ಮದುವೆ ನಿಶ್ಚಿತವಾಗ್ತಿದ್ದಂತೆ ಜೋಡಿ ಹನಿಮೂನ್ ಎಲ್ಲಿಗೆ ಎನ್ನುವ ಬಗ್ಗೆ ಚರ್ಚೆ ಶುರು ಮಾಡ್ತಾರೆ. ರೋಮ್ಯಾನ್ಸ್ ಹೆಚ್ಚಾಗಬೇಕು, ಇಬ್ಬರು ಒಂದಿಷ್ಟು ಮಧುರ ಕ್ಷಣಗಳನ್ನು ಒಟ್ಟಿಗೆ ಕಳೆಯಬೇಕೆಂದ್ರೆ ನೀವು ವಿದೇಶಕ್ಕೆ ಹೋಗ್ಬೇಕಾಗಿಲ್ಲ. ದಕ್ಷಿಣ ಭಾರತದಲ್ಲಿರುವ ಕೆಲ ಪ್ರದೇಶಗಳು ಕೂಡ ಹನಿಮೂನ್ ಗೆ ಬೆಸ್ಟ್.
ದಕ್ಷಿಣ ಭಾರತದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಇಲ್ಲಿನ ಸೌಂದರ್ಯ ಸವಿಯಲು ದೇಶ – ವಿದೇಶದ ಜನರು ಬರ್ತಾರೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿರುವ ಸುಂದರ ಪ್ರವಾಸಿ ತಾಣಗಳು ಸೌಂದರ್ಯ ಪ್ರೇಮಿಗಳನ್ನು ಸೆಳೆಯುತ್ತದೆ. ಕೇರಳ ಹನಿಮೂನ್ ಗೆ ಹೇಳಿ ಮಾಡಿಸಿದ ರಾಜ್ಯ. ತಮಿಳುನಾಡಿನಲ್ಲೂ ಹನಿಮೂನ್ ಗೆ ಹೋಗಬಹುದಾದ ಅತ್ಯುತ್ತಮ ಮತ್ತು ಸುಂದರ ಸ್ಥಳಗಳು ಸಾಕಷ್ಟಿವೆ.
ಇದು ಮದುವೆ (Marriage) ಋತು. ದಾಂಪತ್ಯ ಜೀವನಕ್ಕೆ ಕಾಲಿಟ್ಮೇಲೆ ಎಲ್ಲಿಗೆ ಹನಿಮೂನ್ ಗೆ ಹೋಗ್ಬೇಕು ಅಂತಾ ಜೋಡಿ ಪ್ಲಾನ್ ಮಾಡ್ತಿರುತ್ತಾರೆ. ಸಮಯದ ಅಭಾವ, ಹಣಕಾಸಿನ ಸಮಸ್ಯೆ ಸೇರಿದಂತೆ ಕೆಲ ಕಾರಣದಿಂದಾಗಿ ವಿದೇಶಿ ಪ್ರವಾಸ ಸಾಧ್ಯವಾಗದವರಿದ್ದಾರೆ. ಉತ್ತರ ಭಾರತದ ಕಡೆ ಹನಿಮೂನ್ (Honeymoon) ಬೇಡ ಎನ್ನುವವರು ತಮಿಳುನಾಡಿನಲ್ಲಿ ರೋಮ್ಯಾನ್ಸ್ ಮಾಡೋಕೆ ಹೋಗ್ಬಹುದು. ನಾವಿಂದು ತಮಿಳುನಾಡಿನ ಹನಿಮೂನ್ ಪ್ಲೇಸ್ ಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೆವೆ.
