್ರವಲ್ಲ ಮನೆ, ಸಾರ್ವಜನಿಕ ಪ್ರದೇಶ, ಶಾಲೆ – ಕಾಲೇಜು ಹೀಗೆ ಎಲ್ಲೆಂದರಲ್ಲಿ ಮಹಿಳೆ ಮೇಲೆ ದೌರ್ಜನ್ಯ ಹೆಚ್ಚಾಗ್ತಿದೆ.

ವಿಮಾನ (Plane) ದಲ್ಲಿ ದೌರ್ಜನ್ಯ ಏರಿಕೆಯಾಗಲು ಕೆಲ ಕಾರಣವಿದೆ. ಹಿಂದೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಸಂಖ್ಯೆ ಕಡಿಮೆಯಿತ್ತು. ಈಗ ಅನಿವಾರ್ಯ ಕಾರಣಕ್ಕೆ ಅನೇಕರು ವಿಮಾನದಲ್ಲಿ ಪ್ರಯಾಣ ಬೆಳೆಸ್ತಾರೆ. ಹಾಗಾಗಿ ವಿಮಾನ ಕಂಪನಿಗಳು ಪ್ರಯಾಣಿಕರ (Passenger) ಅನುಕೂಲಕ್ಕಾಗಿ ನೂರಾರು ವಿಮಾನಗಳ ಹಾರಾಟ ನಡೆಸ್ತವೆ. ಜನಸಂಖ್ಯೆ ಹೆಚ್ಚಾದಂತೆ ಅವರ ನಿಯಂತ್ರಣ ಕಷ್ಟವಾಗಿದೆ.

Knowledge : ವಿಮಾನದ ಸೀಟಿನ ಬಣ್ಣ ನೀಲಿ ಇರೋದ್ಯಾಕೆ?

Tap to resize

Latest Videos

ಇದಲ್ಲದೆ ವಿಮಾನದಲ್ಲಿ ನಡೆಯುವ ದೌರ್ಜನ್ಯಕ್ಕೆ ಸರಿಯಾದ ಪುರಾವೆ ಸಿಗುವುದಿಲ್ಲ. ಪ್ರಯಾಣಿಕರು ತಮ್ಮ ಕೆಲಸದಲ್ಲಿ ವ್ಯಸ್ತವಾಗಿರುವ ಕಾರಣ ಸಹ ಪ್ರಯಾಣಿಕರ ಸಮಸ್ಯೆಯನ್ನು ಆಲಿಸುವುದಿಲ್ಲ. ವಿಮಾನ ಕಂಪನಿಗಳು ದೌರ್ಜನ್ಯದ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳ್ತವೆ ನಿಜ. ಆದ್ರೆ ದೂರು ನೀಡಿ ಅದು ತನಿಖೆಯಾಗಲು ಅನೇಕ ದಿನ ಬೇಕು. ಈ ಸುತ್ತಾಟ ಬೇಡ ಎನ್ನುವ ಕಾರಣಕ್ಕೆ ಅನೇಕರು ದೂರು ನೀಡಲು ಹಿಂದೇಟು ಹಾಕ್ತಾರೆ.  

ಅಸೋಸಿಯೇಷನ್ (Association) ಆಫ್ ಫ್ಲೈಟ್ ಅಟೆಂಡೆಂಟ್ಸ್-ಸಿಡಬ್ಲ್ಯೂಎ 2017 ರಲ್ಲಿ ಈ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದೆ. ದಾಳಿಗೆ ಸಂಬಂಧಿಸಿದಂತೆ ದೂರು ನೀಡಿದ್ರೆ ಅದರ ಪರಿಣಾಮ ಏನು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಿದೆ. ಆದ್ರೆ ಸಮೀಕ್ಷೆಯಲ್ಲಿ ನಿರಾಶಾದಾಯಕ ಉತ್ತರ ಸಿಕ್ಕಿದೆ. ದೌರ್ಜನ್ಯಕ್ಕೆ ಒಳಗಾದವರು ದೂರು ನೀಡಿದ್ರೆ ಅದನ್ನು ಸರಿಯಾಗಿ ಟ್ರ್ಯಾಕ್ ಮಾಡುವುದಿಲ್ಲ. ಕಾನೂನು ಪ್ರಕ್ರಿಯೆಗಳನ್ನು ಮುರಿಯಲಾಗುತ್ತದೆ. ಕಾನೂನು ಅಧಿಕಾರಿಗಳು ಈ ವಿಷಯದಲ್ಲಿ ಸಂಬಂಧಪಟ್ಟವರನ್ನು ಭೇಟಿ ಮಾಡುತ್ತಿಲ್ಲ. ಕಾಲು ಭಾಗದಷ್ಟು ಫ್ಲೈಟ್ ಅಡೆಂಟರ್ಸ್ ದೌರ್ಜನ್ಯಕ್ಕೆ ಒಳಗಾಗ್ತಿದ್ದಾರೆ. ಬರೀ ಅಸಭ್ಯತೆ ಮಾತ್ರವಲ್ಲ ಅವರ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆಯುತ್ತದೆ ಎಂಬುದು ಸಮೀಕ್ಷೆಯಿಂದ ಪತ್ತೆಯಾಗಿದೆ.

