ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ: ವರುಣಾರ್ಭಟಕ್ಕೆ ಮೂವರು ಬಲಿ

By Govindaraj S  |  First Published Jul 7, 2023, 8:03 AM IST

ಜುಲೈ ಆರಂಭವಾಗುತ್ತಿದ್ದಂತೆಯೇ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ವರುಣ ಅರ್ಭಟ ಇಂದು ಸಹ ಮುಂದುವರೆದಿದ್ದು, ಭಾರೀ ಗಾಳಿ ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿದೆ. 


ಉಡುಪಿ (ಜು.07): ಜುಲೈ ಆರಂಭವಾಗುತ್ತಿದ್ದಂತೆಯೇ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ವರುಣ ಅರ್ಭಟ ಇಂದು ಸಹ ಮುಂದುವರೆದಿದ್ದು, ಭಾರೀ ಗಾಳಿ ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿದೆ. ಕಾರ್ಕಳ ತಾಲೂಕಿನ ಬೆಳ್ಮಣ್ ದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಬೃಹತ್ ಆಲದ ಮರ ಬಿದ್ದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರವೀಣ್ ಆಚಾರ್ಯ ಮೃತ ದುರ್ವೈವಿ. ಪ್ರವೀಣ್​ ತಮ್ಮ ಪಾಡಿಗೆ ತಾವು ಬೈಕ್​ನಲ್ಲಿ ಹೋಗುತ್ತಿದ್ದಾಗ, ದೊಡ್ಡ ಆಲದ ಮರ ರಪ್​ ಅಂತ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮರ ಬಿದ್ದ ಹಿನ್ನಲೆ ವಿದ್ಯುತ್ ಕಂಬ ಸೇರಿದಂತೆ ಇತರ ಕಟ್ಟಡಗಳಿಗೂ ಹಾನಿಯಾಗಿದ್ದು, ಸ್ಥಳೀಯರು ಮರ ತೆರವು ಮಾಡಿದ್ದಾರೆ.

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ‌ಮುಂದುವರೆದಿದ್ದು, ಮಳೆಯಿಂದಾಗಿ ಇಬ್ಬರು ಬಲಿಯಾಗಿದ್ದಾರೆ. ಭಾರೀ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರೂ ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಸತೀಶ ಪಾಂಡುರಂಗ ನಾಯ್ಕ (40), ಉಲ್ಲಾಸ ಗಾವಡಿ (50) ಮೃತ ದುರ್ದೈವಿಗಳು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಟುಳಿ ಗ್ರಾಮ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಮಳೆಯಿಂದಾಗಿ ಗದ್ದೆಗಳು ಜಲಾವೃತವಾಗಿದ್ದು, ನೀರಿನ ರಭಸಕ್ಕೆ ಇಬ್ಬರ ಮೃತದೇಹ ಕೊಚ್ಚಿಕೊಂಡು ಹೋಗಿದೆ. ಕೆಲವು ಗಂಟೆ ಬಳಿಕ ಇಬ್ಬರ ಶವ ಪತ್ತೆಯಾಗಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos

undefined

Karnataka Budget 2023 Live Updates | ಕರ್ನಾಟಕ ಬಜೆಟ್...

ಮಳೆ ಹಾನಿ ಪ್ರದೇಶಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ, ಪರಿಶೀಲನೆ: ಮಳೆಯಿಂದ ಹಾನಿಯಾದ ಪ್ರದೇಶ ಮತ್ತು ಮಳೆ ನೀರು ನಿಲ್ಲುವ ರಂಗೀಕಟ್ಟೆಹೆದ್ದಾರಿ, ವೃತ್ತ ಮತ್ತು ಶಿರಾಲಿಯಲ್ಲಿ ಹೆದ್ದಾರಿಯ ಅವ್ಯವಸ್ಥೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್‌. ವೈದ್ಯ ಪರಿಶೀಲಿಸಿದರು. ಮೊದಲು ಕಳೆದ ವರ್ಷ ಮಹಾಮಳೆಗೆ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದು ನಾಲ್ವರು ಮೃತಪಟ್ಟಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಗುಡ್ಡದ ಸನಿಹದಲ್ಲಿರುವ ಮನೆಗಳ ಜನರಿಗೆ ಸೂಕ್ತ ಮುಂಜಾಗ್ರತೆ ವಹಿಸುವಂತೆ ಮತ್ತು ಮನೆಗಳನ್ನು ಸ್ಥಳಾಂತರ ಮಾಡುವಂತೆ ಸೂಚಿಸಿದರು.

ನಂತರ ಮಣ್ಕುಳಿಯಲ್ಲಿ ಮಳೆ ನೀರು ನಿಲ್ಲುವ ಸ್ಥಳ ವೀಕ್ಷಿಸಿ ಸ್ಥಳೀಯರಿಂದ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಆ ನಂತರ ಸಂಶುದ್ದೀನ ವೃತ್ತ, ರಂಗೀಕಟ್ಟೆ, ಶಿರಾಲಿ ಹೆದ್ದಾರಿಯಲ್ಲಿನ ಅವ್ಯವಸ್ಥೆ ಪರಿಶೀಲಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸಿ ಡಾ. ನಯನಾ ಸೇರಿದಂತೆ ಹಲವು ಅಧಿಕಾರಿಗಳು ಮುಂತಾದವರಿದ್ದರು.

ಕೊಟ್ಟ ಕುದುರೆಗಳನ್ನೆಲ್ಲ ಡಿ.ಕೆ.ಶಿವಕುಮಾರ್‌ ಏರಿದ್ದಾರೆ: ಮಾಜಿ ಸಿಎಂ ಬೊಮ್ಮಾಯಿ

ಮಳೆಗೆ ಕುಸಿದ ಬಾವಿ: ಲಕ್ಷಾಂತರ ರು. ನಷ್ಟ: ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಹಳೆಯಂಗಡಿ ಗ್ರಾಮದ ಸಂತೆಕಟ್ಟೆಬಳಿಯ ನಿವಾಸಿ ಸಯ್ಯದ್‌ ಉಮ್ಮರ್‌ ಎಂಬವರ ಮನೆಯ ಆವರಣದಲ್ಲಿರುವ ಬಾವಿ ಕುಸಿದು ಲಕ್ಷಾಂತರ ರು. ನಷ್ಟಸಂಭವಿಸಿದೆ. ತಾಲೂಕು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ಸಣ್ಣಪುಟ್ಟಅನಾಹುತಗಳು ಸಂಭವಿಸಿದ್ದು ಗುರುವಾರ ಸಂಜೆಯಾಗುತ್ತಲೇ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಗುರುವಾರ ರಾತ್ರಿ ಹಾಗೂ ಶುಕ್ರವಾರ ಮತ್ತೆ ಮಳೆಯ ಭೀತಿ ಇದ್ದು ನದಿ ತೀರದ ವಾಸಿಗಳು ಎಚ್ಚರಿಕೆಯಿಂದ ಇರುವಂತೆ ಮೂಲ್ಕಿ ತಹಸೀಲ್ದಾರ್‌ ಪ್ರದೀಪ್‌ ಸೂಚನೆ ನೀಡಿದ್ದಾರೆ.

click me!