
ಬೆಂಗಳೂರು (ಆ.20): ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಮದ್ಯದ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಹೆಚ್ಚಳ ಮಾಡಿದ ಬೆನ್ನಲ್ಲಿಯೇ ರಾಜ್ಯದ ಜನರೂ ಕೂಡ ಸರ್ಕಾರಕ್ಕೆ ಭರ್ಜರಿ ತೊರುಗೇಟು ನೀಡಿದ್ದಾರೆ. ಮದ್ಯ ಮಾರಾಟದ ದರ ಏರಿಕೆ ಮಾಡಿದ ಒಂದು ತಿಂಗಳಲ್ಲಿ ಮದ್ಯ ಖರೀದಿ ಪ್ರಮಾಣ ಭಾರಿ ಪ್ರಮಾಣದಲ್ಲಿ ತಗ್ಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮದಿಂದಾಗಿ ಕಅಬಕಾರಿ ಸುಂಕ ಹೆಚ್ಚಳ ಮಾಡಲಾಗಿತ್ತು. ಆದರೆ, ಇದನ್ನು ತಗ್ಗಿಸುವಂತೆ ಕೆಲವೆಡೆ ಸಣ್ಣಪುಟ್ಟ ಪ್ರತಿಭಟನೆ ಮಾಡಿದರೂ ಇದಕ್ಕೆ ಸರ್ಕಾರ ಬಗ್ಗಿರಲಿಲ್ಲ. ಇದರಿಂದ ಮದ್ಯಪ್ರಿಯರು ಈಗ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ. ಅಂದರೆ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮದ್ಯ ಮಾರಾಟದ ಪ್ರಮಾಣದಲ್ಲಿ ಭಾರಿ ಇಳಿಮುಖವಾಗಿದೆ. ಭಾರತೀಯ ಮದ್ಯ ಮಾರಾಟ (IML) ಪ್ರಮಾಣ ಶೇ.15 ರಷ್ಟು ಕುಸಿತವಾಗಿದೆ. ಆದರೆ, ಬಿಯರ್ ಮಾರಾಟದಲ್ಲಿ ಮಾತ್ರ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ಒಟ್ಟಾರೆ ಕರ್ನಾಟಕ ಪಾನೀಯ ನಿಗಮಕ್ಕೆ ಲಿಕ್ಕರ್ ಗೆ ಸಲ್ಲಿಸುವ ಖರೀದಿ ಬೇಡಿಕೆಯೂ ಇಳಿಕೆಯಾಗಿದೆ.
ಡಿ.31ರ ವರೆಗೆ ಈರುಳ್ಳಿ ರಫ್ತು ಮೇಲೆ ಶೇ.40 ರಷ್ಟು ಸುಂಕ
ವರ್ಷವಾರು ಮದ್ಯ ಮಾರಾಟದ ವಿವರ:
ಕಳೆದ ವರ್ಷ 2022-ಆಗಸ್ಟ್
ಮಾರಾಟ - 25.50 ಲಕ್ಷ ಬಾಕ್ಸ್ ಸ್ವದೇಶಿ ಬ್ರ್ಯಾಂಡ್
ಮಾರಾಟ -ಬಿಯರ್-10.34 ಲಕ್ಷ ಬಾಕ್ಸ್
ಈ ವರ್ಷ 2023 ಆಗಸ್ಟ್ 19ರವರೆಗೆ ಮದ್ಯ ಮಾರಾಟ
ಮಾರಾಟ-21.87 ಲಕ್ಷ ಬಾಕ್ಸ್ ದೇಶಿ ಬ್ರ್ಯಾಂಡ್
ಮಾರಾಟ -ಬಿಯರ್-12.52 ಲಕ್ಷಬಾಕ್ಸ್
ಕಡಿಮೆ ದರದ ಬ್ರ್ಯಾಂಡ್ ಗಳಿಗೆ ಹೆಚ್ಚಿದ ಬೇಡಿಕೆ
ಕಡಿಮೆ ದರದ ಬ್ರ್ಯಾಂಡ್‌ಗೆ ಶಿಫ್ಟ್ ಆದ ಮಧ್ಯಪ್ರಿಯರು: ರಾಜ್ಯದಲ್ಲಿ ಮದ್ಯದ ದರ ಏರಿಕೆಯಾದ ಬೆನ್ನಲ್ಲಿಯೇ ದುಬಾರಿ ಬೆಲೆಯ ಬ್ರ್ಯಾಂಡ್‌ಗಳಿಂದ ಕಡಿಮೆ ಬೆಲೆಯ ಬ್ರ್ಯಾಂಡ್ ಸೇವನೆಗೆ ಮುಂದಾಗಿದ್ದಾರೆ. ಸ್ಕಾಚ್ ಪ್ರಿಯರು ಪ್ರೀಮಿಯರ್ ಬ್ರ್ಯಾಂಡ್ ಗೆ ಶಿಫ್ಟ್ ಆಗಿದ್ದಾರೆ. ಇನ್ನು ಪ್ರೀಮಿಯಮ್ ಪ್ರಿಯರು ನಾರ್ಮಲ್ ಬ್ರ್ಯಾಂಡ್ ಗೆ ಶಿಫ್ಟ್ ಆಗಿದ್ದಾರೆ. ಇದರಿಂದ ಸರ್ಕಾರಿ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯ ಬರ್ತಿತ್ತು. ಆದರೆ, ಈಗ ಈ ಆಗಸ್ಟ್ ನಲ್ಲಿ 20 ದಿನಗಳು ಕಳೆದರೂ ಕೇವಲ 962 ಕೋಟಿ ಮಾತ್ರ ಸಂಗ್ರಹವಾಗಿದೆ.
2023ರ ಆರ್ಥಿಕ ವರ್ಷದಲ್ಲಿ ತಿಂಗಳವಾರು ಮದ್ಯ ಮಾರಾಟದಿಂದ ಬಂದ ಆದಾಯ ವಿವರ:
-ಏಪ್ರಿಲ್-2,308 ಕೋಟಿ ರೂ.
-ಮೇ-2,607 ಕೋಟಿ ರೂ.
-ಜೂನ್ -3,549 ಕೋಟಿ ರೂ.
-ಜುಲೈ-2,980 ಕೋಟಿ ರೂ.
-ಆ.18ರವರೆಗೆ 962 ಕೋಟಿ ರೂ.
ಕೋವಿಡ್ ನಂತರ ಯುವಜನತೆಯಲ್ಲಿ ಹಾರ್ಟ್‌ಅಟ್ಯಾಕ್ ಹೆಚ್ಚಳ; ICMRನಿಂದ ಅಧ್ಯಯನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