ಫ್ಯಾಂಟಸಿ ಫ್ಲೈಯಿಂಗ್‌: ವಿಮಾನವೇರಿ ನಲಿಯೋ ಪರಿ ಇದು!

By Suvarna News  |  First Published Dec 27, 2020, 9:04 AM IST

2020 ಪ್ರವಾಸಿಗರ ಪಾಲಿಗೆ ನಿರಾಸೆಯ ವರ್ಷ.ಕೊರೋನಾ ಕಾರಣಕ್ಕೆ ಮನೆಯೊಳಗೇ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆ. ಈ ಎಲ್ಲದರ ನಡುವೆ ವಿಮಾನಯಾನ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎಂಬ ಪ್ರಯಾಣಿಕರಿಗೆ ಕೆಲವು ವಿಮಾನಯಾನ ಸಂಸ್ಥೆಗಳು ಹೊಸ ಕೊಡುಗೆಯೊಂದನ್ನು ನೀಡಿವೆ.ಅದೇ ಫ್ಯಾಂಟಸಿ ಫ್ಲೈಯಿಂಗ್‌. 


ಕಳೆದ ಸಾಲಿನ ಡಿಸೆಂಬರ್‌ ತಿಂಗಳನ್ನೊಮ್ಮೆಸ್ವಲ್ಪನೆನಪಿಸಿಕೊಳ್ಳಿ. 2020 ಎಂಬ ಹೊಸ ವರ್ಷಕ್ಕೆ ಅದೆಷ್ಟು ಯೋಜನೆಗಳನ್ನುಹಾಕಿಕೊಂಡಿದ್ರಿ ಅಲ್ವಾ? ಅದ್ರಲ್ಲೂಪ್ರವಾಸಪ್ರಿಯರುಅದೆಷ್ಟು ಊರು,ದೇಶ ಸುತ್ತಬೇಕು ಎಂಬ ಯೋಜನೆ ಹಾಕಿಕೊಂಡಿದ್ದರೋ ಏನೋ! ಆದ್ರೆ 2020 ಹೋಮ್‌ ಕ್ವಾರಂಟೈನ್‌ನಲ್ಲೇ ಕಳೆದು ಹೋಗಿದೆ.ಇಡೀ ವಿಶ್ವದಲ್ಲಿರೋ ಜನರಿಗೆ ಪ್ರಕೃತಿಯೇ ನೀಡಿರೋ ಗೃಹಬಂಧನ! ಹೌದು,ಕೊರೋನಾ ಎಂಬ ಹೆಮ್ಮಾರಿ 2020ರ ಕನಸು,ಯೋಜನೆಗಳನ್ನುನುಂಗಿ ಹಾಕಿದೆ.ಕಾಲಿಗೆ ಗಾಲಿ ಕಟ್ಟಿಕೊಂಡವರಂತೆ ಹೊಸ ಊರು,ದೇಶ ಎಂದು ಸುತ್ತುತ್ತಿದ್ದವರಿಗಂತೂ ಈ ವರ್ಷ ಸಿಕ್ಕಾಪಟ್ಟೆ ಬೋರ್‌ ಆಗಿರೋದಂತೂ ನಿಜ.ಪ್ರವಾಸವನ್ನೇ ಹವ್ಯಾಸ ಮಾಡಿಕೊಂಡವರು ಪ್ರವಾಸ ಭಾಗ್ಯವಿಲ್ಲದೆ ಸೊರಗಿ ಹೋಗಿದ್ದಾರೆ ಕೂಡ.ವಿದೇಶಗಳು ಪ್ರವಾಸಿಗರ ಭೇಟಿಗೆ ವಿಧಿಸಿರೋ ನಿಷೇಧ,ಅಂತಾರಾಷ್ಟ್ರೀಯ ಸಂಚಾರ ಸೇವೆಗಳ ಸ್ಥಗಿತ ಕೆಲವು ಪ್ರವಾಸಪ್ರಿಯರನ್ನುಕಂಗೆಡಿಸಿ ಬಿಟ್ಟಿತ್ತು.ಇನ್ನೊಂದೆಡೆ ವಿಮಾನಗಳು ಆಕಾಶಕ್ಕೇರದೆ ನಿಂತ ನೆಲ್ಲದಲ್ಲೇ ಖಾಲಿ ಕುಳಿತಿದ್ದವು.ಇಂಥ ಕಠಿಣ ಸಮಯದಲ್ಲೇ ಕೆಲವು ಏರ್‌ಲೈನ್‌ಗಳು ಪ್ರವಾಸಿಗರಿಗೆ ವಿನೂತನ ಅವಕಾಶವೊಂದನ್ನುಸೃಷ್ಟಿಸಿದವು.ಅದೇ ʼಫ್ಲೈಟ್ಸ್‌  ಟು ನೋವೇರ್‌ʼ.ಅರೇ, ಇದೇನಿದು ಅನ್ನುತ್ತೀರಾ? ನೀವು ಮಾಲ್‌ಗಳಲ್ಲಿ ಮಕ್ಕಳ ಪ್ಲೇ ಏರಿಯಾಕ್ಕೆ ಭೇಟಿ ನೀಡಿದ್ದರೆ,ಅಲ್ಲೊಂದು ಪುಟ್ಟ ವಿಮಾನಾಕೃತಿ ನೋಡಿರಬಹುದು.ಅದರೊಳಗೆ ಕುಳಿತ್ರೆ ಆಕಾಶದಲ್ಲಿ ಹಾರಾಡುತ್ತಿರೋ ಅನುಭವ ಮಕ್ಕಳಿಗೆ ಧಕ್ಕುತ್ತದೆ. ಇದನ್ನು ಫ್ಯಾಂಟಸಿ ಫ್ಲೈಯಿಂಗ್‌ ಎನ್ನುತ್ತಾರೆ.ಇದೇ ಥಿಯರಿಯನ್ನು ಈ ವರ್ಷ ಅನೇಕ ಏರ್‌ಲೈನ್ಸ್‌ಗಳು ಅಳವಡಿಸಿಕೊಂಡು,ವಾಯುಯಾನ ಮಿಸ್‌ ಮಾಡ್ಕೊಳ್ಳುತ್ತಿದ್ದ ಪ್ಯಾಸೆಂಜರ್‌ಗೆ ಖುಷಿಯ ಅನುಭವ ನೀಡಿವೆ.

