ಬೆಳಗಾವಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಈಗಾಗಲೇ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ತೈಲ ಪೂರೈಕೆ ಕೂಡ ಸ್ಥಗಿತಗೊಳ್ಳಲಿದೆ ಎಂಬ ಸುಳ್ಳು ಹಬ್ಬಿದ್ದರಿಂದ ಸೋಮವಾರ ಬೆಳಗಾವಿ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಜನರು ಸಾಲುಗಟ್ಟಿ ತೈಲ್ ಸಂಗ್ರಹಿಸಿದ್ದಾರೆ. ಸುಳ್ಳುಸುದ್ದಿಯಿಂದ ಆತಂಕಗೊಂಡ ಜನರು ಮನೆಯಲ್ಲಿ ನೀರು ಸಂಗ್ರಹಿಸುವ ಕ್ಯಾನ್ ಸಮೇತ ಆಗಮಿಸಿ ಸಾಲುಗಟ್ಟಿ ನಿಂತು ಹರಸಾಹಸಪಟ್ಟು ಪೆಟ್ರೋಲ್, ಡಿಸೇಲ್ ಅನ್ನು ತುಂಬಿಸಿಕೊಂಡಿದ್ದಾರೆ.
ಈ ವೇಳೆ ಬಂಕ್ ಮಾಲೀಕರು, ಪೆಟ್ರೋಲ್ ಮತ್ತು ಡಿಸೇಲ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರೂ ಯಾರು ಕೂಡ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ವಿವಿಧ ಸಾಧನಗಳನ್ನು ತೆಗೆದುಕೊಂಡು ಬಂದು ತೈಲ ಸಂಗ್ರಹಕ್ಕೆ ಮುಂದಾಗಿದ್ದಾರೆ.
11:12 PM (IST) Mar 24
'ಹಳ್ಳಿ ಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋ ಖ್ಯಾತಿಯ ಸ್ಪರ್ಧಿ ಬಾವತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಚಲಾಯಿಸುತ್ತಿದ್ದ ಮೊಫೆಡ್, ರಸ್ತೆ ಬದಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
10:56 PM (IST) Mar 24
ಬೆಂಗಳೂರು ಮೂಲದ 'ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್' ಸಂಸ್ಥೆಯು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವೀಕ್ಷಣಾ ಗೋಪುರ ನಿರ್ಮಾಣಕ್ಕಾಗಿ 5 ಕೋಟಿ ರೂ. ನೆರವು ನೀಡಿದೆ. ಈ 25 ಮೀಟರ್ ಎತ್ತರದ ಗೋಪುರವು ಪ್ರವಾಸಿಗರಿಗೆ ಉದ್ಯಾನವನದ ದಟ್ಟ ಅರಣ್ಯ ಮತ್ತು ಬೆಂಗಳೂರಿನ ಸ್ಕೈಲೈನ್‌ನ ದೃಶ್ಯಗಳನ್ನು ಒದಗಿಸಲಿದೆ.
10:29 PM (IST) Mar 24
Sterling Koehn diaper case: ತಮ್ಮ ಕರುಳಕುಡಿಗಳೆಂದರೆ ಪೋಷಕರಿಗೆ ತುಸು ಜಾಸ್ತಿಯೇ ಪ್ರೀತಿ ಮಕ್ಕಳ ರಕ್ಷಣೆಗಾಗಿ ಪೋಷಕರು ಏನು ಬೇಕಾದರು ಮಾಡುತ್ತಾರೆ. ಆದರೆ ಇಲ್ಲೊಂದು ಕಡೆ ಪೋಷಕರು ಮಾಡಿದ ಅತಿಯಾದ ನಿರ್ಲಕ್ಷ್ಯದಿಂದಾಗಿ ಮಗು ಸಾವನ್ನಪ್ಪಿದೆ. ಹಾಗಾದರೆ ಪೋಷಕರು ಮಾಡಿದ್ದೇನು?
10:06 PM (IST) Mar 24
ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (nikhil kamath) ಸದ್ಯ ರಿಷಿ ಸುನಕ್- ಅಕ್ಷತಾ ಮೂರ್ತಿ ಸಂದರ್ಶನದಿಂದ ಸುದ್ದಿಯಲ್ಲಿದ್ದಾರೆ. ಈ ನಿಖಿಲ್ ಕಾಮತ್‌ಗೆ ಮದುವೆ ಆಗುವ ಯೋಚನೆ ಇಲ್ಲವಂತೆ. ಇದಕ್ಕೆ ಅವರು ನೀಡಿದ ಕಾರಣ ವಿಶಿಷ್ಟವಾಗಿದೆ.
