LIVE NOW
Published : Nov 04, 2026, 07:25 AM ISTUpdated : Nov 04, 2026, 12:02 PM IST

Karnataka News Live: ಒಂಬತ್ತು, ಒಂಬತ್ತು ತೋಳ ಹಳ್ಳಕ್ಕೆ ಬಿತ್ತು; ಜೈದೇವ್‌ಗೆ ಭೂಮಿಕಾ ಕಿಲ್ಲಿಂಗ್ ಲುಕ್

ಸಾರಾಂಶ

ಕಬ್ಬಿನ ದರ ನಿಗದಿ ಸಂಬಂಧ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ನಡೆಸಿದ ಮೂರು ಸುತ್ತಿನ ಸಂಧಾನ ಸಭೆಗಳು ಫಲಪ್ರದವಾಗಲಿಲ್ಲ. ಕಾರ್ಖಾನೆಗಳು ಮುಂದಿಟ್ಟ ₹3,500 ಮೊದಲ ಕಂತು ಹಾಗೂ ಸಕ್ಕರೆ ಮಾರಾಟ ದರ ಏರಿದರೆ 2ನೇ ಕಂತಿನಲ್ಲಿ ₹500 ಎರಡನೇ ಕಂತಿನ ಪ್ರಸ್ತಾಪವನ್ನು ರೈತ ಮುಖಂಡರು ಸಾರಾಸಗಟಾಗಿ ತಿರಸ್ಕರಿಸಿದ್ದರಿಂದ ದರ ನಿಗದಿ ಕಗ್ಗಂಟು ಮುಂದುವರಿದಿದೆ. ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ. ಇಂದು ಮತ್ತೆ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಬೆಳಗಾವಿ ಸಭೆಯಲ್ಲಿ ಏನಾಯ್ತು?

ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದೀರ್ಘ ಮಾತುಕತೆ ನಡೆಯಿತು. ಪ್ರತಿ ಟನ್ ಕಬ್ಬಿಗೆ ಮೊದಲ ಕಂತಿನಲ್ಲಿ ₹3,500 ನೀಡುತ್ತೇವೆ. ಸಕ್ಕರೆಯ ಮಾರಾಟ ದರ ಪ್ರತಿ ಕೆ.ಜಿ.ಗೆ ₹50ಕ್ಕೆ ಏರಿಕೆಯಾದರೆ ಎರಡನೇ ಕಂತಿನಲ್ಲಿ ಹೆಚ್ಚುವರಿಯಾಗಿ ₹500 ನೀಡುತ್ತೇವೆ. ಒಟ್ಟು ₹4,000 ನೀಡಲು ಸಾಧ್ಯ ಎಂದು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಪ್ರಸ್ತಾಪಿಸಿದರು. ಇದಕ್ಕೆ ರೈತರು ಒಪ್ಪಲಿಲ್ಲ.

12:02 PM (IST) Nov 04

ಒಂಬತ್ತು, ಒಂಬತ್ತು ತೋಳ ಹಳ್ಳಕ್ಕೆ ಬಿತ್ತು; ಜೈದೇವ್‌ಗೆ ಭೂಮಿಕಾ ಕಿಲ್ಲಿಂಗ್ ಲುಕ್

ಅಮೃತಧಾರೆ ಸೀರಿಯಲ್ ಅಂತಿಮ ಹಂತದಲ್ಲಿದ್ದು, ಶತ್ರುಗಳಾದ ಜೈದೇವ್ ಮತ್ತು ಶಕುಂತಲಾಳ ಅಸಲಿ ಮುಖ ಗೌತಮ್‌ಗೆ ತಿಳಿದಿದೆ. ಭೂಗತನಾಗಿರುವ ಜೈದೇವ್‌ನನ್ನು ಹಿಡಿಯಲು ಭೂಮಿಕಾ ಮತ್ತು ಅವಳ ತದ್ರೂಪಿ ದೀಪಿಕಾ ಮೂಲಕ ಗೌತಮ್ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಈ ಅವಳಿ ರಹಸ್ಯ ಯಾವಾಗ ಬಯಲಾಗುತ್ತದೆ ಎಂಬ ಕುತೂಹಲ ಮೂಡಿದೆ.
Read Full Story

12:00 PM (IST) Nov 04

ಕಬ್ಬಿಗೆ ₹5500 ಪಟ್ಟು - ರೈತರ ಬಗ್ಗೆ ಭಾಷಣ ಬೇಡ, ದರ ಘೋಷಿಸಿ, ಭುಗಿಲೆದ್ದ ಅನ್ನದಾತರ ಆಕ್ರೋಶ!

ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ. ಪ್ರತಿ ಟನ್ ಕಬ್ಬಿಗೆ ₹5,500 ನಿಗದಿಪಡಿಸಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಬೇಡಿಕೆ ಈಡೇರದಿದ್ದರೆ ಜೈಲ್ ಭರೋ ಚಳವಳಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.
Read Full Story

11:52 AM (IST) Nov 04

ಮುರಸು ಚಂಡಮಾರುತ ಎಫೆಕ್ಟ್ - ಕೊಡಗಿನಲ್ಲಿ ವರುಣನ ಅಬ್ಬರ; ಕೆರೆಯಂತಾದ ಮಡಿಕೇರಿ ಓಂಕಾರೇಶ್ವರ ದೇಗುಲ ರಸ್ತೆ

ಮುರಸು ಚಂಡಮಾರುತದ ಪ್ರಭಾವದಿಂದ ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಮಡಿಕೇರಿಯ ಓಂಕಾರೇಶ್ವರ ದೇವಾಲಯದ ರಸ್ತೆ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

Read Full Story

11:35 AM (IST) Nov 04

Hassan - ಹಾಸನಾಂಬೆ ದರ್ಶನಕ್ಕೆ 5 ದಿನವಷ್ಟೇ ಬಾಕಿ, ಟಿಕೆಟ್-ಲಾಡು ಮಾರಾಟದಿಂದ ಕೋಟಿ ಕೋಟಿ ಆದಾಯ

ಹಾಸನಾಂಬೆ ದೇವಿಯ ದರ್ಶನಕ್ಕೆ ಈ ಬಾರಿ 9 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದು, ಟಿಕೆಟ್ ಹಾಗೂ ಲಾಡು ಮಾರಾಟದಿಂದ ಕೋಟಿ ಕೋಟಿ ಆದಾಯ ಸಂಗ್ರಹವಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಸುಸಜ್ಜಿತ ವ್ಯವಸ್ಥೆ ಮಾಡಿದ್ದು, ಕ್ರೀಡೋತ್ಸವ ಮತ್ತು ರಾಸುಗಳ ಪ್ರದರ್ಶನವೂ ಗಮನ ಸೆಳೆದಿದೆ. ಪಾಸ್ ಹಂಚಿಕೆಯಲ್ಲಿ ಯಾವುದೇ ರಾಜಕೀಯ ಭಿನ್ನಮತವಿಲ್ಲ ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಸ್ಪಷ್ಟಪಡಿಸಿದ್ದಾರೆ.

Read Full Story

11:28 AM (IST) Nov 04

ಗೃಹಲಕ್ಷ್ಮಿ ಯೋಜನೆ ₹2,600 ಕೋಟಿ ಹಣ ಡೈವರ್ಟ್ - ಗ್ಯಾರಂಟಿ ಹೆಸರಲ್ಲಿ ತಾಯಂದಿರಿಗೆ ಅಪಮಾನ - ನಿಖಿಲ್ ಕುಮಾರಸ್ವಾಮಿ

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ₹2,600 ಕೋಟಿಗೂ ಅಧಿಕ ಹಣವನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ. ಸರ್ಕಾರದ ಬಳಿ ಹಣವಿಲ್ಲದೆ ಬೊಕ್ಕಸ ಖಾಲಿಯಾಗಿದೆ ಹಾಗೂ ಈ ಹಣವನ್ನು ಉಪಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

Read Full Story

11:27 AM (IST) Nov 04

ಮಗು ಖಾಸಗಿ ಆಸ್ಪತ್ರೆಗೆ, ತಾಯಿ ಸರ್ಕಾರಿ ಆಸ್ಪತ್ರೆಲಿ..! 14 ತಿಂಗಳಿಂದ ಇಲ್ಲಿ ವೈದ್ಯರೇ ಇಲ್ಲ!

ರಾಮದುರ್ಗ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 14 ತಿಂಗಳಿಂದ ಮಕ್ಕಳ ತಜ್ಞ ವೈದ್ಯರಿಲ್ಲದೆ ನವಜಾತ ಶಿಶುಗಳು ಹಾಗೂ ಬಾಣಂತಿಯರು ತೀವ್ರ ಪರದಾಡುವಂತಾಗಿದೆ. ಹೆರಿಗೆಯ ನಂತರ ಶಿಶುವಿಗೆ ಅನಾರೋಗ್ಯವಾದರೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಅಲೆಯುವ ಅನಿವಾರ್ಯತೆ ಬಡ ಕುಟುಂಬಗಳಿಗೆ ಎದುರಾಗಿದೆ.

