ಬೆಂಗಳೂರು: ಈಗಾಗಲೇ ಬೆಲೆ ಏರಿಕೆ, ತೆರಿಗೆ ಹೆಚ್ಚಳದಿಂದ ತತ್ತರಿಸುತ್ತಿರುವ ಶ್ರೀಸಾಮಾನ್ಯನಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಬರುವ ಮಾರ್ಚ್ ತಿಂಗಳಲ್ಲಿ ವಿದ್ಯುತ್ ದರ ಏರಿಕೆಯ ಭರ್ಜರಿ ಶಾಕ್ ನೀಡುವ ಸಾಧ್ಯತೆ ಇದೆ. ಅದರಲ್ಲೂ ಒಂದು ವರ್ಷದ ಬದಲಿಗೆ ಮುಂದಿನ ಮೂರು ವರ್ಷಗಳ ದರ ಏರಿಕೆಯನ್ನು ಒಮ್ಮೆಗೆ ನಿರ್ಧಾರ ಮಾಡಿ ಬಳಕೆದಾರರಿಗೆ ತ್ರಿಬಲ್ ಶಾಕ್ ನೀಡುವ ಸಾಧ್ಯತೆ ಇದೆ. ಈ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಪದಾತ್ಯಾಗದ ಮಾತನಾಡಿರುವುದು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

10:10 PM (IST) Feb 24
ನಟಿ ಕತ್ರಿನಾ ಕೈಫ್ ತಮ್ಮ ಅತ್ತೆ ಜೊತೆ ಹಾಗೂ ನಟ ಅಕ್ಷಯ್ ಕುಮಾರ್ ಮಹಾಕುಂಭಕ್ಕೆ ಭೇಟಿ ನೀಡಿದ್ದು ಪುಣ್ಯಸ್ನಾನ ಮಾಡಿದ್ದಾರೆ.
09:47 PM (IST) Feb 24
ಪಾಕಿಸ್ತಾನ ಭಾರತ ಕ್ರಿಕೆಟ್ ವೇಳೆ ಕಿಸ್ ಕೊಟ್ಟು ಹಾಟ್ ನಟಿಯ ಬುಟ್ಟಿಗೆ ಬೀಳಿಸಿಕೊಂಡ್ರಾ ಓರಿ! ಶೀಘ್ರದಲ್ಲಿ ಊರ್ವಶಿ ರೌಟೇಲಾ ಮದ್ವೆ?
09:27 PM (IST) Feb 24
ಸೀತಾರಾಮ ಸೀರಿಯಲ್ ಟೀಮ್ ಸದ್ಯ ಕುಂಭಮೇಳದಲ್ಲಿದೆ. ಆದರೆ ಈ ಸೀರಿಯಲ್‌ನಲ್ಲಿರುವ ದೇವತೆಯಂಥಾ ನಟಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಹುಡುಗ ಏರ್‌ಫೋರ್ಸ್‌ನಲ್ಲಿರೋದಂತೆ!
09:23 PM (IST) Feb 24
ತಾಯಿಯ ಗರ್ಭದಿಂದ ಹೊರತೆಗೆದ ಮಗುವೊಂದನ್ನು ಪುನಃ ಇಟ್ಟು ಮತ್ತೆ ಹೊರಕ್ಕೆ ತೆಗೆಯಲಾಗಿದೆ. ಏನಿದು ವಿಚಿತ್ರ ಘಟನೆ ನೋಡಿ...
09:10 PM (IST) Feb 24
ಬೆಂಗಳೂರಿನ ಈ ಜಾಕಿ ಆಟೋದಲ್ಲಿ ಪ್ರಯಾಣಿಸಿದ್ದೀರಾ? ಆಟೋ ಚಾಲಕನ ಜೊತೆ ಆತನ ಮುದ್ದಿನ ನಾಯಿ ಕೂಡ ಇಡೀ ಬೆಂಗಳೂರು ಪ್ರಯಾಣ ಮಾಡುತ್ತೆ. ಮಾಲೀಕ ಹಾಗೂ ನಾಯಿಯ ವಿಶೇಷ ಜರ್ನ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.
Read Full Story09:01 PM (IST) Feb 24
ಅಣ್ಣಯ್ಯ ಸೀರಿಯ್ ಶಿವು ಉರ್ಫ್ ವಿಕಾಶ್ ಉತ್ತಯ್ಯ ಸದ್ಯ ಅಪಾಯವಿದೆ ಎಚ್ಚರಿಕೆ ಫಿಲ್ಮ್ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ಲವ್ ಬಗ್ಗೆ ಮಾತನಾಡಿದ್ದಾರೆ.
