
ರಾಜಧಾನಿ ಬೆಂಗಳೂರು ಮಹಾನಗರದಿಂದ ವಿಜಯಪುರಕ್ಕೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಎರಡು ನಗರಗಳ ನಡುವಿನ ಅಂತರ 500 ಕಿ.ಮೀ.ಗೂ ಅಧಿಕವಾಗಿರೋದರಿಂದ ಬಹುತೇಕರು ರಾತ್ರಿ ಪ್ರಯಾಣಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ರಾತ್ರಿ ಪ್ರಯಾಣಕ್ಕೆ ಗೋಲಗುಂಬಜ್ ಎಕ್ಸ್‌ಪ್ರೆಸ್ (16535/16536) ಮತ್ತು ಯಶವಂತಪುರ-ವಿಜಯಪುರ ಪ್ಯಾಸೆಂಜರ್ (16547/16548) ರೈಲುಗಳಿಗೆ ಆದ್ಯತೆ ನೀಡುತ್ತಾರೆ. ಇದನ್ನು ಹೊರತಾಗಿಯೂ ಬಸವ್ ಎಕ್ಸ್‌ಪ್ರೆಸ್ (17307/17308) ರೈಲು ಸಹ ಲಭ್ಯವಿದ್ದು, ಆದ್ರೆ ದೀರ್ಘ ಪ್ರಯಾಣವಾಗಿರೋದರಿಂದ ಪ್ರಯಾಣಿಕರು ಹಿಂದೇಟು ಹಾಕುತ್ತಾರೆ.
ಈ ರೈಲುಗಳ ಹೊರತಾಗಿಯೂ ಮತ್ತೊಂದು ರೈಲು ನೇರವಾಗಿ ವಿಜಯಪುರ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರೈಲು ವಾರದಲ್ಲಿ ಒಂದು ದಿನ ಮಾತ್ರ ಸಂಚರಿಸುತ್ತದೆ. ಹಗಲು ಪ್ರಯಾಣಿಕರಿಗೆ ಈ ರೈಲ ಉತ್ತಮ ಎಂದು ಹೇಳಬಹುದು. ಈ ರೈಲಿನ ಕುರಿತು ಮಾಹಿತಿ ಇಲ್ಲಿದೆ.
ಈ ರೈಲು ಸೋಮವಾರ ತನ್ನ ಪ್ರಯಾಣವನ್ನು ಮೈಸೂರು ನಿಲ್ದಾಣದಿಂದ ಬೆಳಗ್ಗೆ 5.40ಕ್ಕೆ ಆರಂಭಿಸಿ, ಮರುದಿನ ಮಂಗಳವಾರ ಬೆಳಗ್ಗೆ 10.50ಕ್ಕೆ ತನ್ನ ಸಂಚಾರವನ್ನು ಮುಕ್ತಾಯಗೊಳಿಸುತ್ತದೆ. ಮೈಸೂರು ಮತ್ತು ಸಾಯಿನಗರ ಶಿರಡಿ ಪ್ರಯಾಣದ ನಡುವೆ ಈ ರೈಲು 25 ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.
ಪುನಃ ಬುಧವಾರ ರಾತ್ರಿ 12.25ಕ್ಕೆ ತನ್ನ ಪ್ರಯಾಣ ಆರಂಭಿಸಿ, ಗುರುವಾರ ರಾತ್ರಿ 12 ಗಂಟೆಗೆ ಅಂತಿನ ನಿಲ್ದಾಣ ಮೈಸೂರು ತಲುಪಿ ಸಂಚಾರ ಮುಗಿಸುತ್ತದೆ.
ಇದನ್ನೂ ಓದಿ: Bengaluru: ದೇಶದ ಮೊದಲ ಬುಲೆಟ್ ರೈಲಿಗೆ ಬೆಂಗಳೂರಿನ ಬಿಇಎಂಎಲ್‌ನಲ್ಲಿ ಬೋಗಿ ಉತ್ಪಾದನೆ
ಈ ರೈಲು ನಿಲುಗಡೆ ಹೊಂದಿರುವ ನಿಲ್ದಾಣಗಳು ಈ ರೀತಿಯಾಗಿವೆ
ಮೈಸೂರು, ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ ಜಂಕ್ಷನ್, ತುಮಕೂರು, ಅರಸಿಕೆರೆ ಜಂಕ್ಷನ್, ಬಿರೂರು ಜಂಕ್ಷನ್, ಚಿಕ್ಕಜಾಜೂರು ಜಂಕ್ಷನ್, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ಹೊಸಪೇಟೆ ಜಂಕ್ಷನ್, ಕೊಪ್ಪಳ, ಗದಗ ಜಂಕ್ಷನ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ, ನಿಂಬಾಳ, ಇಂಡಿ ರೋಡ್, ಸೋಲಾಪುರ ಜಂಕ್ಷನ್, ಕುರಡುವಾಡಿ, ದೌಂಡ್ ಜಂಕ್ಷನ್, ಅಹಿಲ್ಯನಗರ, ಬೇಲಾಪುರ, ಸಾಯಿನಗರ ಶಿರಡಿ
ಇದನ್ನೂ ಓದಿ: ಬೆಂಗಳೂರು ಹೈದರಾಬಾದ್ ಪ್ರಯಾಣ ಇನ್ನು 2 ಗಂಟೆ ಮಾತ್ರ, ಬುಲೆಟ್ ರೈಲು ಡಿಪಿಆರ್ ಸಿದ್ಧತೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.