09:48 PM (IST) Mar 24
ಮೆಗಾ ಡಾಟರ್ ನಿಹಾರಿಕಾ ಕೊನಿಡೇಲಾ ಅವರ ಮದುವೆ, ವಿವಾದ, ವಿಚ್ಛೇದನ ಎಲ್ಲವೂ ಮುಗಿದುಹೋಗಿದೆ. ಡಿವೋರ್ಸ್ ನಂತರ ನಿಹಾರಿಕಾ ಅವರ ಎರಡನೇ ಮದುವೆ ಬಗ್ಗೆ ನಾನಾ ಬಗೆಯ ಸುದ್ದಿಗಳು ಹರಿದಾಡುತ್ತಿದ್ದವು. ಈ ವಿಚಾರದಲ್ಲಿ ಟ್ರೋಲ್ ಮಾಡುವವರಿಗೆ ನಿಹಾರಿಕಾ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
09:34 PM (IST) Mar 24
ಕಲಬುರಗಿ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಅದಾನಿ ಸಮೂಹದ ಎಸಿಸಿ ಕಂಪನಿಯು ಸರ್ಕಾರಕ್ಕೆ ₹850 ಕೋಟಿ ರಾಜಧನ ಮತ್ತು ದಂಡವನ್ನು ಬಾಕಿ ಉಳಿಸಿಕೊಂಡಿದೆ. ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದ್ದರೂ, ಬಾಕಿ ವಸೂಲಿಗಾಗಿ ಕ್ರಿಮಿನಲ್ ಮೊಕದ್ದಮೆ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
08:44 PM (IST) Mar 24
08:02 PM (IST) Mar 24
ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಾವು ವ್ಯವಸ್ಥಿತ ಕೊಲೆ ಎಂದು ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.
07:40 PM (IST) Mar 24
ಮೊಬೈಲ್ ಬಳಕೆ ನಿಯಂತ್ರಿಸುವ ಸಂಬಂಧ ಪೋಷಕರು, ತಜ್ಞರ ಜೊತೆ ಚರ್ಚಿಸುವುದರೊಂದಿಗೆ ಮುಂದಿನ ಅಧಿವೇಶನದಲ್ಲೂ ಚರ್ಚಿಸಿದ ನಂತರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
07:31 PM (IST) Mar 24
ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವುದನ್ನು 1.50 ಲಕ್ಷ ರು. ಪಾವತಿಸಿ ಸಕ್ರಮ ಮಾಡಿಕೊಳ್ಳಲು ಮೂರು ತಿಂಗಳ ಸಮಯಾವಕಾಶ ನೀಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
07:20 PM (IST) Mar 24
ಇಂದಿನ ವಾತಾವರಣ ಗಮನಿಸಿದರೆ ಬಾಗಲಕೋಟೆಯಲ್ಲಿ ಬಿಜೆಪಿ ಅರಳುವುದು ಶತಃಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
07:08 PM (IST) Mar 24
07:06 PM (IST) Mar 24
ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿ ಕೊಂಡಿದ್ದು, ಆಕರ್ಷಣಿಯ ಪ್ರವಾಸಿ ಕೇಂದ್ರಗಳಾಗಿ ಬೆಳೆಯುತ್ತಿವೆ ಎಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.
06:44 PM (IST) Mar 24
ಬಿಗಿಯಾದ ಜೀನ್ಸ್ ಧರಿಸಿದರೆ ಮಕ್ಕಳಾಗುವುದಿಲ್ಲವೇ? ಈ ಬಗ್ಗೆ ಹಲವರಲ್ಲಿ ಅನುಮಾನಗಳಿವೆ. ಪುರುಷರು ಮತ್ತು ಮಹಿಳೆಯರ ಫಲವತ್ತತೆಯ ಮೇಲೆ ಬಿಗಿ ಉಡುಪುಗಳು ಹೇಗೆ ಪರಿಣಾಮ ಬೀರುತ್ತವೆ? ಇಲ್ಲಿದೆ ಮಾಹಿತಿ.
