ಕ್ಯಾಬ್ ಡ್ರೈವರ್ ಮತ್ತು ಪ್ರಯಾಣಿಕರ ಮಧ್ಯೆ ಆಗಾಗ ಜಗಳ ಸಾಮಾನ್ಯ. ಸಣ್ಣ ವಿಷ್ಯಕ್ಕೆ ರಕ್ತ ಬರುವಂತೆ ಕಿತ್ತಾಡುವ ಜನರಿದ್ದಾರೆ. ಈ ಎಲ್ಲ ಗಲಾಟೆ ಬೇಡ್ವೇಬೇಡ ಅಂತ ಚಾಲಕನೊಬ್ಬ ರೂಲ್ಸ್ ಸಿದ್ಧಪಡಿಸಿದ್ದಾನೆ. ಅದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಸೋಶಿಯಲ್ ಮೀಡಿಯಾ ಫ್ಲಾಟ್ಫಾರ್ಮ್ ರೆಡ್ಡಿಟ್ (Social media platform Reddit ) ನಲ್ಲಿ ಕ್ಯಾಬ್ ಡ್ರೈವರ್ (Cab Driver) ರೂಲ್ಸ್ ಒಂದು ವೈರಲ್ ಆಗಿದೆ. ಈಗಿನ ದಿನಗಳಲ್ಲಿ ಕ್ಯಾಬ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಸಣ್ಣಪುಟ್ಟ ಪ್ರಯಾಣದಿಂದ ಹಿಡಿದು ದೂರದ ಪ್ರಯಾಣಕ್ಕೆ ಕ್ಯಾಬ್ ಅನುಕೂಲವಾಗಿದೆ. ಆನ್ಲೈನ್ ಫ್ಲಾಟ್ ಫಾರ್ಮ್ ನಲ್ಲಿ ಕ್ಯಾಬ್ ಬುಕ್ ಮಾಡಿದ್ರೆ ಪ್ರಯಾಣ ಸುಲಭ. ಕ್ಯಾಬ್ ಡ್ರೈವರ್ಸ್ ಪ್ರತಿ ದಿನ ಹತ್ತಾರು ಮಂದಿಯನ್ನು ನೋಡ್ತಿರುತ್ತಾರೆ. ಒಬ್ಬೊಬ್ಬರ ಸ್ವಭಾವ, ವರ್ತನೆ ಭಿನ್ನವಾಗಿರುತ್ತದೆ. ಅವರಿಗೆಲ್ಲ ತನ್ನ ರೂಲ್ಸ್ (Rules) ಹೇಳ್ತಾ ಕುಳಿತುಕೊಳ್ಳೋದು ಕಷ್ಟ. ಹಾಗಾಗಿ ಕ್ಯಾಬ್ ಡ್ರೈವರ್ ಒಬ್ಬ, ಪೇಪರ್ ಮೇಲೆ ರೂಲ್ಸ್ ಬರೆದು ಅದನ್ನು ಸೀಟ್ ಹಿಂದೆ ನೇತು ಹಾಕಿದ್ದಾನೆ. ಪ್ರಯಾಣಿಕರ್ಯಾರೋ ಅದ್ರ ಫೋಟೋ ಕ್ಲಿಕ್ಕಿಸಿ, ಅದನ್ನು ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೋಡ್ತಿದ್ದಂತೆ ಈ ಪೋಸ್ಟ್ ವೈರಲ್ ಆಗಿದೆ. ಡ್ರೈವರ್ ಕೆಲಸವನ್ನು ಕೆಲವರು ಶ್ಲಾಘಿಸಿದ್ರೆ ಮತ್ತೆ ಕೆಲವರು ವಿಪರೀತ ಎಂದಿದ್ದಾರೆ. ಪ್ರಯಾಣಿಕರು ಕಾರ್ ನಲ್ಲಿ ಸಭ್ಯತೆ ಕಾಪಾಡಿಕೊಳ್ಬೇಕು, ಗೌರವದಿಂದ ವರ್ತಿಸಬೇಕು ಎಂಬೆಲ್ಲ ಸಲಹೆ ಜೊತೆ ಕೊನೆಯಲ್ಲೊಂದು ಪಾಯಿಂಟ್ ಸೇರಿಸಿದ್ದಾರೆ. ಅದು ಹೆಚ್ಚು ಗಮನ ಸೆಳೆದಿದ್ದು, ಚರ್ಚೆಗೆ ಕಾರಣವಾಗಿದೆ.
ಮೂರು ಗಂಟೆ ತಡವಾಗಿ ಬಂದ ರೈಲು, ಕೊನೆಗೂ ಸಿಕ್ತು ನ್ಯಾಯ!
