ಕ್ಯಾಬ್‌ನಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ, ಹುಂ ಅಂತಿಯಾ, ಉಹು ಅಂತಿಯ..ಇದು ಕಪಲ್ಸ್ ಕಾಲ. ಕಾರಣ ಕಪಲ್ಸ್‌ಗೆ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿ ಭರ್ಜರಿ ಆಫರ್ ನೀಡುತ್ತಿದೆ. ಜೋಡಿಗಳ ಪ್ರಯಾಣ ಸಮಯದಲ್ಲೂ ಯಾರ ಕಿರಿಕಿರಿ ಇಲ್ಲದೆ, ಅತ್ಯಾಪ್ತ ಹಾಗೂ ಖಾಸಗಿ ಸಮಯ ಕಳೆಯಲು ಸ್ಮೂಚ್ ಕ್ಯಾಬ್ ಆರಂಭಿಸಿದೆ.
ಬೆಂಗಳೂರು(ಏ.04) ಬೆಂಗಳೂರಿನನ ಕ್ಯಾಬ್, ಆಟೋ ಸೇರಿದಂತೆ ಹಲವು ಟ್ಯಾಕ್ಸಿಗಳಲ್ಲಿ ಕೆಲ ಚಾಲಕರು ಇದು ಕ್ಯಾಬ್, ರೊಮ್ಯಾನ್ಸ್‌ಗೆ ಅವಕಾಶವಿಲ್ಲ ಎಂದು ಸೂಚನಾ ಬೋರ್ಡ್ ಹಾಕಿದ ಘಟನೆಗಳು ವೈರಲ್ ಆಗಿತ್ತು. ಹಾಗಂತ ಕಪಲ್ಸ್ ಬೇಸರ ಪಡಬೇಕಿಲ್ಲ. ಕಾರಣ ಇದೀಗ ಜೋಡಿಗಳ ಪ್ರಯಾಣ ಸಮಯದಲ್ಲಿ ತಮ್ಮ ಖಾಸಗಿ ಸಮಯ ಕಳೆಯಲು, ಯಾರ ಕಿರಿಕಿರಿ ಇಲ್ಲದೆ ತಬ್ಬಿಕೊಂಡು ಪ್ರಯಾಣ ಆಸ್ವಾದಿಸಲು ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿ ಹೊಸ ಸ್ಮೂಚ್ ಕ್ಯಾಬ್ ವ್ಯವಸ್ಥೆ ಆರಂಭಿಸಿದೆ. ಪ್ರಣಯ ಹಕ್ಕಿಗಳಿಗೆ ಇದೀಗ ಕ್ಯಾಬ್ ಒಂದು ರೀತಿಯಲ್ಲಿ ಸಂಜೀವಿನಿಯಾಗಲಿದೆ. ಈ ಸ್ಮೂಚ್ ಕ್ಯಾಬ್ ವಿಶೇಷವಾಗಿ ಜೋಡಿ ಹಕ್ಕಿಗಳಿಗೆ. ಯಾರು ಗುಣಮಟ್ಟದ ಸಮಯವನ್ನು ಆತ್ಯಾಪ್ತರೊಂದಿಗೆ ಯಾವುದೇ ಅಡತಡೆ ಇಲ್ಲದೆ ಕಳೆಯಲು ಬಯಸುತ್ತಾರೋ ಅವರಿಗೆ ಈ ಕ್ಯಾಬ್ ವ್ಯವಸ್ಥೆ ಜಾರಿಯಾಗಿದೆ.
ನಿರ್ದಿಷ್ಟ ಸಮಯಕ್ಕೆ ತಲುಪುದು ಗುರಿಯಲ್ಲ
ಈ ಸ್ಮೂಚ್ ಕ್ಯಾಬ್‌ನಲ್ಲಿ ಹಲವು ವಿಶೇಷತೆ ಇದೆ. ಕಾರಣ ಓಲಾ, ಉಬರ್, ರ್ಯಾಪಿಡೋ ರೀತಿ ಕ್ಯಾಬ್ ಹತ್ತಿ ಇಷ್ಟು ಸಮಯದೊಳಗೆ ನಿಗದಿತ ಸ್ಥಳ ಅಥವಾ ಹೋಗಬೇಕಿರುವ ಸ್ಥಳಕ್ಕೆ ತಲುಪುವುದು ಈ ಸ್ಮೂಚ್ ಕ್ಯಾಬ್ ಉದ್ದೇಶವಲ್ಲ. ಯಾರೋ ಕೂಗಾಡಲಿ, ಯಾರೇ ಹೋರಾಡಲಿ ನಿಮ್ಮ ನೆಮ್ಮದಿಗೆ ಭಂಗವಿಲ್ಲ. ಕಾರಣ ಈ ಕ್ಯಾಬ್‌ನಲ್ಲಿ ಗುರಿಗಿಂತ ಜೋಡಿಗಳ ಕಂಫರ್ಟ್ ಮುಖ್ಯ. ಅವರ ಖಾಸಗಿ ಸಮಯ ಮುಖ್ಯ. ಉದಾಹರಣೆಗೆ ಬೆಳಗ್ಗೆ ಮೆಜಸ್ಟಿಕ್‌ನಲ್ಲಿ ಕ್ಯಾಬ್ ಹತ್ತಿದರೆ ಸಂಜೆಯಾದರೂ ಜಯನಗರ ತಲುಪುದು ಡೌಟ್. ಜೋಡಿಗಳ ಅವಶ್ಯಕತೆ, ಅಗತ್ಯಕ್ಕೆ ಅನುಗುಣವಾಗಿ ಕ್ಯಾಬ್ ವೇಗ ಹೆಚ್ಚು ಕಡಿಮೆ ಮಾಡಲಿದೆ.
