Mar 31, 2025, 10:35 PM IST
ಎಚ್.ಡಿ.ಕುಮಾರಸ್ವಾಮಿ ‘ನ್ಯಾಯಾಂಗ ನಿಂದನೆ’ ಕೇಸ್ ಹೈನಲ್ಲೇ ಪ್ರಶ್ನಿಸಿ: ಪಕ್ಕದ ಮನೆಯಲ್ಲೇ ಪರಸ್ತೀ ಜೊತೆ ಗಂಡನ ಚಕ್ಕಂದ, ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು!


ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳ ಸಂಚಾರ ಮಾರ್ಪಾಟು ಮಾಡಲಾಗಿದೆ. ಇಂದು ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಸಂಚಾರ ಮಾರ್ಪಾಟು ಮಾಡಲಾಗಿದೆ. ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ. ಬನ್ನೇರುಘಟ್ಟ ರಸ್ತೆಯ ಗುರಪ್ಪನಪಾಳ್ಯ ಜಂಕ್ಷನ್, ಸಾಗರ್ ಅಪೋಲೋ ಜಂಕ್ಷನ್ ನಿಂದ ಗುರಪ್ಪನಪಾಳ್ಯ ಜಂಕ್ಷನ್, ನಾಗವಾರ ಜಂಕ್ಷನ್ ನಿಂದ ಪಾಟರಿ ರಸ್ತೆ ಸರ್ಕಲ್ ವರೆಗೆ, ಶಿವಾಜಿನಗರ ಕಡೆಯಿಂದ ಸಂಚರಿಸುವ ವಾಹನ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ನಗರದ ಸಂಚಾರ ನಿರ್ಬಂಧ, ರಾಜಕೀಯ ಬೆಳವಣಿಗೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ಕ್ಷಣ ಕ್ಷಣದ ಅಪ್‌ಡೇಟ್
10:35 PM
ಹಾಲು ಉತ್ಪಾದಕರಿಗೆ ನೀಡುತ್ತಿದ್ದ ದರದಲ್ಲಿ 3.50 ರೂ. ಇಳಿಕೆ; ಆ ಕಡೆ ಜನರ ಕಿವಿಗೂ ಹೂ, ಈ ಕಡೆ ರೈತರ ಕಿವಿಗೂ ಹೂ!
ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆಯಾಗಿದ್ದು, ಏರಿಕೆಯಾದ ಹಣ ರೈತರಿಗೆ ತಲುಪುವ ಬಗ್ಗೆ ಅನುಮಾನಗಳು ಮೂಡಿವೆ. ಹಾವೇರಿ ಹಾಲು ಒಕ್ಕೂಟವು ರೈತರಿಗೆ ನೀಡುತ್ತಿದ್ದ ಹಾಲಿನ ದರದಲ್ಲಿ ಕಡಿತ ಮಾಡಿದ್ದು, ಸರ್ಕಾರದ ಹೇಳಿಕೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ಪೂರ್ತಿ ಓದಿ9:56 PM
ಪಕ್ಕದ ಮನೆಯಲ್ಲೇ ಪರಸ್ತೀ ಜೊತೆ ಗಂಡನ ಚಕ್ಕಂದ, ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು!
ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯ ಗಂಡನೇ ಕೊಲೆ ಮಾಡಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗಂಡನ ಅಕ್ರಮ ಸಂಬಂಧವೇ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿ9:10 PM
ಕರ್ನಾಟಕದಲ್ಲಿ ಭಾರೀ ಮಳೆ: ಕರಾವಳಿ ಜಿಲ್ಲೆಗಳು, ಬೆಂಗಳೂರಿಗೆ ಯಲ್ಲೋ ಅಲರ್ಟ್ ಘೋಷಣೆ!
ಓಡಿಸ್ಸಾ ಕರಾವಳಿಯ ಸೈಕ್ಲೋನ್‌ನಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ನಾಳೆ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಏಪ್ರಿಲ್ 6ರವರೆಗೆ ಮಳೆಯ ಮುನ್ಸೂಚನೆ ನೀಡಲಾಗಿದೆ.
