
ಮಹೀಂದ್ರಾ ಗ್ರೂಪ್ ಅಧ್ಯಕ್ಷ, ಆನಂದ್ ಮಹೀಂದ್ರಾ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಮತ್ತು ಅವರ ಟ್ವಿಟರ್ ಖಾತೆಯು ಅದಕ್ಕೆ ಪುರಾವೆಯಾಗಿದೆ. ಈ ಕೈಗಾರಿಕೋದ್ಯಮಿ ಸಾಮಾನ್ಯವಾಗಿ ಹಾಸ್ಯದ ಮತ್ತು ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇಂಥಾ ಪೋಸ್ಟ್‌ಗಳು ಯಾವುದೇ ಸಮಯದಲ್ಲಿ ಜನ ಮೆಚ್ಚುಗೆ ಪಡೆಯುತ್ತವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ (Social media) ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಸದ್ಯ ಈ ಬಿಲಿಯನೇರ್ ಅಲಕನಂದಾ ನದಿಯ (Alaknanda River) ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಸಾಮಾ
ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ಕ್ಷೇತ್ರದ ಬಳಿ ಉಗಮಿಸುವ ಅಲಕನಂದಾ ನದಿ ದೇಶದ ಪವಿತ್ರ ನದಿಗಳಲ್ಲಿ ಒಂದಾಗಿದೆ. ಇದು ಸುಮಾರು 229 ಕಿ. ಮೀ. ಹರಿದು ಮುಂದೆ ದೇವಪ್ರಯಾಗದಲ್ಲಿ ಭಾಗೀರಥಿ ನದಿಯನ್ನು ಕೂಡಿಕೊಂಡು ಗಂಗಾ ಎಂಬ ಹೆಸರನ್ನು ಪಡೆದುಕೊಳ್ಳುತ್ತದೆ. ಸದ್ಯ ಅಲಕನಂದಾ ಮತ್ತು ಭಾಗೀರಥಿ ನದಿಯ ಸಂಗಮದ ಅದ್ಭುತ ಫೋಟೋ ವೈರಲ್ ಆಗಿದ್ದು, ನೆಟಿಜನ್‌ಗಳು ಬೆರಗುಗೊಳಿಸುತ್ತಿದೆ. ಉದ್ಯಮಿ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಈ ಸುಂದರವಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 'ಅಲಕನಂದಾ ಎಂದರೆ ಫ್ಲೋ ಲೆಸ್, ಅದು ಯಾಕೆ ಎಂಬುದು ಅರ್ಥವಾಗುತ್ತಿದೆ' ಎಂದು ಫೋಟೋಗೆ ಕ್ಯಾಪ್ಶನ್ ನೀಡಲಾಗಿದೆ.
10 ರೂಗೆ 150 ಕಿ.ಮೀ ಮೈಲೇಜ್, 6 ಜನರ ಪ್ರಯಾಣಸಿಬಲ್ಲ ಎಲೆಕ್ಟ್ರಿಕ್ ಬೈಕ್‌ಗೆ ಮನಸೋತ ಮಹೀಂದ್ರ!
ದೇವಪ್ರಯಾಗದಲ್ಲಿ ಅಲಕನಂದಾ ಭಾಗೀರಥಿಯೊಂದಿಗೆ ಸಂಗಮಿಸುವ ಫೋಟೋ
ಮೇಲಿನಿಂದ ತೆಗೆದಿರುವ ಈ ಫೋಟೋ ಉತ್ತರಾಖಂಡದ ದೇವಪ್ರಯಾಗದಲ್ಲಿ ಭಾಗೀರಥಿಯೊಂದಿಗೆ ಸಂಗಮಿಸುವ ಮೊದಲು ನದಿಯ ಕಿರಿದಾದ ವಿಸ್ತಾರವನ್ನು ತೋರಿಸುತ್ತದೆ. ಈ ಚಿತ್ರವನ್ನು ಮೂಲತಃ ಟ್ರಾವೆಲಿಂಗ್ ಭಾರತ್ ಎಂಬ ಪುಟವು ಹಂಚಿಕೊಂಡಿದೆ ಮತ್ತು "ದೇವಪ್ರಯಾಗದಲ್ಲಿ ಭಾಗೀರಥಿ ನದಿಯನ್ನು ಭೇಟಿ ಮಾಡುವ ಮೊದಲು ಸುಂದರವಾದ (Beautiful) ಪರ್ವತಗಳ ನಡುವೆ ಅಲಕನಂದಾ ನದಿಯ ಅದ್ಭುತ ನೋಟ" ಎಂಬ ಶೀರ್ಷಿಕೆ ನೀಡಲಾಗಿದೆ.
