ಸರ್ವಕಾಲಕ್ಕೂ ತನ್ನದೇ ಶ್ರೇಷ್ಠಭಕ್ತ ಗಣವನ್ನು ಹೊಂದಿರುವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ ಮತ್ತೆ ಕೋಟ್ಯಧೀಶನಾಗಿದ್ದಾನೆ. ಹೌದು! ಮಹದೇಶ್ವರನ ಹುಂಡಿಯಲ್ಲಿ 2.47 ಕೋಟಿ ರೂಪಾಯಿಗು ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ.
ಚಾಮರಾಜನಗರ (ಜು.07): ಸರ್ವಕಾಲಕ್ಕೂ ತನ್ನದೇ ಶ್ರೇಷ್ಠಭಕ್ತ ಗಣವನ್ನು ಹೊಂದಿರುವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ ಮತ್ತೆ ಕೋಟ್ಯಧೀಶನಾಗಿದ್ದಾನೆ. ಹೌದು! ಮಹದೇಶ್ವರನ ಹುಂಡಿಯಲ್ಲಿ 2.47 ಕೋಟಿ ರೂಪಾಯಿಗು ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಕಳೆದ 36 ದಿನಗಳ ಅವಧಿಯಲ್ಲಿ ಒಟ್ಟು 2,47,15,655 ರೂಪಾಯಿ ನಗದು ಸಂಗ್ರಹವಾಗಿದ್ದು, ಹಣದ ಜೊತೆಗೆ 77 ಗ್ರಾಂ ಚಿನ್ನ, 2 ಕೆಜಿ 250 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ. ನಗದು ಹಣದ ಪೈಕಿ 12 ಲಕ್ಷ ರೂಪಾಯಿ ನಾಣ್ಯದ ರೂಪದಲ್ಲೇ ಸಂಗ್ರಹವಾಗಿರೋದು ವಿಶೇಷ.
ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ತೇರು ಲೋಕಾರ್ಪಣೆ: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಿಸಿದ್ದ ಬೆಳ್ಳಿ ತೇರು ಭಾನುವಾರ ಲೋಕಾರ್ಪಣೆಗೊಂಡಿದ್ದು. ಧಾರ್ಮಿಕ ಕ್ಷೇತ್ರದಲ್ಲಿ ಮತ್ತೊಂದು ಹಿರಿಮೆಯಾಗಿ ಬೆಳ್ಳಿಯ ತೇರು ಸೇರ್ಪಡೆಗೊಂಡಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿಯ ತೇರು ನಿರ್ಮಿಸಲು ಕಾಣಿಕೆಯಿಂದ, ಭಕ್ತರ ದಾನದಿಂದ ಬಂದ 560 ಕೆಜಿ ಬೆಳ್ಳಿ ತೇರು 17ಅಡಿ ಎತ್ತರ ತಯಾರುಮಾಡಿರುವ ತೇರನ್ನು ಭಾನುವಾರ ಶಾಸಕ ಎಂ.ಆರ್. ಮಂಜುನಾಥ ಲೋಕಾರ್ಪಣೆಗೊಳಿಸಿದ್ದಾರೆ.
undefined
Karnataka Budget 2023 Live Updates | ಕರ್ನಾಟಕ ಬಜೆಟ್
ಮಲೆ ಮಾದೇಶ್ವರ ಬೆಟ್ಟದಲ್ಲಿ 108 ಅಡಿ ಮಲೆ ಮಹದೇಶ್ವರ ಪ್ರತಿಮೆ ಉದ್ಘಾಟನೆ ವೇಳೆಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳ್ಳಿಯ ತೇರಿನ ಉತ್ಸವ ಶುಲ್ಕವನ್ನು 2001 ರು. ಗೆ ನಿಗದಿ ಪಡಿಸುವಂತೆ ನೀಡಿದ್ದ ಸೂಚನೆಯ ಮೇರೆಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಭಕ್ತಾದಿಗಳಿಗೆ ಬೆಳ್ಳಿಯ ತೇರು ಉತ್ಸವಕ್ಕೆ ದರ ನಿಗದಿ ಮಾಡಿದ್ದಾರೆ. ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಲೆ ಮಹದೇಶ್ವರನ ಬೆಟ್ಟದಲ್ಲಿ ಈಗಾಗಲೇ ಹಲವು ಉತ್ಸವಗಳು ಮಹಾರಥೋತ್ಸವ ವಿಶೇಷ ದಿನಗಳಲ್ಲಿ ನಡೆಯುತ್ತಿದೆ. ಈ ರಥೋತ್ಸವದಲ್ಲಿ ಬೆಳ್ಳಿ ತೇರು ಸಹ ಇರಬೇಕೆಂಬ ಉದ್ದೇಶದಿಂದ ಬೆಳ್ಳಿ ತೇರನ್ನು ಸಿದ್ದಪಡಿಸಲಾಗಿತ್ತು.
ಕೊಟ್ಟ ಕುದುರೆಗಳನ್ನೆಲ್ಲ ಡಿ.ಕೆ.ಶಿವಕುಮಾರ್ ಏರಿದ್ದಾರೆ: ಮಾಜಿ ಸಿಎಂ ಬೊಮ್ಮಾಯಿ
ಇಂದಿನಿಂದ ಬೆಳ್ಳಿ ತೇರು ಸೇವೆ ಮಾದಪ್ಪನ ಭಕ್ತರಿಗೆ ದೊರೆಯಲಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬೆಳ್ಳಿಯ ತೇರು ಲೋಕಾರ್ಪಣೆಗೊಂಡು ಮಾದಪ್ಪನ ಭಕ್ತರಿಗೆ ಹರಕೆ ಹೊತ್ತು ಉತ್ಸವ ಮಾಡಿಸಲು ನಿಗದಿ ಮಾಡಿರುವ ದರ ಹೆಚ್ಚಾಗಿರುವುದರಿಂದ ಭಕ್ತರಿಂದ ದಾನವಾಗಿ ಪಡೆದ ಬೆಳ್ಳಿಯಿಂದ ನಿರ್ಮಾಣವಾಗಿರುವ ರಥಕ್ಕೂ ಸಹ ಖರ್ಚು ವೆಚ್ಚ ಸಹ ಭಕ್ತಾದಿಗಳು ನೀಡಿದ್ದಾರೆ. ಬೆಳ್ಳಿಯ ತೇರು ಉತ್ಸವಕ್ಕೆ ದರ ಕಡಿಮೆ ಮಾಡುವಂತೆ ಮಲೆ ಮಹದೇಶ್ವರ ಬೆಟ್ಟದ ಭಕ್ತರು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ಮನವಿ ಮಾಡಿದ್ದಾರೆ.