ಬೆಳಗಾವಿ: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದ್ದು, ಈ ತಿಂಗಳೊಳಗೆ ಸಚಿವ ಸಂಪುಟ ವಿಸ್ತರಣೆ ನಡೆದರೆ ಉತ್ತಮ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಇನ್ನೂ ಹಲವು ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಹೆಚ್ಚು ದಿನ ಖಾಲಿ ಇಡಲು ಸಾಧ್ಯವಿಲ್ಲ. ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ನೀತಿಯನ್ನು ಅನುಸರಿಸುವ ಪ್ರಯತ್ನ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಚಿವ ಸ್ಥಾನ ಎರಡನ್ನೂ ಒಬ್ಬರಿಗೆ ನೀಡುವ ಸಾಧ್ಯತೆ ಕಡಿಮೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ ಎಂದರು. ಇದೇ ವೇಳೆ ಬೆಳಗಾವಿ ಜಿಲ್ಲೆಗೆ ಮತ್ತಷ್ಟು ಸಚಿವ ಸ್ಥಾನಗಳು ದೊರೆಯುವ ವಿಶ್ವಾಸವಿದೆ ಎಂದರು.
ಮುಸ್ಲಿಂ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಕುರಿತು ಉತ್ತರಿಸಿದ ಅವರು, ಈ ಕುರಿತು ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಹಾಗೂ ಪಕ್ಷದ ಸಂಘಟನೆಗೆ ಸಂಬಂಧಿಸಿದ ಕೆಲವು ವಿಚಾರಗಳಲ್ಲಿ ಅಸಮಾಧಾನಗಳು ಸಹಜ. ಆದರೆ, ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅವುಗಳನ್ನು ಬಗೆಹರಿಸುವ ಶಕ್ತಿ ಸರ್ಕಾರಕ್ಕಿದೆ ಎಂದರು.
09:50 PM (IST) Jun 08
ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಲಿದೆ. ನಾಳೆಯಿಂದ ಖಾಸಗಿ ಬಸ್ ದರ ಏರಿಕೆಯಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಯಾಗಿರುವ ಹಿನ್ನಲೆಯಲ್ಲಿ ಇದೀಗ ಖಾಸಗಿ ಬಸ್ ಆಪರೇಟರ್ಸ್ ಪ್ರಯಾಣ ದರ ಏರಿಕೆ ಮಾಡುತ್ತಿದ್ದಾರೆ.
09:10 PM (IST) Jun 08
ಯುವಕನನ್ನು ಹ*ತ್ಯೆಗೈದು ದುಷ್ಕರ್ಮಿಗಳು ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಮೃತ ದೇಹವನ್ನು ಬರೋಬ್ಬರಿ 13 ಕಿಲೋಮೀಟರ್ ದೂರದವರೆಗೆ ಕೊಂಡೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
07:36 PM (IST) Jun 08
ಬೆಂಗಳೂರು ಮೂಲದ ಎಮ್ವಿ ಗ್ರೂಪ್, ದೇವನಹಳ್ಳಿಯಲ್ಲಿ 5,500 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬೃಹತ್ 'ಗಿಗಾಫ್ಯಾಕ್ಟರಿ' ಸ್ಥಾಪಿಸುತ್ತಿದೆ. ಈ ಯೋಜನೆಯು ಕಂಪನಿಯ ಸೋಲಾರ್ ಮಾಡ್ಯೂಲ್ ಮತ್ತು ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಲಿದೆ.
07:14 PM (IST) Jun 08
06:41 PM (IST) Jun 08
06:24 PM (IST) Jun 08
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚುರುಕಾಗಿದ್ದು, ಮುಂದಿನ ಮೂರು ದಿನಗಳವರೆಗೆ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಣೆ..
06:15 PM (IST) Jun 08
ಈ ಹಿಂದೆ ಖಾತೆ ಹಂಚಿಕೆಯಿಂದ ಮುನಿಸಿಕೊಂಡಿದ್ದ ಹಿರಿಯ ಸಚಿವ ರಾಮಲಿಂಗಾರೆಡ್ಡಿ, ಇದೀಗ ತಮ್ಮ ನಿಲುವನ್ನು ಬದಲಿಸಿದ್ದಾರೆ. ತಮಗೆ ನೀಡಲಾದ ಜಲಸಂಪನ್ಮೂಲ ಇಲಾಖೆಯಲ್ಲೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದು, ಬೆಂಗಳೂರು ಉಸ್ತುವಾರಿ ಸೇರಿದಂತೆ ಬೇರೆ ಯಾವುದೇ ಖಾತೆಯೂ ಬೇಡವೆಂದು ಖಡಾಖಂಡಿತವಾಗಿ ಹೇಳಿದ್ದಾರೆ.