06:29 PM (IST) Mar 24
ಡಾ| ರಾಬರ್ಟ್ ಕ್ಷಯ ರೋಗಕ್ಕೆ ಕಾರಣವಾದ ರೋಗಾಣು ಮೈಕೊ ಬ್ಯಾಕ್ಟಿರಿಯಾ ಟ್ಯುಬರ್ ಕ್ಯುಲೋಸಿಸ್ ಎಂಬ ರೋಗಾಣುವನ್ನು ಕಂಡು ಹಿಡಿದರು. ಈ ದಿನದ ನೆನಪಿಗಾಗಿ ಪ್ರತಿ ವರ್ಷ 24 ರಂದು ವಿಶ್ವ ಕ್ಷಯರೋಗ ದಿನ ಎಂದು ಆಚರಿಸಲಾಗುತ್ತಿದೆ.
06:26 PM (IST) Mar 24
ಬೆಂಗಳೂರಿನ 'ನಮ್ಮ ಮೆಟ್ರೋ' ಹಂತ-3 ಯೋಜನೆಗೆ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಸುಮಾರು 6,100 ಕೋಟಿ ರೂಪಾಯಿ ಸಾಲ ನೀಡಲು ಅಧಿಕೃತವಾಗಿ ಒಪ್ಪಂದ ಮಾಡಿಕೊಂಡಿದೆ. ಇದು 30 ವರ್ಷಗಳ ಅವಧಿಯ ಸಾಲವಾಗಿದೆ.
06:04 PM (IST) Mar 24
ಮಲ್ಲಿಗೆ ಹೂವುಗಳು ತಮ್ಮ ಬಣ್ಣ, ಸುವಾಸನೆ ಮತ್ತು ಸೌಂದರ್ಯದಿಂದ ಯಾರನ್ನಾದರೂ ಸುಲಭವಾಗಿ ಸೆಳೆಯುತ್ತವೆ. ಹಬ್ಬ, ಪೂಜೆಗಳಿಗಷ್ಟೇ ಅಲ್ಲ, ಸಾಮಾನ್ಯ ದಿನಗಳಲ್ಲೂ ಮಹಿಳೆಯರು ಮಲ್ಲಿಗೆಯನ್ನು ಇಷ್ಟಪಟ್ಟು ಮುಡಿಯುತ್ತಾರೆ.
06:00 PM (IST) Mar 24
05:48 PM (IST) Mar 24
05:45 PM (IST) Mar 24
ವಿಜಯ್ ದೇವರಕೊಂಡ ಅವರ ಮಾವ ಯಶ್ ರಂಗಿನೇನಿ ಅವರು ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ವಿಜಯ್-ರಶ್ಮಿಕಾ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
05:20 PM (IST) Mar 24
04:50 PM (IST) Mar 24
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಚಿತ್ರವನ್ನು 'ಮಸ್ಟ್-ವಾಚ್' ಎಂದು ಹೊಗಳಿದ್ದಾರೆ. ರಣವೀರ್ ಸಿಂಗ್ ನಟನೆಯ ಈ ಸಿನಿಮಾ, ವಿಶ್ವಾದ್ಯಂತ ಮೊದಲ ವಾರಾಂತ್ಯದಲ್ಲಿ ₹761 ಕೋಟಿ ಗಳಿಸಿ, ಭಾರತೀಯ ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿದೆ.
04:32 PM (IST) Mar 24
04:32 PM (IST) Mar 24
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಮಕ್ಕಳ ಮೇಲೆ ಆಗುತ್ತಿರುವ ಡಿಜಿಟಲ್ ದುಷ್ಪರಿಣಾಮಗಳನ್ನು ತಡೆಯಲು ಶಾಲೆಗಳಲ್ಲಿ ವಾಟ್ಸಾಪ್ ಮೂಲಕ ಹೋಂವರ್ಕ್ ನೀಡುವುದನ್ನು ನಿಷೇಧಿಸಿದೆ. ಹೋಂವರ್ಕ್‌ಗಾಗಿ ಶಾಲಾ ಡೈರಿ ಬಳಕೆಯನ್ನು ಕಡ್ಡಾಯಗೊಳಿಸಿದೆ.