ಪೂರ್ತಿ ಓದಿ8:57 PM
ಇಮ್ರಾನ್ ಖಾನ್: ಶಾಂತಿಗಾಗಿ ನೊಬೆಲ್ ಪ್ರಶಸ್ತಿಗೆ ಇಮ್ರಾನ್ ಖಾನ್ ಹೆಸರು ಶಿಫಾರಸು!
ಪಾಕಿಸ್ತಾನದಲ್ಲಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ವಿವರಗಳನ್ನು ನೋಡೋಣ.
ಪೂರ್ತಿ ಓದಿ8:51 PM
ಬೆಂಗಳೂರು 180 ಅಡಿ ಆಳದಲ್ಲಿ 16 ಕಿ.ಮೀ ಸುರಂಗ ಮಾರ್ಗ; 5 ವರ್ಷದಲ್ಲಿ ನಿರ್ಮಾಣ, 30 ವರ್ಷ ಟೋಲ್ ಸಂಗ್ರಹ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಲು 16.5 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಾಣವಾಗುವ ಈ ಮಾರ್ಗವು ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆಯಿದೆ.
ಪೂರ್ತಿ ಓದಿ8:04 PM
ಘಿಬ್ಲಿ ಫೋಟೋಗಾಗಿ ನಿಮ್ಮ ಚಿತ್ರವನ್ನು ChatGPT ಕೈಗೆ ನೀಡೋದು ಎಷ್ಟು ಡೇಂಜರ್ ಗೊತ್ತಾ? ಇಲ್ಲಿದೆ ಡೀಟೇಲ್ಸ್..
ಓಪನ್‌ಎಐನ ಘಿಬ್ಲಿ-ಶೈಲಿಯ AI ಇಮೇಜ್ ಜನರೇಟರ್ ವೈರಲ್ ಆಗಿದೆ, ಆದರೆ ಡಿಜಿಟಲ್ ಗೌಪ್ಯತೆ ಕಾರ್ಯಕರ್ತರು AI ತರಬೇತಿಗಾಗಿ ಡೇಟಾ ಸಂಗ್ರಹಣೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ವೈಯಕ್ತಿಕ ಡೇಟಾವನ್ನು ರಕ್ಷಿಸಲು ಸಲಹೆಗಳನ್ನು ಅನುಸರಿಸಿ.
ಪೂರ್ತಿ ಓದಿ7:45 PM
ಶಬರಿಮಲೆ ಅಯ್ಯಪ್ಪ ದೇವಸ್ಥಾನ ನಾಳೆ ಓಪನ್; ಭಕ್ತರ ದರ್ಶನಕ್ಕೆ 18 ದಿನ ಅವಕಾಶ!
ಶಬರಿಮಲೆ ದೇವಸ್ಥಾನವು ಮೇಧ ವಿಷು ಹಬ್ಬ ಮತ್ತು ಪೂಜೆಗಳಿಗಾಗಿ ನಾಳೆ ತೆರೆಯಲಿದೆ. ಏಪ್ರಿಲ್ 14 ರಂದು ವಿಷು ಹಬ್ಬದಂದು ವಿಷು ಕಣಿ ದರ್ಶನ ನಡೆಯಲಿದ್ದು, ಏಪ್ರಿಲ್ 18 ರಂದು ದೇವಾಲಯವನ್ನು ಮುಚ್ಚಲಾಗುವುದು.
ಪೂರ್ತಿ ಓದಿ7:02 PM
ಟ್ರಾಫಿಕ್ ಪೊಲೀಸ್ರೆ ಸ್ವಲ್ಪ ಧೈರ್ಯ ತೋರಿಸಿ..ಕಣ್ಣೆದುರೇ ಹೆಲ್ಮೆಟ್ ಇಲ್ಲದೆ ತಿರುಗಾಡಿದ್ರೂ ಗರುಡಗಂಬದ ಹಾಗೆ ನಿಲ್ಲೋದಲ್ಲ!
