ಬಿಜೆಪಿ ಆಪರೇಷನ್‌ ಮಾಡಿದರೆ ಸರಿ, ನಾವು ಮಾಡಿದ್ರೆ ತಪ್ಪಾ? : ಡಿಕೆಶಿ ಪ್ರಶ್ನೆ

Published : Aug 20, 2023, 09:04 AM IST
ಬಿಜೆಪಿ ಆಪರೇಷನ್‌ ಮಾಡಿದರೆ ಸರಿ, ನಾವು ಮಾಡಿದ್ರೆ ತಪ್ಪಾ? : ಡಿಕೆಶಿ ಪ್ರಶ್ನೆ

ಸಾರಾಂಶ

‘ಕರ್ನಾಟಕವೂ ಸೇರಿದಂತೆ ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಬಿಜೆಪಿ ಏನು ಮಾಡಿತ್ತು? ಆಯಾ ಪರಿಸ್ಥಿತಿಗೆ ಏನು ಬೇಕೋ ಅದು ಆಯಾ ಕಾಲಕ್ಕೆ ನಡೆಯುತ್ತದೆ. ಬಿಜೆಪಿಯವರು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪೇ?’ ಎಂದು ಆಪರೇಷನ್‌ ಹಸ್ತ ಆರೋಪಕ್ಕೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರು (ಆ.20) :  ‘ಕರ್ನಾಟಕವೂ ಸೇರಿದಂತೆ ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಬಿಜೆಪಿ ಏನು ಮಾಡಿತ್ತು? ಆಯಾ ಪರಿಸ್ಥಿತಿಗೆ ಏನು ಬೇಕೋ ಅದು ಆಯಾ ಕಾಲಕ್ಕೆ ನಡೆಯುತ್ತದೆ. ಬಿಜೆಪಿಯವರು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪೇ?’ ಎಂದು ಆಪರೇಷನ್‌ ಹಸ್ತ ಆರೋಪಕ್ಕೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಖಾರವಾಗಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ತನ್ನ ತಪ್ಪುಗಳನ್ನು ಮುಚ್ಚಿಹಾಕಲು ಆಪರೇಷನ್‌ ಹಸ್ತ(Opereation hasta) ನಡೆಸುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತೀಕ್ಷ$್ಣ ತಿರುಗೇಟು ನೀಡಿದ ಅವರು, ಬಿಜೆಪಿಯವರು ಮಾಡಿದರೆ ಸರಿ ನಾವು ಮಾಡಿದರೆ ತಪ್ಪೇ ಎನ್ನುವ ಮೂಲಕ ಪಕ್ಷ ತೊರೆದವರ ಘರ್‌ ವಾಪಸಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

60 ದಿನಗಳಲ್ಲಿ ಕಾಂಗ್ರೆಸ್‌ ಭ್ರಷ್ಟಾಚಾರ ಬಯಲು: ಅಶ್ವತ್ಥನಾರಾಯಣಗೌಡ

ಕಾಂಗ್ರೆಸ್‌ ಪಕ್ಷ ಸಮುದ್ರ ಇದ್ದಂತೆ. ಉತ್ತಮ ರಾಜಕೀಯ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು. ಒಳ್ಳೆಯದು, ಕೆಟ್ಟದ್ದು ವ್ಯಕ್ತಿಗತವಾದ ಆಲೋಚನೆ. ಪ್ರಜಾಪ್ರಭುತ್ವ ಉಳಿಯಬೇಕು ಹಾಗೂ ದೇಶ, ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂಬ ಯೋಚನೆಯುಳ್ಳವರು ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದನ್ನ ನಾವು ನಿರ್ಬಂಧ ಮಾಡಲು ಆಗುತ್ತದೆಯೇ ಎಂದು ಕೇಳಿದರು.

ಈ ಹಿಂದೆ ಯಾರಾರು ಏನು ಮಾತನಾಡಿದರು, ಏನನ್ನು ಮಾತನಾಡಲು ಬಂದಿದ್ದರು ಅದನ್ನೆಲ್ಲಾ ಈಗ ಬಿಡಿಸಿ ಹೇಳಬೇಕೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ಈ ರೀತಿ ಇರಬೇಕು, ಈ ರೀತಿ ತೀರ್ಮಾನ ತೆಗದುಕೊಳ್ಳಬೇಕು ಎಂದು ನಿರ್ದೇಶನ ಮಾಡಲು ಆಗುವುದಿಲ್ಲ. ವಿಪಕ್ಷಗಳು ಏನು ಬೇಕಾದರೂ ಆರೋಪ ಮಾಡಲಿ ನಮಗೆ ತೊಂದರೆ ಇಲ್ಲ ಎಂದು ಹೇಳಿದರು.

23ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದಾಗ,‘ಮೊದಲು ಅವರ ನಾಯಕರು ಯಾರು ಎಂದು ತೀರ್ಮಾನ ಮಾಡಿಕೊಂಡು ಆಮೇಲೆ ಹೋರಾಟ ಮಾಡಲಿ’ ಎಂದು ಕಾಲೆಳೆದರು.

 

Ghar wapsi: ಕಾಂಗ್ರೆಸ್‌ಗೆ ಸೋಮಶೇಖರ್‌ ಕರೆ ತರಲು ಶಾಸಕ ಶ್ರೀನಿವಾಸ್‌ಗೆ ಡಿಕೆ ಶಿವಕುಮಾರ್‌ ಟಾಸ್ಕ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್