Published : Apr 28, 2026, 06:44 AM ISTUpdated : Apr 28, 2026, 10:10 PM IST

Karnataka News Live: Bigg Boss ರಜತ್​ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ

ಸಾರಾಂಶ

ಬೆಂಗಳೂರು: ಕೊಪ್ಪಳ, ಗದಗ, ರಾಯಚೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜಿ.ಬೆಂಚಮಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ದೇವರಾಯನಗೌಡ ಪಾಟೀಲ (50) ಎಂಬುವರು ಮೃತಪಟ್ಟಿದ್ದಾರೆ. ಈ ಮಧ್ಯೆ, ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾರೀ ಗಾಳಿ-ಮಳೆಗೆ ಸಾವಿರಾರು ಅಡಕೆ ಮರಗಳು ಧರೆಗುರುಳಿವೆ. ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಆರ್.ಲೋಕೇಶ (52) ಎಂಬುವರು ತಮ್ಮ ಅಡಿಕೆ ಮನೆಗೆ ಹಾಕಿದ್ದ ಹೆಂಚುಗಳು ಹಾರಿ ಹೋಗಿದ್ದನ್ನು ನೋಡಿ, ಗಾಬರಿಗೊಂಡು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.

ಗದಗ ಜಿಲ್ಲೆ ಮುಂಡರಗಿಯಲ್ಲಿ ಗಾಳಿ-ಮಳೆಗೆ ಖಾಸಗಿ ಕಂಪನಿಯ ಮೊಬೈಲ್ ಟವರ್ ನ ಕಂಬ ಮುರಿದು ಬಿದ್ದಿದೆ. ರಾಯಚೂರು ಜಿಲ್ಲೆ ಹಳೆ ಕೆರೆ ಎಂಬಲ್ಲಿ ಸಿಡಿಲು ಬಡಿದು 8 ಕುರಿ ಮತ್ತು 3 ಕುರಿಮರಿಗಳು ಮೃತಪಟ್ಟಿವೆ.

10:10 PM (IST) Apr 28

Bigg Boss ರಜತ್​ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ

ಬಿಗ್​ಬಾಸ್​ ಖ್ಯಾತಿಯ ರಜತ್ ಇದೀಗ ಸಾರ್ವಜನಿಕ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟದ ವಿಡಿಯೋ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.  ಮಚ್ಚು ಹಿಡಿದು ರೀಲ್ಸ್ ಹಾಗೂ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಅವರು, ಈಗ ಹೀಗೊಂದು ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ.

Read Full Story

09:48 PM (IST) Apr 28

ಕೆಎಎಸ್‌ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ - ಸಿಎಂ ಸಿದ್ದರಾಮಯ್ಯ

ನಾವು ಅಧಿಕಾರದಲ್ಲಿ ಇರಬೇಕಾದರೆ ಪ್ರತಿ 5 ವರ್ಷಕ್ಕೊಮ್ಮೆ ರಿನೀವಲ್‌ (ನವೀಕರಿಸಬೇಕು) ಮಾಡಿಕೊಳ್ಳಬೇಕು. ಆದರೆ, ಸರ್ಕಾರಿ ಅಧಿಕಾರಿಗಳು ಒಮ್ಮೆ ಸೇವೆಗೆ ಸೇರ್ಪಡೆಯಾದರೆ 30ರಿಂದ 35 ವರ್ಷ ಕೆಲಸದಿಂದ ತೆಗೆಯಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Read Full Story

09:34 PM (IST) Apr 28

ಮುಂಬೈಗೆ ಹೋಗೋರ ಗಮನಕ್ಕೆ ರೈಲು ಸೇವೆಯಲ್ಲಿ 1ತಿಂಗಳು ಅನಿರೀಕ್ಷಿತ ಬದಲಾವಣೆ, ಕೊಂಕಣ-ದಕ್ಷಿಣ ರೈಲ್ವೆ ಜಂಟಿ ಪ್ರಕಟಣೆ

ಮುಂಬೈನ ಸಿಎಸ್‌ಎಂಟಿ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣಾ ಕಾಮಗಾರಿಯಿಂದಾಗಿ ಮೇ 19ರವರೆಗೆ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳೂರು-ಮುಂಬೈ ಸೂಪರ್‌ಫಾಸ್ಟ್ ಮತ್ತು ತೇಜಸ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳು ದಾದರ್ ಮತ್ತು ಥಾಣೆಯಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಲಿವೆ. ಜೊತೆಗೆ, ಪರಶುರಾಮ್ ಎಕ್ಸ್‌ಪ್ರೆಸ್ ಸೇವೆಯನ್ನೂ ಭಾಗಶಃ ರದ್ದುಪಡಿಸಲಾಗಿದೆ.
Read Full Story