ಬೆಂಗಳೂರಿನಲ್ಲಿ ಈದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ನಿಯಮ ಉಲ್ಲಂಘನೆಗೆ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೆಲ್ಮೆಟ್ ಇಲ್ಲದೆ ಮತ್ತು ಟ್ರಿಪಲ್ ರೈಡಿಂಗ್ ಮಾಡುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ6:48 PM
ತಮಿಳುನಾಡು ಬಾವಿಯಲ್ಲಿ ಕನ್ನಡಿಗರ 17 ಕೆಜಿ ಬಂಗಾರ ಪತ್ತೆ! ಚಿನ್ನಾಭರಣ ನೋಡಿ ಬೆಚ್ಚಿಬಿದ್ದ ಪೊಲೀಸರು!
ತಮಿಳುನಾಡಿನ ಮದುರೈ ಬಾವಿಯಲ್ಲಿ ದಾವಣಗೆರೆಯ ಕನ್ನಡಿಗರಿಗೆ ಸೇರಿದ 17 ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಈ ಬಾವಿಯಲ್ಲಿ ಸಿಕ್ಕ ಚಿನ್ನಾಭರಣವನ್ನು ನೋಡಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಪೂರ್ತಿ ಓದಿ6:32 PM
ಡಿಸೆಂಬರ್ ಅಂತ್ಯದ ವೇಳೆಗೆ ಭಾರತದ ಬಾಹ್ಯ ಸಾಲ $717.9 ಬಿಲಿಯನ್‌ಗೆ ಏರಿಕೆ!
ಭಾರತದ ತ್ರೈಮಾಸಿಕ ಬಾಹ್ಯ ಸಾಲ ವರದಿಯ ಪ್ರಕಾರ, ತ್ರೈಮಾಸಿಕದಿಂದ ತ್ರೈಮಾಸಿಕದ ಆಧಾರದ ಮೇಲೆ, ಸೆಪ್ಟೆಂಬರ್ 2024 ರ ಅಂತ್ಯದ ವೇಳೆಗೆ USD 712.7 ಶತಕೋಟಿಯಷ್ಟಿದ್ದ ಬಾಹ್ಯ ಸಾಲದಲ್ಲಿ ಶೇಕಡಾ 0.7 ರಷ್ಟು ಹೆಚ್ಚಳವಾಗಿದೆ.
ಪೂರ್ತಿ ಓದಿ5:49 PM
ಧೋನಿ ಆರ್‌ಸಿಬಿ ಎದುರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೇಕೆ? ಅಚ್ಚರಿ ಮಾಹಿತಿ ಬಿಚ್ಚಿಟ್ಟ ಕೋಚ್ ಫ್ಲೆಮಿಂಗ್!
ಧೋನಿ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸ್ಟೀಫನ್ ಫ್ಲೆಮಿಂಗ್ ಸ್ಪಷ್ಟನೆ ನೀಡಿದ್ದಾರೆ. ಮೊಣಕಾಲು ನೋವಿನಿಂದಾಗಿ ಧೋನಿ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಅವರ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಸಿಎಸ್‌ಕೆ ತಂಡಕ್ಕೆ ಅಮೂಲ್ಯವೆಂದು ಫ್ಲೆಮಿಂಗ್ ಹೇಳಿದ್ದಾರೆ.
ಪೂರ್ತಿ ಓದಿ5:42 PM
ಕರೆಂಟ್ ಬಿಲ್ ಕಟ್ಟದ ಕಾರಣಕ್ಕೆ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮವನ್ನು 5 ದಿನ ಕತ್ತಲೆಯಲ್ಲಿಟ್ಟ ಗುಜರಾತ್ ಸರ್ಕಾರ!
ಭುಜ್ ತಾಲ್ಲೂಕಿನ ಮಾಧಪರ್ ಜುನಾವಾಸ್ ಗ್ರಾಮ ಪಂಚಾಯತ್‌ನಲ್ಲಿ ಪಿಜಿವಿಸಿಎಲ್ ವಿದ್ಯುತ್ ಬಿಲ್ ಪಾವತಿಸದ ಕಾರಣ ಐದು ದಿನಗಳ ಕಾಲ ಬೀದಿ ದೀಪಗಳು ಆರಿಹೋಗಿದ್ದವು.