Read Full Story

11:10 AM (IST) Nov 04

ಕರಾವಳಿಗೆ ಸೂಕ್ತ ಭತ್ತದ ತಳಿ ತಲಾಶ್‌ ಮಾಡುತ್ತಿರುವ ಕೆವಿಕೆ! 10 ಅಪರೂಪದ ಔಷಧೀಯ ಭತ್ತದ ತಳಿಗಳ ವೈಜ್ಞಾನಿಕ ಪರೀಕ್ಷೆ

ಮಂಗಳೂರಿನ ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರವು ಕರಾವಳಿ ಭಾಗಕ್ಕೆ ಸೂಕ್ತವಾದ ಭತ್ತದ ತಳಿಗಳನ್ನು ಹುಡುಕಲು 10 ಸಾಂಪ್ರದಾಯಿಕ, ಔಷಧೀಯ ಮತ್ತು ಸುಗಂಧಿತ ಭತ್ತದ ತಳಿಗಳ ವೈಜ್ಞಾನಿಕ ಪರೀಕ್ಷೆ ನಡೆಸುತ್ತಿದೆ. ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೇಳೇರಿ ಅವರಿಂದ ಪಡೆದ ಈ ಅಪರೂಪದ ತಳಿಗಳನ್ನು ಪ್ರಾಯೋಗಿಕವಾಗಿ ಬೆಳೆಸಲಾಗುತ್ತಿದ್ದು, ರೈತರಿಗೆ ಸೂಕ್ತವಾದದ್ದನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ.
Read Full Story

11:05 AM (IST) Nov 04

Mangaluru - 6700 ಗಾಯಕರು ಭಾಗಿ, 4500+ ಕೊಂಕಣಿ ಹಾಡು ಪ್ರಸ್ತುತಿ; ಸತತ 12 ದಿನ ಹಾಡಿ ಗಿನ್ನೆಸ್‌ ದಾಖಲೆ ಯತ್ನ

ಮಂಗಳೂರಿನಲ್ಲಿ ಮಾಂಡ್ ಸೊಭಾಣ್ ವತಿಯಿಂದ ಪ್ರಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನ ಆರಂಭವಾಗಿದೆ. ಗಿನ್ನೆಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ 12 ದಿನಗಳ ಕಾಲ ನಿರಂತರ ಗಾಯನ ಮ್ಯಾರಥಾನ್ ನಡೆಯಲಿದೆ. ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Read Full Story

11:02 AM (IST) Nov 04

ಶಿವಮೊಗ್ಗ - ಸೂರಣಗಿ ಗ್ರಾಮದಲ್ಲಿ ಭೀಕರ ದುರಂತ; ಶೆಡ್‌ಗೆ ಬೆಂಕಿ ಬಿದ್ದ 300ಕ್ಕೂ ಹೆಚ್ಚು ಕುರಿಗಳು ಸಜೀವ ದಹನ!

ಸೊರಬ: ಕುರಿ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಶೆಡ್‌ನಲ್ಲಿ 300ಕ್ಕೂ ಹೆಚ್ಚು ಕುರಿ, ಕುರಿಮರಿಗಳು ಸಜೀವ ದಹನಗೊಂಡ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.

Read Full Story

11:00 AM (IST) Nov 04

ಹಾಸನಾಂಬೆ ದರ್ಶನ ಪಡೆದ ಸಿಎಂ ಡಿಕೆಶಿ ಪುತ್ರ ಆಕಾಶ್ ಶಿವಕುಮಾರ್! ಸಚಿವ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್ ಸಾಥ್!