ಸಂಸ್ಕೃತಿ ಸಚಿವಾಲಯದ ಉಪಕ್ರಮವಾದ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಧಿಕೃತ ಟ್ವಿಟರ್ ಪುಟವೂ ಚಿತ್ರವನ್ನು ಹಂಚಿಕೊಂಡಿದೆ. 'ನದಿಯು ಹರಿಯುವಂತೆ, ಅಲಕನಂದಾ ನದಿಯು ದೇವಪ್ರಯಾಗದಲ್ಲಿ ಭಾಗೀರಥಿಯಾಗಿ ಹರಿಯುವ ಸ್ಥಳದಿಂದ ಈ ಸುಂದರವಾದ ಚಿತ್ರವು ನಮಗೆ ಪ್ರಮುಖ ಟ್ರಾವೆಲ್‌ಗೋಲ್‌ಗಳನ್ನು ನೀಡುತ್ತಿದೆ. ನಿಮಗೆ ಹೇಗನಿಸುತ್ತಿದೆ' ಎಂಬ ಶೀರ್ಷಿಕೆ ನೀಡಲಾಗಿದೆ. ದೇವಪ್ರಯಾಗವು ಅಲಕನಂದಾ ಮತ್ತು ಭಾಗೀರಥಿ ನದಿಗಳು ಸಂಗಮಿಸುವ ಪಂಚ ಪ್ರಯಾಗದ ಸಂಗಮ ಸ್ಥಳಗಳಲ್ಲಿ ಒಂದಾಗಿದೆ. ಈ ಪವಿತ್ರ ಸ್ಥಳವು ತನ್ನ ರಮಣೀಯ ಸೌಂದರ್ಯ ಮತ್ತು ಧಾರ್ಮಿಕ ಪ್ರಾಮುಖ್ಯತೆಯಿಂದಾಗಿ ಪ್ರಪಂಚದಾದ್ಯಂತದ ಪ್ರವಾಸಿಗರನ್ನು (Tourists) ಆಕರ್ಷಿಸುತ್ತದೆ. ಅಲಕನಂದಾ ಮತ್ತು ಭಾಗೀರಥಿ ನದಿಗಳೆರಡೂ ಸಂಧಿಸುವುದರಿಂದ, ನಂತರ ಅವು ಗಂಗಾ ನದಿಯಾಗಿ ಹರಿಯುತ್ತವೆ.
ಫ್ರಾನ್ಸ್ ಯಾಕೆ? ಭಾರತದ ಅಳಿಯ ಸಿಕ್ಕಿಲ್ವಾ? ನೆಟ್ಟಿಗನ ಪ್ರಶ್ನೆಗೆ ಮಹೀಂದ್ರ ಖಡಕ್ ಉತ್ತರ!
ಪ್ರತಿ ದಿನ ಆರು ಕಿಲೋಮೀಟರ್ ನಡೆದು ಪುಸ್ತಕ ವಿತರಿಸುವ ರಾಧಾಮಣಿ
ಈ ಹಿಂದೆ ಆನಂದ್ ಮಹೀಂದ್ರಾ ಕೇರಳದ ಈ 63 ವರ್ಷದ ಗ್ರಂಥಪಾಲಕಿಯ ಬಗ್ಗೆ ವಿವರಿಸಿದ್ದು, ಆಕೆ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಹೇಳಿದ್ದರು. ದಿ ಬೆಟರ್ ಇಂಡಿಯಾ ಶೇರ್ ಮಾಡಿರುವ ಎರಡೂವರೆ ನಿಮಿಷಗಳ ಅವಧಿಯ ವೀಡಿಯೊವನ್ನು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದರು.
ಕೇರಳದ ಈ 63 ವರ್ಷದ ಮಹಿಳೆ ರಾಧಾಮಣಿ ಗ್ರಂಥಪಾಲಕಿ (Librarian)ಯಾಗಿದ್ದು, ದೂರದ ಹಳ್ಳಿಗಳಿಗೆ ಪುಸ್ತಕಗಳನ್ನು ಸಾಗಿಸಲು ಪ್ರತಿ ದಿನ ಆರು ಕಿಲೋಮೀಟರ್ ನಡೆದುಕೊಂಡು ಹೋಗುತ್ತಾರೆ. ಕೇರಳವು ಬಹುಶಃ ರಾಷ್ಟ್ರದೊಳಗೆ ಅತ್ಯಂತ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯವಾಗಿರಲು ಅನೇಕ ಕಾರಣಗಳಲ್ಲಿ ರಾಧಾಮಣಿ ಕೂಡಾ ಒಬ್ಬರು. ಇಂಥವರು ಯಾವತ್ತಿಗೂ ಸ್ಫೂರ್ತಿ (Inspiration)ಯಾಗಿರುತ್ತಾರೆ. ರಾಧಾಮಣಿಯವರ ಸಾಧನೆ ಪದಗಳನ್ನು ಮೀರಿ ಸ್ಪೂರ್ತಿದಾಯಕವಾಗಿದೆ. ಇಂದಿನ ಪ್ರಾಬಲ್ಯ ಜಗತ್ತಿನಲ್ಲಿ ಓದುವ ಸಮರ್ಪಣಾ ಭಾವ ಎದ್ದು ಕಾಣುತ್ತದೆ' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ 2,200ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 200ಕ್ಕೂ ಹೆಚ್ಚು ಮಂದಿ ಮರುಟ್ವೀಟ್ ಮಾಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.