Road accidents: ವಾಣಿಜ್ಯ ತೆರಿಗೆ ಇಲಾಖೆ ವಾಹನಕ್ಕೆ ಲಾರಿ ಡಿಕ್ಕಿ:ಕರ್ತವ್ಯನಿರತ ಸಿಬ್ಬಂದಿ ಸಾವು

By Ravi Janekal  |  First Published Aug 20, 2023, 10:03 AM IST

ನಿಂತಿದ್ದ ವಾಣಿಜ್ಯ ತೆರಿಗೆ ಇಲಾಖೆ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿ ಚಾಲಕನೋರ್ವ ಮೃತಪಟ್ಟ ಘಟನೆ ಹುಬ್ಬಳ್ಳಿಯ ರಿಂಗ್ ರೋಡ್ ನಲ್ಲಿ ನಡೆದಿದೆ.


ಹುಬ್ಬಳ್ಳಿ (ಆ.20): ನಿಂತಿದ್ದ ವಾಣಿಜ್ಯ ತೆರಿಗೆ ಇಲಾಖೆ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿ ಚಾಲಕನೋರ್ವ ಮೃತಪಟ್ಟ ಘಟನೆ ಹುಬ್ಬಳ್ಳಿಯ ರಿಂಗ್ ರೋಡ್ ನಲ್ಲಿ ನಡೆದಿದೆ. ಕರ್ತವ್ಯ ನಿರತ ಇಲಾಖೆ ಚಾಲಕ ರಫೀಕ್ ನದಾಫ್ ಮೃತ ದುರ್ದೈವಿ. ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿ ಲಾರಿ ತಪಾಸಣೆ. ವಾಣಿಜ್ಯ ತೆರಿಗೆ ಅಧಿಕಾರಿಗಳಗಳಿಂದ ಸರಕು ಸಾಗಣೆ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ನಡೆದಿರೋ ದುರ್ಘಟನೆ. ಇಬ್ಬರು ಅಧಿಕಾರಿಗಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಚಿತ್ರದುರ್ಗದ ಬಳಿ ಭೀಕರ ದುರಂತ, ಒಂದೇ ಕುಟುಂಬದ ನಾಲ್ವರು ಸೇರಿ 5 ಬಲಿ, ಮೂವರು ಗಂಭೀರ

Tap to resize

Latest Videos

ಗಿರಿಯಮ್ಮನಹಳ್ಳಿ ತಿರುವಿನದಲ್ಲಿ ಬೈಕ್‌ ನಡುವೆ ಡಿಕ್ಕಿ: ಇಬ್ಬರ ಸಾವು

 ಚಳ್ಳಕೆರೆ: ತಾಲೂಕಿನ ತಳಕು ಪೊಲೀಸ್‌ ಠಾಣಾ ವ್ಯಾಪ್ತಿಯ ಗಿರಿಯಮ್ಮನಹಳ್ಳಿ ಗೇಟ್‌ ಬಳಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಒರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹಿರೇಹಳ್ಳಿ ಕಡೆಯಿಂದ ಚಳ್ಳಕೆರೆ ಕಡೆಗೆ ಬರುತ್ತಿದ್ದ ನಾಗೇಶ್‌ ಎಂಬುವವರಿಗೆ ಸೇರಿದ ಮೋಟಾರ್‌ ಬೈಕ್‌ಗೆ ಹಿರೇಹಳ್ಳಿಯಿಂದ ವರವು ಕಡೆ ಜೋರಾಗಿ ಚಲಿಸುತ್ತಿದ್ದ ಸಣ್ಣಬೋರಯ್ಯ ಎಂಬುವವರ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಪೆಟ್ಟು ಬಿದ್ದು, ರಕ್ತಮಯವಾಗಿದ್ದ ನಾಗೇಶ್‌(24) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಣ್ಣಬೋರಯ್ಯನೊಂದಿಗೆ ಪ್ರಯಾಣಿಸುತ್ತಿದ್ದ ನಾಗಮ್ಮ(45) ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೃತ್ತ ನಿರೀಕ್ಷಕ ಕೆ. ಸಮೀವುಲ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್‌ಐ ಗಾದಿಲಿಂಗಪ್ಪ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರೀಲಿ ಅಪಘಾತ ಬಳಿಕ ಈಗ ದರೋಡೆ ಹಾವಳಿ..!

click me!