ಐತಿಹಾಸಿಕ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಡಿ.ಕೆ. ಶಿವಕುಮಾರ್ ಅವರ ಪುತ್ರ ಆಕಾಶ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಂಸದ ಶ್ರೇಯಸ್ ಪಟೇಲ್ ಮತ್ತು ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಇವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ವಿಐಪಿ ಭೇಟಿಯ ಹಿನ್ನೆಲೆಯಲ್ಲಿ ದೇಗುಲದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

Read Full Story

10:56 AM (IST) Nov 04

Mandya ARAI - ಮುದ್ದನಘಟ್ಟ-ಹೆಗ್ಗಡತಿಹಳ್ಳಿ 105 ಎಕರೆ ಭೂಮಿ ವಿವಾದ - ಗೋಮಾಳವಲ್ಲ

ಮಂಡ್ಯದ ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿಯಲ್ಲಿ ಎಆರ್‌ಎಐ ಸ್ಥಾಪನೆಗೆ ಗುರುತಿಸಿರುವ 100 ಎಕರೆ ಜಮೀನು ಖಾಲಿ ಗೋಮಾಳವಲ್ಲ ಎಂದು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಜಾಗದಲ್ಲಿ ದೀರ್ಘಕಾಲದಿಂದ ರೈತರು ಕೃಷಿ ಮಾಡುತ್ತಿದ್ದು, ಸರ್ಕಾರ ವಾಸ್ತವ ಸ್ಥಿತಿ ಮರೆಮಾಚಿ ವರದಿ ನೀಡಿದೆ ಎಂದು ಆರೋಪಿಸಲಾಗಿದೆ. ರೈತರೊಂದಿಗೆ ಜಂಟಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಲಾಗಿದೆ.

Read Full Story

10:40 AM (IST) Nov 04

ಸಿದ್ದರಾಮಯ್ಯ ಆಪ್ತನಿಂದ 'ಕೈ'ಗೆ ಶಾಕ್ - ಸದ್ಯ ಕಾಂಗ್ರೆಸ್‌ನಲ್ಲೇ ಇರ್ತೇನೆ ಆಮೇಲೆ ನೋಡೋಣ - ಕೆ.ಎನ್.ರಾಜಣ್ಣ

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ಪಕ್ಷ ಬಿಡುವ ಬಗ್ಗೆ ಅಚ್ಚರಿಯ ಮುನ್ಸೂಚನೆ ನೀಡಿದ್ದಾರೆ. ಕ್ಷೇತ್ರ ಮರುವಿಂಗಡಣೆ ಬಳಿಕ ತಮ್ಮ ರಾಜಕೀಯ ನಿಲುವು ಬದಲಾಗಬಹುದು ಎಂದು ಅವರು ತಿಳಿಸಿದ್ದಾರೆ. ಇತ್ತ, ಪಕ್ಷ ವಿರೋಧಿ ಚಟುವಟಿಕೆಗಾಗಿ ರಾಜಣ್ಣ ಅವರನ್ನು ಉಚ್ಚಾಟಿಸುವಂತೆ ಸಚಿವ ಎಚ್.ಸಿ. ಬಾಲಕೃಷ್ಣ ಆಗ್ರಹಿಸಿದ್ದಾರೆ.

Read Full Story

10:29 AM (IST) Nov 04

ಚಾಮರಾಜನಗರದಲ್ಲಿ ಅಚ್ಚರಿ ತೆಂಗಿನಮರ; ದೈವ ಶಕ್ತಿಯೋ? ಪ್ರಕೃತಿ ವಿಸ್ಮಯವೋ? ಕೌತುಕ!

ಚಾಮರಾಜನಗರದ ತೆಂಗಿನಮರವೊಂದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಈ ತೆಂಗಿನ ಮರ ನೋಡಲು ಸುತ್ತಲಿನ ರೈತರೆಲ್ಲರೂ ಆಗಮಿಸುತ್ತಿದ್ದಾರೆ. ಸದ್ಯ ಈ ತೆಂಗಿನಮರದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Read Full Story

10:28 AM (IST) Nov 04

ನೈಋತ್ಯ ರೈಲ್ವೆಯ ಇತಿಹಾಸದಲ್ಲೇ ಅಚ್ಚರಿಯ ದಾಖಲೆ! ಒಂದೇ ತಿಂಗಳಲ್ಲೇ ₹928 ಕೋಟಿ ಆದಾಯ, 5.5 ಮಿಲಿಯನ್ ಟನ್ ಸರಕು ಸಾಗಣೆ!

