Chikkamagaluru: ಕಾಫಿನಾಡಿನ ಗಿರಿ ಶ್ರೇಣಿಯಲ್ಲಿ ರಾರಾಜಿಸುತ್ತಿವೆ ಕುರಂಜಿ ಹೂ ಸೌಂದರ್ಯ

By Govindaraj S  |  First Published Aug 18, 2022, 10:41 PM IST

ಹೂ ಚೆಲುವೆಲ್ಲಾ ನಂದೆಂದಿತು ಅನ್ನೋ ಮಾತು ಅಕ್ಷರಶಃ ಸತ್ಯ. ಜಗತ್ತಿನ ಸೌಂದರ್ಯವನ್ನೆಲ್ಲಾ ತನ್ನಲ್ಲೆ ಹುದುಗಿಸಿಕೊಂಡಿರೋ ಪ್ರಕೃತಿಯ ಸಿರಿತನದೆದುರ ಉಳಿದದ್ದೆಲ್ಲಾ ನಶ್ವರವೇ ಸರಿ. ಕಾಫಿನಾಡಲ್ಲಿ ಅರಳಿ ನಿಂತಿರೋ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನ ಇಮ್ಮಡಿಗೊಳಿಸಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್,  ಚಿಕ್ಕಮಗಳೂರು

ಚಿಕ್ಕಮಗಳೂರು (ಆ.18): ಹೂ ಚೆಲುವೆಲ್ಲಾ ನಂದೆಂದಿತು ಅನ್ನೋ ಮಾತು ಅಕ್ಷರಶಃ ಸತ್ಯ. ಜಗತ್ತಿನ ಸೌಂದರ್ಯವನ್ನೆಲ್ಲಾ ತನ್ನಲ್ಲೆ ಹುದುಗಿಸಿಕೊಂಡಿರೋ ಪ್ರಕೃತಿಯ ಸಿರಿತನದೆದುರ ಉಳಿದದ್ದೆಲ್ಲಾ ನಶ್ವರವೇ ಸರಿ. ಕಾಫಿನಾಡಲ್ಲಿ ಅರಳಿ ನಿಂತಿರೋ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನ ಇಮ್ಮಡಿಗೊಳಿಸಿದೆ. 12 ವರ್ಷಗಳಿಗೊಮ್ಮೆ ಅರಳೋ ಈ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಕಣ್ಣು ಹಾಯಿಸಿದಲೆಲ್ಲಾ ಕಾಣೋ ಅಪರೂಪದ ಕುರಂಜಿ ನೋಡುಗರ ಕಣ್ಮನ ಸೆಳೆಯೋದ್ರ ಜೊತೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

Tap to resize

Latest Videos

ಗಿರಿ ಪ್ರದೇಶದಲ್ಲಿ ಕುರುವಂಜಿ ಹೂವು: ಚಿಕ್ಕಮಗಳೂರು ತಾಲ್ಲೂಕಿನ ಮುಳ್ಳಯ್ಯನಗಿರಿ, ಪಂಡರವಳ್ಳಿ , ಏಳುನೂರು ಖಾನ್ ಎಸ್ಟೇಟ್ ಸಮೀಪ 12 ವರ್ಷಕ್ಕೊಮ್ಮೆ ಅರಳೋ ಹೂ ಎಂದೇ ಹೆಸರುವಾಸಿಯಾದ ಕುರುವಂಜಿ ಹೂವು ಅರಳಿ ನಿಂತಿದೆ. ಈ ಹೂವುವನ್ನು ಗುರ್ಗಿ ಅಂತಾಲು ಕರೆಯುತ್ತಾರೆ. 12 ವರ್ಷಗಳಿಗೊಮ್ಮೆ ಅರಳೋ ಈ ಹೂವು ತಿಂಗಳುಗಳ ಕಾಲ ತನ್ನ ಸೌಂದರ್ಯವನ್ನ ಹೊರಚೆಲ್ಲುತ್ತಾ ಚಂದ್ರದ್ರೋಣ ಪರ್ವತ ಶ್ರೇಣಿಯ ಮತ್ತೊಂದು ಸೌಂದರ್ಯಕ್ಕೆ ಸಾಕ್ಷಿಯಾಗಿರುತ್ತೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಫಿನಾಡಿನ ಗಿರಿ-ಪರ್ವತ ಶ್ರೇಣಿಗಳು ನೀಲಿ ರೂಪ ಪಡೆದುಕೊಳ್ತಿವೆ. 