ಪತಿ, ಮಗನೊಂದಿಗೆ ಮರುಭೂಮಿಯಲ್ಲಿ ಸಾನಿಯಾ ಮಿರ್ಜಾ ಮೋಜು, ಮಸ್ತಿ!

Tap to resize

Latest Videos

undefined

ಏನಿದು ಫ್ಲೈಟ್ಸ್‌ ಟು ನೋವೇರ್‌?
ಇದು ವಾಯುಯಾನ ಕ್ಷೇತ್ರದ 2020ರ ಹೊಸ ಟ್ರೆಂಡ್‌. ಈ ವರ್ಷ ವಿಮಾನವೇರಲು ಆಗಿಲ್ಲವೆಂದು ಬೇಸರಪಟ್ಟುಕೊಳ್ಳುತ್ತಿರೋರಿಗೆ ಹಾರಾಟದ ಅನುಭವ ನೀಡಲು ಏರ್‌ಲೈನ್ಸ್‌ಗಳು ಪ್ರಾರಂಭಿಸಿದ ವಿನೂತನ ಕಾರ್ಯಕ್ರಮ.ಹೆಸರಲ್ಲೇ ಅರ್ಥವೂ ಅಡಗಿದೆ. ಪ್ಯಾಸೆಂಜರ್‌ ವಿಮಾನವೇನೂ ಹತ್ತುತ್ತಾರೆ, ಅವರಿಗೆ ಟ್ರಾವೆಲ್‌ ಮಾಡುತ್ತಿರೋ ಅನುಭವವೂ ಸಿಗುತ್ತೆ.ಆದ್ರೆ ಫ್ಲೈಟ್‌ ಟೇಕ್‌ ಆಫ್‌ ಆಗೋದಿಲ್ಲಅಥವಾ ಟೇಕ್‌ ಆಫ್‌ ಆದ್ರೂ ಬೇರೆ ಯಾವುದೇ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್‌ ಆಗೋದಿಲ್ಲ.ಬದಲಿಗೆ ಗಗನದಲ್ಲೊಂದು ಸುತ್ತು ಸುತ್ತಿ ಎಲ್ಲಿಂದ ಟೇಕ್‌ ಆಫ್‌ ಆಗಿತ್ತೋ ಅದೇ ನಿಲ್ದಾಣಕ್ಕೆ ಮರಳುತ್ತೆ. ಫ್ಲೈಟ್ಸ್‌ ಟು ನೋವೇರ್‌ನಲ್ಲಿ ಕೊರೋನಾ  ಸುರಕ್ಷತಾ ಕ್ರಮಗಳನ್ನು ಏರ್‌ಲೈನ್ಸ್‌ ಸಂಸ್ಥೆಗಳು ಕೈಗೊಂಡಿದ್ದ ಕಾರಣ ಪ್ರಯಾಣಿಕರು ಯಾವುದೇ ಭಯವಿಲ್ಲದೆ ವಿಮಾನವೇರಿದ್ದರು.2020ರಲ್ಲಿ ಈ ರೀತಿ ಫ್ಯಾಂಟಸಿ ಫ್ಲೈಯಿಂಗ್‌ ಕೈಗೊಂಡ ಏರ್‌ಲೈನ್ಸ್‌ಗಳ ಮಾಹಿತಿ ಇಲ್ಲಿದೆ. 