09:05 PM (IST) Apr 28

ಪಂಜಾಬ್ ರೈಲು ಸ್ಫೋಟಕ್ಕೆ ಉಗ್ರರ ಬೃಹತ್ ಸಂಚು - ವಿಫಲವಾದ ಭಯಾನಕ ಯತ್ನ, ಓರ್ವ ಉಗ್ರ ಸಾವು

ಪಂಜಾಬ್‌ನ ಪಟಿಯಾಲಾ ಬಳಿ ರೈಲು ಹಳಿ ಸ್ಫೋಟಿಸುವ ಸಂಚು ವಿಫಲವಾಗಿದ್ದು, ಸ್ಫೋಟಕ ಅಳವಡಿಸುತ್ತಿದ್ದ ಶಂಕಿತ ಉಗ್ರನೇ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದ್ದು, ಇದರ ಹಿಂದೆ ಪಾಕಿಸ್ತಾನದ ಐಎಸ್‌ಐ ಮತ್ತು ಖಲಿಸ್ತಾನಿ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
Read Full Story

08:46 PM (IST) Apr 28

ಬೈಕ್ ಟ್ಯಾಕ್ಸಿ ಫೈಟ್ ಈಗ ಸುಪ್ರೀಂ ಅಂಗಳಕ್ಕೆ! ಹೈಕೋರ್ಟ್ ತೀರ್ಪು ಪ್ರಶ್ನಿಸಿ ದೆಹಲಿ ಮೆಟ್ಟಿಲೇರಿದ ರಾಜ್ಯ ಸರ್ಕಾರ

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧವನ್ನು ತೆರವುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಬೈಕ್ ಟ್ಯಾಕ್ಸಿ ನಿಷೇಧವನ್ನು ಅಸಂವಿಧಾನಿಕ ಎಂದು ಹೈಕೋರ್ಟ್ ಹೇಳಿತ್ತು.

Read Full Story

07:45 PM (IST) Apr 28

ಬೆಂಗಳೂರಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ವಿವಾದ, ಬಿಜೆಪಿ ಪ್ರತಿಭಟನೆ, ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ

ದೆಹಲಿ ದಂಗೆ ಆರೋಪಿ ಉಮರ್ ಖಾಲಿದ್ ಕುರಿತ 'ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್' ಕಾರ್ಯಕ್ರಮವು ಬೆಂಗಳೂರಿನಲ್ಲಿ ತೀವ್ರ ವಿವಾದ ಮತ್ತು ಪ್ರತಿಭಟನೆಗಳ ನಡುವೆ ನಡೆಯಿತು. ಬಿಜೆಪಿ ಕಾರ್ಯಕರ್ತರ ವಿರೋಧದ ಮಧ್ಯೆಯೂ, ನಟ ಪ್ರಕಾಶ್ ರಾಜ್ ಭಾಗವಹಿಸಿದ್ದ ಈ ಪುಸ್ತಕ ವಿಮರ್ಶೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
Read Full Story

06:26 PM (IST) Apr 28

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವಿವಾದ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಘ ಸ್ಪಷ್ಟನೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಸಿಸಿಟಿವಿ ಸಮಸ್ಯೆಯು ಖಾಸಗಿ ಮಾರಾಟಗಾರರ ಆಂತರಿಕ ವಿವಾದವಾಗಿದ್ದು, ಪೊಲೀಸ್ ಭದ್ರತಾ ವ್ಯವಸ್ಥೆಯ ಭಾಗವಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಘ ಸ್ಪಷ್ಟಪಡಿಸಿದೆ. ಸಾರ್ವಜನಿಕ ಪ್ರವೇಶಕ್ಕೂ ಮುನ್ನವೇ ಈ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸಂಘವು ಖಚಿತಪಡಿಸಿದೆ.
Read Full Story

06:06 PM (IST) Apr 28

ಸಿದ್ದರಾಮಯ್ಯ ನಂತರ ಸಿಎಂ ರೇಸ್‌ನಲ್ಲಿರೋದು ಡಿಕೆಶಿ ಮಾತ್ರ - ಶಾಸಕ ಎಚ್.ಸಿ.ಬಾಲಕೃಷ್ಣ

ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ರೇಸ್‌ನಲ್ಲಿರೋದು ಡಿ.ಕೆ.ಶಿವಕುಮಾರ್ ಮಾತ್ರ‌. ಬೇರೆಯವರೂ ರೇಸ್‌ನಲ್ಲಿ ಇರಬಹುದು. ಆದರೆ ಅದು ಕಾಲಕ್ಕೆ ತಕ್ಕಂತೆ ತೀರ್ಮಾನ ಆಗುತ್ತದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.