08:41 PM (IST) Feb 24
ಅಭಿಮಾನಿಯೊಬ್ಬರ ಜೊತೆ ಲಿಕ್‌ಲಾಕ್ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಗಾಯಕ ಉದಿತ್ ನಾರಾಯಣ್ ವಿರುದ್ಧ ಮೊದಲ ಪತ್ನಿ ದೂರು ದಾಖಲಿಸಿದ್ದಾರೆ. ಏನಿದು?
08:17 PM (IST) Feb 24
ಭಾರತೀಯ ಮಹಿಳೆಯರು ತಮ್ಮ ಪಾಕಿಸ್ತಾನಿ ಗೆಳತಿಯ ಮದುವೆಗೆ ಹೋಗಲಾಗದೆ ಆನ್‌ಲೈನ್‌ನಲ್ಲಿ ಮದುವೆಯ ವಿಡಿಯೋ ನೋಡಿ ಕಣ್ತುಂಬಿಕೊಂಡಿದ್ದಾರೆ. ದೇಶಗಳ ನಡುವಿನ ವೈರತ್ವ ಹಾಗೂ ಗಡಿ ಸಮಸ್ಯೆಗಳಿಂದಾಗಿ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲವೆಂದು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story08:14 PM (IST) Feb 24
ಝೆಪ್ಟೋ ಇದೀಗ ಕಾರು ಡೆಲಿವರಿ ಆರಂಭಿಸಿತಾ? ಹೊಸ ಜಾಹೀರಾತು ಹಲವರ ಕುತೂಹಲ ಹೆಚ್ಚಿಸಿದೆ. ಅಸಲಿಗೆ ಈ ಜಾಹೀರಾತು ಹೇಳುತ್ತಿರುವುದೇನು?
Read Full Story07:45 PM (IST) Feb 24
ನಟಿ ಶ್ರೀದೇವಿ ಸಾವಿನ ಬಗ್ಗೆ ಪತಿ ಬೋನಿ ಕಪೂರ್ ಕೆಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಶ್ರೀದೇವಿ ಸೌಂದರ್ಯ ಕಾಪಾಡಿಕೊಳ್ಳಲು ಉಪವಾಸ ಮಾಡುತ್ತಿದ್ದರು ಮತ್ತು ಆಕೆಯ ಸಾವಿಗೆ ಇದೇ ಕಾರಣವಿರಬಹುದು ಎಂದು ಹೇಳಿದ್ದಾರೆ. ಏಳು ವರ್ಷಗಳ ಬಳಿಕ ಇದು ಬಯಲಾಗಿದೆ.
Read Full Story07:27 PM (IST) Feb 24
ನೀವು ಶೌಚಾಲಯದಲ್ಲಿ ಕುಳಿತುಕೊಂಡು ಫೋನ್ ಬಳಸುತ್ತೀರಾ? ನಿಮಗೆ ಗೊತ್ತಿಲ್ಲದೆ ಈ ಆರೋಗ್ಯ ಸಮಸ್ಯೆ ಕಾಡಲಿದೆ. ಟಾಯ್ಲೆಟ್‌ನಲ್ಲಿ ಫೋನ್ ಬಳಕೆ ಮಾಡಿದರೆ ಎದುರಾಗುವ ಅಪಾಯವೇನು?
