ಪ್ರತಿ ದಿನ ಶೂಟಿಂಗ್‌ಗಾಗಿ ದೇಶ ವಿದೇಶ ಸುತ್ತುತ್ತಲೇ ಇರುತ್ತಾಳೆ ಬಾಲಿವುಡ್‌ನ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ. ಇದಕ್ಕಾಗಿ ಈ ಪ್ಯಾಕಿಂಗ್ ತಲೆಬಿಸಿಯನ್ನು ಆಕೆ ಹೇಗೆ ಮ್ಯಾನೇಜ್ ಮಾಡುತ್ತಾಳೆ ಎಂಬುದನ್ನು ತಿಳಿದರೆ ನಮಗೂ ಅಲ್ಲಿ ಲಗೇಜನ್ನು ಕಡಿಮೆ ಮಾಡಿಕೊಳ್ಳಲು ಕೆಲ ಐಡಿಯಾಗಳು ಸಿಗುತ್ತವೆ. ದೀಪಿಕಾ ಲಗೇಜ್ ಬ್ಯಾಗ್‌ನಲ್ಲಿ ಏನೇನಿರುತ್ತವೆ ಎಂದರೆ...
ಎಲ್ಲಾದ್ರೂ ಟ್ರಾವೆಲ್ ಮಾಡೋದಂದ್ರೆ ಪ್ಯಾಕಿಂಗ್‌ದೇ ದೊಡ್ಡ ಸಮಸ್ಯೆ. ಅದರಲ್ಲೂ ಹುಡುಗಿಯರಿಗೆ ಎಷ್ಟು ಬಟ್ಟೆ ಇಟ್ಟುಕೊಂಡರೂ ಕಡಿಮೆ, ಎಷ್ಟು ಶೂ ಇಟ್ಟುಕೊಂಡರೂ ಎಲ್ಲ ಬಟ್ಟೆಗೆ ಮ್ಯಾಚ್ ಆಗುವಷ್ಟಾಗಲ್ಲ ಎಂದೆಲ್ಲ ತಲೆಬಿಸಿ. ಅದಕ್ಕೆ 3 ದಿನದ ಟ್ರಿಪ್‌ಗೆ ಅವರ ಲಗೇಜ್ ನೋಡಿದರೆ ಮನೆ ಬಿಟ್ಟು ಹೋಗುತ್ತಿದ್ದಾರೇನೋ ಎಂಬ ಅನುಮಾನ ಬರದಿರದು. ಅದರಲ್ಲೂ ಎಲ್ಲೇ ಹೋಗಬೇಕೆಂದರೂ ಅದಕ್ಕಾಗಿ ಶಾಪಿಂಗ್ ಕಡ್ಡಾಯ. ಹೋದಲ್ಲಿ ಯಾರು ತಾನೇ ಪರಿಚಯದವರಿರುತ್ತಾರೆ, ಅವರಿಗೆ ನಮ್ಮ ಬಟ್ಟೆ ಹೊಸದೋ ಹಳೆಯದೋ ಎಂದು ಹೇಗಾದರೂ ಗೊತ್ತಾಗುತ್ತದೆ ಎಂದು ಬಾಯ್‌ಫ್ರೆಂಡ್ ಸಮಾಧಾನ ಮಾಡಿದರೆ, ಫೋಟೋ ತೆಗೆದು ಫೇಸ್ಬುಕ್, ಇನ್ಸ್ಟಾಗೆ ಹಾಕುತ್ತೇವಲ್ಲ, ಅಲ್ಲಿ ಎಲ್ಲ ಈ ಬಟ್ಟೆ ನೋಡಿಬಿಟ್ಟಿರುತ್ತಾರೆ ಎಂಬ ತಲೆಬಿಸಿ ಅವರದು.
ಮಕ್ಕಳನ್ನು ಕರಕೊಂಡು ಪಿಕ್‌ನಿಕ್ ಹೋಗಬಹುದಾದ ತಾಣಗಳಿವು...