Read Full Story

05:51 PM (IST) Apr 28

ದೆಹಲಿ ಟ್ರಿಪ್‌ನಲ್ಲಿರುವ ರಾಜ್ಯ ಸರ್ಕಾರ ಬರಗಾಲ ನಿರ್ವಹಣೆಯಲ್ಲಿ ವಿಫಲ - ನಿಖಿಲ್‌ ಕುಮಾರಸ್ವಾಮಿ

ಖುರ್ಚಿಗಾಗಿ ದೆಹಲಿ ಪ್ರವಾಸದ ಬಿಸಿಯಲ್ಲಿರುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಬಿಸಿಯನ್ನು ರಾಜ್ಯದ ಜನತೆ ಮುಟ್ಟಿಸಲಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

Read Full Story

05:44 PM (IST) Apr 28

ಬೆಂಗಳೂರು-ತುಮಕೂರು ರೈಲು ಮಾರ್ಗ ಚತುಷ್ಪಥ, ಯಲಹಂಕದಿಂದ ಅರಸೀಕೆರೆಗೆ ಹೊಸ ಮೆಮು, ಏನಿದು ಮಹಾಯೋಜನೆ?

ಕೇಂದ್ರ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು-ತುಮಕೂರು ರೈಲು ಮಾರ್ಗವನ್ನು ಚತುಷ್ಪಥಗೊಳಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ಯಲಹಂಕದಿಂದ ಅರಸೀಕೆರೆವರೆಗೆ ಹೊಸ ಮೆಮು ರೈಲು ಸೇವೆ ಮತ್ತು ತುಮಕೂರಿನಲ್ಲಿ ಪಾದಚಾರಿ ಸುರಂಗ ಮಾರ್ಗಗಳ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ, ಇದು ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆಯನ್ನು ಹೆಚ್ಚಿಸಲಿದೆ.
Read Full Story

05:17 PM (IST) Apr 28

ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ ಆರ್ಭಟ - 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಹೆಚ್ಚಾಗುವ ಎಚ್ಚರಿಕೆ ನೀಡಿದೆ. ರಾಜ್ಯದ 22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬೆಂಗಳೂರಿನಲ್ಲೂ ಮಳೆಯ ನಿರೀಕ್ಷೆಯಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.
Read Full Story

04:35 PM (IST) Apr 28

ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ - ಸಚಿವ ದಿನೇಶ್ ಗುಂಡೂರಾವ್

ಸಚಿವ ಸಂಪುಟ ಪುನರ್‌ ರಚನೆ ಅಗತ್ಯವಿದ್ದು, ಇತರರಿಗೆ ಕೂಡ ಅವಕಾಶ ಸಿಗಬೇಕು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Read Full Story

04:33 PM (IST) Apr 28

ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲು - ವೇಳಾಪಟ್ಟಿ, ನಿಲುಗಡೆ ಬಗ್ಗೆ ಸಂಪೂರ್ಣ ಮಾಹಿತಿ

ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಎಸ್‌ಎಂವಿಟಿ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿಗದಿತ ದಿನಾಂಕಗಳಂದು ಸಂಚರಿಸಲಿದ್ದು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
Read Full Story

04:21 PM (IST) Apr 28

ಅಭಿವೃದ್ಧಿಯಲ್ಲಿ ಎಂಜಿನಿರ್‌ಗಳ ಕೊಡುಗೆ ಅನನ್ಯ - ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಶ್ಲಾಘನೆ

ಎಂಜಿನಿಯರ್‌ಗಳು ಈ ಸಮಾಜಕ್ಕೆ, ದೇಶಕ್ಕೆ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ. ಅಭಿವೃದ್ಧಿ, ನಗರದ ಸೌಂದರ್ಯತೆಗೆ ಎಂಜಿನಿಯರ್‌ಗಳ ಕೊಡುಗೆ ಅನನ್ಯವಾದುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

Read Full Story

03:57 PM (IST) Apr 28

ಸಂಧಾನದ ನಂತರವೂ ಸರಿಹೋಗದ ಸಂಸಾರ - 4 ದಿನದ ಹಿಂದಷ್ಟೇ ಮನೆಗೆ ಬಂದ ಪತ್ನಿಯ ಕೊಂದು ಮಗುವಿನೊಂದಿಗೆ ಬಾವಿಗೆ ಜಿಗಿದ ಪತಿ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೊಬ್ಬ ಪತ್ನಿಯನ್ನು ಕೊಂದು, ಮಗುವಿನೊಂದಿಗೆ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಸ್ಥಳೀಯರು ಕೂಡಲೇ ಮಗುವನ್ನು ರಕ್ಷಿಸಿದರೂ, ಪತಿ ಪತ್ನಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

Read Full Story

03:17 PM (IST) Apr 28

ನಿವೃತ್ತ ಡಿಜಿ ಓಂಪ್ರಕಾಶ್ ಹತ್ಯೆ ಪ್ರಕರಣ - ಆರೋಪಿ ಪತ್ನಿ ನೋಡಲು ಬರದ ಮಕ್ಕಳು, ವಿಚಿತ್ರ ವರ್ತನೆಗೆ ಬೇಸತ್ತ ಜೈಲಾಧಿಕಾರಿಗಳು!

ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪ್ರಕರಣದ ಆರೋಪಿ ಪಲ್ಲವಿ, ಜೈಲಿನಲ್ಲಿ ಒಂದು ವರ್ಷ ಕಳೆದಿದ್ದು, ಅವರ ವರ್ತನೆ ವಿಚಿತ್ರವಾಗಿ ಬದಲಾಗಿದೆ. ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವ ಅವರು, ಜೈಲು ಸಿಬ್ಬಂದಿ ಮತ್ತು ಸಹ ಕೈದಿಗಳಿಗೆ ತೊಂದರೆ ನೀಡುತ್ತಿದ್ದು, ಪ್ರತಿ ಹದಿನೈದು ದಿನಕ್ಕೊಮ್ಮೆ ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read Full Story

03:07 PM (IST) Apr 28

ಜ್ಯೂಸ್ ಬಾಟಲ್ ಸಾಗಿಸುತ್ತಿದ್ದ ಲಾರಿ ಪಲ್ಟಿ - ಚಾಲಕನ ನೆರವಿಗೆ ಧಾವಿಸದೇ ಬಿಟ್ಟಿಯಾಗಿ ಸಿಕ್ಕ ಜ್ಯೂಸ್‌ಗೆ ಮುಗಿಬಿದ್ದ ಜನ

ತಂಪು ಪಾನೀಯ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದ್ದು ಚಾಲಕ ಸಹಾಯಕ್ಕಾಗಿ ಬೇಡಿದರೂ, ಜನ ಆತನನ್ನು ನಿರ್ಲ್ಷಕ್ಷಿಸಿ ತಮ್ಮ ವಾಹನಗಳಲ್ಲಿ ಬಂದು ರಸ್ತೆಗೆ ಬಿದ್ದ ಜ್ಯೂಸ್ ಬಾಟಲ್‌ಗಳನ್ನು ಹೊತ್ತೊಯ್ದಿದ್ದು ಜನರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Read Full Story

02:51 PM (IST) Apr 28

ಬೆಂಗಳೂರಿನಲ್ಲಿ ಎನ್ವಿಡಿಯಾ ಬೃಹತ್ ಹೂಡಿಕೆ - 1,230 ಕೋಟಿ ರೂ. ಮೊತ್ತದ ಡೀಲ್; 7.6 ಲಕ್ಷ ಚದರಡಿ ಕಚೇರಿ ಬಾಡಿಗೆಗೆ!

ಎಐ ದೈತ್ಯ ಎನ್ವಿಡಿಯಾ, ಬೆಂಗಳೂರಿನ ಬಾಗ್ಮನೆ ಕ್ಯಾಪಿಟಲ್‌ನಲ್ಲಿ 7.6 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಬಾಡಿಗೆಗೆ ಪಡೆದು ಐತಿಹಾಸಿಕ ಒಪ್ಪಂದ ಮಾಡಿಕೊಂಡಿದೆ. 10 ವರ್ಷಗಳ ಈ ಒಪ್ಪಂದದ ಮೌಲ್ಯ ಸುಮಾರು 1,230 ಕೋಟಿ ರೂಪಾಯಿಗಳಾಗಿದ್ದು, ಇದು ಭಾರತದ ಎಐ ಪರಿಸರ ವ್ಯವಸ್ಥೆಗೆ ದೊಡ್ಡ ಉತ್ತೇಜನ ನೀಡಲಿದೆ.
Read Full Story

02:40 PM (IST) Apr 28

ರಾಜ್ ಸ್ಮಾರಕ ವಿವಾದ - ನಟ ಚೇತನ್ ಅಹಿಂಸಾ ವಿರುದ್ಧ ಪ್ರತಿಭಟನೆ, ಗಡಿಪಾರಿಗೆ ಆಗ್ರಹ, ಹಲವು ಗಣ್ಯರಿಂದ ಖಂಡನೆ

ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಕುರಿತು ನಟ ಚೇತನ್ ಅಹಿಂಸಾ ನೀಡಿದ ವಿವಾದಾತ್ಮಕ ಹೇಳಿಕೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರವೇ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಚೇತನ್ ಅವರನ್ನು ಚಿತ್ರರಂಗದಿಂದ ಗಡಿಪಾರು ಮಾಡುವಂತೆ ಮತ್ತು ಅವರ ಸದಸ್ಯತ್ವ ರದ್ದುಪಡಿಸುವಂತೆ ಆಗ್ರಹಿಸಿವೆ.
Read Full Story

01:38 PM (IST) Apr 28

SSLC ಲೀ ಹಳಗನ್ನಡ ನಡುಗನ್ನಡ - ಮಕ್ಕಳು ಗಡಗಡ! ಕನ್ನಡ ವಿಷಯದಲ್ಲೂ ಫೇಲ್ ಆಗಲು ಇದೇ ಕಾರಣವೇ?

ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅನುತ್ತೀರ್ಣರಾಗಲು ಪಠ್ಯಪುಸ್ತಕದಲ್ಲಿನ ಅಧಿಕ ವ್ಯಾಕರಣದ ಹೊರೆ ಮತ್ತು ಹಳಗನ್ನಡ, ನಡುಗನ್ನಡ ಪಾಠಗಳ ಕಠಿಣತೆಯೇ ಪ್ರಮುಖ ಕಾರಣವೆಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. 

