ಮದುವೆಗೆ ಮುನ್ನ ಸಂಬಂಧ ಬೆಳೆಸುವುದು, ಪರಸ್ಪರ ಒಟ್ಟಿಗೆ ಬಾಳ್ವೆ ನಡೆಸುವುದು ಈಗಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಲಿವ್ ಇನ್ ರಿಲೇಶನ್ಶಿಪ್ ಭಾರತದಲ್ಲೂ ಕಾಮನ್ ಆಗಿದೆ. ಆದ್ರೆ ಕೆಲ ದೇಶದಲ್ಲಿ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೂ ಕಠಿಣ ಶಿಕ್ಷೆ ಗ್ಯಾರಂಟಿ.
ಹಿಂದಿನ ಕಾಲದಲ್ಲಿ ಮದುವೆಗೆ ಮುನ್ನ ಸಂಗಾತಿ ಮುಖ ನೋಡುವುದು ಸಾಧ್ಯವಿರಲಿಲ್ಲ. ನಮ್ಮ ಅಜ್ಜಿ, ಮುತ್ತಜ್ಜಿಯರು ಮದುವೆಯ ಮಂಟಪದಲ್ಲಿ ಪತಿಯಾಗುವವನ ಮುಖ ನೋಡಿದ್ದಾರೆ. ಆದ್ರೆ ಕಾಲ ಸಂಪೂರ್ಣ ಬದಲಾಗಿದೆ. ಈಗ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಮಹಿಳೆ ಹಾಗೂ ಪುರುಷ ಇಬ್ಬರೂ ತಮ್ಮಿಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಭಾರತದಂತಹ ಸಂಪ್ರದಾಯಿಕ ದೇಶದಲ್ಲೂ ಲಿವ್ ಇನ್ ಗೆ ಅನುಮತಿಯಿದೆ. ಮದುವೆಯಾಗದೆ ಇಬ್ಬರು ಒಟ್ಟಿಗೆ ಜೀವನ ನಡೆಸಿದ್ರೆ ಯಾವುದೇ ಶಿಕ್ಷೆಯಾಗೋದಿಲ್ಲ. ಆದ್ರೆ ಈಗ್ಲೂ ವಿಶ್ವದಲ್ಲಿ ಲಿವ್ ಇನ್ ನಿಷೇಧವಿರುವ ಅನೇಕ ದೇಶವಿದೆ.
ಕೆಲ ದಿನಗಳ ಹಿಂದಷ್ಟೆ ಇಂಡೋನೇಷ್ಯಾ (Indonesia) ದಲ್ಲಿ ದೊಡ್ಡ ಬದಲಾವಣೆಯಾಗಿದೆ. ಇಂಡೋನೇಷ್ಯಾ ಸರ್ಕಾರ ಹೊಸ ಕಾನೂನನ್ನು ಅಂಗೀಕರಿಸಿದೆ. ಈ ಕಾನೂನಿನ ಅಡಿಯಲ್ಲಿ, ವಿವಾಹಪೂರ್ವ ಲೈಂಗಿಕತೆ ಮತ್ತು ಲಿವ್-ಇನ್ (Live-in ) ಸಂಬಂಧವನ್ನು ಅಪರಾಧವೆಂದು ಪರಿಗಣಿಸಲಾಗಿದೆ. ತಪ್ಪಿ ನಡೆದವರಿಗೆ ಶಿಕ್ಷೆ ನೀಡೋದಾಗಿ ಸರ್ಕಾರ ಹೇಳಿದೆ. ಇಂಡೋನೇಷ್ಯಾವನ್ನು ಹೊರತುಪಡಿಸಿ, ವಿವಾಹಪೂರ್ವ ಲೈಂಗಿಕತೆ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಷೇಧಿಸಿರುವ ಇತರ ದೇಶಗಳಾವುವು ಎಂಬುದನ್ನು ನಾವಿಂದು ಹೇಳ್ತೇವೆ.
Different Law : ಸಲಿಂಗಕಾಮಿಗಳಿಗೆ ಇಲ್ಲಿ ಮರಣದಂಡನೆ ಶಿಕ್ಷೆ!
ಕತಾರ್ (Qatar) : ಕತಾರ್ ನಲ್ಲಿ ಮದುವೆಯಾಗದೆ ಲೈಂಗಿಕ ಸಂಬಂಧವನ್ನು ಬೆಳೆಸುವಂತಿಲ್ಲ. ದೇಶದಲ್ಲಿ ಮದುವೆಗೆ ಮುಂಚಿನ ಸಂಬಂಧವನ್ನು ಕಾನೂನಿನ ಅಡಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾರಾದರೂ ಈ ನಿಯಮವನ್ನು ಅನುಸರಿಸದಿದ್ದರೆ ಅವರಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಇರಾನ್ : ಇರಾನ್ ಕಾನೂನು ವಿಶ್ವದಾದ್ಯಂತ ಸುದ್ದಿಯಲ್ಲಿದೆ. ಇಲ್ಲಿ ಕೂಡ ವಿವಾಹಕ್ಕೆ ಮುನ್ನ ಲೈಂಗಿಕ ಸಂಬಂಧ ಬೆಳೆಸುವುದು ಅಥವಾ ಲಿವ್ ಇನ್ ನಲ್ಲಿ ಇರುವುದು ಅಪರಾಧ. ಒಂದ್ವೇಳೆ ಈ ತಪ್ಪು ಮಾಡಿ ಸಿಕ್ಕಿಬಿದ್ರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಇಲ್ಲಿನ ಶಿಕ್ಷೆ ಭಿನ್ನವಾಗಿದೆ. ಲಿವ್ ಇನ್ ಸಂಗಾತಿಗೆ 100 -100 ಛಡಿ ಏಟನ್ನು ಇಲ್ಲಿನ ಸರ್ಕಾರ ನೀಡುತ್ತದೆ. ಕೆಲವು ಸಂದರ್ಭದಲ್ಲಿ ಜೋಡಿಗೆ ಕಲ್ಲಿನ ಏಟು ನೀಡಲಾಗುತ್ತದೆ. ಶಾರೀರಿಕ ಸಂಬಂಧ ಬೆಳೆಸಲು ಇಲ್ಲಿ ಮದುವೆ ಅನಿವಾರ್ಯವಾಗಿದೆ.