undefined
ನಮ್ಮಗಳ ಪಾಡೇ ಹೀಗಾದರೆ, ಸದಾ ಶೂಟಿಂಗ್, ಈವೆಂಟ್ಸ್ ಎಂದು ತಿರುಗಾಟದಲ್ಲಿರುವ ಸೆಲೆಬ್ರಿಟಿಗಳ ಪಾಡು ಹೇಗಿರಬಹುದು? ಹೋದಲ್ಲೆಲ್ಲ ಕ್ಯಾಮೆರಾಗಳು ಅವರ ಫೋಟೋ ತೆಗೆಯುತ್ತವೆ, ವಿಡಿಯೋ ಮಾಡುತ್ತವೆ- ಅವರ ಬಟ್ಟೆ, ವಾಚು, ಮೇಕಪ್, ಶೂ ಎಲ್ಲದರ ಬಗ್ಗೆಯೂ ಐವತ್ತೈವತ್ತು ಲೇಖನಗಳು ಬರುತ್ತವೆ. ಅಂದರೆ ಅವರು ಅದೆಷ್ಟು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಹೋಗಬೇಕು? ಬಹುಷಃ ಅವರ ಹಿಂದೆ ಒಂದು ಲಾರಿಯೇ ಹೋಗಬೇಕೇನೋ ಎಂದೆನಿಸುತ್ತದೆ. ಆದರೆ, ನಿಜವಾಗಿ ಇದನ್ನೆಲ್ಲ ಅವರು ಹೇಗೆ ಮ್ಯಾನೇಜ್ ಮಾಡುತ್ತಾರೆ, ಏನೇನು ಪ್ಯಾಕ್ ಮಾಡುತ್ತಾರೆ ಎಂಬ ಕುತೂಹಲಕ್ಕೆ ದೀಪಿಕಾ ಪಡುಕೋಣೆ ತೆರೆ ಎಳೆದಿದ್ದಾರೆ ನೋಡಿ. ಅವರ ಟ್ರಾವೆಲ್ ಲಗೇಜ್‌ನಲ್ಲಿ ಈ ವಸ್ತುಗಳಿರುತ್ತವೆಯಂತೆ.
ಮ್ಯೂಸಿಕ್ ಸಿಸ್ಟಂ
ದೀಪಿಕಾ ಎಲ್ಲೇ ಹೋದರೂ ತನ್ನ ಮನೆ ಹಾಗೂ ಕುಟುಂಬದವರಿರುವ ಎರಡರಿಂದ ಮೂರು ಫೋಟೋಗಳನ್ನು ತೆಗೆದುಕೊಂಡು ಹೋಗುತ್ತಾರಂತೆ. ಇದರೊಂದಿಗೆ ಸಣ್ಣದೊಂದು ಮ್ಯೂಸಿಕ್ ಸಿಸ್ಟಂ ಅವರ ತಿರುಗಾಟಕ್ಕೆ ಜೊತೆಗೂಡುತ್ತದೆ. ದೂರದ ಪ್ರಯಾಣ ಎಂದಾಗೆಲ್ಲ ಇವೆರಡನ್ನು ಮೊದಲು ಪ್ಯಾಕ್ ಮಾಡಿಕೊಳ್ಳುತ್ತಾರೆ ಡಿಂಪಲ್ ಬೆಡಗಿ.
ಪ್ರವಾಸ: ಸೆಕೆಂಡ್ ಸಿಟಿ ಟ್ರಾವೆಲಿಂಗ್‍ಗೆ ರೆಡಿನಾ ನೀವು?...
ಆಭರಣ ಹಾಾಗೂ ಬಟ್ಟೆ
ಎಲ್ಲ ಬಟ್ಟೆಗಳಿಗೂ ಆಗುವಂಥ ಕೆಲ ಚಂಕಿ ಜುವೆಲ್ಲರಿಗಳು ಹಾಗೂ ಯಾವುದರ ಮೇಲೂ ತೊಡಬಹುದಾದ ಬಾಲೆನ್ಸಿಯಾಗ ಜಾಕೆಟ್ಟನ್ನು ಎಲ್ಲ ಕಡೆ ತೆಗೆದುಕೊಂಡು ಹೋಗುತ್ತಾರೆ ದೀಪಿಕಾ.
ಬಿಳಿ ಶರ್ಟ್
ಇದು ದೀಪಿಕಾಗೆ ಫೇವರೇಟ್ ಅಂತೆ. ಕಾರಣ, ಇದನ್ನು ಸ್ಕರ್ಟ್, ಜೀನ್ಸ್, ಚಡ್ಡಿ ಯಾವುದರ ಜೊತೆ, ಯಾವ ಬಣ್ಣದ್ದರ ಜೊತೆ ಕೂಡಾ ಧರಿಸಬಹುದು. ಜಾಕೆಟ್ ಹಾಗೂ ಬಿಳಿ ಶರ್ಟೊಂದಿದ್ದರೆ ಟ್ರಾವೆಲ್ ಪ್ಯಾಕಿಂಗ್‌ನಲ್ಲಿ ಬಹಳಷ್ಟು ಬಟ್ಟೆಗಳನ್ನುಳಿಸಬಹುದಲ್ಲವೇ?