ಪೂರ್ತಿ ಓದಿ5:11 PM
ಕೃಷಿ ಹೊಂಡದಲ್ಲಿ ಮುಳುಗಿ ಅಪ್ಪ-ಮಗ ಸಾವು: ಈಜು ಕಲಿಸಲು ಹೋಗಿ ದುರಂತ!
ತಮಿಳುನಾಡಿನಲ್ಲಿ ಕೃಷಿ ಹೊಂಡದಲ್ಲಿ ಈಜುಕಲಿಸಲು ಹೋದ ತಂದೆ ಮತ್ತು ಮಗ ದುರಂತವಾಗಿ ಸಾವನ್ನಪ್ಪಿದ್ದಾರೆ. ಮದ್ಯಪಾನ ಮಾಡಿ ಮಗನಿಗೆ ಈಜು ಕಲಿಸಲು ಹೋದಾಗ ಆಳಕ್ಕೆ ಇಳಿದು ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ.
ಪೂರ್ತಿ ಓದಿ5:02 PM
ಏಪ್ರಿಲ್ 2025: ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುವ 10 ಪ್ರಮುಖ ಬದಲಾವಣೆಗಳು!
2025ರ ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದ್ದು, ಟೋಲ್ ದರಗಳು, ಎಲ್‌ಪಿಜಿ ಬೆಲೆಗಳು, ಆದಾಯ ತೆರಿಗೆ ಸ್ಲ್ಯಾಬ್‌ಗಳು ಮತ್ತು ಡಿಜಿಟಲ್ ಪಾವತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಈ ಬದಲಾವಣೆಗಳು ನಿಮ್ಮ ಹಣಕಾಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಿರಿ.
ಪೂರ್ತಿ ಓದಿ4:50 PM
ವೈದ್ಯೆ ನಿರ್ಲಕ್ಷ್ಯ- ಡೆಲಿವರಿ ವೇಳೆ ಹೊಟ್ಟೆಯಲ್ಲಿಯೇ ಉಳಿದ ಕತ್ತರಿ! 17 ವರ್ಷಗಳ ಬಳಿಕ ನಡೆದದ್ದೇ ಪವಾಡ...
ವೈದ್ಯೆಯೊಬ್ಬರ ನಿರ್ಲಕ್ಷ್ಯದಿಂದ ಮಹಿಳೆಯ ಡೆಲವರಿ ಸಮಯದಲ್ಲಿ ಕತ್ತರಿಯೊಂದು ಹೊಟ್ಟೆಯಲ್ಲಿಯೇ ಉಳಿದ ಘಟನೆ ನಡೆದಿದೆ. 17 ವರ್ಷ ಆ ಮಹಿಳೆ ಅನುಭವಿಸಿದ ಯಾತನೆ ಬಳಿಕ ಇದೀಗ ಅದರ ಬಗ್ಗೆ ರಿವೀಲ್ ಆಗಿದೆ.
4:38 PM
ಯಕ್ಷಗಾನ ಭಾಗವತ ಸತೀಶ್ ಆಚಾರ್ಯ ರಸ್ತೆ ಅಪಘಾತದಲ್ಲಿ ಸಾವು
ಪ್ರಸಿದ್ಧ ಯಕ್ಷಗಾನ ಭಾಗವತ ಸತೀಶ್ ಆಚಾರ್ಯ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸುಳ್ಯದಲ್ಲಿ ಯಕ್ಷಗಾನ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಬೆಳ್ತಂಗಡಿ ಬಳಿ ಈ ದುರ್ಘಟನೆ ಸಂಭವಿಸಿದೆ.
ಪೂರ್ತಿ ಓದಿ4:33 PM
ನಾಳೆಯಿಂದ ಹಾಲು, ಮೊಸರು, ನೀರು, ಕರೆಂಟ್ ಎಲ್ಲಾನೂ ದುಬಾರಿ! ಏನ್ಮಾಡೋದು ಬಡಜನರ ಕಿಸೆಯಲ್ಲಿ ದುಡ್ಡೇ ಇಲ್ಲಾರೀ!