AMBUBACHI MELA: ಈ ದೇವಿಯ ಮುಟ್ಟಿನ ದಿನಗಳ ಹಬ್ಬಕ್ಕೆ ಹರಿದು ಬರುವ ಸಾಧುಸಂತರು!
ಸೊಮಾಲಿಯಾ : ಆಫ್ರಿಕನ್ ದೇಶವಾದ ಸೊಮಾಲಿಯಾದಲ್ಲಿ ಇಸ್ಲಾಮಿಕ್ ಕಾನೂನನ್ನು ಪಾಲಿಸಲಾಗುತ್ತದೆ. ಷರಿಯಾ ಕಾನೂನಿನ ಪ್ರಕಾರ, ಈ ದೇಶದಲ್ಲಿಯೂ ಮದುವೆಗೆ ಮೊದಲು ಲೈಂಗಿಕತೆ ಸಂಬಂಧ ಬೆಳೆಸುವುದು ನಿಷೇಧಿಸಲಾಗಿದೆ. ಇಲ್ಲಿ ಸಿಕ್ಕಿಬಿದ್ದ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗುತ್ತದೆ. ಇಲ್ಲಿ 2008 ರಲ್ಲಿ ವ್ಯಭಿಚಾರದ ಅಪರಾಧದಲ್ಲಿ ಸಿಕ್ಕಿಬಿದ್ದ ಮಹಿಳೆಗೆ ಕಲ್ಲು ಹೊಡೆದು ಶಿಕ್ಷೆ ನೀಡಲಾಗಿತ್ತು.
ಪಾಕಿಸ್ತಾನ : ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹುದೂದ್ ಸುಗ್ರೀವಾಜ್ಞೆಯನ್ನು ಇಲ್ಲಿ ಅನುಸರಿಸಲಾಗುತ್ತದೆ. ಅದ್ರ ಪ್ರಕಾರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಆದ್ರೆ ಈವರೆಗೆ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಅವಿವಾಹಿತ ಜೋಡಿ ಸಿಕ್ಕಿಬಿದ್ದರೆ ಅವರಿಗೆ 5 ವರ್ಷಗಳವರೆಗೆ ಶಿಕ್ಷೆ ವಿಧಿಸುವ ಕಾನೂನೂ ಇಲ್ಲಿದೆ.
ಸೌದಿ ಅರೇಬಿಯಾ : ಸೌದಿ ಅರೇಬಿಯಾದಲ್ಲೂ ಯಾವುದೇ ವ್ಯಕ್ತಿ ಮದುವೆಗೆ ಮೊದಲು ದೈಹಿಕ ಸಂಬಂಧವನ್ನು ಬೆಳೆಸುವಂತಿಲ್ಲ. ಇಲ್ಲಿ ಯಾರಾದರೂ ಸಿಕ್ಕಿಬಿದ್ದರೆ, ಅವರ ಅಪರಾಧಗಳ ಬಗ್ಗೆ ಹೇಳಲು 4 ಸಾಕ್ಷಿಗಳು ಬೇಕು. ನಾಲ್ಕು ಸಾಕ್ಷಿ ಸಿಕ್ಕರೆ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುತ್ತದೆ. ಲಾಠಿ ಚಾರ್ಜ್ ಕೂಡ ಶಿಕ್ಷೆಯಲ್ಲಿ ಒಂದು.
ಅಪ್ಘಾನಿಸ್ತಾನ್ : ತಾಲಿಬಾನ್ ಆಡಳಿತ ಎಂದು ಕರೆಯುವ ಅಪ್ಘಾನಿಸ್ತಾನದಲ್ಲಿ ಷರಿಯಾ ಕಾನೂನು ಜಾರಿಯಲ್ಲಿದೆ. ಇಸ್ಲಾಮಿಕ್ ದೇಶದಲ್ಲಿ ವಿವಾಹಪೂರ್ವ ಲೈಂಗಿಕತೆ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಷೇಧಿಸಲಾಗಿದೆ. ಇಲ್ಲಿ ಸಿಕ್ಕಿಬಿದ್ದ ದಂಪತಿಯನ್ನು ಕಲ್ಲೆಸೆದು ಕೊಲ್ಲಲಾಗುತ್ತದೆ. ಜೋಡಿ ಕೊನೆಯುಸಿರೆಳೆಯುವವರೆಗೂ ಕಲ್ಲೆಸೆಯಲಾಗುತ್ತದೆ.