Read Full Story07:26 PM (IST) Feb 24
ಬೆಂಗಳೂರಿನಲ್ಲಿ ದೂರು ನೀಡಲು ಹೋದ ಅತ್ಯಾಚಾರ ಸಂತ್ರಸ್ತೆಗೆ ಪೊಲೀಸ್ ಕಾನ್ಸ್‌ಸ್ಟೇಬಲ್‌ನಿಂದಲೇ ಮತ್ತೆ ಅತ್ಯಾಚಾರ ನಡೆದಿದೆ. ನ್ಯಾಯ ಕೊಡಿಸುವುದಾಗಿ ನಂಬಿಸಿ ಆತನೇ ಎರಡು ಬಾರಿ ಅತ್ಯಾಚಾರ ಮಾಡಿದ್ದಾನೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
Read Full Story06:51 PM (IST) Feb 24
ಬಿಬಿಎಂಪಿ ವ್ಯಾಪ್ತಿಯ ಭಾರತೀಯ ವಿದ್ಯಾಭವನ ಶಾಲೆಯಲ್ಲಿ 2025-26ನೇ ಸಾಲಿನ ನರ್ಸರಿ ತರಗತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 25 ಕೊನೆಯ ದಿನಾಂಕವಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
Read Full Story06:41 PM (IST) Feb 24
ಬೆಂಗಳೂರು ಮಹಾನಗರ ಪಾಲಿಕೆಯನ್ನು 7 ಕಾರ್ಪೊರೇಷನ್‌ಗಳಾಗಿ ವಿಂಗಡಿಸಿ ಗ್ರೇಟರ್ ಬೆಂಗಳೂರು ಮಾಡಲು ಶಾಸಕರ ಸಮಿತಿ ಶಿಫಾರಸ್ಸು ಮಾಡಿದೆ. ಇದರಿಂದ ಉತ್ತಮ ಆಡಳಿತ ಮತ್ತು ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
Read Full Story06:38 PM (IST) Feb 24
ಭಾರತ ವಿರುದ್ಧ ಪಾಕ್ ನಾಯಕ ಮೊಹಮ್ಮದ್ ರಿಜ್ವಾನ್ ಪಂದ್ಯದ ಗತಿ ಬದಲಿಸುವಂತೆ ತಸ್‌ಬ್ಹಿ ಹಿಡಿದು ಪ್ರಾರ್ಥಿಸಿದ್ದಾರೆ. ಈ ವೇಳೆ ಸುರೇಶ್ ರೈನಾ ಕೊಟ್ಟ ಕೌಂಟರ್‌ಗೆ ಪಾಕಿಸ್ತಾನ ನಾಯಕ ಹೈರಾಣಾಗಿದ್ದಾರೆ. ಅಷ್ಟಕ್ಕೂ ಪಂದ್ಯದ ನಡುವೆ ನಡೆದಿದ್ದೇನು?
Read Full Story06:32 PM (IST) Feb 24
ಮಹಾ ಶಿವರಾತ್ರಿ ಹತ್ತಿರ ಬಂದಿದೆ. ಭಗವಾನ್ ಶಿವನನ್ನು ಆರಾಧಿಸುವ ಅಸಂಖ್ಯಾತ ಪೂಜಾ ಸ್ಥಳಗಳು ಭಾರತದಲ್ಲಿಯೂ ಇತರ ಕಡೆಗಳಲ್ಲಿಯೂ ಇವೆ. ಅದರಲ್ಲಿ ಕೆಲವು ವಿಚಿತ್ರ ಆಚರಣೆಗಳನ್ನು ಹೊಂದಿರುವ ದೇವಾಲಯಗಳೂ ಇವೆ. ಅಂಥ ಕೆಲವು ದೇವಾಲಯಗಳ ಪರಿಚಯ ಇಲ್ಲಿದೆ.
Read Full Story06:01 PM (IST) Feb 24
ಬೆಂಗಳೂರಿನ ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಿತು. ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡವು ಹಳದಿ ಮಾರ್ಗದಲ್ಲಿ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್‌ನಿಂದ ತರಿಸಲಾದ ರೈಲುಗಳ ತಪಾಸಣೆ ನಡೆಸಿತು.
Read Full Story05:46 PM (IST) Feb 24
ನಮ್ ಶಾಲೆಯ ಅರ್ಧಕ್ಕರ್ಧ ಮಕ್ಕಳು ಕೆಟ್ಟು ಹೋಗಿದ್ದಾರೆ. ಕೆಟ್ಟ ಪದ ಬಳಕೆ ಮಾಡುತ್ತಿದ್ದಾರೆ. ಪ್ರಶ್ನೇ ಕೇಳಿದರೆ ಪುಷ್ಪಾ2 ಚಿತ್ರದಲ್ಲಿ ನಾಯಕನ ಡೈಲಾಗ್‌ನ್ನು ಹೇಳುತ್ತಿದ್ದಾರೆ. ಪರೀಕ್ಷೆಯಲ್ಲಿ ಕಳಪೆಯಾಗಿದ್ದಾರೆ. ಪುಷ್ಪಾ2 ಚಿತ್ರ ಮಕ್ಕಳ ಭವಿಷ್ಯ ಹಾಳುಮಾಡುತ್ತಿದೆ ಎಂದು ಸರ್ಕಾರಿ ಶಾಲಾ ಶಿಕ್ಷಕಿ ಗಂಭೀರ ಆರೋಪ ಮಾಡಿದ್ದಾರೆ.