ಬೆಂಗಳೂರಿನಲ್ಲಿ ಏಪ್ರಿಲ್ 1 ರಿಂದ ಹಾಲು, ಮೊಸರು, ನೀರು, ವಿದ್ಯುತ್ ದರಗಳು ಹೆಚ್ಚಾಗಲಿವೆ. ಇದರ ಜೊತೆಗೆ ಕಸ ವಿಲೇವಾರಿಗೂ ತೆರಿಗೆ ಕಟ್ಟಬೇಕಾಗುತ್ತದೆ. ಈ ಬೆಲೆ ಏರಿಕೆಯು ಜನಸಾಮಾನ್ಯರಿಗೆ ಹೊರೆಯಾಗಲಿದೆ.
ಪೂರ್ತಿ ಓದಿ3:44 PM
ಚಾಣಕ್ಯನ 7 ಸೂತ್ರ ಅಳವಡಿಸಿಕೊಂಡ ವ್ಯಕ್ತಿಗೆ ಸೋಲೆಂಬುದೇ ಇಲ್ಲ, ಲೈಫ್ ಸೆಟಲ್
ಚಾಣಾಕ್ಯ ಪ್ರತಿಯೊಬ್ಬರ ಯಶಸ್ಸಿಗೆ 7 ಸೂತ್ರ ನೀಡಿದ್ದಾನೆ. ಈ ಸೂತ್ರ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಶತ ಸಿದ್ದ. ಇಲ್ಲಿ ಸೋಲು ಇರುವುದಿಲ್ಲ, ಸೆಟ್ಲ್ ಆಗಬೇಕು ಎಂದರು ಈ ಸೂತ್ರ ಪಾಲಿಸಿದರೆ ಲೈಫ್ ಜಿಂಗಾಲಾಲ
ಪೂರ್ತಿ ಓದಿ3:03 PM
ಪಾದಯಾತ್ರೆ ಮೂಲಕ ದ್ವಾರಕಾಗೆ ಅನಂತ್ ಅಂಬಾನಿ, ಹುಟ್ಟುಹಬ್ಬಕ್ಕೆ ಶ್ರೀಕೃಷ್ಣನ ದರ್ಶನ
ಅನಂತ್ ಅಂಬಾನಿ ಧಾರ್ಮಿಕ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ತನ್ನ 30ನೇ ಹುಟ್ಟು ಹಬ್ಬಕ್ಕೆ ಅನಂತ್ ಅಂಬಾನಿ ಶ್ರೀಕೃಷ್ಣನ ದರ್ಶನ ಪಡೆಯಲು ದ್ವಾರಕಾಗೆ ಪಾದಯಾತ್ರೆ ಆರಂಭಿಸಿದ್ದಾರೆ.
ಪೂರ್ತಿ ಓದಿ1:39 PM
ಮಹಾಕುಂಭ ವೈರಲ್ ಬೆಡಗಿ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಅರೆಸ್ಟ್
ಮಹಾಕುಂಭದ ವೈರಲ್ ಬೆಡಗಿ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ಆಗಿದ್ದಾರೆ. ನಿರ್ದೇಶಕರಿಗೆ ಕೋರ್ಟ್ ಜಾಮೀನು ಕೂಡ ನಿರಾಕರಿಸಿದೆ.
ಪೂರ್ತಿ ಓದಿ1:35 PM
ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗಲ್ಲ: ದಿನೇಶ್ ಗುಂಡೂರಾವ್
ಬಿಜೆಪಿಯಿಂದ ಉಚ್ಛಾಟಿತರಾದ ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಯತ್ನಾಳ್ ಕಾಂಗ್ರೆಸ್ ಕಡೆ ಬರಲು ಸಾಧ್ಯವಿಲ್ಲ, ಜೆಡಿಎಸ್ ಕಡೆ ಬೇಕಿದ್ದರೆ ಹೋಗಬಹುದು ಎಂದಿದ್ದಾರೆ.
ಪೂರ್ತಿ ಓದಿ1:06 PM
ಮೂರು ಆಸ್ಪತ್ರೆ ಗಳನ್ನು ಸುತ್ತಿಸಿ ರಿಪೇರಿ ಮಾಡಿಸಿದರು: ಬಿದ್ದರೂ ಬಿಡದ ಎಂಎಸ್‌ಎನ್ ಹಾಸ್ಯಪ್ರಜ್ಞೆಗೆ ಸಲಾಂ!