ತಮಿಳುನಾಡಿನಲ್ಲಿದೆ ಸುಂದರ ಹನಿಮೂನ್ ತಾಣ :
ಊಟಿ (Ooty) : ತಮಿಳುನಾಡಿನಲ್ಲಿರುವ ಊಟಿ ಬಹುತೇಕ ಎಲ್ಲರಿಗೂ ತಿಳಿದಿದೆ. ಪ್ರೇಮಿಗಳಿಗೆ ಇದು ಅತ್ಯುತ್ತಮ ಸ್ಥಳವಾಗಿದೆ. ಬೆಟ್ಟಗಳ ರಾಣಿ ಎಂದು ಕರೆಯಲ್ಪಡುವ ಊಟಿ ಹನಿಮೂನ್ ಗೆ ಊಕ್ತವಾದ ಸ್ಥಳ. ಊಟಿಯಲ್ಲಿ ಚಲಿಸುವ ಟಾಯ್ ಟ್ರೇನ್ ಊಟಿಯ ವಿಹಂಗಮ ನೋಟ ಆನಂದಿಸುವ ಅವಕಾಶ ನೀಡುತ್ತದೆ. ಇಲ್ಲಿ ಸಾಹಸ ಚಟುವಟಿಕೆ ಮಾಡಲು ನಿಮಗೆ ಅವಕಾಶವಿದೆ. ಊಟಿಯಲ್ಲಿ ಕೂಡ ಕಡಿಮೆ ಬೆಲೆಗೆ ಕ್ವಾಟೇಜ್, ಹೋಟೆಲ್ ಲಭ್ಯವಿದೆ.
ಕೊಡೈಕೆನಾಲ್ (Kodaikanal) : ಕೊಡೈಕೆನಾಲ್ ತಮಿಳುನಾಡಿನಲ್ಲಿರುವ ಸುಂದರ ಸ್ಥಳಗಳಲ್ಲಿ ಒಂದಾಗಿದೆ. ಇದು ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಇದು ದಕ್ಷಿಣ ಭಾರತದ ಪ್ರಸಿದ್ಧ ಹನಿಮೂನ್ ತಾಣಗಳಲ್ಲಿ ಒಂದಾಗಿದೆ. ಹಿಲ್ ಸ್ಟೇಷನ್ ರಾಜಕುಮಾರಿ ಎಂದೂ ಕೊಡೈಕೆನಾಲ್ ಅನ್ನು ಕರೆಯುವವರಿದ್ದಾರೆ. ತಮಿಳುನಾಡಿನಲ್ಲಿ ಹನಿಮೂನ್ ಪ್ಲಾನ್ ಮಾಡ್ತಿದ್ದರೆ ಕೊಡೈಕೆನಾಲ್ ಗೆ ಹೋಗಬಹುದು. ಕೊಡೈಕೆನಾಲ್ ಲೇಕ್, ಕೋಕರ್ಸ್ ವಾಕ್, ಬ್ರ್ಯಾಂಟ್ ಪಾರ್ಕ್, ಸಿಲ್ವರ್ ಕ್ಯಾಸ್ಕೇಡ್ ಫಾಲ್ಸ್ ನಂತಹ ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು. ಪರ್ವತಗಳ ಮಧ್ಯೆ ಇರುವ ಹೊಟೇಲ್ ಗಳಲ್ಲಿ ಕಡಿಮೆ ಖರ್ಚಿನಲ್ಲಿ ನೀವು ತಂಗಬಹುದು.