ಹುಲಿ ದಾಳಿಗೆ ಹಸು ಬಲಿ: ಗಿರಿ ಪ್ರದೇಶದ ಜನರು, ಪ್ರವಾಸಿಗರಲ್ಲೂ ಹೆಚ್ಚಿದ ಆತಂಕ

ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸೋ ಕಾಲ ಸನ್ನಿಹಿತವಾಗಲಿದೆ. ಮುಳ್ಳಯ್ಯನಗಿರಿ ಶ್ರೇಣಿಯ ರಸ್ತೆಯ ಇಕ್ಕೆಲಗಳಲ್ಲಿ ಅರಳಿ ನಿಂತಿರೋ ಈ ಕುರಂಜಿ ಪ್ರವಾಸಿಗರನ್ನ ಸ್ವಾಗತಿಸುತ್ತಿದೆ. ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಮಾತ್ರ ಅರಳೋ ಈ ಹೂವು ಕಾಫಿನಾಡಿನ ಚಂದ್ರದ್ರೋಣ ಪರ್ವತ, ದೇವರಮನೆ ಬೆಟ್ಟ, ಸೇರಿದಂತೆ ಕಾಫಿನಾಡ ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಅರಳಿ ನಿಂತಿವೆ. ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶವಾಗಿರೋದ್ರಿಂದ ಈ ಹೂವು ಇನ್ನೂ ಜೀವಂತವಾಗಿದೆ ಎಂದು ಎನ್ನುವುದು ಪರಿಸರವಾದಿ ಗುರುವೇಶ್‌ರವರ ಮಾತಾಗಿದೆ. 

ಗುರ್ಗಿ ಹೂವಿನಲ್ಲಿ ನಾನಾ ವಿಧಗಳು: ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದ್ರಿಂದ ಈ ಗುರ್ಗಿಯನ್ನ ಪ್ರೇಮದ ಸಂಕೇತವಾಗಿ ಪ್ರೇಮದ ಹೂ ಎಂತಲು ಕರೆಯುತ್ತಾರೆ. ಕೇರಳ, ತಮಿಳುನಾಡಿಗರು. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳಲಿದೆ. ಗುರ್ಗಿ ಹೂವಿನಲ್ಲಿ ನಾನಾ ವಿಧಗಳಿದ್ದು, 5, 7, 12, 14 ವರ್ಷಗಳಿಗೆ ಅರಳೋ ಪ್ರಭೇದ ಹೂವುಗಳೂ ಇವೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳಿರೋದ್ರಿಂದ ನಾನಾ ಖಾಯಿಲೆಗೂ ಬಳಸುತ್ತಾರೆ. 

ಚಿಕ್ಕಮಗಳೂರು: ದಶಕದಿಂದ ಕಾಡಿನಿಂದ ಹೊರಬರಲಾಗದೇ ಸಂಕಷ್ಟ, ಅರಣ್ಯವಾಸಿಗಳ ರೋಧನೆ

ಸದ್ಯಕ್ಕೆ ಕಾಫಿನಾಡಿನ ಗಿರಿಶಿಖರಗಳಲ್ಲಿ ಅರಳಿ ನಿಂತಿರೋ, ಮತ್ತಷ್ಟು ಅರಳೋ ಸನಿಹದಲ್ಲಿದ್ದು, ಬೆಟ್ಟಗುಡ್ಡಗಳ ಸೌಂದರ್ಯವನ್ನೆ ಬದಲಿಸಿ, ನೋಡುಗನ ಕಣ್ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಒಟ್ಟಾರೆ ಪ್ರಕೃತಿಯ ಒಡಲಾಳದಲ್ಲಿ ಇನ್ನಷ್ಟು ಸೌಂದರ್ಯದ ರಾಶಿ ಮನೆ ಮಾಡಿದ್ಯೊ ಬಲ್ಲೋರ್ಯಾರು ಇಲ್ಲ. ಕಾಫಿನಾಡಲ್ಲಿ ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಸೌಂದರ್ಯ ಮನೆ ಮಾಡಿರುತ್ತೆ. ಈವರೆಗೆ ಹಸಿರಿನಿಂದ ಕಂಗೊಳಿಸೋ ಬೆಟ್ಟಗುಡ್ಡಗಳನ್ನ ನೋಡಿದ್ದ ನಾವು-ನೀವು ಇನ್ಮುಂದೆ ನೀಲಿ ಬೆಟ್ಟಗಳನ್ನ ನೋಡ್ಬೇಕು ಅಂದ್ರೆ, ಕಾಫಿನಾಡಿಗೆ ಬರಲೇಬೇಕು. ತಿಂಗಳ ಕಾಲ ಅರಳಿ ನಿಲ್ಲೋ ಇಲ್ಲಿನ ಸೌಂದರ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ ಅನ್ನೋದಂತು ಸತ್ಯ.

click me!