ಎಂಎಸ್‌ಎನ್ ಬಿದ್ದಿದ್ದೂ ಆಯ್ತು, ಈಗ ಸ್ವಲ್ಪ ಮಟ್ಟಿಗೆ ಎದ್ದಿದ್ದೂ ಆಯ್ತು.. ಮುಂದೆ ಆದಷ್ಟೂ ಬೇಗ ಸರಿಹೋಗಲಿ, ಮೊದಲಿನಂತೆ ಓಡಾಡಿಕೊಂಡು, ಮಾತಾಡಿಕೊಂಡು, ತಾವೂ ನಕ್ಕು, ಬೇರೆಯವರನ್ನೂ ನಗಿಸುವ ಕಾಯಕ ಮುಂದುವರಿಸಲಿ ಎಂಬ ಕೂಗೂ ಇಡೀ ಕರ್ನಾಟಕದ ಮೂಲೆಮೂಲೆಯಿಂದ ಕೇಳಿ ಬರುತ್ತಿದೆ..
ಪೂರ್ತಿ ಓದಿ1:02 PM
ಅಂಗನವಾಡಿ ಮಕ್ಕಳ ಹೊಟ್ಟೆ ಸೇರಬೇಕಾದ ಮೊಟ್ಟೆ ಹಣಕ್ಕೆ ಕನ್ನ ಹಾಕಿದ ಕಳ್ಳಿಯರು! ಸಚಿವರ ತಂಗಿಯಿಂದ ಕಮೀಷನ್ ವಸೂಲಿ!
ರಾಯಚೂರಿನಲ್ಲಿ ಅಂಗನವಾಡಿ ಮಕ್ಕಳ ಮೊಟ್ಟೆ ಹಣದಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ. ಮೇಲ್ವಿಚಾರಕಿಯರ ಮೂಲಕ ಕಮಿಷನ್ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾಜಿ ಸಚಿವರ ಸಹೋದರಿಯೂ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪೂರ್ತಿ ಓದಿ12:06 PM
ನಾಳೆಯಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿ; ಯಾರು ಅರ್ಹರು, ಎಷ್ಟು ಪಿಂಚಣಿ ಬರಲಿದೆ? ಇಲ್ಲಿದೆ ಲೆಕ್ಕಾಚಾರ!
ಏಕೀಕೃತ ಪಿಂಚಣಿ ಯೋಜನೆ (UPS) ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ಭದ್ರತೆ ಒದಗಿಸಲಿದೆ. ಅರ್ಹ ನೌಕರರು ಮೂರು ತಿಂಗಳೊಳಗೆ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಪೂರ್ತಿ ಓದಿ11:49 AM
ಮೋದಿ, ಸಚಿನ್, ಕಾಮತ್;ಎಲ್ಲರೂ ಘಿಬ್ಲಿ ಇಮೇಜ್ ಹಿಂದೆ ಓಡಿದ ಕಾರಣ ಮೊದಲ ಬಾರಿ ChatGPT ಡೌನ್
ಎಲ್ಲರೂ ತಮ್ಮದೂ ಒಂದು ಇರ್ಲಿ ಎಂದು ಘಿಬ್ಲಿ ಇಮೇಜ್ ಪೋಸ್ಟ್ ಮಾಡಿದ್ದಾರೆ. ಪರಿಣಾಮ ಇದೇ ಮೊದಲ ಬಾರಿಗೆ ಚಾಟ್‌ಜಿಪಿಟಿ ಡೌನ್ ಆಗಿದೆ. ಖುದ್ದು ಒಪನ್ ಎಐ ಸಿಇಒ ಮನವಿ ಮಾಡಿದರೂ ಇದೀಗ ಜನ ಘಿಬ್ಲಿ ಟ್ರೆಂಡ್‌ನಿಂದ ಹಿಂದೆ ಸರಿದಿಲ್ಲ.