• ತೈವಾನ್‌ ಸಿವಿಲ್‌ ಏವಿಯೇಷನ್‌ ಆಡಳಿತ ಮಂಡಳಿ ಜುಲೈನಲ್ಲಿ ಫ್ಯಾಂಟಸಿ ಫ್ಲೈಟ್ಸ್‌ ಆಯೋಜಿಸಿತ್ತು.ಇಲ್ಲಿ ವಿಮಾನ ನೆಲಬಿಟ್ಟು ಮೇಲೇರಲ್ಲಿಲ್ಲ.ಇದ್ರಲ್ಲಿ ಪಾಲ್ಗೊಳ್ಳಲು ಇಚ್ಛಿಸೋ ಪ್ಯಾಸೆಂಜರ್‌ಗಳಿಗಾಗಿ ಒಂದು ಆನ್‌ಲೈನ್‌ ಡ್ರಾ ಏರ್ಪಡಿಸಲಾಗಿತ್ತು.ಇದ್ರಲ್ಲಿ ವಿಜೇತರಾದವರು ತಮ್ಮೊಂದಿಗೆ ಒಬ್ಬ ಅತಿಥಿಯನ್ನು ಕರೆತರಬಹುದಿತ್ತು.ಒಟ್ಟು 66 ಪ್ರಯಾಣಿಕರು ಈ ಫ್ಯಾಂಟಸಿ ಫ್ಲೈಟ್‌ ಏರಿದ್ದರು.ವಿಮಾನವೇರೋ ಮುನ್ನ ಏರ್‌ಫೋರ್ಟ್‌ನಲ್ಲಿ ಪ್ರಯಾಣಿಕ ಯಾವೆಲ್ಲ ಪ್ರಕ್ರಿಯೆಗಳನ್ನುಪೂರ್ಣಗೊಳಿಸಬೇಕು ಅದನ್ನೆಲ್ಲ ಇವರೂ ಮಾಡಬೇಕಿತ್ತು ಚೆಕ್‌ ಇನ್‌,ಬೋರ್ಡಿಂಗ್‌ ಪಾಸ್‌ ವಿತರಣೆ, ಭದ್ರತಾ ತಾಪಸಣೆ ಎಲ್ಲವನ್ನೂ ವಿಮಾನ ಹತ್ತೋ ಮುನ್ನ ಮಾಡಲಾಯ್ತು.ಆದ್ರೆ ವಿಮಾನ ಮಾತ್ರ ಟೇಕ್‌ ಆಫ್‌ ಆಗಲಿಲ್ಲ! 