Read Full Story05:35 PM (IST) Feb 24
ಆಚಾರ್ಯ ಚಾಣಕ್ಯರ ಪ್ರಕಾರ, ನಾಯಿಗಳಿಂದ ಮನುಷ್ಯರು ಕಲಿಯಬೇಕಾದ 4 ಪ್ರಮುಖ ಗುಣಗಳಿವೆ. ಅವುಗಳೆಂದರೆ ಕಡಿಮೆ ಆಹಾರ ಸೇವನೆ, ಎಚ್ಚರಿಕೆಯ ನಿದ್ರೆ, ನಿಷ್ಠೆ ಮತ್ತು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ.
Read Full Story05:09 PM (IST) Feb 24
ಆರ್ಥಿಕ ತೊಂದರೆಯಿಂದ ಪ್ರಯಾಗ್‌ರಾಜ್‌ಗೆ ಹೋಗಲಾಗದ ಗೌರಿ ಎಂಬ ಮಹಿಳೆ ತನ್ನ ಮನೆಯಲ್ಲಿಯೇ ಬಾವಿ ತೋಡಿ ಗಂಗೆಯನ್ನು ತರಿಸಿಕೊಂಡಿದ್ದಾರೆ. ಕುಂಭಮೇಳ ಪ್ರಾರಂಭವಾದ ಒಂದೂವರೆ ತಿಂಗಳ ನಂತರ ಆಕೆಯ ಬಾವಿಯಲ್ಲಿ ನೀರು ಕಾಣಿಸಿಕೊಂಡಿದೆ.
Read Full Story04:51 PM (IST) Feb 24
ಬೆಂಗಳೂರು ಮಂಗಳೂರು ನಡುವೆ ಪ್ರಯಾಣಿಸುವವರಿಗೆ ಗುಡ್ ನ್ಯೂಸ್. ಕಾರಣ ಹೊಸ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯಲ್ಲಿ ಪ್ರಯಾಣ 7 ರಿಂದ 8 ಗಂಟೆಗೆ ಇಳಿಕೆಯಾಗಲಿದೆ.
Read Full Story04:47 PM (IST) Feb 24
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟಕ್ಕೆ ಸರ್ಕಾರದ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದ್ದಾರೆ.
Read Full Story04:31 PM (IST) Feb 24
ಪುಷ್ಕರ ಯೋಗ ಸೇರಿದಂತೆ ಇತರ ಹಲವು ಅಪರೂಪದ ಶುಭ ಯೋಗಗಳು ನಾಳೆ ರೂಪುಗೊಳ್ಳುತ್ತಿವೆ. ನಾಳೆ ಚಂದ್ರನು ಹಗಲು ರಾತ್ರಿ ಮಕರ ರಾಶಿಯಲ್ಲಿ ಸಾಗುತ್ತಾನೆ.
04:02 PM (IST) Feb 24
ಬಾಗಲಕೋಟೆ ಬಸ್‌ಗೆ ಮರಾಠಿ ಪುಂಡರು ಮಸಿ ಬಳಿದ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸೂಚಿಸಿದ್ದಾರೆ. ಸೊಲ್ಲಾಪುರ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Read Full Story03:20 PM (IST) Feb 24
ಬೆಂಗಳೂರಿನ ವಿಧಾನಸೌಧದಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ಪುಸ್ತಕ ಮೇಳ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಳವನ್ನು ಉದ್ಘಾಟಿಸಲಿದ್ದು, ಸಾಹಿತಿಗಳು ಮತ್ತು ಮನರಂಜನಾ ಕಾರ್ಯಕ್ರಮಗಳು ಇರಲಿವೆ.
Read Full Story03:16 PM (IST) Feb 24
ಇಂದು ರಾತ್ರಿ ಛಾಯಾ ಗ್ರಹ ರಾಹು ತನ್ನ ನಕ್ಷತ್ರಪುಂಜವನ್ನು ಬದಲಾಯಿಸಿದ್ದು, ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
02:52 PM (IST) Feb 24
ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ವಿರುದ್ಧ ದಾಖಲಾದ FIR ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ, ಸಿದ್ದರಾಮಯ್ಯ ಸರ್ಕಾರವು ತಮ್ಮ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.