ಈ ಸೆಲೆಬ್ರಿಟಿ ಜೋಡಿಗಳ ವಯಸ್ಸಿನ ಅಂತರ ಕೇಳಿದ್ರೆ ಶಾಕ್ ಆಗ್ತೀರಿ!
ಡು ನಾಟ್ ಡಿಸ್ಟರ್ಬ್ ಪಾಲಿಸಿ
ಸ್ಮೂಚ್ ಕ್ಯಾಬ್‌ನ ಮತ್ತೊಂದು ಪ್ರತ್ಯೇಕತೆ ಎಂದರೆ ತೊಂಡರೆ ನೀಡಬೇಡಿ ನೀತಿ. ಈ ಕ್ಯಾಬ್ ಮೂಲಕ ಪ್ರಯಾಣ ಮಾಡುವ ಜೋಡಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕಾರಿನ ವಿಂಡೋ ಒಳಗೆ ಕರ್ಟನ್ ಬಳಸಲಾಗುತ್ತದೆ. ಇನ್ನು ಡ್ರೈವರ್ ಹಾಗೂ ಪ್ರಯಾಣಿಕರ ನಡುವೆ ತಡೆಗೋಡೇ ರೀತಿ ವಿನ್ಯಾಸ ಮಾಡಲಾಗಿರುತ್ತದೆ. ಎಸಿ, ಶಬ್ದಗಳ ಕಿರಿಕಿ ತಪ್ಪಿಸಲು ನಾಯ್ಸಿ ಕ್ಲಿಯರೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕ್ಯಾಬ್‌ನಲ್ಲಿದೆ.
ಸ್ಮೂಚ್ ಕ್ಯಾಬ್ ವ್ಯಕ್ತವಾಗುತ್ತಿದೆ ವಿರೋಧ
ಸ್ಮೂಚ್ ಕ್ಯಾಬ್ ಜೋಡಿಗಳಿಗೆ ಪ್ರಯಾಣದ ವೇಳೆ ಅಥವಾ ಪ್ರಯಾಣದಲ್ಲೇ ಸಮಯ ಕಳೆಯಲು ಜಾರಿಗೆ ತಂದ ಟ್ಯಾಕ್ಸಿ ಸರ್ವೀಸ್. ಇದೀಗ ಹಲವರು ನೈತಿಕ ಪೊಲೀಸ್‌ಗಿರಿಯಿಂದ ತಪ್ಪಿಸಿಕೊಳ್ಳಲು ಈ ಕ್ಯಾಬ್ ಬುಕ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಪ್ರಯಾಣವೂ ಆಗುತ್ತೆ, ಜೊತೆಗೆ ಕಳೆದಂತೆಯೂ ಆಗುತ್ತೆ. ಆದರೆ ಈ ಕ್ಯಾಬ್ ಸರ್ವೀಸ್‌ಗೆ ಬಾರಿ ವಿರೋಧವೂ ವ್ಯಕ್ತವಾಗುತ್ತಿದೆ. ಇದರ ದುರ್ಬಳಕೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಲವರು ಎಚ್ಚರಿಸಿದ್ದಾರೆ.
ಭಾರಿ ವಿರೋಧ ವ್ಯಕ್ತವಾಗುತ್ತಿದ್ದರೂ ಸ್ಮೂಚ್ ಕ್ಯಾಬ್ ಬುಕಿಂಗ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದೀಗ ಸ್ಟಾರ್ಟ್ ಅಪ್ ಕಂಪನಿ ಮುಂಬೈ ಹಾಗೂ ದೆಹಲಿಯಲ್ಲಿ ಈ ಕ್ಯಾಬ್ ಸರ್ವೀಸ್ ವಿಸ್ತರಿಸಲು ಮುಂದಾಗಿದೆ.
ಬೆಲೆ ಎಷ್ಟು?
ಜೋಡಿಗಳು ನಾವು ಒಂದು ಬಾರಿ ಈ ಕ್ಯಾಬ್ ಮೂಲಕ ಪ್ರಯಾಣ ಮಾಡಿಬಿಡೋಣ ಎಂದಿದ್ದರೆ ಪ್ರಯತ್ನಿಸಬಹುದು. ಇದರ ಬೆಲೆ ನಿಮ್ಮ ಪ್ರಯಾಣ, ಸ್ಥಳ, ಸಮಯಕ್ಕೆ ಅನುಗುಣವಾಗಿರುತ್ತದೆ. ಸಾಮಾನ್ಯ ಕ್ಯಾಬ್ ದರಕ್ಕಿಂತ ದುಬಾರಿಯಾಗಿರುತ್ತದೆ. ಕಾರಣ ಇಲ್ಲಿ ಕ್ಯಾಬ್ ಹತ್ತಿದ ಬೆನ್ನಲ್ಲೇ ನಿಗದಿತ ಸ್ಥಳ ತಲುಪುದು ಒಂದೇ ಉದ್ದೇಶವಲ್ಲ. ನಿಧಾನವೇ ಪ್ರಧಾನ. ಜೊತೆಗೆ ಜೋಡಿಗಳಿಗೆ ಎಷ್ಟು ಸಮಯ ಬೇಕೋ ಅಷ್ಟು ಸಮಯದಲ್ಲಿ ನಿಗದಿತ ಸ್ಥಳ ತಲುಪುವ ವಿಶೇಷ ಕಾರ್ಯಕ್ರಮ ಇದು.
ಗಂಡು ಮಗುವಿನ ಆಸೆಗೆ 9 ಹೆಣ್ಣು ಮಕ್ಕಳಿಗೆ ಜನ್ಮ, ವಿಚಿತ್ರವಾಗಿದೆ ಎಲ್ಲರ ಹೆಸರು