Read Full Story

01:28 PM (IST) Apr 28

ಬೆಂಗಳೂರು - ಈರುಳ್ಳಿ ಬೆಳ್ಳುಳ್ಳಿಗಾಗಿ ಹೊಡೆದಾಡಿಕೊಂಡ ದಯಾನಂದ ಸಾಗರ್ ಕಾಲೇಜಿನ ಮಹಿಳಾ ಪ್ರೊಫೆಸರ್‌ಗಳು!

ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಇಬ್ಬರು ಮಹಿಳಾ ಸಹಾಯಕ ಪ್ರಾಧ್ಯಾಪಕಿಯರ ನಡುವೆ ಗಲಾಟೆ ನಡೆದಿದೆ. ಈರುಳ್ಳಿ-ಬೆಳ್ಳುಳ್ಳಿ ಬಳಕೆಯ ಸಣ್ಣ ವಿಚಾರದಿಂದ ಆರಂಭವಾದ ಜಗಳವು, ದೈಹಿಕ ಹಲ್ಲೆಯ ಹಂತಕ್ಕೆ ತಲುಪಿದ ಅಚ್ಚರಿಯ ಘಟನೆ ಇದಾಗಿದೆ.
Read Full Story

01:03 PM (IST) Apr 28

ದಕ್ಷಿಣ ರೈಲ್ವೆ ಬೇಸಿಗೆ ವಿಶೇಷ ರೈಲು ವಿಸ್ತರಣೆ, ಕೇರಳ ಕರ್ನಾಟಕದಿಂದ ತಮಿಳುನಾಡಿಗೆ ಈ ಮಾರ್ಗಗಳ ಮೂಲಕ ಪ್ರಯಾಣಿಸಿ!

ದಕ್ಷಿಣ ರೈಲ್ವೆಯು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಬೇಸಿಗೆಯ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ವಿಶೇಷ ರೈಲು ಸೇವೆಗಳನ್ನು ವಿಸ್ತರಿಸಿದೆ. ಮಂಗಳೂರು-ಚೆನ್ನೈ ಮತ್ತು ತಿರುನೆಲ್ವೇಲಿ-ಚೆನ್ನೈ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳು ಸಂಚರಿಸಲಿದ್ದು, ಪ್ರಯಾಣವನ್ನು ಸುಗಮಗೊಳಿಸಲಿವೆ.
Read Full Story

12:46 PM (IST) Apr 28

ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ, ಪದತ್ಯಾಗಕ್ಕೂ ಸಿದ್ಧ - ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ!

ಮಾಜಿ ಸಚಿವ ಕೆ.ಎನ್. ರಾಜಣ್ಣ ರಾಜ್ಯ ರಾಜಕಾರಣದ ಗೊಂದಲಗಳ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದು, ಹೈಕಮಾಂಡ್ ಮಧ್ಯಪ್ರವೇಶಿಸಿ ಗೊಂದಲ ನಿವಾರಿಸಬೇಕೆಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದು, ಪದತ್ಯಾಗಕ್ಕೂ ಸಿದ್ಧರಿದ್ದಾರೆ ಎಂದು ರಾಜಣ್ಣ ತಿಳಿಸಿದ್ದಾರೆ.

Read Full Story

12:31 PM (IST) Apr 28

ಧಾರವಾಡ - ಗಾಂಜಾ ಕೇಸ್‌ಲ್ಲಿ ನೆಗೆಟಿವ್ ಬಂದರೂ ಪೊಲೀಸರಿಂದ ವಸೂಲಿ, ಬೆದರಿಕೆ - ಮರ್ಯಾದೆಗಂಜಿ ವಿದ್ಯಾರ್ಥಿ ಸಾವಿಗೆ ಶರಣು

ಧಾರವಾಡದಲ್ಲಿ ಗಾಂಜಾ ಸೇವನೆಯ ಸುಳ್ಳು ಆರೋಪದ ಮೇಲೆ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟಿದ್ದ ಆದಿತ್ಯ ಮ್ಯಾಗೇರಿ ಎಂಬ ವಿದ್ಯಾರ್ಥಿ, ಮರ್ಯಾದೆಗೆ ಅಂಜಿ ಸಾವಿಗೆ ಶರಣಾಗಿದ್ದಾನೆ. ಇದರ ಜೊತೆಗೆ ಕೇಸ್‌ನಿಂದ ಬಿಡುಗಡೆ ಮಾಡಲು ಪೊಲೀಸರು ಸಾವಿರಾರು ರೂ ಲಂಚ ಕೇಳಿದ ಆರೋಪ ಕೇಳಿ ಬಂದಿದೆ.