ಕಪ್ಪು ಬಣ್ಣದ ಪ್ಲ್ಯಾಸ್ಟಿಕ್ ಪ್ಯಾಂಟ್ ಹಾಗೂ ಬೋಹೋ ಜಾಕೆಟ್
ದೀಪಿಕಾಳ ಬಹಳಷ್ಟು ಫೋಟೋಗಳಲ್ಲಿ ಈ ಕಪ್ಪು ಪ್ಲ್ಯಾಸ್ಟಿಕ್ ಪ್ಯಾಂಟ್‌ಗಳನ್ನು ಗಮನಿಸಬಹುದು. ಟ್ರಾವೆಲಿಂಗ್‌ನಲ್ಲಿ ಬಿಳಿಯಷ್ಟೇ ಸಹಾಯಕ್ಕೆ ಬರುವುದು ಕಪ್ಪು ಬಣ್ಣ. ಏಕೆಂದರೆ ಇದರ ಜೊತೆ ಕೂಡಾ ಯಾವುದೇ ಬಣ್ಣಗಳನ್ನು ಮ್ಯಾಚ್ ಮಾಡಬಹುದು. ಕಪ್ಪೂ ಸೇರಿದಂತೆ ಯಾವುದೇ ಬಣ್ಣದ ಟಾಪ್‌ಗಳನ್ನು ಇದರೊಂದಿಗೆ ಹಾಕಬಹುದು. ಇನ್ನು ವಿವಿಧ ಬಣ್ಣಗಳ ಬೋಹೋ ಜಾಕೆಟ್ ಖಂಡಿತಾ ಫ್ಯಾಷನ್ ಸ್ಟೇಟ್‌ಮೆಂಟ್ ನೀಡುತ್ತದೆ.
ಫುಟ್‌ವೇರ್
ಸರಿಯಾದ ಫುಟ್‌ವೇರ್ ಇಲ್ಲದೆ ಯಾವ ಹುಡುಗಿಯೂ ಟ್ರಾವೆಲ್ ಮಾಡುವುದಿಲ್ಲ. ಅಂತೆಯೇ ದೀಪಿಕಾ ಕೂಡಾ ಪ್ರತೀ ಟ್ರಾವೆಲ್‌ಗೆ 3-4 ಫುಟ್‌ವೇರ್ ಇಟ್ಟುಕೊಳ್ಳಲು ಮರೆಯುವುದಿಲ್ಲ. ಬಿಳಿ ಸ್ನೀಕರ್ಸ್, ಕಪ್ಪು ಸ್ಟಿಲೆಟೋಸ್, 1 ಜೊತೆ ಸ್ಲಿಪ್ಪರ್ ಹಾಗೂ ಎಲ್ಲ ಬಟ್ಟೆಗೂ ಮ್ಯಾಚ್ ಆಗಬಲ್ಲ ಕಂದು ಬಣ್ಣದ ಸ್ಟೈಲಿಶ್ ಚಪ್ಪಲಿ ದೀಪ್ಸ್ ಜೊತೆ ದೇಶ ಸುತ್ತುತ್ತವೆ. ಇವಿಷ್ಟಿದ್ದರೆ ಎಂಥದೇ ಸಂದರ್ಭ ಹಾಗೂ ಬಟ್ಟೆಗೂ ಮ್ಯಾಚ್ ಮಾಡಬಹುದೆಂಬುದು ದೀಪಿಕಾ ಮಾತು.
ಓವರ್‌ಸೈಜ್‌ನ ಟಿ ಶರ್ಟ್ಸ್
ಓವರ್‌ಸೈಜ್‌ನ ಟಿ ಶರ್ಟ್‌ಗಳನ್ನು ಹಲವು ರೀತಿಯಲ್ಲಿ ತೊಡಬಹುದಾದ ಕಾರಣ, ದೀಪಿಕಾ ಇವನ್ನು ತನ್ನ ಟ್ರಾವೆಲ್ ಬ್ಯಾಗ್ ಹಾಕಿಕೊಳ್ಳಲು ಮರೆಯುವುದಿಲ್ಲ.
ಜಾಗರ್ಸ್ ಹಾಗೂ ಜೀನ್ಸ್
ಇವೆರಡಿದ್ದರೆ ಜಗತ್ತೇ ಸುತ್ತಬಹುದು. ರಿಪ್ಪ್ಡ್ ಜೀನ್ಸ್ ಹಾಗೂ ಇತರೆ ಪ್ರಿಂಟ್‌ನ ಜೀನ್ಸ್, ಜೊತೆಗೆ ಕಂಫರ್ಟ್‌ಗಾಗಿ ಒಂದೆರಡು ಜಾಗರ್ಸ್ ದಿೀಪಿಕಾ ಬ್ಯಾಗ್‌ನಲ್ಲಿರುತ್ತವೆ.