Read Full Story02:44 PM (IST) Feb 24
ಬೆಂಗಳೂರಿನ ಯಲಹಂಕದಲ್ಲಿ ಸ್ನೇಹಿತನಿಗಾಗಿ ಹೊಡೆದಾಡಲು ಹೋದ ವ್ಯಕ್ತಿಯೊಬ್ಬ ಚಾಕು ಇರಿತಕ್ಕೆ ಬಲಿಯಾಗಿದ್ದಾನೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Read Full Story02:35 PM (IST) Feb 24
ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ, ಬೆಂಗಳೂರಿನಲ್ಲಿ ಹೊಸ ಕಚೇರಿಯನ್ನು ತೆರೆಯಲು ಸಜ್ಜಾಗಿದೆ. ಈ ಕಚೇರಿಯು ಕೃತಕ ಬುದ್ಧಿಮತ್ತೆ-ಚಾಲಿತ ಎಂಜಿನಿಯರಿಂಗ್‌ನ ಮೇಲೆ ಕೇಂದ್ರೀಕರಿಸುತ್ತದೆ.
Read Full Story01:43 PM (IST) Feb 24
ನಟಿ ಶ್ರೀದೇವಿ ಅವರು ಸಾವನ್ನಪ್ಪಿ ಇಂದಿಗೆ ಏಳು ವರ್ಷ. ಇವರ ಸಾವಿನ್ನೂ ನಿಗೂಢವಾಗಿಯೇ ಉಳಿದಿದ್ದು, ಮಾಮುಷಿ ವಿಷದ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ.
01:33 PM (IST) Feb 24
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ದಲಿತ ಸಮುದಾಯಗಳ ಮೀಸಲಿಟ್ಟ ಹಣವನ್ನು ಬಳಸಿಕೊಳ್ಳುವುದನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪುತ್ತಿದ್ದು, ಇದರಲ್ಲಿ ರಾಜಕೀಯವಿಲ್ಲ ಎಂದು ಅವರು ಹೇಳಿದ್ದಾರೆ.
Read Full Story01:23 PM (IST) Feb 24
ಶಿವಮೊಗ್ಗದ ಭದ್ರಾವತಿಯಲ್ಲಿ ಪೊಲೀಸರು ರೌಡಿಶೀಟರ್ ಶಾಹಿದ್ ಖುರೇಶಿ ಮತ್ತು ರವಿ ಅಲಿಯಾಸ್ ಗುಂಡ ಎಂಬುವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಶಾಹಿದ್ ಮತ್ತು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರವಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
Read Full Story01:19 PM (IST) Feb 24
ಶುಕ್ರ ದೇವರು ಉತ್ತರಭದ್ರಪದ ನಕ್ಷತ್ರಪುಂಜವನ್ನು ಪ್ರವೇಶಿಸಲಿದ್ದು, ಇದರ ಆಡಳಿತ ಗ್ರಹ ಶನಿ ಎಂದು ಪರಿಗಣಿಸಲಾಗಿದೆ. ಶುಕ್ರನ ಸಂಚಾರದಿಂದಾಗಿ ಯಾವ ಮೂರು ರಾಶಿಚಕ್ರದವರಿಗೆ ಅದೃಷ್ಟ ಸಿಗಬಹುದು ನೋಡಿ.
01:03 PM (IST) Feb 24
ಸರ್ಕಾರದಿಂದ ಕೊಡುವ ಎಮ್ಮೆಗಾಗಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ವಿವಾಹವಾಗಿದ್ದರೂ ವಿಚ್ಛೇದನ ಪಡೆಯದೆ ಮರುಮದುವೆಗೆ ಸಿದ್ಧಳಾಗಿದ್ದಳು. ಸ್ವತಃ ಆಕೆಯ ತಂದೆ ತಾಯಿಯೇ ಮಗಳ ಮೋಸವನ್ನು ಬಯಲಿಗೆಳೆದಿದ್ದಾರೆ.
Read Full Story12:49 PM (IST) Feb 24
ದೆಹಲಿ ಸರ್ಕಾರ ಖಜಾನೆ ಖಾಲಿ ಮಾಡಿದೆ ಎಂದು ನೂತನ ಸಿಎಂ ರೇಖಾ ಗುಪ್ತಾ ಆರೋಪಿಸಿದ್ದಾರೆ. ಬಿಜೆಪಿ ಅಭಿವೃದ್ಧಿ ಮತ್ತು ಜನರ ಸಮಸ್ಯೆ ಪರಿಹರಿಸುವತ್ತ ಗಮನಹರಿಸಲಿದೆ ಎಂದು ವೀರೇಂದ್ರ ಸಚ್‌ದೇವ ಹೇಳಿದ್ದಾರೆ.