05:58 PM (IST) Jun 08
ಅಚಲ ನಿರ್ಧಾರ, ಸೈನ್ಯಕ್ಕೆ ಸೇರ್ಪಡೆ ಆಗಲೇಬೇಕು ಎಂಬ ತವಕ, ನಿರಂತರ ಪರಿಶ್ರಮ ದೇಹ ದಂಡನೆ ಈ ಎಲ್ಲ ಪ್ರಯತ್ನಕ್ಕೂ ಆ ವಿದ್ಯಾರ್ಥಿಗಳಿಗೆ ಇದೀಗ ಪ್ರತಿಫಲ ಸಿಕ್ಕಿದೆ. ಒಂದೇ ಶಾಲೆಯಲ್ಲಿ ಕಲಿತ ಒಟ್ಟು 17 ಜನ ಯುವಕರು ಇದೀಗ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.
05:27 PM (IST) Jun 08
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಭಿಕ್ಷ ಆಡಳಿತ ಹಾಗೂ ರಾಜ್ಯದ ಜನರ ಒಳಿತಿಗಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಸಮೀಪ ಇರುವ ಬಡಮಖಾನ್ ದರ್ಗಾದಲ್ಲಿಮುಸ್ಲಿಂ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
05:14 PM (IST) Jun 08
04:44 PM (IST) Jun 08
ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ, ವರ್ತೂರು ಸಂತೋಷ್ ಅವರ ಹಸುವಿನ ಸೀಮಂತ ಕಾರ್ಯಕ್ರಮದಲ್ಲಿ, ಈ ಹಿಂದೆ ಅವರನ್ನು 'ಸಂತೂರ್' ಎಂದು ಕರೆದಿದ್ದಕ್ಕೆ ವೇದಿಕೆಯಲ್ಲೇ ಕ್ಷಮೆಯಾಚಿಸಿದರು. ರಕ್ಷಿತಾ ಅವರ ಈ ಮುಗ್ದ ನಡೆ ಮತ್ತು ವಿನಯವಂತಿಕೆಗೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
04:40 PM (IST) Jun 08
04:26 PM (IST) Jun 08
ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.
04:19 PM (IST) Jun 08
04:07 PM (IST) Jun 08
ನಟಿ ಪವಿತ್ರಾ ಲೋಕೇಶ್ ಅವರ ತಾಯಿ ಪಾರ್ವತಿ ಲೋಕೇಶ್, ತಮ್ಮ ಮಗಳ ಮೊದಲ ಮದುವೆಯ ಬಗ್ಗೆ ಕೆಲವು ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪವಿತ್ರಾಳ ಮೊದಲ ಮದುವೆ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ನಡೆದಿತ್ತು ಮತ್ತು ಅದು ಕೇವಲ ಎರಡು ತಿಂಗಳಲ್ಲೇ ಮುರಿದುಬಿದ್ದಿತ್ತು ಎಂದು ಅವರು ತಿಳಿಸಿದ್ದಾರೆ.
03:58 PM (IST) Jun 08
Actor Darshan Thoogudeepa: ನಟ ದರ್ಶನ್ ತೂಗುದೀಪ ಅವರು ಜೈಲಿನಲ್ಲಿದ್ದಾರೆ. ಈಗ ಕನಕಪುರದ ಕುರುಬರಹಳ್ಳಿಗೆ ಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು. ಆ ವೇಣೆ ದರ್ಶನ್ ಅಭಿಮಾನಿಗಳು ‘ಡಿ ಬಾಸ್’, ‘ಡಿ ಬಾಸ್’ ಎಂದು ಕೂಗಿ, ಮನವಿ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
01:36 PM (IST) Jun 08
ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಅಭ್ಯರ್ಥಿ ಆಯ್ಕೆಯು ಸಂಪೂರ್ಣವಾಗಿ ಹೈಕಮಾಂಡ್ ನಿರ್ಧಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ದೇವೇಗೌಡರ ಸ್ಪರ್ಧೆ ಹಾಗೂ ಸುಮಲತಾ ಅವರಿಗೆ ಟಿಕೆಟ್ ತಪ್ಪಿದ ಬಗ್ಗೆ ಮಾತನಾಡಿ ವರಿಷ್ಠರ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.
01:18 PM (IST) Jun 08
ಕನ್ನಡ ಬಿಗ್‌ಬಾಸ್ ಸೀಸನ್ 13ರ ಸ್ಪರ್ಧಿಗಳ ಲಿಸ್ಟ್‌ನಲ್ಲಿ 'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟ ಸುಷ್ಮಿತ್ ಜೈನ್ ಹೆಸರು ಕೇಳಿಬಂದಿದೆ. ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಮೂರು ಕಾರಣಗಳಿಂದ ಶೋಗೆ ಹೋಗುವುದಿಲ್ಲ ಎಂದಿದ್ದಾರೆ.