Read Full Story

12:20 PM (IST) Apr 28

ವಿಶೇಷ ಚೇತನ ತಂದೆ-ತಾಯಿಗೆ ಧ್ವನಿಯಾದ ಮುದ್ದು ಕಂದಮ್ಮ; ಹೃದಯಸ್ಪರ್ಶಿ ವಿಡಿಯೋ ವೈರಲ್

ಚಿಕ್ಕಬಳ್ಳಾಪುರದ ಆದಿಯೋಗಿ ಬಳಿ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬರು ವಿಶೇಷ ಚೇತನ ದಂಪತಿಯನ್ನು ಭೇಟಿಯಾಗುತ್ತಾರೆ. ಕಿವಿ ಕೇಳದ, ಮಾತು ಬಾರದ ಆ ಪೋಷಕರಿಗೆ ಅವರ ಪುಟ್ಟ ಮಗಳು ಲಿಪ್ಸಾ ಧ್ವನಿಯಾಗಿ, ಅವರ ಪರವಾಗಿ ಮಾತನಾಡುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

11:54 AM (IST) Apr 28

ಬಿಗ್‌ಬಾಸ್ ರಜತ್ ಪೆಟ್ರೋಲ್ ಬಾಂಬ್ ರೀಲ್ಸ್! ರಸ್ತೆಯಲ್ಲಿ ಅಪಾಯಕಾರಿ ಸಾಹಸಕ್ಕೆ ಸಾರ್ವಜನಿಕರ ಆಕ್ರೋಶ

ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಅಲಿಯಾಸ್ ಬುಜ್ಜಿ, ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟಕ ಬಳಸಿ ರೀಲ್ಸ್ ಮಾಡಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಈ ಅಪಾಯಕಾರಿ ಕೃತ್ಯ ಎಸಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆಯೂ ಅವರು ಬೆದರಿಕೆ ಮತ್ತು ಮಚ್ಚು ಹಿಡಿದು ರೀಲ್ಸ್ ಮಾಡಿದಂತಹ ಹಲವು ವಿವಾದಗಳಲ್ಲಿ ಭಾಗಿಯಾಗಿದ್ದರು.
Read Full Story

11:46 AM (IST) Apr 28

ಹಸಿ-ಬಿಸಿ ದೃಶ್ಯದ ವಿವಾದಕ್ಕೆ ಉತ್ತರ ಕೊಟ್ಟ ರಾಕಿ; ಜಗತ್ತಿನ 'ಹಾಟ್ ಟಾಪಿಕ್'ಗೆ ಯಶ್ ಹೇಳಿದ್ದೇನು?

'ಟಾಕ್ಸಿಕ್​ ಗೆ ಆ್ಯಕ್ಷನ್ ಕಟ್ ಹೇಳಿರೋದು ಮಹಿಳಾ ನಿರ್ದೇಶಕಿ. ರಾಷ್ಟ್ರಪ್ರಶಸ್ತಿ ವಿಜೇತೆ ಗೀತು ಮೋಹನ್ ದಾಸ್. ಮಹಿಳಾ ನಿರ್ದೇಶಕಿಯೊಬ್ಬರು 'ಟಾಕ್ಸಿಕ್' ರೀತಿಯ ಆಕ್ಷನ್ ಚಿತ್ರವನ್ನು ನಿರ್ದೇಶನ ಮಾಡುವುದು ಅಪರೂಪ ಎಂದಿರೋ ಯಶ್ ಇದು ದೊಡ್ಡ ಪ್ರಮಾಣದ ಆಕ್ಷನ್ ಸಿನಿಮಾ.' ಎಂದಿರೋ ಯಶ್, ಇನ್ನೂ ಹೇಳಿದ್ದಾರೆ.. ಈ ಸ್ಟೋರಿ ನೋಡಿ.. 

Read Full Story

11:36 AM (IST) Apr 28

ಕಿಡಿಗೇಡಿಗಳಿಂದ ಮಾವಿನ ತೋಟಕ್ಕೆ ಬೆಂಕಿ, 150 ತೆಂಗಿನ ಸಸಿ, 100ಕ್ಕೂ ಹೆಚ್ಚು ಮಾವಿನ ಮರಗಳು ಸುಟ್ಟು ಭಸ್ಮ, ವೃದ್ಧ ರೈತ ದಂಪತಿ ಕಣ್ಣೀರು!

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ವೃದ್ಧ ರೈತ ರಾಜಯ್ಯ ಅವರ ಮಾವಿನ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ದುರ್ಘಟನೆಯಲ್ಲಿ 150 ತೆಂಗು, 100ಕ್ಕೂ ಹೆಚ್ಚು ಮಾವಿನ ಮರಗಳು ಹಾಗೂ ಕೃಷಿ ಉಪಕರಣಗಳು ಸುಟ್ಟು ಕರಕಲಾಗಿದ್ದು, ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
Read Full Story

11:32 AM (IST) Apr 28

ಹಣಕ್ಕಾಗಿ ಸ್ಮಶಾನದಿಂದ ಬ್ಯಾಂಕ್‌ಗೆ ಬಂತು ಮೃತ ಮಹಿಳೆಯ ಅಸ್ಥಿಪಂಜರ - ಒಡಿಶಾದಲ್ಲೊಂದು ವಿಚಿತ್ರ ಘಟನೆ