ನೈಋತ್ಯ ರೈಲ್ವೆಯು ಅಕ್ಟೋಬರ್‌ನಲ್ಲಿ 5.5 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇದರಿಂದ ಒಂದೇ ತಿಂಗಳಲ್ಲಿ ಒಟ್ಟು ₹928 ಕೋಟಿ ಆದಾಯ ಗಳಿಸಿದ್ದು, ಕಲ್ಲಿದ್ದಲು ಮತ್ತು ಉಕ್ಕಿನ ಸಾಗಣೆಯಲ್ಲಿ ಗಣನೀಯ ಪ್ರಗತಿ ಕಂಡಿದೆ.
Read Full Story

10:19 AM (IST) Nov 04

ರಚಿತಾ ರಾಮ್ ಜೊತೆ 'ಸಿದ್ಲಿಂಗು' ವಿಜಯಪ್ರಸಾದ್‌ ಹೊಸ ಸಿನಿಮಾ; ಡಬಲ್ ಮೀನಿಂಗ್ ಇಲ್ಲ, ಆದ್ರೆ ಅದೊಂದು ಫೀಲ್ ಇದೆ!

ವಿಜಯಪ್ರಸಾದ್ ಅವರ ಹಿಂದಿನ ಸಿನಿಮಾಗಳ ಚಿತ್ರೀಕರಣ ಸಾಮಾನ್ಯವಾಗಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿತ್ತು. ಆದರೆ ಈ ಬಾರಿ ಕಥೆಯ ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ. ಹಾಗಿದ್ರೆ ಏನು ಕಥೆ? ಎಲ್ಲೆಲ್ಲಿ ಶೂಟಿಂಗ್? ನೋಡಿ..

Read Full Story

10:12 AM (IST) Nov 04

ಅಡಕೆ-ವೀಳ್ಯೆದೆಲೆ ಸೇವನೆಯಿಂದ ಕ್ಯಾನ್ಸರ್ ಬರೋಲ್ಲ, ಗುಣವಾಗುತ್ತೆ - ತುಮ್‌ ಕೋಸ್ ಅಧ್ಯಕ್ಷರ ಅಚ್ಚರಿಯ ಹೇಳಿಕೆ! ಏನಿದು ಪೊಗಸಾರಂ?

ಅಡಕೆ ಮತ್ತು ವೀಳ್ಯೆದೆಲೆ ಸೇವನೆಯಿಂದ ಕ್ಯಾನ್ಸರ್ ಗುಣಮುಖವಾಗುವ ಔಷಧೀಯ ಗುಣವಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿದೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ 'ಪೊಗಸಾರಂ' ಎಂಬ ಮಿಶ್ರಣವು ಕ್ಯಾನ್ಸರ್ ತಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅಡಕೆಯು ಅಪಾಯಕಾರಿ ಬೆಳೆಯಲ್ಲ ಎಂಬುದು ಸಾಬೀತಾಗಿದೆ.
Read Full Story

09:45 AM (IST) Nov 04

ಶಿಶಿರ್ ಶಾಸ್ತ್ರಿ-ಐಶ್ವರ್ಯ ಸಿಂಧೋಗಿ ಸ್ನೇಹ, ಪ್ರೇಮ-ಪ್ರಣಯ, ಮದುವೆ? ಸಂಜೆ 6ಕ್ಕೆ ಬಿಗ್ ಅನೌನ್ಸ್‌ಮೆಂಟ್!

ಬಿಗ್ ಬಾಸ್ ಖ್ಯಾತಿಯ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಇಂದು ಸಂಜೆ 6 ಗಂಟೆಗೆ ಅಚ್ಚರಿಯ ಘೋಷಣೆ ಮಾಡಲಿದ್ದಾರೆ. ಇತ್ತೀಚೆಗೆ ಮೈಕ್ರೋ ಸೀರೀಸ್‌ನಲ್ಲಿ ಲಿಪ್ ಲಾಕ್ ಮಾಡಿ ವೈರಲ್ ಆಗಿದ್ದ ಈ ಜೋಡಿ, ಮದುವೆ ಅಥವಾ ಉದ್ಯಮದ ಬಗ್ಗೆ ಹೇಳಲಿದ್ದಾರಾ ಎಂಬ ಕುತೂಹಲ ಮೂಡಿದೆ.

Read Full Story

09:24 AM (IST) Nov 04

ಬೇಡ್ತಿ ಅಘನಾಶಿನಿ ನದಿ ಜೋಡಣೆಗೆ ಭಾರೀ ಜನಾಕ್ರೋಶ, ವಿರೋಧದ ನಡುವೆ ಬೆಳಗ್ಗೆ ಹಾರಾಡಿದ ನಿಗೂಢ ವಿಮಾನ ಯಾವುದು?