01:13 PM (IST) Jun 08
12:16 PM (IST) Jun 08
11:00 AM (IST) Jun 08
ಬಿಎಂಆರ್‌ಸಿಎಲ್ ಆಗಸ್ಟ್ 15ರಿಂದ 6 ನಿಲ್ದಾಣ ತೆರೆಯುವ ನಿರೀಕ್ಷೆಯಿದೆ. ಈ 7.5 ಕಿ.ಮೀ ಉದ್ದದ ಮಾರ್ಗವು ಯಶಸ್ವಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದು, ಇದರ ಕಾರ್ಯಾಚರಣೆಯಿಂದ ಬೆಂಗಳೂರು ಮೆಟ್ರೋ ಜಾಲವು ದೇಶದ ಎರಡನೇ ಅತಿದೊಡ್ಡ ಜಾಲವಾಗಿ ಹೊರಹೊಮ್ಮಲಿದೆ.
10:13 AM (IST) Jun 08
ಕೋಲಾರ -ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೊಸಕೋಟೆ ಸಮೀಪದ ಅತ್ತಿವಾಟ ಗೇಟ್ ಬಳಿ ಅಪಘಾತ ನಡೆದಿದೆ. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
08:49 AM (IST) Jun 08
08:48 AM (IST) Jun 08
actor kiccha sudeep bodyguard: ನಟ ರಾಮ್ ಚರಣ್ ತೇಜ ಬಾಡಿಗಾರ್ಡ್ ಕೆವಿನ್ ಅವರದ್ದೇ ಹವಾ ಆಗಿದೆ. ಕೆವಿನ್ ಬಾಡಿ, ಅವರ ಶಕ್ತಿ ಸಾಮರ್ಥ್ಯ ಏನು ಎನ್ನೋದನ್ನು ನೋಡಿದ ಜನತೆ, ಅವರ ಜೊತೆ ಫೋಟೋ ತಗೊಳ್ಳಲು ಮುಗಿ ಬಿದ್ದಿದ್ದಾರೆ. ಈಗ ಕಿಚ್ಚ ಸುದೀಪ್ ಬಾಡಿಗಾರ್ಡ್ ಕೂಡ ಟ್ರೆಂಡ್ ಆಗುತ್ತಿದ್ದಾರೆ.
08:41 AM (IST) Jun 08
08:18 AM (IST) Jun 08
Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿ ಮುಕ್ತಾಯವಾಗಿದೆ. 1159 ಎಪಿಸೋಡ್‌ಗೆ ಈ ಸೀರಿಯಲ್ ಅಂತ್ಯವಾಗಿದೆ. ನಾಲ್ಕು ವರ್ಷಗಳ ಹಿಂದೆ ಈ ಸೀರಿಯಲ್ ಆರಂಭ ಆಗಿತ್ತು. ಒಂದೇ ಒಂದು ಪ್ರಶ್ನೆಯೊಂದು ಹಾಗೆ ಉಳಿದಿದೆ. ಹಾಗಾದರೆ ಏನದು?
08:17 AM (IST) Jun 08
08:04 AM (IST) Jun 08
07:41 AM (IST) Jun 08
06:37 AM (IST) Jun 08
ಮಸ್ಕಿ ಪಟ್ಟಣದಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಬಂದ ಐವರ ಗ್ಯಾಂಗ್, ಅಂಗಡಿ ಮಾಲೀಕನ ಮೇಲೆ ಕುಂಕುಮ ಮತ್ತು ಬಂಡಾರ ಎರಚಿ ಮತ್ತು ಬರುವಂತೆ ಮಾಡಿದೆ. ನಂತರ ಗಲ್ಲಾಪೆಟ್ಟಿಗೆಯಲ್ಲಿದ್ದ 1 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದೆ.
06:09 AM (IST) Jun 08
05:50 AM (IST) Jun 08
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಜೂ.8 ರಿಂದ 10ರವರೆಗೆ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಲು ಎಚ್ಚರಿಸಿದೆ.
05:41 AM (IST) Jun 08
05:36 AM (IST) Jun 08
ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ಕಾರ್ಯವೈಖರಿಗೆ ಬಿಜೆಪಿ ಪಾಳಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಯಾಗಿ, ತಮ್ಮ ಪಕ್ಷದಲ್ಲಿನ ರಾಜ್ಯಾಧ್ಯಕ್ಷರ ಗೊಂದಲ ಮತ್ತು ಆಂತರಿಕ ಬಿಕ್ಕಟ್ಟುಗಳನ್ನು ಬಗೆಹರಿಸಲು ವಿಫಲವಾಗಿರುವ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅಸಮಾಧಾನ ಹೆಚ್ಚುತ್ತಿದೆ.
05:23 AM (IST) Jun 08
ಅಧಿಕ ಲಾಭಾಂಶದ ಆಮಿಷವೊಡ್ಡಿ ಸಾವಿರಾರು ಜನರಿಗೆ ಕೋಟ್ಯಂತರ ರುಪಾಯಿ ವಂಚಿಸಿದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ, ಜನರಿಂದ ಪಡೆದ ಹಣವನ್ನು ಸನ್ನಿ ಲಿಯೋನ್ ಸೇರಿದಂತೆ ಹಲವು ನಟರಿಗೆ ನೀಡಿರುವುದು ಸಿಐಡಿ ತನಿಖೆಯಿಂದ ಬಹಿರಂಗವಾಗಿದೆ.