Read Full Story12:05 PM (IST) Feb 24
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ 77ನೇ ಹುಟ್ಟುಹಬ್ಬದ ಪ್ರಯುಕ್ತ ತಮಿಳುನಾಡು ಸರ್ಕಾರ ಮತ್ತು ಎಐಎಡಿಎಂಕೆ ನಾಯಕರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಇದೇ ವೇಳೆ ಎಡಪ್ಪಾಡಿ ಪಳನಿಸ್ವಾಮಿ, ಟಿಟಿವಿ ದಿನಕರನ್, ಅಣ್ಣಾಮಲೈ ಸೇರಿದಂತೆ ಹಲವು ನಾಯಕರು ಜಯಲಲಿತಾ ಅವರನ್ನ ಹೊಗಳಿದ್ದಾರೆ.
ಅತ್ಯುತ್ತಮ ರಾಷ್ಟ್ರೀಯವಾದಿ ನಾಯಕಿ ಜಯಲಲಿತಾ: ಅಣ್ಣಾಮಲೈ
11:41 AM (IST) Feb 24
ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತರು ಕಾತರದಿಂದ ಕಾಯುತ್ತಿದ್ದ ದಿನ ಬಂದಿದೆ. ಟಿಟಿಡಿ ಅಧಿಕಾರಿಗಳು ರೂ 300 ವಿಶೇಷ ದರ್ಶನದ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಟಿಕೆಟ್ ಬುಕ್ ಮಾಡೋದು ಹೇಗೆ ಅಂತಾ ನೋಡೋಣ.
ತಿಮ್ಮಪ್ಪನ ದರ್ಶನಕ್ಕೆ ಮೇ ತಿಂಗಳ ವಿಶೇಷ ಪ್ರವೇಶ ಟಿಕೆಟ್ ಬಿಡುಗಡೆ, ಬುಕ್ ಮಾಡೋದು ಹೇಗೆ?
10:49 AM (IST) Feb 24
ರಾಜ್ಯ ಸರ್ಕಾರವು ದಲಿತ ನಿಗಮಗಳಿಗೆ ಹಂಚಿಕೆಯಾದ ಅನುದಾನದಲ್ಲಿ ಶೇ.25ರಷ್ಟನ್ನು ಮಾತ್ರ ಬಿಡುಗಡೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ನಿಗಮಗಳ ಅನುದಾನ ಕಡಿತ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಗ್ಯಾರಂಟಿಯ ಭಾರ, ದಲಿತ ನಿಗಮಗಳ ಹಣಕ್ಕೂ ಕತ್ತರಿ ಹಾಕಿದ ಸರ್ಕಾರ?
10:30 AM (IST) Feb 24
ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಿಕುಮಾರ ನಟನೆಯ ತರಬೇತಿ ಪಡೆದಿದ್ದು, ಸಿನಿಮಾ ಹೀರೋ ಆಗಲು ಆಸಕ್ತಿ ಹೊಂದಿದ್ದಾರೆ. ರಾಜಕೀಯಕ್ಕೆ ಬರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಸಕ್ತಿ ಇದ್ದರೆ ತಡೆಯಲಾಗದು ಎಂದಿದ್ದಾರೆ.
'ನನ್ನ ಮಗನಿಗೆ ಸಿನಿಮಾ ಹೀರೋ ಆಗಲು ಆಸಕ್ತಿ, ಬೇಡ ಅನ್ನೋಲ್ಲ: ಮಗನ ಭವಿಷ್ಯದ ಬಗ್ಗೆ ಶಿವರಾಜ ತಂಗಡಗಿ ಮಾತು
10:04 AM (IST) Feb 24
ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಹೋಗಿ ವಾಪಾಸ್ ಬರುತ್ತಿದ್ದ ಆರು ಮಂದಿ ಮಧ್ಯಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವು ಕಂಡಿದ್ದಾರೆ. ಗೋಕಾಕನಿಂದ ಪ್ರಯಾಗರಾಜ‌್‌ನಲ್ಲಿ ನಡೆಯುತ್ತಿರುವ ಮಹಾಕುಂಭದ ಪುಣ್ಯಸ್ನಾನಕ್ಕೆ ಹೋಗಿ ವಾಪಾಸ್ ಬರುವಾಗ ಈ ಘಟನೆ ನಡೆದಿದೆ.
ಮಹಾಕುಂಭ ಮೇಳಕ್ಕೆ ಹೋಗಿದ್ದ 6 ಮಂದಿ ರಸ್ತೆ ಅಪಘಾತದಲ್ಲಿ ಸಾವು!