ಏನೆಲ್ಲ ಇದೆ ರೂಲ್ಸ್? : ಮೊದಲನೇಯದಾಗಿ, ನೀವು ಕಾರಿನ ಓನರ್ (Owner) ಅಲ್ಲ ಎಂದು ಬರೆಯಲಾಗಿದೆ. ಕಾರು ಓಡಿಸುತ್ತಿರುವ ವ್ಯಕ್ತಿ, ಕಾರಿನ ಓನರ್ ಎಂದು ಎರಡನೇ ಪಾಯಿಂಟ್ ಹಾಕಲಾಗಿದೆ. ಸಭ್ಯತೆಯಿಂದ ಮಾತನಾಡಿ, ಗೌರವ ಪಡೆಯಿರಿ, ಕಾರಿನ ಡೋರನ್ನು ನಿಧಾನವಾಗಿ ಹಾಕಿ ಎಂದು ಸೂಚನೆ ನೀಡಲಾಗಿದೆ. ನಿಮ್ಮ ಮನೋಭಾವವನ್ನು ನಿಮ್ಮ ಜೇಬಿನಲ್ಲಿ ಇರಿಸಿ. ದಯವಿಟ್ಟು ಅದನ್ನು ನಮಗೆ ತೋರಿಸಬೇಡಿ, ಏಕೆಂದರೆ ನೀವು ನಮಗೆ ಹೆಚ್ಚು ಹಣವನ್ನು ನೀಡುತ್ತಿಲ್ಲ ಎಂದು ಬರೆದಿದ್ದಾರೆ. ಕೊನೆಯಲ್ಲಿ ದಯವಿಟ್ಟು ಭಯ್ಯಾ (Bhaiya) ಎಂದು ನನ್ನನ್ನು ಕರೆಯಬೇಡಿ ಎಂದು ಸೂಚಿಸಿದ್ದಾರೆ. ನೋಟ್ ಎಂದು ರೆಡ್ ಕಲರ್ ನಲ್ಲಿ ಬರೆಯಲಾಗಿದ್ದು, ಅದರ ಮುಂದೆ ಸಮಯದ ಕಾರಣ ಹೇಳಿ ಫಾಸ್ಟ್ ಡ್ರೈವ್ ಗೆ ಪ್ರೋತ್ಸಾಹಿಸಬೇಡಿ ಎಂದೂ ವಿನಂತಿ ಮಾಡಿದ್ದಾರೆ.
ಏಳು ಪಾಯಿಂಟ್ (point) ಇರುವ ಈ ನೋಟ್ ನಲ್ಲಿ ಬಹುತೇಕ ವಿಷ್ಯಗಳು ಸೂಕ್ತವಾಗಿವೆ. ಅದನ್ನು ಬಳಕೆದಾರರು ಸಮರ್ಥಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕ ಪಾಲಿಸಬೇಕಾದ ಅಂಶಗಳು ಇದರಲ್ಲಿವೆ, ಆದ್ರೆ ಭಯ್ಯಾ ಎಂಬುದು ಮಾತ್ರ ವಿಚಿತ್ರವಾಗಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಭಯ್ಯಾ ಎಂದು ಯಾಕೆ ಕರೆಯಬಾರದು ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳಿದ್ದಾರೆ. ಭಯ್ಯಾ ಬದಲು ಏನೆಂದು ಕರೆಯಬೇಕು? ಡ್ರೈವರ್, ಅಂಕಲ್, ಬ್ರದರ್, ಯಾವುದು ಸೂಕ್ತ ಎಂಬುದು ನೆಟ್ಟಿಗರ ಪ್ರಶ್ನೆ.
ಮತ್ತೆ ಕೆಲವರು ಈ ಪೋಸ್ಟ್ ನೋಡಿ, ಇದು ಬೆಂಗಳೂರು (Bangalore) ಡ್ರೈವರ್ ಮಾಡಿರುವ ಕೆಲಸ ಎನ್ನುತ್ತಿದ್ದಾರೆ. ಬೆಂಗಳೂರು ಕ್ಯಾಬ್ ಡ್ರೈವರ್ ಗಳಿಗೆ ಕೋಪ ಹೆಚ್ಚು ಎಂಬ ಕಮೆಂಟ್ ಬಂದಿದೆ. ಡ್ರೈವರ್ ಕೂಡ, ತನ್ನ ಅಹಂಕಾರ (pride) ವನ್ನು ಪಾಕೆಟ್ ನಲ್ಲಿ ಇಟ್ಕೊಳ್ಬೇಕು ಎಂದಿದ್ದಾರೆ ನೆಟ್ಟಿಗರು.
ಸಾಮಾನ್ಯವಾಗಿ ಕ್ಯಾಬ್ ಚಾಲಕರನ್ನು ಹೇಗೆ ಕರೆಯಬೇಕು ಎಂಬುದು ತಿಳಿಯೋದಿಲ್ಲ. ಅವರ ಹೆಸರು ತಿಳಿಯದ ಕಾರಣ, ಭಯ್ಯಾ, ಅಣ್ಣಾ (Anna), ಬ್ರದರ್ (Brother) ಎಂದು ಕರೆಯುವವರ ಸಂಖ್ಯೆ ಹೆಚ್ಚಿದೆ. ಭಯ್ಯಾ ಅಂತ ಕರೆಸಿಕೊಳ್ಳೋದು ಅನೇಕರಿಗೆ ಇಷ್ಟವಿಲ್ಲ. ಭಾರತದ ಕೆಲ ಪ್ರದೇಶದಲ್ಲಿ ಅಣ್ಣ, ಭಯ್ಯಾ ಅಂದ್ರೆ ಜನರು ಕೋಪಗೊಳ್ತಾರೆ.