ವರದಾ-ಬೇಡ್ತಿ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧಿಸಿ ಯಲ್ಲಾಪುರದಲ್ಲಿ 10 ಸಾವಿರಕ್ಕೂ ಅಧಿಕ ಜನರಿಂದ ಬೃಹತ್ ಪ್ರತಿಭಟನೆ ನಡೆಯಿತು. ಯೋಜನೆ ಕೈಬಿಡಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದ್ದು, ತಪ್ಪಿದ್ದಲ್ಲಿ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಲಾಗಿದೆ.

Read Full Story

09:10 AM (IST) Nov 04

ರಾಜ್ಯದ ಐಟಿ-ಬಿಟಿಯಲ್ಲಿ ಕನ್ನಡಿಗರು ಕೇವಲ ಶೇ.25! ತಮಿಳುನಾಡಿನಲ್ಲಿ ಶೇ.90, ಆಂಧ್ರದಲ್ಲಿ ಶೇ.70ರಷ್ಟು; ಕರವೇ ಸಮೀಕ್ಷೆ

ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಲ್ಲಿ ಕೇವಲ ಶೇ.25 ರಷ್ಟು ಮಾತ್ರ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ. ಕನ್ನಡಿಗರ ಉದ್ಯೋಗದ ಕುರಿತು ಸಮೀಕ್ಷೆ ನಡೆಸುತ್ತಿರುವ ಕರವೇ, ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ಸರ್ಕಾರವನ್ನು ಒತ್ತಾಯಿಸಿದೆ.

Read Full Story

08:47 AM (IST) Nov 04

ಬೆಂಗಳೂರು-ಹುಬ್ಬಳ್ಳಿ-ಪುಣೆ ಹೈಸ್ಪೀಡ್ ರೈಲಿನ ಸುಳಿವು, ಬುಲೆಟ್‌ ಟ್ರೈನ್‌ ಕಾರಿಡಾರ್‌ ಸಂಭಾವ್ಯ ರಾಜ್ಯದ ಮಾರ್ಗ ಇದು!

ಕೇಂದ್ರ ರೈಲ್ವೆ ಸಚಿವರು ಬೆಂಗಳೂರು-ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಿಸುವ ಸುಳಿವು ನೀಡಿದ್ದಾರೆ. ಇದರಿಂದ ಉತ್ತರ ಕರ್ನಾಟಕದ ಕೈಗಾರಿಕೆ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಬಲ ಸಿಗಲಿದ್ದು, ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ. ಮುಂದಿನ ಬಜೆಟ್‌ನಲ್ಲಿ ಈ ಯೋಜನೆಗೆ ಅಧಿಕೃತ ಅನುಮೋದನೆ ಸಿಗುವ ನಿರೀಕ್ಷೆಯಿದೆ.
Read Full Story

08:22 AM (IST) Nov 04

ಬೆಂಗಳೂರು ಉತ್ತರ ವಿವಿಯಲ್ಲಿ ₹35,000 ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ - ಪರೀಕ್ಷೆ ಇಲ್ಲ, ಅರ್ಜಿ ಶುಲ್ಕವೂ ಇಲ್ಲ!

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು (BNU) 5 'ಸೂಪರ್ ಸ್ಕಿಲ್ಡ್ ಅಸಿಸ್ಟೆಂಟ್' ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿ.ಟೆಕ್, ಬಿ.ಇ ಅಥವಾ ಎಂ.ಎಸ್ಸಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು. ಯಾವುದೇ ಲಿಖಿತ ಪರೀಕ್ಷೆ ಮತ್ತು ಅರ್ಜಿ ಶುಲ್ಕವಿಲ್ಲದೆ ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು, ನವೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Read Full Story

07:56 AM (IST) Nov 04

ಬೆಂಗಳೂರು ಗುಲಾಬಿ ಮಾರ್ಗ ಉದ್ಘಾಟನೆ ಬಳಿಕ 100 ಕಿಮೀ ಗಡಿ ದಾಟುವ ನಮ್ಮ ಮೆಟ್ರೊ! ದೇಶದಲ್ಲಿ 3ನೇ ಸ್ಥಾನ!

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ನಮ್ಮ ಮೆಟ್ರೋದ 'ಗುಲಾಬಿ ಮಾರ್ಗ'ದ ಮೊದಲ ಹಂತ ನವೆಂಬರ್ 13ರಂದು ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಬೆಂಗಳೂರು ಮೆಟ್ರೋ ಸಂಪರ್ಕ ಜಾಲವು 100 ಕಿ.ಮೀ ಗಡಿ ದಾಟಿ ಹೊಸ ಇತಿಹಾಸ ಬರೆಯಲಿದೆ.

Read Full Story

More Trending News