ದೇಶದ ಮೊದಲ ಹಾಟ್‌ ಏರ್‌ ಬಲೂನ್‌ ಸಫಾರಿ

• ಆಗಸ್ಟ್‌ನಲ್ಲಿ ಜಪಾನ್‌ ಆಲ್‌ ನಿಪ್ಪೋನ್‌ ಏರ್‌ವೇಸ್‌ನ ಹವಾಯಿ ಥೀಮ್‌ ಫ್ಲೈಟ್ ಸೀಟಿಗಾಗಿ 5೦ ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು.ಆದ್ರೆ ಅಷ್ಟು ಜನರ ಹಾರಾಟದ ಕನಸನ್ನು ನನಸು ಮಾಡಲು ಸಾಧ್ಯವಾಗಲಿಲ್ಲ.ಕೆಲವೇ ಕೆಲವು ಪ್ರಯಾಣಿಕರಿಗೆ ಈ ಭಾಗ್ಯ ಸಿಕ್ಕಿತು.
• ತೈವಾನ್‌ ಇವಾ ಏರ್‌ ಆಯೋಜಿಸಿದ್ದ ಹಲೋ ಕಿಟ್ಟಿ ಥೀಮ್‌ ಫ್ಲೈಟ್‌ನ 3೦೦ ಸೀಟ್‌ಗಳು ಏರ್‌ಲೈನ್ಸ್‌ ಸಂಸ್ಥೆ ಈ ಬಗ್ಗೆ ಮಾಹಿತಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಬುಕ್‌ ಆಗಿದ್ದವು. 
•ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಏರ್‌ಲೈನ್‌  ಕ್ವಾಂಟಸ್ ‌ ರಮಣೀಯ ತಾಣಗಳ ಮೇಲೆ ಏಳು ಗಂಟೆಗಳ ಕಾಲ ಹಾರಾಟ ನಡೆಸೋ ಯೋಜನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ 1೦ ನಿಮಿಷಗಳಲ್ಲಿ ಈ ವಿಮಾನದ ಬ್ಯುಸಿನೆಸ್‌  ಕ್ಲಾಸ್‌, ಪ್ರೀಮಿಯಂ ಇಕಾನಾಮಿ ಹಾಗೂ ಇಕಾನಾಮಿ ಕ್ಲಾಸ್‌ನ ಎಲ್ಲ 134 ಟಿಕೇಟ್‌ಗಳು 10 ನಿಮಿಷಗಳಲ್ಲಿ ಬುಕ್‌ ಆಗಿದ್ದವು.ಅಕ್ಟೋಬರ್‌ 10ರಂದು ಸಿಡ್ನಿ ಏರ್‌ಪೋರ್ಟ್‌ನಿಂದ ಟೇಕ್‌ಆಫ್‌ ಆಗಿ ಏಳು ಗಂಟೆಗಳ ಕಾಲ ಹಾರಾಟ ನಡೆಸಿದ ಈ ವಿಮಾನ ಆ ಬಳಿಕ ಮರಳಿ ಸಿಡ್ನಿ ವಿಮಾನ ನಿಲ್ದಾಣದಲ್ಲೇ ಕೆಳಗಿಳಿಯಿತು.ತೈ ಏರ್‌ವೇಸ್‌  ಕೂಡ ನವೆಂಬರ್‌ನಲ್ಲಿ ಫ್ಯಾಂಟಸಿ ಫ್ಲೈಟ್‌ ಆಯೋಜಿಸಿತ್ತು.ಆದ್ರೆ ಈ ವಿಮಾನ ಮಾತ್ರ ಬ್ಯಾಂಕಾಕ್‌ ಸುವರ್ಣಭೂಮಿ ಏರ್‌ಫೋರ್ಟ್‌ನಿಂದ ಟೇಕ್‌ಆಫ್‌ ಆಗಿ 99 ಪ್ರೇಕ್ಷಣೀಯ ಸ್ಥಳಗಳ ಮೇಲೆ ಹಾರಾಟ ನಡೆಸಿ ಮರಳಿ ಬ್ಯಾಂಕಾಕ್‌ ಏರ್‌ಫೋರ್ಟ್‌ನಲ್ಲಿ ಕೆಳಗಿಳಿಯಿತು. 

ಪರ್ವತಗಳು ಅಪಾಯದಲ್ಲಿವೆ; ಹೇಗೆ?

ಸಿಂಗಾಪುರ ಏರ್‌ಲೈನ್ಸ್‌ ಕೂಡ ಅಕ್ಟೋಬರ್‌ ಕೊನೆಯ ವಾರದಲ್ಲಿ ಫ್ಯಾಂಟಸಿ ಫ್ಲೈಯಿಂಗ್‌ ಯೋಜನೆ ರೂಪಿಸಿತ್ತು.ಆದ್ರೆ ನಂತ್ರ ಈ ಯೋಚನೆ ಕೈಬಿಟ್ಟು ವಿಮಾನದಲ್ಲೇ ಪಾಪ್‌ ಅಪ್‌ ರೆಸ್ಟೋರೆಂಟ್‌ ತೆರೆಯಿತು. ಫ್ಯಾಂಟಸಿ ಫ್ಲೈಯಿಂಗ್‌ ವಾಯುಯಾನ ಪ್ರಿಯರಿಗೇನೋ ಖುಷಿ ನೀಡಿತು,ಆದ್ರೆ ಪರಿಸರಪ್ರಿಯರ ಕೆಂಗಣ್ಣಿಗೆ ಗುರಿಯಾಯ್ತು. ಈ ರೀತಿ ಸುಮ್ಮನೆ ವಿಮಾನ ಹಾರಾಟ ನಡೆಸೋದ್ರಿಂದ ಪರಿಸರದ ಮೇಲೆ ಅನಗತ್ಯ ಒತ್ತಡ ಬೀಳುತ್ತೆ ಎಂಬುದು ಅವರ ವಾದ. ಗಾರ್ಡಿಯನ್‌ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವರದಿ ಕೂಡ ಈ ವಾದಕ್ಕೆ ಪುಷ್ಟಿ ನೀಡಿತ್ತು. 

click me!