ಅತಿ ಕಿರಿಯ ವಯಸ್ಸಿಗೆ 'ಕಾಶ್ಮೀರಕ್ಕೆ ಸೋಲೋ ರೈಡ್' ಹೋಗಿಬಂದ ದಾಖಲೆ ಮುಡಿಗೇರಿಸಿಕೊಂಡ ಪ್ರತೀಕ್ಷಾ!

By Sathish Kumar KH  |  First Published Feb 23, 2024, 6:32 PM IST

ಧಾರವಾಡದ ಪ್ರತೀಕ್ಷಾ ಅತಿ ಕಿರಿಯ ವಯಸ್ಸಿಗೆ ಕಾಶ್ಮೀರಕ್ಕೆ ಸೋಲೋ ರೈಡ್‌ (ಒಬ್ಬಂಟಿಯಾಗಿ ಕಾಶ್ಮೀರ ಪ್ರಯಾಣ) ಹೋಗಿಬಂದ ದಾಖಲೆಯನ್ನು ಮಾಡಿದ್ದಾರೆ.


ವರದಿ : ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಫೆ.23):
ಆಕೆ‌ ಈಗಷ್ಟೇ 18 ನೇ ವರ್ಷಕ್ಕೆ ಕಾಲಿಟ್ಟ ಯುವತಿ, ಆದರೆ ಆಕೆಯ ಧೈರ್ಯ ಮೆಚ್ಚುವಂತದ್ದೇ. ಯಾಕಂದ್ರೆ ಅವಳು ಬೈಕ್ ಮೇಲೆ ಒಬ್ಬಂಟಿಯಾಗಿ ಕಾಶ್ಮೀರಕ್ಕೆ ಹೋಗಿ ಬಂದಿರುವ ಸಾಧನೆಯನ್ನು ಮಾಡಿ, ಕರ್ನಾಟಕಕ್ಕೆ ಕೀರ್ತಿ ತಂದಿದ್ದಾಳೆ.

ಮನಸ್ಸೊಂದಿದಿದ್ದರೆ ಸಾಲದು‌. ಅದಕ್ಕೆ ತಕ್ಕ ಧೈರ್ಯ ಕೂಡ ಬೇಕು ಅಂದಾಗಲೇ ಅಂದುಕೊಂಡಿದ್ದು ಸಾರ್ಥಕ ಆಗುತ್ತೇ. ಅಂಥದ್ದೇ ಒಂದು ಧೈರ್ಯದ ಕೆಲಸ‌ ವಿದ್ಯಾಕಾಶಿ ಧಾರವಾಡದ ಈ ಯುವತಿ ಮಾಡಿದ್ದಾಳೆ‌. ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಬಳಿಯ‌ ನಿವಾಸಿಯಾದ ಪ್ರತೀಕ್ಷಾ ಹರವಿಶೆಟ್ಟರ್ ಎಂಬ 18 ವರ್ಷದ ಯುವತಿಯೇ ಹೊಸ ದಾಖಲೆಯೊಂದರ ಜೊತೆಗೆ ಸಾಧನೆ ಮಾಡಿದವಳು. ಬಿಸಿಎ ಓದುತ್ತಿರೋ ಈಕೆ ಕಳೆದ ಫೆಬ್ರವರಿ 13 ರಂದು ಧಾರವಾಡದಿಂದ ಕಾಶ್ಮೀರಕ್ಕೆ ಬೈಕ್ ಮೇಲೆ ಹೋಗಿ ಏಕಾಂಗಿಯಾಗಿ  ಸೊಲೋ ಬೈಕ್ ರೈಡಿಂಗ್ ಮೂಲಕ ಹೋಗಿ ಬಂದಿರೋ ಪ್ರತೀಕ್ಷಾ ಕಾಶ್ಮೀರದ ಲಾಲ್ ಚೌಕ್ ವರೆಗೆ ಕೇವಲ 9 ದಿನಗಳಲ್ಲಿ ಹೋಗಿ ಬಂದಿದ್ದಾಳೆ. 

Tap to resize

Latest Videos

ಕೊಡಗು ಜುಮ್ಮಾ ಮಸೀದಿಯಲ್ಲಿ ನಮಾಜ್ ಮಾಡಿದ ಮಹಿಳೆಗೆ 25 ವರ್ಷ ಬಹಿಷ್ಕಾರ; ಗಂಡನ ಅಂತ್ಯಕ್ರಿಯೆಗೂ ಅವಕಾಶವಿಲ್ಲ