ಒಡಿಶಾದಲ್ಲಿ, ಮೃತ ಸೋದರಿಯ ಖಾತೆಯಿಂದ ಹಣ ಪಡೆಯಲು ವಿಫಲನಾದ ವ್ಯಕ್ತಿಯೊಬ್ಬ, ಆಕೆ ಮೃತಪಟ್ಟಿದ್ದಾಳೆಂದು ಸಾಬೀತುಪಡಿಸಲು ಆಕೆಯ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ತಂದಂತಹ ಆಘಾತಕಾರಿ ಘಟನೆ ನಡೆದಿದೆ. ನಂತರ ಪೊಲೀಸರು ಮಧ್ಯಪ್ರವೇಶಿಸಿ ಸಹಾಯದ ಭರವಸೆ ನೀಡಿದ್ದಾರೆ.

Read Full Story

11:01 AM (IST) Apr 28

ಕರ್ನಾಟಕದಲ್ಲಿ 200+ ವೈದ್ಯರ ನೇಮಕ, ಟ್ಯಾಬ್ ಸಹಿತ ಹೊಸ ಆ್ಯಂಬುಲೆನ್ಸ್ ವ್ಯವಸ್ಥೆ - ಆರೋಗ್ಯ ಸಚಿವ ಮಹತ್ವದ ಹೇಳಿಕೆ!

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 200ಕ್ಕೂ ಹೆಚ್ಚು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸರ್ಕಾರವೇ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ನಿಯಂತ್ರಿಸಲಿದ್ದು, ಟ್ಯಾಬ್ ಮೂಲಕ ರೋಗಿಯ ಸ್ಥಿತಿಗತಿ ವೀಕ್ಷಿಸುವ ನೂತನ ವ್ಯವಸ್ಥೆ ಜಾರಿಯಾಗಲಿದೆ ಎಂದರು.

Read Full Story

09:50 AM (IST) Apr 28

ರಾಷ್ಟ್ರೀಯ ಹೆದ್ದಾರಿಗೆ ಬಂದ ಸಾಂಬಾರ್ ಜಗಳ; ಸೋದರಮಾವನಿಂದ ಹಲ್ಲೆಗೆ ಯತ್ನ, ಪೊಲೀಸರ ವಶಕ್ಕೆ

ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ, ಸಾಂಬಾರ್ ಮಾಡಿಲ್ಲ ಎಂಬ ಕಾರಣಕ್ಕೆ ನಾಗರಾಜ್ ಎಂಬ ವ್ಯಕ್ತಿ ಕುಡಿದು ಬಂದು ತನ್ನ ಸೋದರಿ ಮತ್ತು ಆಕೆಯ ಮಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಸ್ಥಳೀಯರು ಜಗಳ ಬಿಡಿಸಲು ಹೋದಾಗ ಅವರ ಮೇಲೂ ಹಲ್ಲೆಗೆ ಮುಂದಾಗಿದ್ದು, ಕೊನೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
Read Full Story

09:50 AM (IST) Apr 28

ರಾಮ್ ಚರಣ್ ಜೊತೆ ಐಟಂ ಸಾಂಗ್ಸ್‌ಗೆ ಹೆಜ್ಜೆ ಹಾಕಿದ ನಟಿಯರಿವರು! ಈಗ ಎಲ್ಲರ ಕಣ್ಣು ಆಕೆಯ ಮೇಲೆ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಸಿನಿಮಾಗಳಲ್ಲಿ ಹಲವು ನಟಿಯರು ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿದ್ದಾರೆ. ಆ ಸಿನಿಮಾಗಳು ಯಾವುವು ಮತ್ತು ಆ ನಟಿಯರು ಯಾರು ಎಂಬ ಪಟ್ಟಿ ಇಲ್ಲಿದೆ.
Read Full Story

09:44 AM (IST) Apr 28

ಭಾರತವನ್ನ ನರಕ ಎಂದ ಟ್ರಂಪ್ ಒಬ್ಬ ಹುಚ್ಚ, ಕೇಂದ್ರದ ಕೆಲವು ನಾಯಕರು ಅಮೆರಿಕದ ಗುಲಾಮರಂತೆ ವರ್ತಿಸುತ್ತಿದ್ದಾರೆ - - ಲಾಡ್ ಆಕ್ರೋಶ

ಭಾರತವನ್ನು ನರಕವೆಂದು ಕರೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 'ಹುಚ್ಚ' ಎಂದು ಸಚಿವ ಸಂತೋಷ್ ಲಾಡ್ ತೀವ್ರವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದು ಪ್ರಶ್ನಿಸಿರುವ ಅವರು, ಮೋದಿ ಹಾಗೂ ಬಿಜೆಪಿಯ ಚುನಾವಣಾ ತಂತ್ರ ಮತ್ತು ಮಹಿಳಾ ಮೀಸಲಾತಿ ನಿಲುವಿನ ಬಗ್ಗೆಯೂ ವಾಗ್ದಾಳಿ 

