
ಅಮರನಾಥ ಯಾತ್ರೆ 2025: ಜಮ್ಮು-ಕಾಶ್ಮೀರದಲ್ಲಿರುವ ಪವಿತ್ರ ಅಮರನಾಥ ಗುಹೆಯ ಯಾತ್ರೆ ಜುಲೈ 3 ರಿಂದ ಶುರುವಾಗಿ ಆಗಸ್ಟ್ 9 ರವರೆಗೆ ನಡೆಯಲಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಸಮುದ್ರ ಮಟ್ಟದಿಂದ 12,700 ಅಡಿ ಎತ್ತರದಲ್ಲಿರುವ ಈ ಗುಹೆಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗವಿದೆ.
ಜುಲೈ 3 ರಿಂದ ಆಗಸ್ಟ್9, 2025 ರವರೆಗೆ ಯಾತ್ರೆ ನಡೆಯಲಿದೆ. ದಿನಕ್ಕೆ 15,000 ಭಕ್ತರಿಗೆ ಅವಕಾಶ. 13 ರಿಂದ 70ವರ್ಷದೊಳಗಿನವರು ಯಾತ್ರೆ ಕೈಗೊಳ್ಳಬಹುದು. ಹೃದಯ ಮತ್ತು ಶ್ವಾಸಕೋಶದ ತೊಂದರೆ ಇರುವವರಿಗೆ ಅವಕಾಶವಿಲ್ಲ.
ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ನೋಂದಣಿ ಮಾಡಬಹುದು.
ಆನ್‌ಲೈನ್
ಆಫ್‌ಲೈನ್
ಪಹಲ್ಗಾಮ್ (36 ಕಿ.ಮೀ., 3-5 ದಿನಗಳು) ಮತ್ತು ಬಾಲ್ಟಾಲ್ (14 ಕಿ.ಮೀ., 1-2 ದಿನಗಳು) ಎಂಬ ಎರಡು ಮಾರ್ಗಗಳಿವೆ. ಪಹಲ್ಗಾಮ್ ಮಾರ್ಗ ಸುಂದರವಾದದ್ದು, ಬಾಲ್ಟಾಲ್ ಮಾರ್ಗ ಕಡಿದಾದ್ದು.
ಅಮರನಾಥ ಯಾತ್ರೆ ಕಠಿಣವಾದ್ದರಿಂದ ದೈಹಿಕವಾಗಿ ಸದೃಢವಾಗಿರುವವರಿಗೆ ಮಾತ್ರ ಅವಕಾಶ. CHC (ಕಡ್ಡಾಯ ಆರೋಗ್ಯ ಪ್ರಮಾಣಪತ್ರ) ಅತ್ಯಗತ್ಯ. ಫಾರ್ಮ್ ಅನ್ನು ಶ್ರೀ ಅಮರನಾಥ ಜಿ ದೇಗುಲ ಮಂಡಳಿಯ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಬಹುದು.
ಹತ್ತಿರದ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿ CHC ಪಡೆಯಬೇಕು. ಪ್ರಮಾಣಪತ್ರದ ಮುಕ್ತಾಯ ದಿನಾಂಕವನ್ನು ಪರಿಶೀಲಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.