ಸುಮಾರು 6 ಸಾವಿರ ಕಿಲೋ ಮೀಟರ್ ದೂರದ ಈ ರಸ್ತೆಯ ಕ್ರಮಿಸಿ ಬಂದಿರುವ‌ ಇವಳು, 10 ದಿನಗಳಲ್ಲಿ ಈ ಸಾಧನೆ ಮಾಡುವ‌ ಉದ್ದೇಶ ಹೊಂದಿದ್ದಳು‌. ಆದರೆ 9 ದಿನಗಳಲ್ಲೇ ಇದನ್ನ ಮಾಡಿದ್ದಾಳೆ. ಇನ್ನು ಒಬ್ಬಂಟಿ ಇದ್ದರೂ ಆಕೆ ರಾತ್ರಿ ಆರ್ಮಿ ಕ್ಯಾಂಪ್ ಗಳಲ್ಲೇ ಹಾಲ್ಟ್ ಮಾಡುತ್ತಿದ್ದಳು. ಅಲ್ಲದೇ ದಿನಕ್ಕೆ ಆಕೆ 500 ಕಿಲೋ ಮೀಟರದಿಂದ 700 ಕಿಲೋ ಮೀಟರ್ ಬೈಕ್ ರೈಡ್ ಮಾಡುತಿದ್ದಳು. ಇನ್ನು ಬೈಕ್ ಕೈಕೊಟ್ಟಾಗಲೂ ಕುಗ್ಗದೇ ಆಕೆ ತನ್ನ ಗುರಿ ಸಾಧಿಸಿದ್ದಾಳೆ.ಎಲ್ಲೇ ಹೋದರು ಕೂಡ ಆಕೆಗೆ ಜನರ ಸಹಕಾರ ಸಿಕ್ಕಿದೆ‌‌ ಅಂತಾ ಆಕೆಯೇ ಹೇಳುತ್ತಾಳೆ.

ಇನ್ನು ಇಲ್ಲಿಂದ ಕಾಶ್ಮೀರವರೆಗೆ ಹೊರಟಾಗ ಈಕೆಗೆ ಸಹಾಯ ಆಗಿದ್ದು ಜಿಪಿಎಸ್ ಲೊಕೇಷನ್. ಇದರ‌‌ ಸಹಾಯದಿಂದ ಆಕೆ ಕಾಶ್ಮೀರ ಮುಟ್ಟಿದ್ದು. ನಡು ರಸ್ತೆಯಲ್ಲಿ ಎಲ್ಲಾದರೂ ದಾರಿ ಗೊತ್ತಾಗದಿದ್ದಾಗ ಈಕೆಯ ಸಹೋದರಿ ಇವಳಿಗೆ ಜಿಪಿಎಸ್ ಮುಖಾಂತರ ದಾರಿ‌ ತೊರಿಸಿದ್ದಾಳೆ. ದಾಖಲೆ‌ ಮಾಡುವುದಕ್ಕಾಗಿಯೇ ಪ್ರತೀಕ್ಷಾ ಈ ಸೋಲೋ ರೈಡ್ ಮಾಡಿದ್ದಾಳಂತೆ. ಈ ಹಿಂದೆ 21 ವರ್ಷದ ಕೇರಳ ಯುವತಿ ಕಾಶ್ಮೀರವರೆಗೆ ಒಬ್ಬಂಟಿ ಹೋಗಿರುವ ದಾಖಲೆ‌ ಇದೆ.

ಈ ದಾಖಲೆಯ ನಂತರ ಇದೇ‌ ಪ್ರತೀಕ್ಷಾಳ ಸಹೋದರಿ ಕೋಮಲ್ 19 ವರ್ಷದವಳಿದ್ದಾಗ ಕಾಶ್ಮೀರಕ್ಕೆ ಸೋಲೋ ರೈಡ್‌ ಹೋಗಿಬಂದ ದಾಖಲೆ ಮಾಡಿದ್ದಳು. ಈಗ ಪ್ರತೀಕ್ಷಾ 18 ವರ್ಷದಲ್ಲಿದ್ದಾಗಲೇ ಒಬ್ಬಂಟಿಯಾಗಿ ಕಾಶ್ಮೀರಕ್ಕೆ ಹೋಗಿ ಬಂದ ಸಾಧನೆಯನ್ನು ಮಾಡಿದ್ದಾಳೆ. ಈಗ ಪ್ರತೀಕ್ಷಾ ಮಾಡಿದ ದಾಖಲೆ ಯಾರೂ ಮುರಿಯಲು ಆಗಲ್ಲ ಎಂಬ ಮಾತನ್ನು ಪ್ರತೀಕ್ಷಾಳ ಸಹೋದರಿ ಕೋಮಲ್ ಹೇಳಿದ್ದಾರೆ. ಜೊತೆಗೆ ತನ್ನ ಸಹೋದರಿ ಮಾಡಿದ ಸಾಧನೆಯನ್ನು ಕೊಂಡಾಡಿದ್ದಾಳೆ.

ಅಯೋಧ್ಯೆ ರೈಲಿಗೆ ಬೆಂಕಿ ಹಚ್ತೀನೆಂದ ಮುಸ್ಲಿಂ ವ್ಯಕ್ತಿ ಬೇರಾರೂ ಅಲ್ಲ, ಸ್ವತಃ ರೈಲ್ವೆ ಇಲಾಖೆ ನೌಕರ

ಸದ್ಯ ನಮ್ಮ ರಾಜ್ಯದ ಹೆಮ್ಮೆಯ ಯುವತಿ ಒಬ್ಬಂಟಿಯಾಗಿ ಕಾಶ್ಮೀರ ಲಾಲ್ ಚೌಕ್‌ಗೆ ಒಬ್ಬಂಟಿಯಾಗಿ‌ ಹೋಗಿ ಮುಟ್ಟಿ ಬಂದು ಹೊಸ‌ ದಾಖಲೆ ಬರೆದಿದ್ದಾಳೆ. ಇವಳ‌ ಈ ಸಾಧನೆ ಜನರು‌ ಕೊಂಡಾಡಿದ್ದಷ್ಟೇ ಅಲ್ಲ. ಇದು ಈ ದಾಖಲೆ ಪುಸ್ತಕದಲ್ಲಿ ದಾಖಲಾಗಬೇಕಿದೆ.

click me!