ಮರದ ಪೊಟರೆಯೊಳಗೆ ಲಂಗೂರ್ ವಿರಾಜಮಾನ,  ಇಂಥ ಪೋಟೋ ಸಿಗೋದು ಸುಲಭನಾ!

By Suvarna NewsFirst Published Nov 26, 2020, 3:47 PM IST
Highlights

ನಿಸರ್ಗದ ವಿಸ್ಮಯಗಳು ಒಂದೇ-ಎರಡೇ/ ಲಂಗೂರ್ ನ ವಿಶಿಷ್ಟ ಭಂಗಿಗೆ ಮನಸೋತ ಛಾಯಾಚಿತ್ರಗ್ರಾಹಕ/ ನಿಕಾನ್ ಇಂಡಿಯಾದ ಟೆಕ್ನಿಕಲ್ ಹೆಡ್ ನವದೆಹಲಿಯ ಅಮಾನ್ ವಿಲ್ಸನ್ ಸೆರೆಹಿಡಿದ ಚಿತ್ರ

ಪೆಂಚ್(ನ.  26)  ನಿಸರ್ಗ, ನಮ್ಮ ಪರಿಸರ ಅದ್ಭುತಗಳ ಭಂಡಾರ.  ಒಂದೊಂದು ಘಟನೆಗಳು ಒಂದೊಂದು ಕತೆ ಹೇಳುತ್ತವೆ. ಮಧ್ಯಪ್ರದೇಶದ ತುರಿಯಾ ಪೆಂಚ್ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದ ವೃತ್ತಿಪರ ಛಾಯಾಚಿತ್ರಗ್ರಾಹಕರೊಬ್ಬರು ಅದ್ಭುತವೊಂದನ್ನು ಕಟ್ಟಿಕೊಟ್ಟಿದ್ದಾರೆ.

ನಿಕಾನ್ ಇಂಡಿಯಾದ ಟೆಕ್ನಿಕಲ್ ಹೆಡ್ ನವದೆಹಲಿಯ ಅಮಾನ್ ವಿಲ್ಸನ್(33) ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅವರ ಮಾತಿನಲ್ಲೆ ಕೇಳಿ.

ಪೆಂಚ್ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದೆ.  ಇದು ನನ್ನ ಕೊನೆಯ ಸಫಾರಿ ಎಂದುಕೊಂಡು ಹುಲಿಗಳಿಗಾಗಿ ನನ್ನ ಕ್ಯಾಮರಾ ಹುಡುಕುತ್ತಿತ್ತು. ವಿಶಿಷ್ಟ ತಳಿಯ ಲ್ಯಾಂಗ್ಡಿ ಇಲ್ಲಿ ಕಾಣುವುದೋ ಎಂಬ ಆಸೆ ಮನೆಮಾಡಿತ್ತು.

ಇದ್ದಕ್ಕಿದ್ದಂತೆ ಒಂದು ಕಡೆ ಹಲವಾರು ಜೀಪುಗಳನ್ನು ಸಾಲಾಗಿ ನಿಲ್ಲಿಸಿದ್ದು ಕಂಡು  ಬಂತು. ನನಗೆ ಕಾರಣ ಗೊತ್ತಿರಲಿಲ್ಲ. ಕೆಲವೆ ಕ್ಷಣಗಳ ಹಿಂದೆ ಲ್ಯಾಂಗ್ಡಿ ಅಲ್ಲಿಂದ ಪಾಸ್ ಆಗಿತ್ತು. ನಮಗೆ ಅದನ್ನು ಕಾಣುವ ಅದೃಷ್ಟ ಸಿಗಲಿಲ್ಲ.

ಕಿರಿ ವಯಸ್ಸಿನಲ್ಲಿಯೇ ಪೋಟೋಗ್ರಫಿ ಶಿಖರ ಏರಿದ ಐಶ್ವರ್ಯಾ

ಇರಲಿ  ಎಂದುಕೊಂಡು ಅದೆ ಜಾಗದಲ್ಲಿ ಒಂದಷ್ಟು ಹೊತ್ತು ಕಾಯುವ ನಿರ್ಧಾರ ಮಾಡಿದೆ.  ಇದ್ದಕ್ಕಿದಂತೆ ಲಂಗೂರ್ ಗಳ ತಂಡವೊಂದು ನನ್ನ ಕಣ್ಣಿಗೆ ಬಿತ್ತು.

ಪೋಟೋ ತೆಗೆಯಲು ಬೇಕಾದ ಬೆಳಕು ಸಹ ಅಷ್ಟೆ ಪಕ್ಕಾ ಇತ್ತು. ನಾನು ಒಂದಾದ ಮೇಲೆ ಒಂದು ಚಿತ್ರ ಕ್ಲಿಕ್ ಮಾಡಲು ಆರಂಭಿಸಿದೆ. ಇದಕ್ಕಿದ್ದಂತೆ ಒಂದು ಲಂಗೂರ್ ವಿಶಿಷ್ಟ ರೀತಿಯಲ್ಲಿ ನನ್ನ ಎದುರಿಗೆ ಕಂಡಿತು.

ಟೊಳ್ಳಾಗಿರುವ ಮರದ ಮಧ್ಯೆ ಹೋಗಿ ಕುಳಿತ ಲಂಗೂರ್ ಅದು ತನ್ನದೆ ಜಾಗ ಎಂದು ಸರಿ ಹೇಳುವಂತೆ ಭಾಸವಾಯಿತು. ಇದೊಂದು ಅಪರೂಪದ ಚಿತ್ರ ಆಗುವುದರಲ್ಲಿ ಅನುಮಾನ ಇಲ್ಲ ಎಂದೇ ಪೋಟೋ ಕ್ಲಿಕ್ಕಿಸಿಕೊಂಡೆ. ಸೋಶಿಯಲ್ ಮೀಡಿಯಾದಲ್ಲಿಯೂ ಈ ಪೋಟೋ ವೈರಲ್ ಆಗಿದೆ.

click me!