Read Full Story

08:51 AM (IST) Apr 28

ನೋಂದಾಯಿಸಿದ್ದ ಯಾದಗಿರಿಯ 3000 ಗರ್ಭಿಣಿಯರು ಪತ್ತೆಯೇ ಇಲ್ಲ; ಆರೋಗ್ಯ ಇಲಾಖೆಯೇ ಶಾಕ್

ಯಾದಗಿರಿ ಜಿಲ್ಲೆಯಲ್ಲಿ ನೋಂದಣಿಯಾದ 30,000ಕ್ಕೂ ಹೆಚ್ಚು ಗರ್ಭಿಣಿಯರಲ್ಲಿ 3,000ಕ್ಕೂ ಅಧಿಕ ಮಂದಿಯ ಹೆರಿಗೆಯ ಮಾಹಿತಿ ಲಭ್ಯವಿಲ್ಲದಿರುವುದು ಸಾವಿರಾರು ಭ್ರೂಣಹತ್ಯೆಗಳ ಅನುಮಾನಕ್ಕೆ ಕಾರಣವಾಗಿದೆ. ಕನ್ನಡಪ್ರಭ ವರದಿಯ ಬೆನ್ನಲ್ಲೇ ಆರೋಗ್ಯ ಇಲಾಖೆ ರಾಜ್ಯಮಟ್ಟದ ಸಮಿತಿ ರಚಿಸಿ ತನಿಖೆ ನಡೆಸುತ್ತಿದೆ.

Read Full Story

08:37 AM (IST) Apr 28

ಅಡ್ಡಬೋರ್‌ ಮೂಲಕ ಬತ್ತಿದ ಕೆರೆ, ಬಾವಿಗಳಲ್ಲಿ ನೀರಿನ ಸೆಲೆ; ಮಂಗಳೂರಿನಲ್ಲಿ ಜಲಕ್ರಾಂತಿ

ಬೇಸಿಗೆಯಲ್ಲಿ ಬತ್ತಿಹೋಗುವ ಕರಾವಳಿಯ ಕೆರೆ ಮತ್ತು ಬಾವಿಗಳಿಗೆ ಅಡ್ಡ ಬೋರ್ ಕೊರೆಯುವ ಮೂಲಕ ಮತ್ತೆ ಜೀವ ನೀಡಲಾಗುತ್ತಿದೆ. ಭೂಮಿಯೊಳಗೆ ಅಡ್ಡಲಾಗಿ ಕೊರೆದು ನೀರಿನ ಸೆಲೆಯನ್ನು ಪತ್ತೆಹಚ್ಚುವ ಈ ಯಶಸ್ವಿ ತಂತ್ರವು, ವರ್ಷಪೂರ್ತಿ ನೀರು ಹರಿಯುವಂತೆ ಮಾಡಿ ನೀರಿನ ಅಭಾವವನ್ನು ನೀಗಿಸುತ್ತಿದೆ.

Read Full Story

08:04 AM (IST) Apr 28

Bengaluru - ಬೆತ್ತಲೆ ಸ್ಥಿತಿಯಲ್ಲಿ ಜಾರ್ಖಂಡ್ ಮೂಲದ ಯುವತಿಯ ಅರೆಕೊಳೆತ ಶವ ಪತ್ತೆ

ಜಾರ್ಖಂಡ್ ಮೂಲದ ಪೂಜಾ ದತ್ತಾ ಎಂಬ ಯುವತಿಯ ಮೃತದೇಹವು ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ದುರ್ವಾಸನೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇದು ಕೊ*ಲೆಯೋ ಅಥವಾ ಆತ್ಮ*ಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

07:35 AM (IST) Apr 28

ಕಾಂಗ್ರೆಸ್ಸಲ್ಲಿ ಅಹಿಂದ ದಂಗಲ್‌ - ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲು ಒಂದು ಬಣ ಸಿದ್ಧತೆ

ಹುಬ್ಬಳ್ಳಿಯಲ್ಲಿ ಉದ್ದೇಶಿಸಿರುವ ಅಹಿಂದ ಸಮಾವೇಶವು ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಬಣಗಳನ್ನು ಸೃಷ್ಟಿಸಿದೆ. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಬಣವು ಪಕ್ಷಕ್ಕೆ ಲಾಭವೆಂದು ಸಮಾವೇಶಕ್ಕೆ ಒತ್ತಾಯಿಸಿದರೆ, ಮತ್ತೊಂದು ಬಣ ಪಕ್ಷಕ್ಕೆ ಹಾನಿಕರ ಎಂದು ವಿರೋಧ. ಈ ಗೊಂದಲ ಇದೀಗ ಹೈಕಮಾಂಡ್ ಅಂಗಳ ತಲುಪಿದೆ.

Read Full Story

More Trending News