ಪೂರ್ತಿ ಓದಿ11:13 AM
ಭಾರತದ ಮೊದಲ ಹೈಡ್ರೋಜನ್ ರೈಲು ಇಂದಿನಿಂದ ಸಂಚಾರ ಆರಂಭ! ಇದರ ವಿಶೇಷತೆಗಳೇನು?
ಭಾರತೀಯ ರೈಲ್ವೆಯ ಮೊದಲ ಹೈಡ್ರೋಜನ್ ರೈಲು ಇಂದು ಓಡಲಿದೆ! ಇದು ಜೀಂದ್ ಸೋನಿಪತ್ ಮಾರ್ಗದಲ್ಲಿ ಚಲಿಸಲಿದ್ದು, ಮಾಲಿನ್ಯ ಕಡಿಮೆ ಮಾಡಲು ಸಹಾಯಕವಾಗಲಿದೆ. ಇದರ ವಿಶೇಷತೆಗಳನ್ನು ತಿಳಿಯಿರಿ!
ಪೂರ್ತಿ ಓದಿ11:05 AM
ಕೋವಿಡ್ ಲಸಿಕೆ ಮೂಲಕ ಮೋದಿ ರಾಜತಾಂತ್ರಿಕತೆ ಹೊಗಳಿದ ಶಶಿ ತರೂರ್, ಕಾಂಗ್ರೆಸ್‌ಗೆ ಇರಿಸು ಮುರಿಸು
ಕಾಂಗ್ರೆಸ್ ನಾಯಕ ಶಸಿ ತರೂರ್ ಇದೀಗ ಮತ್ತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರ ನಡೆಯನ್ನು ಶ್ಲಾಘಿಸಿದ್ದಾರೆ. ಲಸಿಕೆ ಮೂಲಕ ಸಾಧಿಸಿದ ರಾಜತಾಂತ್ರಿಕ ನಡೆ ಭಾರತವನ್ನು ವಿಶ್ವ ನಾಯಕನಾಗಿ ಗಟ್ಟಿಗೊಳಿಸಿತು ಎಂದಿದ್ದಾರೆ. ಆದರೆ ಶಶಿ ತರೂರ್ ನಿಲುವು ಕಾಂಗ್ರೆಸ್‌ಗೆ ತೀವ್ರ ಇರಿಸು ಮುರಿಸು ತಂದಿದೆ.
10:08 AM
ಕಸಸಂಗ್ರಹ, ವಿಲೇವಾರಿ ವೆಚ್ಚ ವಸೂಲಿಗೆ ಬಿಬಿಎಂಪಿ ನಿರ್ಧಾರ,ನಾಳೆಯಿಂದ ಜಾರಿ
ನಾಳೆಯಿಂದ ಬೆಂಗಳೂರಿನಲ್ಲಿ ಕಸದ ಸೆಸ್ ಜಾರಿಯಾಗುತ್ತಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿಗೆ ವೆಚ್ಚ ವಸೂಲಿ ಮಾಡಲು ನಿರ್ಧರಿಸಲಾಗಿದೆ.
ಪೂರ್ತಿ ಓದಿ9:29 AM
Breaking ಹಾಲಿನ ಬೆನ್ನಲ್ಲೇ ರಾಜ್ಯದ ಜನತಗೆ ಮತ್ತೊಂದು ಬೆಲೆ ಏರಿಕೆ ಶಾಕ್
ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿ ಜನಸಾಮಾನ್ಯರಿಗ ಶಾಕ್ ನೀಡಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಬೆಲೆ ಏರಿಕೆ ಶಾಕ್ ಕಾದಿದೆ. ಏನದು?
ಪೂರ್ತಿ ಓದಿ8:43 AM
ಎಚ್.ಡಿ.ಕುಮಾರಸ್ವಾಮಿ ‘ನ್ಯಾಯಾಂಗ ನಿಂದನೆ’ ಕೇಸ್ ಹೈನಲ್ಲೇ ಪ್ರಶ್ನಿಸಿ: ಸುಪ್ರೀಂಕೋರ್ಟ್
ರಾಮನಗರದ ಬಿಡದಿ ಕೇತಗಾನಹಳ್ಳಿ ಬಳಿ ಜಮೀನು ಒತ್ತುವರಿ ತೆರವು ಸಂಬಂಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನ್ಯಾಯಾಂಗ ನಿಂದನೆ ಅರ್ಜಿಗೆ ತಡೆ ಕೋರಿ ಸಲ್ಲಿಸಿದ್ದ ಪ್ರಕರಣದಲ್ಲಿ ಮಹತ್ವದ ಆದೇಶ ಹೊರಬಿದ್ದಿದೆ.