ಕೂನೂರು (Coonoor) : ಹನಿಮೂನ್ ಎಂದ ತಕ್ಷಣ ಅನೇಕ ಬಾಯಲ್ಲಿ ಬರುವ ಹೆಸರು ಕೂನೂರು. ಹನಿಮೂನ್ ಗೆ ಅತ್ಯಂತ ಬೆಸ್ಟ್ ಸ್ಥಳ ಇದು. ನೀಲಗಿರಿ ಬೆಟ್ಟವನ್ನು ಒಳಗೊಂಡಿರುವ ಈ ಸ್ಥಳ ನಿಮ್ಮ ರೋಮ್ಯಾನ್ಸ್ ದುಪ್ಪಟ್ಟು ಮಾಡುತ್ತದೆ. ನೀಲಗಿರಿ ಬೆಟ್ಟಗಳ ವಿಹಂಗಮ ನೋಟ ಮತ್ತು ಇಲ್ಲಿರುವ ಕ್ಯಾಥರೀನ್ ಜಲಪಾತ ನಿಮ್ಮ ಹನಿಮೂನ್ ಮಜವನ್ನು ದ್ವಿಗುಣಗೊಳಿಸುತ್ತದೆ. ಕೂನೂರು ಸಮುದ್ರ ಮಟ್ಟದಿಂದ 1000 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿದೆ. ಕೂನೂರಿನಲ್ಲಿ ನೀವು ಸಿಮ್ಸ್ ಪಾರ್ಕ್, ಹಿಡನ್ ವ್ಯಾಲಿ, ಕಟ್ಟಿ ವ್ಯಾಲಿ ವ್ಯೂ ಪಾಯಿಂಟ್ ಮತ್ತು ಡಾಲ್ಫಿನ್ಸ್ ನೋಸ್‌ನಂತಹ ಅತ್ಯುತ್ತಮ ಸ್ಥಳಗಳಿಗೆ ಭೇಟಿ ನೀಡಬಹುದು. ಕಟ್ಟಿ ವ್ಯಾಲಿಯಲ್ಲಿ ನಿಮಗೆ ಕಡಿಮೆ ಬೆಲೆಗೆ ರೂಮ್ ಲಭ್ಯವಿದೆ.
ವಿಚಿತ್ರ ರೀತಿಯಲ್ಲಿ ನ್ಯೂ ಇಯರ್ ಆಚರಿಸೋ ದೇಶವಿದು!
ಯಳಗಿರಿ ಹೀಲ್ಸ್ (Yelagiri Hills) : ಬೆಂಗಳೂರಿನಿಂದ ಸುಮಾರು 178 ಕಿಲೋಮೀಟರ್ ದೂರದಲ್ಲಿರುವ ಏಳಗಿರಿ ಬೆಟ್ಟಗಳು ಹನಿಮೂನ್ ಗೆ ಅತ್ಯಂತ ಸುಂದರವಾದ ತಾಣವಾಗಿದೆ. ತಮಿಳುನಾಡಿದ ಇತರ ಸ್ಥಳಗಳಿಗೆ ನೀವು ಹೋಲಿಕೆ ಮಾಡಿದ್ರೆ ಈ ಸ್ಥಳ ಶಾಂತವಾಗಿದೆ. ಯಳಗಿರಿ ಬೆಟ್ಟಗಳ ಹಸಿರು ಮತ್ತು ಆಹ್ಲಾದಕ ಮನಸ್ಸು ಸೆಳೆಯುತ್ತದೆ.
Travel Tips : ಭಾರತದಲ್ಲಿವೆ ಅಪಾಯಕಾರಿ ರಸ್ತೆಗಳು! ಜೀವ ಕೈಯ್ಯಲ್ಲಿಟ್ಕೊಂಡೇ ಟ್ರಾವೆಲ್ ಮಾಡ್ಬೇಕಿಲ್ಲಿ
ತಮಿಳುನಾಡಿನಲ್ಲಿ ಹನಿಮೂನ್ ಗೆ ಸಾಕಷ್ಟು ಸ್ಥಳವಿದೆ. ನೀವು ಕೋಟಗಿರಿ ಗಿರಿಧಾಮ, ಕೊಲ್ಲಿ ಬೆಟ್ಟಗಳು, ಚೆನ್ನೈ, ಕನ್ಯಾಕುಮಾರಿಯಂತಹ ರೋಮ್ಯಾಂಟಿಕ್ ಸ್ಥಳಗಳನ್ನು ಕೂಡ ಹನಿಮೂನ್ ಗೆ ಆಯ್ಕೆ ಮಾಡಿಕೊಳ್ಳಬಹುದು.