ವಿಮಾನದಲ್ಲಿ ದೌರ್ಜನ್ಯಕ್ಕೊಳಗಾದ್ರೆ ಏನು ಮಾಡ್ಬೇಕು ಗೊತ್ತಾ? : ಮೊದಲೇ ಹೇಳಿದಂತೆ ಸಾಕ್ಷ್ಯ ಮುಖ್ಯವಾಗುತ್ತದೆ. ಸಾಧ್ಯವಾದಷ್ಟು ನೀವು ವಿಡಿಯೋ ಅಥವಾ ಫೋಟೋ ಸಾಕ್ಷ್ಯ ಇಡಬೇಕಾಗುತ್ತದೆ. ಸಹ ಪ್ರಯಾಣಿಕರಿಗೆ ವಿಡಿಯೋ ಮಾಡಲು ಸೂಚಿಸಬಹುದು. ಎರಡನೇಯದಾಗಿ ನೀವು ವಿಮಾನ ಸಿಬ್ಬಂದಿ ಅಥವಾ ಪೈಲೆಟ್ ಇನ್ ಕಮಾಂಡ್ ಗೆ ದೂರು ನೀಡಬೇಕು. ಅವರು ಇದ್ರ ಬಗ್ಗೆ ಕ್ರಮ ತೆಗೆದುಕೊಳ್ತಾರೆ. ನೀವು ವಿಮಾನದಿಂದ ಇಳಿದ ನಂತ್ರ ವಿಮಾನ ನಿಲ್ದಾಣದ ಭದ್ರತಾ ಕೊಠಡಿಗೆ ದೂರು ನೀಡಬಹುದು. ಅವರು ನಿಮಗೆ ಸಹಾಯ ಮಾಡುತ್ತಾರೆ. ಇದಲ್ಲದೆ ನೀವು ಕಾನೂನು ಹೋರಾಟ ನಡೆಸಬಹುದು. ನೀವು ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಬಹುದು. 

ಚುಮು ಚುಮು ಚಳೀಲಿ ಸಂಗಾತಿ ಜೊತೆ ಇಂಥಾ Romantic Placeಗೆ ಹೋಗಿಲ್ಲಾಂದ್ರೆ ಹೇಗ್ ಹೇಳಿ

ನೀವು ನೀಡಿದ ದೂರನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ. ಅಪರಾಧ ಯಾವ ಹಂತದಲ್ಲಿ ಬರುತ್ತದೆ ಎಂಬುದನ್ನು ಗಮನಿಸಿ ನಂತ್ರ ಕ್ರಮಕೈಗೊಳ್ಳಲಾಗುವುದು.  ದೈಹಿಕ ಸನ್ನೆ, ಕಿರುಕುಳ, ಮದ್ಯ ಸೇವನೆ ಇವೆಲ್ಲವೂ ಒಂದನೇ ಹಂತದಲ್ಲಿ ಬರುತ್ತದೆ. ದೈಹಿಕ ನಿಂದನೆ, ಅನುಚಿತ ಸ್ಪರ್ಶಿ ಎರಡನೇ ಹಂತದಲ್ಲಿ ಬರುತ್ತದೆ. ಪ್ರಯಾಣಿಕರು ಅಥವಾ ವಿಮಾನದ ಆಸ್ತಿಗೆ ಹಾನಿ ಮಾಡುವುದು ಮೂರನೇ ಹಂತದಲ್ಲಿ ಬರುತ್ತದೆ. ವಿಚಾರಣೆ ನಂತ್ರ ತಪ್ಪು ಸಾಬೀತಾದ್ರೆ ಅಪರಾಧಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ವಿಮಾನಯಾನ ಸಂಸ್ಥೆಯು 3 ತಿಂಗಳಿಂದ ಜೀವಿತಾವಧಿಯವರೆಗೆ ವಿಮಾನ ಪ್ರಯಾಣವನ್ನು ನಿಷೇಧಿಸಬಹುದು. ಇದನ್ನು ನೋ ಫ್ಲೈ ಲಿಸ್ಟ್ ಎಂದೂ ಕರೆಯುತ್ತಾರೆ.
 

click me!