7:54 AM
ಪ್ರಬಲ ಭೂಕಂಪದ ಬೆನ್ನಲ್ಲೇ ಕೆಲ ತೀರ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ
ಥಾಯ್ಲೆಂಡ್, ಮ್ಯಾನ್ಮಾರ್‌ನಲ್ಲಿ ತೀವ್ರ ಭೂಕಂಪ ಸಂಭವಿಸಿದ ಬೆನ್ನಲ್ಲೇ ಇದೀಗ ತೀರ ಪ್ರದೇಶಕ್ಕೆ ಸುನಾಮಿ ಭೀತಿ ಎದುರಾಗಿದೆ.
ಪೂರ್ತಿ ಓದಿ7:16 AM
ರಂಜಾನ್ ಹಬ್ಬದಿಂದ ಬೆಂಗಳೂರಿನ ಹಲವು ರಸ್ತೆ ಬಂದ್
ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳು ಬಂದ್ ಮಾಡಲಾಗಿದೆ. ಹೀಗಾಗಿ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರ ಸೂಚಿಸಿದ್ದಾರೆ.
ಡೈರಿ ಸರ್ಕಲ್ ಕಡೆಯಿಂದ ಬರುವ ವಾಹನಗಳು ತಿಲಕ್ ನಗರ, ಸ್ವಾಗತ್ ಜಂಕ್ಷನ್, ಜಯನಗರ ಈಸ್ಟ್ ಎಂಡ್ ಮೂಲಕ ಜಯದೇವ ಆಸ್ಪತ್ರೆಯಿಂದ ಬನ್ನೇರುಘಟ್ಟ ರಸ್ತೆ ಸಂಪರ್ಕ.
ಬನ್ನೇರುಘಟ್ಟ ರಸ್ತೆಯಿಂದ ಬರುವ ವಾಹನಗಳು.
ಜೇಡಿಮರ ಜಂಕ್ಷನ್, ಜಯದೇವ, ಈಸ್ಟ್ ಎಂಡ್, ಸ್ವಾಗತ್ ಜಂಕ್ಷನ್ ಮೂಲಕ ಡೈರಿ ಸರ್ಕಲ್ ತಲುಪುವುದು.
ಅದೇ ರೀತಿ ನಾಗವಾರ ಪಾಟರಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ.
ನಾಗವಾರ ಜಂಕ್ಷನ್ ನಿಂದ ಪಾಟರಿ ರಸ್ತೆ ಸರ್ಕಲ್ ವರೆಗೆ ಸಂಚಾರ ನಿರ್ಬಂಧ.
ನಾಗವಾರ ಕಡೆಯಿಂದ ಬರುವ ವಾಹನಗಳು ಹೆಣ್ಣೂರು ಜಂಕ್ಷನ್, ಕಾಚರಕನಹಳ್ಳಿ, ಲಿಂಗರಾಜಪುರಂ, ಪುಲಕೇಶಿನಗರ ಪೊಲೀಸ್ ಠಾಣೆ, ಹೇನ್ಸ್ ರಸ್ತೆ ಮೂಲಕ ಸಂಚಾರ.
ಶಿವಾಜಿನಗರ ಕಡೆಯಿಂದ ಸಂಚರಿಸುವ ವಾಹನಗಳು.
ಸ್ಪೆನ್ಸರ್ ರಸ್ತೆ, ಕೋಲ್ಸ್ ರಸ್ತೆ, ವೀಲರ್ಸ್ ರಸ್ತೆ ಮೂಲಕ ನಾಗವಾರ, ಬಾಣಸವಾಡಿ ಕಡೆಗೆ ಸಂಚಾರಕ್ಕೆ ವ್ಯವಸ್ಥೆ