04:25 PM (IST) Mar 24
ಕಯಾದು ಲೋಹರ್ ಮಲಯಾಳಂ ಚಿತ್ರರಂಗದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ, ಸಿನಿಮಾ ರಂಗಕ್ಕೆ ಬರುವ ಮುನ್ನ ತಾನು ಮಾಡಿದ ಕೆಲಸಗಳ ಬಗ್ಗೆ ಕಯಾದು ಮಾತನಾಡಿದ್ದು, ಎಲ್ಲರ ಗಮನ ಸೆಳೆದಿದೆ.
03:36 PM (IST) Mar 24
03:21 PM (IST) Mar 24
02:08 PM (IST) Mar 24
ಬೀದರ್‌ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ, ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಕಾರಣಕ್ಕೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸುಮಾರು ₹80,000 ನಷ್ಟವಾಗಿರುವುದು ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
01:53 PM (IST) Mar 24
ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕನ್ನಡದಲ್ಲಿ ಮಸ್ತಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಪಾಡ್‌ಕಾಸ್ಟ್‌ನಲ್ಲಿ ಕನ್ನಡ ಮಾತುಕತೆ ಭಾರಿ ವೈರಲ್ ಆಗಿದೆ.
01:07 PM (IST) Mar 24
ಕಾಲ್ತುಳಿತದಲ್ಲಿ ಮೃತ 11 ಫ್ಯಾನ್ಸ್‌ಗೆ RCB ಟ್ರಿಬ್ಯೂಟ್, 11 ಜರ್ಸಿ ನಂಬರ್‌ನಲ್ಲಿ ಪ್ರಾಕ್ಟೀಸ್, 11 ಸೀಟ್ ರಿಸರ್ವ್ ಮಾಡಲಾಗಿದೆ. ಈ ಕುರಿತು ಇಂದು ಕೆಎಸ್‌ಸಿಎ ಸುದ್ದಿಗೋಷ್ಠಿ ನಡೆಸಿದ ಮಹತ್ವದ ಅಪ್‌ಡೇಟ್ ನೀಡಿದೆ.
12:54 PM (IST) Mar 24
12:39 PM (IST) Mar 24
12:38 PM (IST) Mar 24
ಸಭ್ಯ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಗಂಭೀರ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಯುವ ನಿರ್ದೇಶಕ ರಾಘವೇಂದ್ರ ನಾಯಕ್, ತಮ್ಮ ಕಥೆಯನ್ನು ಕದ್ದು 'ಲವ್ ಮಾಕ್ಟೇಲ್ 3' ಸಿನಿಮಾ ಮಾಡಿದ್ದಾರೆ ಎಂದು ಕೃಷ್ಣ ವಿರುದ್ಧ ಆರೋಪಿಸಿದ್ದಾರೆ. ಈ ಹಿಂದೆ ತಾನು ಕೃಷ್ಣಗೆ ಕಥೆ ಹೇಳಿದ್ದೆ ಎಂದು ಆರೋಪಿಸಿದ್ದಾರೆ.
12:25 PM (IST) Mar 24
11:57 AM (IST) Mar 24
11:42 AM (IST) Mar 24
10:02 AM (IST) Mar 24
Hubballi bike accident news: ಕಡಿದು ಬಿದ್ದ ಕೇಬಲ್ ವೈರ್‌ಗೆ ಸಿಲುಕಿ ಬೈಕ್ ಸವಾರರಿಬ್ಬರು ಸಾವಿಗೀಡಾದಂತಹ ದುರಂತ ಘಟನೆ ಇಂದು ಮುಂಜಾನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರೋ ಅರ್ಬನ್ ಓಯಾಸಿಸ್ ಮಾಲ್ ಬಳಿ ಈ ದುರಂತ ನಡೆದಿದೆ.
09:36 AM (IST) Mar 24
ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ಮೊಟ್ಟೆ ವಿತರಿಸಲು, ಸರ್ಕಾರವು ಗ್ಯಾಸ್ ಸಿಲಿಂಡರ್ ಮತ್ತು ಪಾತ್ರೆಗಳನ್ನು ಖರೀದಿಸಲು ಅನುದಾನ ನೀಡಿದೆ. ಧಾರವಾಡ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ.
08:41 AM (IST) Mar 24
07:33 AM (IST) Mar 24